Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
ಈ ರೀತಿಯ ಉಗುರಿನ ಸೌಂದರ್ಯ ನಿಮ್ಮದಾಗಬೇಕೆ?
ಉಗುರುಗಳನ್ನು ಸ್ವಚ್ಛವಾಗಿ, ಆಕರ್ಷಕವಾಗಿ ಕಾಣಲು ಮ್ಯಾನಿಕ್ಯೂರ್ ಮಾಡುವುದು ಒಳ್ಳೆಯದು. ಅದರಲ್ಲೂ ಫ್ರೆಂಚ್ ಮ್ಯಾನಿಕ್ಯೂರ್ ಎಲ್ಲಾ ರೀತಿಯ ಬೆರಳುಗಳಿಗೆ ಆಕರ್ಷಕವಾಗಿ ಕಾಣುತ್ತದೆ. ಫ್ರೆಂಚ್ ಮ್ಯಾನಿಕ್ಯೂರ್ ಸ್ಪಾಗಳಲ್ಲಿ ಮಾಡಿಸಲು ಸ್ವಲ್ಪ ದುಬಾರಿ.
ಈ ಮ್ಯಾನಿಕ್ಯೂರ್ ಅನ್ನು ಸ್ಪಾಗಳಲ್ಲಿ ಮಾಡುವಷ್ಟೇ ಪರ್ಫೆಕ್ಟ್ ಆಗಿ ಮನೆಯಲ್ಲಿಯೇ ಮಾಡಬಹುದು. ಫ್ರೆಂಚ್ ಮ್ಯಾನಿಕ್ಯೂರ್ ಅನ್ನು ನೀವು ಮನೆಯಲ್ಲಿ ಮಾಡ ಬಯಸುವುದಾದರೆ ಟಿಪ್ಸ್ ನೋಡಿ ಇಲ್ಲಿದೆ:

ಮ್ಯಾನಿಕ್ಯೂರ್ ಗೆ ಬೇಕಾಗುವ ವಸ್ತುಗಳು
ಬಿಳಿ ನೇಲ್ ಪಾಲಿಷ್
ಶೀರ್ ಪೇಲ್ ಪಿಂಕ್ ಪಾಲಿಷ್ (sheer pale pink polish)
ಕ್ಲಿಯರ್ ಟಾಪ್ ಕೋಟ್ (clear to coat or transparent nail polish)
ಚಿಕ್ಕ ಪೇಯಿಂಟ್ ಬ್ರೆಷ್
ನೇಲ್ ಕಟರ್
ಮಾಯಿಶ್ಚರೈಸರ್
ನೇಲ್ ಫಿಲ್ಲರ್
ಮಾಡುವ ವಿಧಾನ:
ಈ ಮ್ಯಾನಿಕ್ಯೂರ್ ಮಾಡಲು 5 ಸ್ಟೆಪ್ ಗಳಿವೆ.
ಮೊದಲನೇ ಸ್ಟೆಪ್
ಮೊದಲು ನೀವು ಉಗುರನ್ನು ಶುದ್ಧ ಮಾಡಬೇಕು. ನಿರ್ಜೀವ ಉಗುರುಗಳನ್ನು ಕತ್ತರಿಸಬೇಕು. ಉಗುರಿಗೆ ಚೌಕಾಕಾರದಲ್ಲಿ ಶೇಪ್ ಕೊಡಿ. ನೇಲ್ ಫಿಲ್ಲರ್ ಬಳಸಿ ಉಗುರಿನಲ್ಲಿರುವ ಕೊಳೆಯನ್ನು ತೆಗೆಯಬೇಕು. ಉಗುರು ನೋಡಲು ಪರ್ಫೆಕ್ಟ್ ಆಗಿರಬೇಕು.
ಸ್ಟೆಪ್ 2 ಮಾಯಿಶ್ಚರೈಸರ್ ಮಾಡಬೇಕು
ನೇಲ್ ಮೃದುವಾಗಿ, ಹೊಳಪಿನಿಂದ ಕಾಣಲು ಮಾಯಿಶ್ಚರೈಸರ್ ಮಾಡಬೇಕು.
ಸ್ಟೆಪ್ 3
ನಂತರ ಪೂರ್ತಿ ಉಗುರಿಗೆ nail enamelಅಥವಾ shellac colour ಹಚ್ಚಿ . ನಂತರ ಇದನ್ನು ಒಣಗಲು ಬಿಡಿ. ನಂತರ ಉಗುರಗಳನ್ನು ಮಾಯಿಶ್ಚರೈಸರ್ ಆಗಿ ಇಡಲು ಪೆಟ್ರೋಲಿಯಂ ಜೆಲ್ಲಿ ಹಚ್ಚಬಹುದು.
ಸ್ಟೆಪ್ 4
ಇದು ಫ್ರೆಂಚ್ ಮ್ಯಾನಿಕ್ಯೂರ್ ನಲ್ಲಿ ಬಹಳ ಪ್ರಮುಖವಾದ ಅಂಶ. ಬಿಳಿ ಬಣ್ಣದ ನೇಲ್ ಪಾಲೀಷ್ ಅನ್ನು ಉಗುರಿನ ತುದಿಗೆ ಮಾತ್ರ ಹಚ್ಚಿ(ಚಿತ್ರದಲ್ಲಿ ತೋರಿಸಿದಂತೆ).
ಸ್ಟೆಪ್ 5
ಈಗ ಪಾರದರ್ಶಕವಾದ ನೇಲ್ ಪಾಲಿಷ್ ಅನ್ನು ಒಂದು ಕೋಟ್ ಹಚ್ಚಿ. ಇಷ್ಟು ಮಾಡಿದರೆ ನಿಮ್ಮ ಉಗುರು ಹೊಳೆಪಿನಿಂದ ಆಕರ್ಷಕವಾಗಿ ಕಾಣಬಹುದು.



Click it and Unblock the Notifications
