Latest Updates
-
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ
ಪುರುಷರಿಗೆ 7 ಹೇರ್ ರಿಮೂವಲ್ ಟಿಪ್ಸ್
ಒಂದಾನೊಂದು ಕಾಲದಲ್ಲಿ ಹೇರ್ ರಿಮೂವಲ್ ಎಂಬುದು ಮಹಿಳೆಯರಿಗೆ ಮಾತ್ರ ಮೀಸಲಾಗಿದ್ದ ಸಂಗತಿಯಾಗಿತ್ತು. ನೀವು ಈಜುಗಾರ, ಕ್ರೀಡಾಪಟು ಅಥವಾ ಕುಸ್ತಿ ಪಟು ಆಗಿದ್ದಲ್ಲಿ ನೀವೂ ಇದರ ಬಗ್ಗೆ ಯೋಚಿಸುತ್ತಿದ್ದರೆನೋ.. ಅಲ್ಲವಾದಲ್ಲಿ ನಿಮ್ಮ ಶರೀರದ ಕೂದಲುಗಳ ನಿವಾರಣೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಹಾಗಲ್ಲ..
ಹೆಚ್ಚಿನ ಪುರುಷರು ಮಹಿಳೆಯರಂತೆ ಮೃದು, ಕೂದಲು ರಹಿತ ಶರೀರ ತಮ್ಮದಾಗಿಸಿಕೊಳ್ಳಲು ಬಯಸುತ್ತಾರೆ. ಪುರುಷರು ಸಂಪೂರ್ಣ ಕೂದಲು ತೆಗೆಯದಿದ್ದರೂ, ಬೆನ್ನು, ಎದೆ ಹಾಗೂ ಕೈ ಕಾಲ್ಗಳ ಮೇಲಿನ ಕೂದಲನ್ನು ತೆಳುವಾಗಿಸಲು ಬಯಸುತ್ತಾರೆ. ನೀವು ಅಂಥವರಲ್ಲಿ ಒಬ್ಬರಾಗಿದ್ದರೆ, ಸುಲಭದಲ್ಲಿ ಲಭ್ಯವಾಗುವ 6 ವಿಧಾನಗಳನ್ನು ಕೆಳಗೆ ಕೊಡಲಾಗಿದೆ.

1. ವಾಕ್ಸಿಂಗ್ ಅಥವಾ ಶುಗರಿಂಗ್
ಹೇರ್ ರಿಮೂವಲ್ ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ವಾಕ್ಸಿಂಗ್. ವಾಕ್ಸಿಂಗ್ ಅಂದ ಕೂಡಲೇ ಅದರಿಂದ ಉಂಟಾಗುವ ನೋವಿನ ಬಗ್ಗೆ ಎಲ್ಲರೂ ಆಲೋಚಿಸುತ್ತಾರೆ. ಹೌದು, ವಾಕ್ಸಿಂಗ್ ಎಂಬುದು ಸುಲಭವಲ್ಲದಿದ್ದರೂ, ಸಹಿಸಲಸಾಧ್ಯವಾದುದಂತೂ ಅಲ್ಲ. ಏನೆಂದರೂ, ವಾಕ್ಸಿಂಗ್ ಮೂಲಕ ಕೂದಲನ್ನು ಬೇರಿನಿಂದಲೇ ಕಿತ್ತು ಹಾಕುವುದರಿಂದ, ಇದು ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದು. ಈ ವಿಧಾನದಲ್ಲಿ, ಬಿಸಿ ವ್ಯಾಕ್ಸ್ ಅನ್ನು ಅಪೇಕ್ಷಿತ ಜಾಗದ ಮೇಲೆ ಹರಡಿ, ಅದರ ಮೇಲೆ ಒಂದು ತುಂಡು ಕಾಟನ್ ಬಟ್ಟೆ ಅಥವಾ ಮುಸ್ಲಿನ್ ಬಟ್ಟೆ ಯನ್ನು ಹಚ್ಚಿ, ಅದನ್ನು ಸ್ವಲ್ಪ ಉಜ್ಜಿ, ಆನಂತರ ಒಂದೇ ಸಲಕ್ಕೆ, ತಟ್ಟನೆ ಬಟ್ಟೆಯನ್ನು ಎಳೆಯಲಾಗುತ್ತದೆ. ಶುಗರಿಂಗ್ ಕೂಡ ವಾಕ್ಸಿಂಗ್ ತರಹದ ವಿಧಾನವಾಗಿದ್ದು, ಇಲ್ಲಿ ಸಕ್ಕರೆ, ನಿಂಬೆ, ನೀರು ಹಾಗೂ ಸಿಟ್ರಿಕ್ ಆಸಿಡ್ ಗಳನ್ನು ಬಳಸಿ ಸಕ್ಕರೆಯ ಪೇಸ್ಟ್ ಅನ್ನು ತಯಾರಿಸಲಾಗುತ್ತದೆ. ಈ ವಿಧಾನವನ್ನು ಪುನಾರಾವರ್ತಿಸುವುದರಿಂದ, ಬೇರುಗಳು ಶಿಥಿಲಗೊಂಡು, ಕೂದಲುಗಳು ವಿರಳವಾಗುತ್ತವೆ.

2. ಶೇವಿಂಗ್
ಹೆಚ್ಚಿನ ಪುರುಷರು ನಿಯಮಿತವಾಗಿ ಅಥವಾ ಜೀವನದಲ್ಲಿ ಒಮ್ಮೆಯಾದರೂ ಶೇವಿಂಗ್ ಮಾಡಿರುತ್ತಾರೆ. ಶರೀದಲ್ಲಿನ ಕೂದಲ ನಿವಾರಣೆಗೆ, ಶೇವಿಂಗ್ ಸುಲಭದಲ್ಲಿ ಲಭ್ಯವಾಗುವ ವಿಧಾನವಾಗಿದೆ. ಇದು ನಿಮ್ಮ ಶರೀರದ ಯಾವುದೇ ಭಾಗದಲ್ಲಿರುವ ಕೂದಲ ನಿವಾರಣೆಯನ್ನು ಒಂದೇ ಸಲಕ್ಕೆ, ಕೇವಲ ರೇಜರ್ ಹಾಗೂ ಶೇವಿಂಗ್ ಕ್ರೀಂ ನ ಸಹಾಯದಿಂದ ಮಾಡಬಹುದಾಗಿದೆ. ಆದರೆ, ಇದಕ್ಕೆ ಬಳಸುವ ರೀತಿ ತುಂಬಾ ಮುಖ್ಯವಾಗಿದೆ. ಶೇವಿಂಗ್ ಗೂ ಮುನ್ನ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ತುಂಬಾ ಅವಶ್ಯಕ. ಹೀಗೆ ಮಾಡುವುದರಿಂದ ಕೂದಲ ಬುಡದಲ್ಲಿನ ರಂದ್ರಗಳು ತೆರೆದುಕೊಂಡು ಶೇವಿಂಗ್ ಗೆ ಸಹಕಾರಿಯಾಗುತ್ತದೆ. ಒಳ್ಳೆಯ ಗುಣಮಟ್ಟದ ರೇಜರ್ ಹಾಗೂ ಶೇವಿಂಗ್ ಕ್ರೀಂ ಅನ್ನು ಬಳಸಿ, ಕೂದಲು ಬೆಳೆಯುವ ದಿಕ್ಕಿನಲ್ಲಿ ಶೇವ್ ಮಾಡಿದಲ್ಲಿ, ನೀವು ಬಯಸಿದ ಪರಿಣಾಮ ಕಾಣುವುದರಲ್ಲಿ ಸಂದೇಹವೇ ಇಲ್ಲ.

3. ಎಲೆಕ್ಟ್ರಿಕಲ್ ಟ್ರಿಮ್ಮಿಂಗ್
ಮೊದಮೊದಲು ಕೂದಲು ತೆಗೆಸಿಕೊಳ್ಳುವವರಿಗೆ ಎಲೆಕ್ಟ್ರಿಕ್ ಟ್ರಿಮ್ಮರ್ ಉತ್ತಮ. ಇದರ ಮೂಲಕ ಕೂದಲುಗಳ ನಿರ್ವಹಣೆಯೂ ಸುಲಭ. ಇದಲ್ಲದೆ, ಎಲೆಕ್ಟ್ರಿಕ್ ಟ್ರಿಮ್ಮರ್ ತುಂಬಾ ಸುರಕ್ಷಿತ. ರೇಜರ್ ನಿಂದ ಉಂಟಾಗುವ ಇರುಸು ಮುರುಸನ್ನೂ ತಪ್ಪಿಸಬಹುದು. ಎಲೆಕ್ಟ್ರಿಕ್ ಟ್ರಿಮ್ಮರ್ ಮೂಲಕ ಕೂದಲುಗಳ ಉದ್ದವನ್ನೂ ನಿಯಂತ್ರಿಸಬಹುದು. ಇದರಿಂದ ನಿಮಗೆ ನಯವಾದ ಮೇಲ್ಮೈ ದೊರಕಲಾರದು. ಸೂಕ್ಷ್ಮ ಚರ್ಮ ಇರುವವರಿಗೆ ಈ ವಿಧಾನ ತುಂಬಾ ಫಲಕಾರಿ.

4. ಹೇರ್ ರಿಮೂವಲ್ ಕ್ರೀಂ
ಡಿಸ್ಪಿಲೆಟರಿ ಎಂದೂ ತಿಳಿಯಲ್ಪಡುವ ಹೇರ್ ರಿಮೂವಲ್ ಕ್ರೀಂ ಗಳು ಶರೀರದ ಅನವಶ್ಯಕ ಕೂದಲುಗಳನ್ನು ನೋವಿಲ್ಲದೆ ತೆಗೆಯುವ ಮಾರ್ಗವಾಗಿದೆ. ಈ ಕ್ರೀಂ ಅನ್ನು ಬೇಕಾದ ಸ್ಥಳದ ಮೇಲೆ ಹಚ್ಚಿ 10-15 ನಿಮಿಷಗಳ ನಂತರ ತೊಳೆಯಬೇಕು. ಇದು ಕೂದಲ ಎಳೆಯಲ್ಲಿರುವ ಪ್ರೋಟೀನ್ ರಚನೆಯನ್ನು ಕರಗಿಸಿ, ಕೂದಲನ್ನು ಬುಡಸಮೇತ ಕೀಳಲು ಸಹಕರಿಸುತ್ತದೆ. ಆದರೆ, ಈ ಉತ್ಪನ್ನಗಳು ಚರ್ಮವನ್ನು ಒರಟು ಮಾಡಬಹುದು. ಅಲ್ಲದೆ, ದಪ್ಪ ಹಾಗೂ ದಟ್ಟ ಕೂದಲುಗಳ ನಿವಾರಣೆಗೆ ಇದು ನಿಷ್ಪ್ರಯೋಜಕವೆನಿಸಬಹುದು. ಗಮನಿಸಬೇಕಾದ ಅಂಶ - ಪ್ಯಾಕೆಟ್ ನ ಮೇಲೆ ಕೊಟ್ಟಿರುವ ನಿರ್ದೇಶಗಳನ್ನು ಪಾಲಿಸಿರಿ. ಮೊದಲಿಗೆ ಸಣ್ಣ ಜಾಗದ ಮೇಲೆ ಹಚ್ಚಿ ಚರ್ಮಕ್ಕೆ ಯಾವುದೇ ತರಹದ ತೊಂದರೆ ಉಂಟಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

5. ಲೇಸರ್ ಹೇರ್ ರಿಮೂವಲ್
FDA ನಿಂದ ಅಂಗೀಕಾರ ಪಡೆದಿರುವ ಲೇಸರ್ ಚಿಕಿತ್ಸೆಯಲ್ಲಿ, ಕೂದಲುಗಳ ಕೋಶಕಗಳನ್ನು (follicle) ಲೇಸರ್ ರಶ್ಮಿಯ ಮೂಲಕ ಬಿಸಿ ಮಾಡಲಾಗುತ್ತದೆ. ಈ ಮೂಲಕ ಕೂದಲುಗಳ ಬೆಳವಣಿಗೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಇದರ ಫಲಿತಾಂಶವು ನಿಮ್ಮ ಚರ್ಮದ ವರ್ಣಕತೆ( pigmentation) ಹಾಗೂ ನಿಮ್ಮ ಕೂದಲಿನ ಬಣ್ಣದ ಮೇಲೆ ಅವಲಂಬಿಸಿರುವ ಕಾರಣ, ಈ ಚಿಕಿತ್ಸೆಗೂ ಮೊದಲು ನೀವು ಇದಕ್ಕೆ ಅರ್ಹರೆ ಎಂಬುದನ್ನು ತಿಳಿದುಕೊಳ್ಳಿ. ಲೇಸರ್ ಚಿಕಿತ್ಸೆಯ ಮೂಲಕ ಕೂದಲಿನ ಗುಣ ಹಾಗೂ ಪ್ರಮಾಣ ಶಾಶ್ವತವಾಗಿ ಕಡಿಮೆಯಾಗುವುದರಿಂದ, ಇದು ಬಹಳ ದುಬಾರಿ ಚಿಕಿತ್ಸೆಯೂ ಹೌದು. ಇದನ್ನು ಕೂದಲು ನಿವಾರಣಾ ವಿಧಾನಗಳ ತಾಯಿ ಎಂದೇ ಬಣ್ಣಿಸಲಾಗುತ್ತದೆ. ನಿಮ್ಮ ಇತರ ಭಾಗದ ಕೂದಲುಗಳನ್ನು ಬಿಟ್ಟು, ಬೆನ್ನಿನಲ್ಲಿದ್ದ ಕೂದಲುಗಳನ್ನು ಕೂದಲುಗಳನ್ನು ಮಾತ್ರ ತೆಗೆಯಬೇಕೆಂದು ಬಯಸಿದರೆ, ವಾಕ್ಸಿಂಗ್ ವಿಧಾನವನ್ನು ಬಳಸುವುದು ಉತ್ತಮ.

6. ಎಲೆಕ್ಟ್ರೋಲಿಸಿಸ್
ಈ ವಿಧಾನದಲ್ಲಿ, ಪ್ರತೀ ಕೂದಲಿನ ಬುಡಕ್ಕೆ ಅತೀ ಸೂಕ್ಷ್ಮ ಸೂಜಿಗಳನ್ನು ತೂರಲಾಗುತ್ತದೆ. ಈ ಸೂಜಿಗಳ ಮೂಲಕ, ಕೂದಲಿನ ಕೊಶಕಗಳಿಗೆ ಸಣ್ಣ ವಿದ್ಯುತ್ ಆಘಾತಗಳನ್ನು ನೀಡುವ ಮೂಲಕ ಕೂದಲು ಬೆಳೆಯಲು ಸಹಕರಿಸುವ ಕೋಶಗಳನ್ನು ಕೊಲ್ಲಲಾಗುತ್ತದೆ. ಈ ಕೋಶಗಳು ಹೋದ ನಂತರ, ಅಲ್ಲಿ ಯಾವುದೇ ಕೂದಲು ಬೆಳೆಯಲು ಸಾಧ್ಯವಿಲ್ಲ. ಇದು ಶಾಶ್ವತ ಪರಿಹಾರವಾಗಿರುತ್ತದೆ, ಆದರೆ ಇದರ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯಾಗಿದ್ದು, ಫಲಿತಾಂಶದ ಬಗ್ಗೆ ಯಾವುದೇ ಭರವಸೆ ಕೊಡಲಾಗುವುದಿಲ್ಲ. ಈ ವಿಧಾನವನ್ನು ಹುಬ್ಬು (ಕೂಡುಹುಬ್ಬು), ಕತ್ತಿನ ಹಿಂದೆ ಹಾಗೂ ಶರೀರದಲ್ಲಿನ ವಿರಳ ಕೂದಲುಗಳ ನಿವಾರಣೆಗೆ ಅನುಸರಿಸಬಹುದು. ಇದು ಸ್ವಲ್ಪ ದುಬಾರಿ ಹಾಗೂ ಶರೀರದ ಎಲ್ಲಾ ಕೂದಲುಗಳ ನಿವಾರಣೆಗೆ ಸುಮಾರು ಒಂದು ವರ್ಷದಷ್ಟು ಸಮಯ ತೆಗೆದುಕೊಳ್ಳಬಹುದು.
ನಿಮ್ಮ ಶರೀರ ಮತ್ತು ಅನುಕೂಲಕ್ಕೆ ಸರಿಯಾದ ವಿಧಾನ ಯಾವುದೆಂದು ಗುರುತಿಸಿ, ಮುನ್ನಡೆಯಿರಿ.



Click it and Unblock the Notifications











