Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಪ್ಯಾಡಡ್ಡ್ ಬ್ರಾದಲ್ಲಿರುವ ವಿಶೇಷತೆ ಏನು?
ಮಹಿಳೆಯರಿಗೆ ಯಾವ ರೀತಿಯ ಬ್ರಾ ತುಂಬಾ ಕಂಫರ್ಟ್ ಎಂದು ಮೂವತ್ತು ವರ್ಷ ದಾಟಿದ 10 ಮಹಿಳೆಯರನ್ನು ಕೇಳಿದರೆ 10 ರೀತಿಯ ಉತ್ತರ ದೊರೆಯುವುದು ಸಹಜ. ಅದೇ ಹುಡುಗಿಯರನ್ನು ಕೇಳಿದರೆ 10ರಲ್ಲಿ 5 ಮಂದಿಯಾದರೂ ಪ್ಯಾಡಡ್ಡ್ ಬ್ರಾ ಎಂದು ಹೇಳುತ್ತಾರೆ. ಪ್ಯಾಡಡ್ಡ್ ಬ್ರಾ ವಿಶೇಷವಾಗಿರುವುದರಿಂದಲೇ ಇದರ ಜನಪ್ರಿಯತೆ ಹೆಚ್ಚಿದೆ.
ಈ ಬ್ರಾದ ಮತ್ತೊಂದು ವಿಶೇಷವೆಂದರೆ ಇದನ್ನು ಟಿ ಶರ್ಟ್, ಶರ್ಟ್ ಮತ್ತಿತರ ಮಾರ್ಡನ್ ಉಡುಗೆ ಧರಿಸುವಾಗ ಹಾಕಿಕೊಂಡರೆ ತುಂಬಾ ಕಂಫರ್ಟ್ ಅನಿಸುವುದು. ಆದ್ದರಿಂದ ಮಹಿಳೆಯರು ಇತರ ಬ್ರಾಗಳ ಜೊತೆ ಈ ಪ್ಯಾಡಡ್ಡ್ ಬ್ರಾ ಧರಿಸುವುದು ಒಳ್ಳೆಯದು.
ಇತರ ಬ್ರಾಗಳಿಗಿಂತ ಈ ಕೆಳಗಿನ ರೀತಿಯಲ್ಲಿ ಪ್ಯಾಡಡ್ಡ್ ಬ್ರಾ ಹೆಚ್ಚು ಧರಿಸಲು ಕಂಫರ್ಟ್ ಆಗಿದೆ.

ಸ್ತನದ ಗಾತ್ರ
ಹೆಣ್ಣು ಮಕ್ಕಳಿಗೆ ಸ್ತನ ಗಾತ್ರ ತುಂಬಾ ಚಿಕ್ಕದಿದ್ದರೆ ದೇಹದ ಆಕೃತಿ ಅಷ್ಟು ಆಕರ್ಷಕವಾಗಿ ಕಾಣುವುದಿಲ್ಲ. ತುಂಬಾ ಚಿಕ್ಕ ಸ್ತನ ಗಾತ್ರ ಇರುವವರು ಇದನ್ನು ಧರಿಸಿದರೆ ದೇಹ ಆಕರ್ಷಕವಾಗಿ ಕಾಣುವುದು.
ಒಳ್ಳೆಯ ಶೇಪ್ ಗೆ
ಗಾತ್ರ ಹೊರತು ಪಡಿಸಿ ಈ ಪ್ಯಾಡಡ್ಡ್ ಸ್ತನಕ್ಕೆ ಒಳ್ಳೆಯ ಶೇಪ್ ನೀಡುತ್ತದೆ. ಬ್ರಾದ ಪಾಯಿಂಟ್ ನಾವು ಧರಿಸಿದ ಅಂಗಿಯಲ್ಲಿ ಕಾಣುತ್ತಿದ್ದರೆ ಕೆಲವು ನೋಡುಗರಿಗೆ ಮುಜುಗರ ಉಂಟಾಗುವುದು, ಪೋಲಿಗಳ ಕಣ್ಣು ನಿಮ್ಮ ಎದೆಯತ್ತ ಹರಿಯುವುದು. ಅದೇ ಪ್ಯಾಡಡ್ಡ್ ಬ್ರಾದಲ್ಲಿ ಆ ಸಮಸ್ಯೆ ಕಂಡು ಬರುವುದಿಲ್ಲ.
ಸ್ಪೋರ್ಟ್ಸ್, ವ್ಯಾಯಾಮಕ್ಕೆ ಒಳ್ಳೆಯದು
ವ್ಯಾಯಾಮ ಮಾಡುವಾಗ, ಸ್ಪೋರ್ಟ್ಸ್ ಆಡುವಾಗ ಅಸಹ್ಯ ಕಾಣದಿರಲು ಪ್ಯಾಡಡ್ಡ್ ಬ್ರಾ ಬಳಸುವುದು ಒಳ್ಳೆಯದು.
ಸ್ತನ ಜೋತು ಬೀಳುವುದಿಲ್ಲ
ಸ್ತನ ಜೋತು ಬಿದ್ದರೆ ವಯಸ್ಸಾದಂತೆ ಕಾಣುವಿರಿ. ಪ್ಯಾಡಡ್ಡ್ ಬ್ರಾ ಸ್ತನದ ಶೇಪ್ ಹಾಳಾಗದಂತೆ ಕಾಪಾಡುತ್ತದೆ.
ಕ್ಲಾಸಿ ಲುಕ್
ಸ್ವಲ್ಪ ಪಾರದರ್ಶಕವಾದ ಶರ್ಟ್ ಗೆ ಈ ಬ್ರಾ ಕ್ಲಾಸಿ ಹಾಗೂ ಸೆಕ್ಸಿ ಲುಕ್ ನೀಡುತ್ತದೆ.



Click it and Unblock the Notifications
