Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
30 ಪ್ಲಸ್ ಆದವರಿಗೆ ಸೂಕ್ತವಾದ 8 ಫೇಶಿಯಲ್
ವಯಸ್ಸು 30 ದಾಟಿದ ಬಳಿಕ ನಮ್ಮ ಯೌವನದ ಸೌಂದರ್ಯದ ಕಳೆ ಕಡಿಮೆಯಾಗಬಾರದೆಂದರೆ ಅದರತ್ತ ಗಮನ ಕೊಡಬೇಕಾದದು ಅವಶ್ಯಕ. ಏಕೆಂದರೆ ವಯಸ್ಸಾಗುತ್ತಿದ್ದಂತೆ ನಮ್ಮ ದೇಹದಲ್ಲಿ ಕೊಲೆಜಿನ್ ಅಂಶ ಕಡಿಮೆಯಾಗುತ್ತಾ ಬರುತ್ತದೆ. ಕೊಲೆಜಿನ್ ಅಂಶ ಕಡಿಮೆಯಾದಾಗ ತ್ವಚೆ ಸಡಿಲವಾಗಿ ನೆರಿಗೆಗಳು ಮೂಡುವುದು.
ಆದ್ದರಿಂದ 30ರ ಬಳಿಕ ಕೊಲೆಜಿನ್ ಅಂಶ ಕಡಿಮೆಯಾಗದಂತೆ ನಾವು ಎಚ್ಚರಿಕೆವಹಿಸಬೇಕು. ಕೊಲೆಜಿನ್ ಇರುವ ಆಹಾರ ಸೇವನೆ, anti aging ಫೇಸ್ ಪ್ಯಾಕ್ ಇವೆಲ್ಲಾ ತ್ವಚೆಯ ಯೌವನದ ಕಳೆಯನ್ನು ಮತ್ತಷ್ಟು ವರ್ಷ ಮುಂದೂಡಲು ಸಹಾಯ ಮಾಡುತ್ತದೆ.
ಇಲ್ಲಿ ನಾವು ನಿಮ್ಮ ತ್ವಚೆಯನ್ನು ಬಿಗಿಯಾಗಿಸಿ, ತ್ವಚೆಗೆ ಅಗತ್ಯವಿರುವ ಕೊಲೆಜಿನ್ ಅಂಶ ಒದಗಿಸುವ ನೈಸರ್ಗಿಕವಾದ ಫೇಸ್ ಪ್ಯಾಕ್ ಗಳ ಬಗ್ಗೆ ಹೇಳಿದ್ದೇವೆ ನೋಡಿ:

ಮೊಟ್ಟೆಯ ಬಿಳಿ
ಮೊಟ್ಟೆಯ ಬಿಳಿಯನ್ನು ಮುಖಕ್ಕೆ ಹಚ್ಚಿ, ಅದು ಒಣಗಿದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಬೇಕು. ಈ ರೀತಿ ವಾರದಲ್ಲಿ 2-3 ಬಾರಿ ಮಾಡಿ. ಈ ರೀತಿ ಮಾಡುವುದರಿಂದ ಮುಪ್ಪು ಬೇಗನೆ ನಿಮ್ಮನ್ನು ಆವರಿಸುವುದಿಲ್ಲ.

ಮುಲ್ತಾನಿ ಮಿಟಿ
ಮುಲ್ತಾನಿ ಮಿಟಿಯ ಪೇಸ್ ಪ್ಯಾಕ್ ತುಂಬಾ ಒಳ್ಳೆಯದು. ಇದನ್ನು ಮೊಟ್ಟೆಯ ಬಿಳಿ, ಸ್ವಲ್ಪ ಗ್ಲಿಸೆರಿನ್ ಮತ್ತು ಸ್ವಲ್ಪ ಜೇನು ಹಾಕಿ ಮಿಕ್ಸ್ ಮಾಡಿ ಪೇಸ್ಟ್ ರೀತಿ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಮುಖ ತಣ್ಣೀರಿನಲ್ಲಿ ಮುಖ ತೊಳೆಯಿರಿ.

ಜೇನು
ಜೇನಿಗೆ ಸ್ವಲ್ಪ ಗ್ಲಿಸೆರಿನ್ ಹಾಕಿ ಮಿಕ್ಸ್ ಮಾಡಿ, ಅದನ್ನು ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆಯಿರಿ. ಈ ರೀತಿ ಪ್ರತೀದಿನ ಅಥವಾ ಎರಡು ದಿನಕ್ಕೊಮ್ಮೆಯಾದರೂ ಮುಖಕ್ಕೆ ಹಚ್ಚಿದರೆ ಮುಖದ ತ್ವಚೆ ಬೇಗನೆ ಸಡಿಲವಾಗುವುದಿಲ್ಲ. ಇದರಿಂದ ಸುಕ್ಕು ಬೇಗನೆ ನಿಮ್ಮನ್ನು ಕಾಡುವುದಿಲ್ಲ.

ಮುಲ್ತಾನಿ ಮಿಟಿಯನ್ನು ಹಾಲಿನ ಜೊತೆ ಮಿಶ್ರಣ ಮಾಡಿ
ಸ್ವಲ್ಪ ಡ್ರೈ ತ್ವಚೆಯವರು ಮುಲ್ತಾನಿ ಮಿಟಿಯನ್ನು ಹಾಲಿನ ಜೊತೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿದರೆ ತ್ವಚೆ ಮಾಯಿಶ್ಚರೈಸರ್ ಆಗಿರುತ್ತದೆ.

ಅಕ್ಕಿ ಹಿಟ್ಟು
ಅಕ್ಕಿ ಹಿಟ್ಟಿಗೆ ಸ್ವಲ್ಪ ಆಲೀವ್ ಎಣ್ಣೆ ಮತ್ತು ಜೇನು ಹಾಕಿ ಪೇಸ್ಟ್ ರೀತಿ ಮಾಡಿ ಮುಖಕ್ಕೆ ಹಚ್ಚಿದರೆ ತ್ವಚೆ ಬಿಗಿಯಾಗುವುದು. ಇದರಿಂದಾಗಿ ನೆರಿಗೆಗಳು ಬೇಗನೆ ಗೋಚರಿಸುವುದಿಲ್ಲ.

ಆಲೀವ್ ಆಯಿಲ್
ಪ್ರತೀದಿನ ಆಲೀವ್ ಆಯಿಲ್ ನಿಂದ ಮುಖಕ್ಕೆ 2 ನಿಮಿಷ ಮಸಾಜ್ ಮಾಡಿ ನಂತರ 15 ನಿಮಿಷದ ಬಳಿಕ ಮುಖ ತೊಳೆಯಬೇಕು. ಈ ರೀತಿಯ ವಿಧಾನದಿಂದಲೂ ತ್ವಚೆ ಸಡಿಲವಾಗುವುದನ್ನು ತಡೆಯಬಹುದು.

ಬೆಣ್ಣೆ ಹಣ್ಣು
ಬೆಣ್ಣೆ ಹಣ್ಣನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಜೇನು ಬೆರೆಸಿ, ಇದರಿಂದ ಫೇಶಿಯಲ್ ಮಾಡಿದರೆ ಮುಖದ ಕಾಂತಿ ಹೆಚ್ಚುವುದು ಈ ಫೇಶಿಯಲ್ ಎಲ್ಲಾ ವಯಸ್ಸಿನವರಿಗೂ ತುಂಬಾ ಒಳ್ಳೆಯದು.

ಜೊಜೊಬಾ ಆಯಿಲ್
ಮುಲ್ತಾನಿ ಮಿಟಿಗೆ ಜೊಜೊಬಾ ಆಯಿಲ್, ಸ್ವಲ್ಪ ನಿಂಬೆ ರಸ ಮತ್ತು ಜೇನು ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆಯಬೇಕು.
ಈ ಫೇಶಿಯಲ್ ಗಳಲ್ಲಿ ಯಾವುದಾದರು ಒಂದು ಫೇಶಿಯಲ್ ಅನ್ನು ನಿಯಮಿತವಾಗಿ ಮಾಡುತ್ತಾ ಬನ್ನಿ, ಉತ್ತಮ ಫಲಿತಾಂಶ ದೊರೆಯುವುದು.



Click it and Unblock the Notifications
