Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎಣ್ಣೆಯಂಶದ ಮೂಗಿನಿಂದ ಮುಕ್ತಿ ಬೇಕೆ?
ಎಣ್ಣೆ ತ್ವಚೆಯವರಿಗೆ ಅತೀ ದೊಡ್ಡ ಸಮಸ್ಯೆಯೆಂದರೆ ಎಣ್ಣೆಯಂಶ ಮೂಗಿನ ತುದಿಯಲ್ಲಿ ಎದ್ದು ಕಾಣುವುದು . ಇದರಿಂದ ಬ್ಲ್ಯಾಕ್ ಹೆಡ್ಸ್ ಸಮಸ್ಯೆ ಉಂಟಾಗುವುದು. ಮುಖ ಡಲ್ಲಾಗಿ ಕಾಣುವುದು. ಎಣ್ಣೆಯಂಶ ಹೋಗಲಾಡಿಸದಿದ್ದರೆ ಯಾವ ಮೇಕಪ್ ಪ್ರಯೋಜನಕ್ಕೆ ಬರುವುದಿಲ್ಲ.
ಇಲ್ಲಿ ನಾವು ಕೆಲವು ಮನೆಮದ್ದು ನೀಡುತ್ತಿದ್ದೇವೆ. ಅವುಗಳನ್ನು ಪಾಲಿಸಿದರೆ ಮೂಗಿನ ಮೇಲೆ ಎಣ್ಣೆಯಂಶ ನಿಲ್ಲದಂತೆ ತಡೆದು. ಬ್ಲ್ಯಾಕ್ ಹೆಡ್ಸ್ ಸಮಸ್ಯೆಯಿಂದ ಹೊರಬರಬಹುದು.
ಮನೆಮದ್ದು

* ದಿನದಲ್ಲಿ 2-3 ಬಾರಿ ಮುಖ ತೊಳೆಯಿರಿ. ಸಂಜೆ ಟೋನರ್ ಬಳಸಿ ಮುಖ ತೊಳೆಯಿರಿ.
ಗಮನಿಸಿ: ತುಂಬಾ ಬಾರಿ ಮುಖ ತೊಳೆಯುವ ಅಭ್ಯಾಸ ಒಳ್ಳೆಯದಲ್ಲ, ಅದು ನಿಮ್ಮ ತ್ವಚೆಯನ್ನು ಡ್ರೈಯಾಗಿಡುತ್ತದೆ.
* ಮತ್ತೊಂದು ಸರಳ ವಿಧಾನವೆಂದರೆ ಸ್ವಲ್ಪ ಹತ್ತಿಯ ಉಂಡೆಗೆ ನಿಂಬೆ ರಸ ಹಿಂಡಿ ಅದರಿಂದ ನಿಮ್ಮ ಮೂಗನ್ನು ಉಜ್ಜಿ. ಈ ರೀತಿ ಪ್ರತೀದಿನ ಮಾಡಿದರೆ ಮೂಗಿನ ತುದಿಯಲ್ಲಿ ಎಣ್ಣೆಯಂಶ ನಿಲ್ಲುವುದಿಲ್ಲ.
* ಸ್ಕ್ರಬ್ಬಿಂಗ್, ಕ್ಲೀನ್ ಅಪ್ ಮಾಡಿಸುವುದು ತ್ವಚೆ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಈ ರೀತಿ ಮಾಡುವುದರಿಂದ ಮುಖ ಎಣ್ಣೆ-ಎಣ್ಣೆಯಾಗಿ ಕಾಣುವುದನ್ನು ತಪ್ಪಿಸಬಹುದು.
* ವಿನೆಗರ್ ಎಣ್ಣೆ ತ್ವಚೆ ಹೋಗಲಾಡಿಸುವಲ್ಲಿ ತುಂಬಾ ಪರಿಣಾಮಕಾರಿ. ಅರ್ಧ ಗ್ಲಾಸ್ ನೀರಿಗೆ 2-3 ವಿನೆಗರ್ ಹಾಕಿ ಅದರಲ್ಲಿ ಹತ್ತಿಯನ್ನು ಅದ್ದಿ ಮುಖವನ್ನು ಉಜ್ಜಿ. ಈ ರೀತಿ ಮಾಡುವುದರಿಂದ ಮುಖದ ಎಣ್ಣೆಯಂಶ ಕಡಿಮೆಯಾಗಿ, ಮುಖದ ಕಾಂತಿ ಹೆಚ್ಚುವುದು.



Click it and Unblock the Notifications
