Latest Updates
-
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು?
ಸೌಂದರ್ಯವನ್ನು ಇಮ್ಮಡಿಗೊಳಿಸುವಲ್ಲಿ ಉಪ್ಪಿನ ಪಾತ್ರ
ಉಪ್ಪು ನಮ್ಮ ಜೀವನದ ಅವಿಭಾಜ್ಯ ಅಂಗ. ಇದರ ಸದುಪಯೋಗಗಳನ್ನು ಲೆಕ್ಕ ಹಾಕಲು ಕೂತರೆ ಹತ್ತು ಸಾವಿರಕ್ಕು ಅಧಿಕ ಉಪಯೋಗಗಳು ನಮ್ಮ ಮುಂದೆ ನಿಲ್ಲುತ್ತವೆ. ಇದೊಂದು ಅದ್ಭುತವಾಗಿ ಸ್ವಚ್ಛಗೊಳಿಸಲು ನೆರವಾಗುವ ವಸ್ತು, ಸಂರಕ್ಷಕ ಮತ್ತು ಆಹಾರಕ್ಕೆ ರುಚಿಯನ್ನು ಒದಗಿಸುವಲ್ಲಿ ಇದನ್ನು ಮೀರಿಸುವ ಮತ್ತೊಂದು ವಸ್ತು ಇನ್ನೂ ಹುಟ್ಟಿಲ್ಲ. ಅದಕ್ಕಾಗಿಯೇ ಕನ್ನಡದಲ್ಲಿ ಉಪ್ಪನ್ನು ತಾಯಿಗೆ ಹೋಲಿಸಿ " ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ" ಎಂಬ ಗಾದೆಯೇ ಹುಟ್ಟಿದೆ.
ಜೊತೆಗೆ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸಹ ಉಪ್ಪಿಗೆ ತನ್ನದೇ ಆದ ಮಹತ್ವವಿದೆ. ನಮ್ಮ ದೇಹದಲ್ಲಿ ನೀರಿನಂಶವನ್ನು ಕಾಪಾಡಲು ಮತ್ತು ಸಕ್ಕರೆಯಂಶವನ್ನು ಸಮತೋಲನದಲ್ಲಿಡಲು ಹಾಗು ಹೃದಯದ ಬಡಿತವನ್ನು ಸುಸ್ಥಿತಿಯಲ್ಲಿಡಲು ಉಪ್ಪು ಅತ್ಯಾವಶ್ಯಕ. ಇವೆಲ್ಲ ಸರಿ ಉಪ್ಪಿನಿಂದ ನಿಮ್ಮ ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳುವುದು ಹೇಗೆಂದು ನಿಮಗೆ ಗೊತ್ತೇ? ಅದಕ್ಕಾಗಿ ನಾವಿಲ್ಲಿ ಉಪ್ಪಿನ 8 ಉಪಯೋಗಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ, ಓದಿ.

1.ಉಪ್ಪಿನ ಸ್ನಾನ
ಬಹುಶಃ ಇದು ಉಪ್ಪಿನ ಅತ್ಯಂತ ಜನಪ್ರಿಯ ಉಪಯೋಗವಿದು. ಉಪ್ಪನ್ನು ಆರಾಮವನ್ನು ನೀಡುವ ಎಪ್ಸಂ ಸ್ನಾನಕ್ಕಾಗಿ ಬಳಸುತ್ತಾರೆ. ಆದರೆ ಇದಕ್ಕಾಗಿ ನಾವು ಅಡುಗೆ ಉಪ್ಪು ( ಸೋಡಿಯಂ ಕ್ಲೋರೈಡ್) ಅನ್ನು ಬಳಸುವುದಿಲ್ಲ. ಎಪ್ಸಂ ( ಮ್ಯಗ್ನೀಶಿಯಂ ಸಲ್ಫೇಟ್) ಎಂಬ ಉಪ್ಪಿನ ವಿಧವನ್ನು ಇದಕ್ಕಾಗಿ ಬಳಸುತ್ತಾರೆ. ಉಪ್ಪನ್ನು ನಿಮ್ಮ ಸ್ನಾನದ ನೀರಿನಲ್ಲಿ ಬೆರೆಸಿ ಸ್ನಾನ ಮಾಡಿ, ಇದು ಸಮುದ್ರ ಸ್ನಾನಕ್ಕೆ ಸಮ. ಉಪ್ಪಿನ ಸ್ನಾನ ಮಾಡುವುದರಿಂದ ದೇಹದಲ್ಲಿ ಊತಗಳು ಇದ್ದರೆ ಪರಿಹಾರವಾಗುತ್ತದೆ ಮತ್ತು ಸ್ನಾಯುಗಳ ಸೆಳೆತ ಅಥವಾ ನೋವು ಇದ್ದರೆ ಗುಣವಾಗುತ್ತದೆ. ಇದಕ್ಕಾಗಿ ಒಂದು ಟಬ್ ನೀರಿಗೆ ಒಂದು ಸ್ಪೂನ್ ಉಪ್ಪು ಬೆರೆಸಿ, ಬೇಕಾದಲ್ಲಿ ಸುವಾಸನೆಗಾಗಿ ಎಣ್ಣೆ ಅಥವಾ ನಿಮ್ಮ ನೆಚ್ಚಿನ ಒಣ ಗಿಡ ಮೂಲಿಕೆಗಳನ್ನು ಬಳಸಿ.

2.ಉಪ್ಪಿನ ಸ್ಕ್ರಬ್
ಉಪ್ಪಿನ ತರಿ ತರಿಯಾಗಿರುವ ಗುಣವು ನಿಮ್ಮ ತ್ವಚೆಯನ್ನು ರೇಷ್ಮೆಯಂತೆ ಮೃದುಗೊಳಿಸುತ್ತದೆ. 1/4 ಕಪ್ ಉಪ್ಪನ್ನು ಬಾದಾಮಿ ಎಣ್ಣೆಯಾಗಲಿ, ಎಳ್ಳೆಣ್ಣೆ ಅಥವಾ ಜೊಜೊಬಾ ಎಣ್ಣೆಯ ಜೊತೆಗೆ ಬೆರೆಸಿ ಸ್ಕ್ರಬ್ ಅನ್ನು ತಯಾರಿಸಿಕೊಳ್ಳಿ. ಇದಕ್ಕೆ ನಿಮ್ಮ ನೆಚ್ಚಿನ ಸುವಾಸನೆಯನ್ನು ಹೊಂದಿರುವ ಎಣ್ಣೆಯ 20 ತೊಟ್ಟನ್ನು ಬೆರೆಸಿ. ಮಿಶ್ರಣವು ಎಣ್ಣೆಯಿರುವ ಕಡೆ ಇರುವಂತೆ ನೋಡಿಕೊಳ್ಳಿ. ಇದನ್ನು ಚೆನ್ನಾಗಿ ಬೆರೆಸಿಕೊಂಡು ಪಾದದ ಅಡಿಗೆ ಲೇಪಿಸಿ. ಇದು ಕಾಲುಗಳಿಗೆ ಮೃದುತ್ವವನ್ನು ಒದಗಿಸುತ್ತದೆ. ನಿಮ್ಮ ಕಾಲಿನ ಕೂದಲನ್ನು ತೆಗೆಯುವ ಮೊದಲು ಇದನ್ನು ಸ್ಕ್ರಬ್ ಮಾಡಿ ( ಶೇವ್ ಮಾಡುವ ಮೊದಲು ಚೆನ್ನಾಗಿ ತೊಳೆಯಿರಿ) ಉತ್ತಮ ಫಲಿತಾಂಶವನ್ನು ಪಡೆಯಿರಿ.

3.ಫೇಸ್ ಮಾಸ್ಕ್
ಸಾಧಾರಣವಾದ ಉಪ್ಪಿನ ಫೇಸ್ ಮಾಸ್ಕ್ ಎಣ್ಣೆ ಚರ್ಮ ಅಥವಾ ಮೊಡವೆಗಳಿಂದ ಕೂಡಿದ ತ್ವಚೆಗೆ ಉತ್ತಮ ಪರಿಹಾರ ದೊರಕಿಸಿ ಕೊಡುತ್ತದೆ. ಇದು ಊತ ಕಡಿಮೆ ಮಾಡಿ, ಎಣ್ಣೆಯ ಸಮತೋಲನ ಮಾಡಿ ಮತ್ತು ತ್ವಚೆಗೆ ಉಂಟಾದ ಸಮಸ್ಯೆಗಳಿಗೆ ಶೀಘ್ರಗತಿಯ ಪರಿಹಾರವನ್ನು ನೀಡುತ್ತದೆ. ಇದಕ್ಕಾಗಿ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರ ಮೂರನೆಯ ಒಂದು ಭಾಗದಷ್ಟು ಉಪ್ಪನ್ನು ಬೆರೆಸಿ. ಅದಕ್ಕೆ ಮೂರು ಚಮಚೆಗಳಷ್ಟು ಪರಿಶುದ್ಧವಾದ ತುಪ್ಪವನ್ನು ಬೆರೆಸಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ, 15 ನಿಮಿಷಗಳಷ್ಟು ಸಮಯ ಬಿಟ್ಟು, ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

4.ಡಿಯೋಡೆರೆಂಟ್
ಕಲ್ಲು ಉಪ್ಪಿನ ಡಿಯೋಡೆರೆಂಟ್‍ಗಳು ಎಲ್ಲಾ ಆಹಾರ ಪದಾರ್ಥಗಳನ್ನು ಮಾರುವ ಅಂಘಡಿಗಳಲ್ಲಿ ಲಭ್ಯವಿರುತ್ತದೆ. ಉಪ್ಪು ದುರ್ಗಂಧವನ್ನುಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ನಿಮಗೆ ಒಂದು ವೇಳೆ ದೇಹದ ದುರ್ಗಂಧವು ಭಾದೆಯುಂಟು ಮಾಡುತ್ತಿದ್ದರೆ, ನಿಮ್ಮ ಮನೆಯಲ್ಲಿ ತಯಾರಿಸಿದ ಡಿಯೋಡೆರೆಂಟ್‍ಗೆ ಒಂದು ಟೀ ಸ್ಪೂನ್ ಉಪ್ಪನ್ನು ಬೆರೆಸಿ. ಇದರಿಂದ ನಿಮ್ಮ ದೇಹದ ದುರ್ಗಂಧವನ್ನು ಕಡಿಮೆ ಮಾಡಬಹುದು.
ಎಚ್ಚರಿಕೆ ; ಮಹಿಳೆಯರಲ್ಲಿ ಆಗ ತಾನೆ ಶೇವ್ ಮಾಡಿದ ಕಂಕುಳಿಗೆ ಈ ಡಿಯೋಡೆರೆಂಟ್‍ಗಳನ್ನು ಹಚ್ಚಿದರೆ, ಸ್ವಲ್ಪ ಕಡಿತವುಂಟು ಮಾಡುವ ಅನುಭವವಾಗಬಹುದು.

5.ಟೂಥ್‍ಪೇಸ್ಟ್
ಉಪ್ಪಿನಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ಗುಣಗಳು, ಇದನ್ನು ಮನೆಯಲ್ಲಿನ ಅತ್ಯುತ್ತಮ ಮತ್ತು ಅಗ್ಗದ ಟೂಥ್‍ಪೇಸ್ಟನ್ನಾಗಿಸಿದೆ. ಮೂರು ಭಾಗದಷ್ಟು ಇರುವ ಬೇಕಿಂಗ್ ಸೋಡಾದ ಜೊತೆಗೆ ಒಂದು ಭಾಗದಷ್ಟು ಉಪ್ಪನ್ನು ಬೆರೆಸಿ. ಇದನ್ನು ಹಾಗೆಯೇ ಪುಡಿಯ ರೀತಿ ಬೇಕಾದರು ಬಳಸಬಹುದು ಅಥವಾ ಗ್ಲಿಸೆರಿನ್ ಜೊತೆಗೆ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಬಹುದು. ಇದರ ಜೊತೆಗೆ ಪುದಿನಾ, ಲವಂಗ ಅಥವಾ ದ್ರಾಕ್ಷಿಯಂತಹ ಸರಳ, ಅಗ್ಗದ ಮತ್ತು ಪರಿಣಾಮಕಾರಿಯಾದ ಸುವಾಸನೆಯನ್ನು ಹೊಂದಿರುವ ಎಣ್ಣೆಯನ್ನು ಬೆರೆಸಿ ಸಹ ಬಳಸಬಹುದು.

6.ಮೌತ್‍ವಾಶ್
ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ಮತ್ತು ಬಾಯಿಯ ದುರ್ಗಂಧದಿಂದ ದೂರವಿರಬಹುದು.ಇದರಿಂದಾಗಿ ಅಂಗಡಿಯಲ್ಲಿ ದೊರೆಯುವ ರಾಸಾಯನಿಕಗಳನ್ನು ಹೊಂದಿರುವ ಮೌತ್‍ವಾಶ್‍ಗಳಿಂದ ನೀವು ದೂರವಿರಬಹುದು. ಅದರಲ್ಲಿಯೂ BPA ಪ್ಲಾಸ್ಟಿಕ್ ಬಾಟಲ್‍ಗಳಲ್ಲಿರುವ ವಿಷಕಾರಿ ವಸ್ತುಗಳಿಂದ ಆದಷ್ಟು ದೂರವಿರಿ. ಇದು ನಿಮ್ಮ ಆರೋಗ್ಯಕ್ಕೆ ಹಾಗು ಪರಿಸರಕ್ಕೆ ಮಾರಕವೆಂಬುದನ್ನು ಮರೆಯಬೇಡಿ. ಸಾಧ್ಯವಾದರೆ ಅವುಗಳನ್ನು ಪುನರ್ಬಳಕೆ ಮಾಡಿ. ದುಬಾರಿ ಮೌತ್‍ವಾಶ್‍ಗಳಿಗಿಂತ ಉಪ್ಪು ನೀರು ಅತ್ಯಂತ ಪರಿಣಾಮಕಾರಿಯಾದ ಮೌತ್ ವಾಶ್ ಆಗಿರುತ್ತದೆ. ಈ ಮೌತ್‍ವಾಶ್‍ಗೆ ಸುವಾಸನೆ ಬರಲು ಸ್ವಲ್ಪ ಶುಂಠಿ ಅಥವಾ ಸ್ಪಿಯರ್ ಮಿಂಟ್ ಎಣ್ಣೆಯನ್ನು ಬಳಸಿ.

7.ಮೂಗಿನ ಹೊಳ್ಳೆಗಳ ಸ್ವಚ್ಛತೆಗೆ
ಆಯುರ್ವೇದದ ಕ್ರಿಯೆಗಳಲ್ಲಿ ಮೂಗಿನ ಹೊಳ್ಳೆಯನ್ನು ಸ್ವಚ್ಛಗೊಳಿಸಲು ಅಧಿಕ ಮಹತ್ವವನ್ನು ನೀಡಲಾಗಿದೆ. ಇದನ್ನು ಸ್ವಚ್ಛಗೊಳಿಸುವುದರಿಂದ ಅಲರ್ಜಿ ಅಥವಾ ಸೈನಸ್ ಇನ್‍ಫೆಕ್ಷನ್ ತಡೆಗಟ್ಟಬಹುದು. ಇದಕ್ಕಾಗಿ ವಿಶೇಷವಾಗಿ ತಯಾರಿಸಲಾಗಿರುವ ಜಲ ನೇತಿ ಎಂಬ ಕುಡಿಕೆಯಲ್ಲಿ ಸ್ವಲ್ಪ ಪ್ರಮಾಣದ ಸಮುದ್ರದ ಉಪ್ಪನ್ನು ಬೆರೆಸಿದ ( ಕಲ್ಲು ಉಪ್ಪನ್ನು ಬಳಸಬೇಡಿ, ಇದರಿಂದ ಮೂಗಿನ ಒಳಗೆ ಉರಿತ ಉಂಟಾಗಬಹುದು) ಬೆಚ್ಚಗಿನ ನೀರನ್ನು, ನೇತಿಯ ಮೂಲಕ ನಿಮ್ಮ ಮೂಗಿನ ಒಂದು ಹೊಳ್ಳೆಗೆ ಬಿಟ್ಟು, ಮತ್ತೊಂದರಿಂದ ಅದನ್ನು ಹೊರಬಿಡಿ. ನಂತರ ಇದನ್ನು ಇನ್ನೊಂದು ಹೊಳ್ಳೆಯಿಂದ ಪುನರಾವರ್ತಿಸಿ. ಇದಕ್ಕೆ ಸ್ವಲ್ಪ ತರಬೇತಿ ಬೇಕಾಗುತ್ತದೆ. ಆದರೆ ಒಮ್ಮೆ ಇದನ್ನು ಅಭ್ಯಾಸ ಮಾಡಿದಿರೋ, ಜಲನೇತಿ ನಿಮ್ಮ ದೈನಂದಿನ ಅಭ್ಯಾಸವಾಗಿ, ಉಸಿರಾಟದ ತೊಂದರೆಯಿಂದ ನಿಮ್ಮನ್ನು ದೂರವಿರಿಸುತ್ತದೆ.

8.ಗಾಯಕ್ಕೆ ಚಿಕಿತ್ಸೆ ನೀಡಲು
ಉಪ್ಪಿನಲ್ಲಿರುವ ಸೂಕ್ಷ್ಮಾಣು ಜೀವಿ ನಿರೋಧಕ ಗುಣಗಳು ಇದನ್ನು ಮನೆಯಲ್ಲಿ ಗಾಯಕ್ಕೆ ನೀಡುವ ಪ್ರಥಮ ಚಿಕಿತ್ಸೆಯಲ್ಲಿ ಮುಂಚೂಣಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಇದು ಸ್ವಲ್ಪ ಉರಿಯನ್ನು ನೀಡಬಹುದು, ನಿಜ. ರಕ್ತಸ್ರಾವವಾಗುತ್ತಿದ್ದರೆ, ಅದಕ್ಕೆ ಉಪ್ಪನ್ನು ಸವರಬೇಡಿ. ಆದರೆ ರಕ್ತ ಸ್ರಾವ ನಿಂತ ನಂತರ ಉಪ್ಪನ್ನು ಅದಕ್ಕೆ ಲೇಪಿಸುವುದರಿಂದ ಗಾಯ ಬೇಗ ಗುಣವಾಗುತ್ತದೆ.



Click it and Unblock the Notifications











