Latest Updates
-
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು!
ಮಧ್ಯವಯಸ್ಸಿನಲ್ಲಿ ಮಹಿಳೆಯರು ಮಾಡುವ 11 ತಪ್ಪುಗಳು
ವಯಸ್ಸು ನಮ್ಮನ್ನು ತಂದು ಮಧ್ಯದಲ್ಲಿ ನಿಲ್ಲಿಸಿದೆ. ನಾವು ಅತ್ತ ಮಕ್ಕಳಲ್ಲ, ಇತ್ತ ಮುದುಕಿಯರು ಅಲ್ಲ. ಈ ಮಧ್ಯ ವಯಸ್ಸು ಸಮಸ್ಯೆಗಳ ಸಾಗರ. ಇದರಲ್ಲಿ ಸಾಂಸರಿಕ, ವೃತ್ತಿಪರ ತಾಪತ್ರಯಗಳ ಜೊತೆಗೆ ವೈಯುಕ್ತಿಕವಾಗಿ ಸಹ ಹಲವು ತಾಪತ್ರಯಗಳು ನಮ್ಮನ್ನು ಕಾಡುತ್ತವೆ. ಈ ವಯಸ್ಸಿನಲ್ಲಿ ಹಿಂದೆ ನೀವು ತೊಡುತ್ತಿದ್ದ, ಸೆಕ್ಸಿಯಾದ ಬಟ್ಟೆಯನ್ನು ಇಂದು ತೊಟ್ಟರೆ? ನೋಡುವವರ ಕಣ್ಣಿಗೆ ಅಸಹ್ಯವಾಗಿ ಕಾಣುವುದಿಲ್ಲವೇ. ಹರೆಯದ ವಯಸ್ಸಿನಲ್ಲಿ ಮಾಡಿಕೊಳ್ಳುತ್ತಿದ್ದ, ಕಣ್ಣು ಕುಕ್ಕುವ ಮೇಕಪ್ ಅನ್ನು ಇಂದು ಮಾಡಿಕೊಂಡರೆ? ನೋಡಿದವರು ನಗುವುದಿಲ್ಲವೇ.
ವಯಸ್ಸು ಬದಲಾವಣೆಯನ್ನು ಬಯಸುತ್ತದೆ. ಆದರೆ ಬಹುತೇಕ ಹೆಂಗಸರು ಈ ಬದಲಾವಣೆಗೆ ತಮ್ಮನ್ನು ತಾವು ತೆರೆದುಕೊಳ್ಳುವುದಿಲ್ಲ. ತಮಗೆ ವಯಸ್ಸಾಗಿದೆ ಎಂದು ನಂಬಲು ಮತ್ತು ಒಪ್ಪಲು ಸಹ ಇವರು ನಿರಾಕರಿಸುತ್ತಾರೆ. "ಬದಲಾವಣೆ ಎಂಬುದು ಜೀವನದ ಬದಲಾವಣೆಗೊಳ್ಳದ ಆಕರ್ಷಣೆ" ಎಂದು ಹೇಳುತ್ತದೆ ಒಂದು ನಾಣ್ಣುಡಿ. ಕಾಲಕ್ಕೆ ತಕ್ಕಂತೆ ಬದಲಾಗಿ, ನಿಮ್ಮ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಿ. ಇಲ್ಲಿ ನಾವು ನಿಮಗಾಗಿ ಹೆಂಗಸರು ಮಧ್ಯ ವಯಸ್ಸಿನಲ್ಲಿ ಗೊತ್ತಿದ್ದೊ ಅಥವಾ ಗೊತ್ತಿಲ್ಲದೆಯೋ ಮಾಡುವ 11 ತಪ್ಪುಗಳ ಪಟ್ಟಿಯನ್ನು ನೀಡಿದ್ದೇವೆ. ಓದಿ ತಿದ್ದಿಕೊಳ್ಳಿ. ನಿಮ್ಮ ಬಾಳಿನ ಎರಡನೆ ಇನ್ನಿಂಗ್ಸನ್ನು ಯಶಸ್ವಿಯಾಗಿ ನಿಭಾಯಿಸಿ.

1. ಸ್ಟೈಲ್- ಇದು ಕೇವಲ ಶೈಲಿಯಲ್ಲ, ನಿಮ್ಮ ಜೀವನ ಶೈಲಿ!
ಮಹಿಳೆಯರು ಮಧ್ಯ ವಯಸ್ಸಿನಲ್ಲಿ ಮಾಡುವ ಮೊದಲ ತಪ್ಪು, ಆಕರ್ಷಕವಾಗಿ ಕಾಣಲು ಏನು ಬೇಕೊ, ಅದನ್ನು ಮಾಡದೆ ಇರುವುದು. ತಲೆ ಬಾಚುವುದರಿಂದ ಹಿಡಿದು, ಮೇಕಪ್ ಮತ್ತು ಉಡುಗೆ ತೊಡುಗೆ ಇವುಗಳೆಲ್ಲದರ ವಿಚಾರವಾಗಿ ತಳೆಯುವ ತಾತ್ಸಾರ ಮನೋಭಾವವೇ ಇವರ ಮೊದಲ ತಪ್ಪು. ಸ್ಟೈಲ್ ಬಗ್ಗೆ ಕೇವಲ ಯುವತಿಯರು ಮಾತ್ರವೇ ಅಲ್ಲ, ಮಧ್ಯ ವಯಸ್ಸಿನ ಮಹಿಳೆಯರು ಗಮನ ನೀಡಲೆ ಬೇಕು. ವಯಸ್ಸಾಯಿತು, ಈ ವಯಸ್ಸಿನಲ್ಲಿ ನನ್ನನ್ನು ಯಾರು ನೋಡಬೇಕು? ಎಂಬ ಮನೋಭಾವ ಬೇಡ. ನಿಮ್ಮ ಬಗ್ಗೆ ನೀವು ಮೊದಲು ಅಭಿಮಾನ ಬೆಳೆಸಿಕೊಳ್ಳಿ. ನಿಮ್ಮ ಸ್ಟೈಲಿನಲ್ಲಿ ಸ್ವಲ್ಪ ಬದಲಾವಣೆ ತಂದುಕೊಳ್ಳಿ.

2. ಒಪ್ಪುವಂತಹ ಉಡುಗೆ ತೊಡುಗೆಗಳ ಹುಡುಕಾಟ
ಯಾವುದೇ ವಯಸ್ಸಿಗೆ ಒಪ್ಪುವಂತಹ ಉಡುಗೆ ತೊಡುಗೆಗಳನ್ನು ಧರಿಸುವುದು ಎಲ್ಲರಿಗು ಸವಾಲಾದ ವಿಷಯ. ಅದರಲ್ಲೂ ಮಧ್ಯ ವಯಸ್ಸಿನಲ್ಲಿ ಇದು ಮತ್ತಷ್ಟು ಅಧಿಕ. ಬಟ್ಟೆಗಳ ಬಗೆಗಳಿಗಿಂತ, ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಬಟ್ಟೆಗಳಿಗೆ ಆಧ್ಯತೆ ನೀಡಿ. ಇರುವ ಟ್ರೆಂಡ್ ಅನುಸರಿಸುವ ಭರದಲ್ಲಿ ನೋಡುವವರ ಕಣ್ಣಿಗೆ ನಗುವ ವಸ್ತುವಾಗ ಬೇಡಿ. ನೀವು ಕೆಲಸಕ್ಕೆ ಹೋಗುವವರಾಗಿದ್ದಲ್ಲಿ, ಅಲ್ಲಿನ ವಾತಾವರಣಕ್ಕೆ ಒಪ್ಪುವ ಬ್ಯುಸಿನೆಸ್ ಸೂಟ್ ಮುಂತಾದ ಔಪಚಾರಿಕವಾದ ( ಫಾರ್ಮಲ್) ಉಡುಗೆಗಳನ್ನು ಧರಿಸಿ. ಗೃಹಿಣಿಯಾಗಿದ್ದಲ್ಲಿ ಅದಕ್ಕೆ ತಕ್ಕಂತಹ ಬಟ್ಟೆ ಧರಿಸಿ. ಯಾವುದೇ ತರಹದ ಬಟ್ಟೆ ತೊಡಿ ಆಕರ್ಷಕವಾಗಿ ಕಾಣುವಂತೆ ಇರಲು ಮರೆಯಬೇಡಿ.

3. ಯೌವನದ ಜೊತೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ
ಹಲವರು ಯೌವನದಲ್ಲಿದ್ದಾಗ ಎಷ್ಟು ಆಕರ್ಷಕರಾಗಿದ್ದರೋ ಅಷ್ಟೇ ಆಕರ್ಷಕವಾಗಿ ಮಧ್ಯ ವಯಸ್ಸಿನಲ್ಲೂ ಕಾಣುತ್ತಿರುತ್ತಾರೆ. ಒಮ್ಮೆ ನಿಮ್ಮ ಗತಕಾಲದ ನೆನಪುಗಳಿಗೆ ಜಾರಿ ಹೋಗಿ,ಆದರೆ ಯಾವುದೇ ಕಾರಣಕ್ಕು ನಿಮ್ಮ ಯೌವನವನ್ನು ನೆನಪಿಸಿಕೊಂಡು ಖಿನ್ನತೆಗೆ ಒಳಗಾಗಬೇಡಿ.
ದಶಕಗಳ ಹಿಂದೆ ನಿಮ್ಮ ಮುಖ ಹೇಗೆ ಕಾಣುತ್ತಿತ್ತೊ ಹಾಗೆ ಕಾಣಲು ಪ್ರಯತ್ನಿಸುವುದನ್ನು ಬಿಟ್ಟು, ಪ್ರಸ್ತುತ ಹೇಗೆ ಇರುವಿರೋ ಹಾಗೆಯೇ, ಮತ್ತಷ್ಟು ಲವಲವಿಕೆಯಿಂದ ಕಾಣಲು ಪ್ರಯತ್ನಿಸಿ. ಮತ್ತಷ್ಟು ಆರೋಗ್ಯವಾಗಿ ಕಾಣಲು ಪ್ರಯತ್ನಿಸಿ.

4. ವ್ಯಾಯಾಮ ಮಾಡುವುದನ್ನು ಬಿಟ್ಟು ಬಿಡುವುದು
ವಯಸ್ಸಾದಂತೆ ವ್ಯಾಯಾಮ ಮಾಡುವುದನ್ನು ಹಲವು ಮಹಿಳೆಯರು ಬಿಟ್ಟು ಬಿಡುತ್ತಾರೆ. ಇಲ್ಲವಾದರೆ, ಈ ವಯಸ್ಸಿನಲ್ಲಿ ವ್ಯಾಯಾಮ ಮಾಡಬೇಕಾ? ಎಂದು ಪ್ರಶ್ನಿಸುತ್ತಾರೆ. ಕ್ಷಮಿಸಿ, ಈ ಪ್ರಶ್ನೆಯನ್ನೆ ಕೇಳಬೇಡಿ. ಮೊದಲಿಗಿಂತಲು ಈಗ ವ್ಯಾಯಾಮದ ಅವಶ್ಯಕತೆ ನಿಮಗೆ ತೀರಾ ಅಗತ್ಯ. ಮಧ್ಯ ವಯಸ್ಸಿನಲ್ಲಿ ನೋವುಗಳು ಮತ್ತು ಬೇನೆಗಳು ಮಹಿಳೆಯರನ್ನು ಹಿಂಡಿ ಹಿಪ್ಪೆ ಮಾಡುತ್ತವೆ. ಅವುಗಳಿಗೆ ಪರಿಹಾರ ಹುಡುಕುವುದಕ್ಕಿಂತ, ನಿವಾರಣೋಪಾಯವಾಗಿ ವ್ಯಾಯಾಮ ಪ್ರಾರಂಭಿಸಿ. ನಿಮ್ಮ ಮೊಣಕಾಲು, ಸಂದಿಗಳು, ಬೆನ್ನು ಮೂಳೆ ಮುಂತಾದವುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ. ವೈರಾಗ್ಯ ಮನೋಭಾವವನ್ನು ತೊರೆದು ವ್ಯಾಯಾಮದತ್ತ ಮನಸ್ಸು ಕೊಡಿ.

5. ಅವಶ್ಯಕತೆಗೆ ತಕ್ಕಷ್ಟು ನಿದ್ದೆ ಮಾಡದಿರುವುದು
" ಇಂದೇಕೋ ನೀವು ತುಂಬಾ ಸುಸ್ತಾದಂತೆ ಕಾಣುತ್ತಿದ್ದೀರಿ" ಎಂಬ ಮಾತನ್ನು ನೀವು ಕೇಳೆ ಇರುತ್ತೀರಿ. ಅದರಲ್ಲು ನೀವು ಚೆನ್ನಾಗಿ ನಿದ್ದೆ ಮಾಡಿದ ದಿನವು ಸಹ ಈ ಮಾತನ್ನು ಕೇಳಿರಬಹುದು. ( ಇರಲಿ ಬಿಡಿ ಆಡಿಕೊಳ್ಳುವವರು ಆಡಿಕೊಳ್ಳಲಿ.) ಈ ವಯಸ್ಸಿನಲ್ಲಿ ನಿಮ್ಮ ನಿದ್ದೆಯ ಅವಧಿಯನ್ನು ಸ್ವಲ್ಪ ಬದಲಾಯಿಸಿಕೊಳ್ಳ ಬೇಕಾದ ಸಂದರ್ಭ ಎಲ್ಲರಿಗು ಒದಗಿ ಬರುತ್ತದೆ. ಅದರಲ್ಲಿಯೂ ನೀವು ಗಂಡ, ಮನೆ, ಮಕ್ಕಳು ಎಂದು ಬಿಡುವಿಲ್ಲದೆ ಓಡಾಡಬೇಕಾಗಿ ಬರಬಹುದು. ಅವರಿಗಾಗಿ ನಿಮ್ಮ ನಿದ್ದೆಯನ್ನು ನೀವು ತ್ಯಾಗಮಾಡಬಹುದು. ನಿದ್ದೆ ತ್ಯಾಗ ಮಾಡಿದರೆ ಪರವಾಗಿಲ್ಲ. ನಿಮ್ಮ ಆರೋಗ್ಯವನ್ನು ಮಾತ್ರ ತ್ಯಾಗ ಮಾಡಬೇಡಿ. ನಿದ್ರಾಹೀನತೆಯು ಮಧುಮೇಹಕ್ಕೆ ದಾರಿ ಮಾಡಿಕೊಟ್ಟು, ಇನ್ನಿತರ ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತದೆ. ಈ ವಯಸ್ಸಿನಲ್ಲಿ ಅವುಗಳನ್ನು ಭರಿಸುವ ಶಕ್ತಿ ನಿಮ್ಮದೇಹಕ್ಕೆ ಇರುವುದಿಲ್ಲ. ಹಾಗಾಗಿ ಅತಿಯಾದ ಕರ್ತವ್ಯ ಪ್ರಙ್ಞೆಯಿಂದ ನಿದ್ದೆಯನ್ನು ತ್ಯಾಗಮಾಡುವುದನ್ನು ಮರೆತು ನಿದ್ದೆ ಮಾಡಿ. ಅಗತ್ಯವಾದಷ್ಟು ನಿದ್ದೆ ಮಾಡುವುದು ಸಹ ನಿಮ್ಮ ಕರ್ತವ್ಯವೆಂಬುದನ್ನು ಮರೆಯಬೇಡಿ.

6. ನಿಮ್ಮ ದಂತ ಆರೋಗ್ಯವನ್ನು ಕಡೆಗಣಿಸಬೇಡಿ
ನಿಮಗೆ ವಯಸ್ಸಾದಂತೆಲ್ಲ ಸಾಮಾನ್ಯವಾಗಿ ನಿಮ್ಮ ಹಲ್ಲುಗಳು ಹಳದಿ ಬಣ್ಣದಲ್ಲಿ ಕಾಣುತ್ತವೆ. ಹಾಗೆಂದು ಇದು ಕೇವಲ ಬಣ್ಣದ ವಿಚಾರವಲ್ಲ. ಹಲ್ಲುಗಳ ಆರೋಗ್ಯವು ನಮ್ಮ ದೇಹದ ಒಟ್ಟಾರೆ ಆರೋಗ್ಯವನ್ನು ಪ್ರತಿನಿಧಿಸುತ್ತದೆ. ದವಡೆಗಳ ಸಮಸ್ಯೆಯು ವಯಸ್ಸಾದಂತೆಲ್ಲ ಕಾಡುತ್ತಿರುತ್ತದೆ. ಬಹುಶಃ ಇದು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯಾಗಿರಬಹುದು. ಯಾವುದೇ ಕಾರಣಕ್ಕು ಇದನ್ನು ಉದಾಸೀನ ಮಾಡದೆ ಮೊದಲು ದಂತ ವೈದ್ಯರ ಬಳಿಗೆ ಹೋಗಿ ಪರೀಕ್ಷಿಸಿಕೊಳ್ಳಿ.

7. ವಯಸ್ಸನ್ನು ಮರೆಮಾಚುವ ಪ್ರಯತ್ನಗಳನ್ನು ಕೈಬಿಡಿ
ಬಹುತೇಕ ಸೆಲೆಬ್ರಿಟಿಗಳು ಮತ್ತು ಸಾಮಾನ್ಯ ಸ್ತ್ರೀಯರು ಮಾಡುವ ದೊಡ್ಡ ತಪ್ಪು, ವಯಸ್ಸನ್ನು ಮರೆಮಾಚಲು ನಾನಾ ಕಸರತ್ತುಗಳನ್ನು ಮಾಡುವುದು. ವಯಸ್ಸಾಯಿತು ಎಂದು ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟ. ಆದರೂ ನಿಮ್ಮ ಜೋಲು ಬಿದ್ದ ಮುಖ ಅಥವಾ ಕಲೆಗಳಿಂದ ಕೂಡಿದ ತುಟಿಗಳು ನೋಡಲು ಚಂದ ಕಾಣುವುದಿಲ್ಲ.
ಉತ್ತಮವಾದ ಚರ್ಮ ಸ್ನೇಹಿ ಉತ್ಪನ್ನಗಳು ( ಮುಖ್ಯವಾಗಿ ರೆಟಿನೊಲ್ ಇರುವಂತಹುದು) ನಿಮ್ಮ ಮುಖದಲ್ಲಿನ ಗೆರೆಗಳನ್ನು ಮತ್ತು ಸುಕ್ಕುಗಳನ್ನು ಕಡಿಮೆ ಮಾಡಬಲ್ಲವು. ಒಂದು ವೇಳೆ ನಿಮಗಿದು ಸರಿ ಬರಲಿಲ್ಲವಾದರೆ, ಅದನ್ನು ಬಿಟ್ಟು ಮತ್ತೊಂದನ್ನು ಪ್ರಯತ್ನಿಸಿ. ನೀವು ಈಗಾಗಾಲೇ ತಾರುಣ್ಯವನ್ನು ನೋಡಿದ್ದೀರಾ? ಮತ್ತೆ ಅದೇ ವಯಸ್ಸಿನಂತೆ ಕಾಣಲು ಮಾತ್ರ ಪ್ರಯತ್ನಿಸಬೇಡಿ. ಈಗಿನ ವಯಸ್ಸನ್ನು ಸಕಾರಾತ್ಮಕವಾಗಿ ಪರಿಗಣಿಸಿ ಸಂತಸವಾಗಿರಿ. ಬಿಟ್ಟರೆ ಈ ವಯಸ್ಸು ಕಳೆದು ಹೋಗುತ್ತದೆ!

8. ಕೂದಲಿಗೆ ಯಾವ ವಿನ್ಯಾಸ ಸೂಕ್ತ
ನಿಮ್ಮ ಕೂದಲನ್ನು ಸಣ್ಣವಾಗಿ ಕತ್ತರಿಸುತ್ತೀರಾ ಅಥವಾ ಭುಜದ ಮಟ್ಟಕ್ಕೆ ಕತ್ತರಿಸುತ್ತೀರಾ ಎಂಬುದು ನಿಮಗೆ ಬಿಟ್ಟ ವಿಚಾರ. ಏಕೆಂದರೆ 50 ವರ್ಷ ಮೀರಿದ ನಂತರ ಯಾವ ಬಗೆಯ ಕೇಶ ವಿನ್ಯಾಸವನ್ನು ಅನುಸರಿಸಬೇಕು ಎಂಬ " ನಿಯಮ" ಯಾವುದೂ ಇಲ್ಲ. ನಿಮ್ಮ ಎತ್ತರ, ಆಕಾರ, ಜೀವನ ಶೈಲಿ ಮತ್ತು ಕೂದಲಿನ ಸ್ವಭಾವವನ್ನು ಪರಿಗಣಿಸಿ ನಿಮ್ಮ ಕೂದಲನ್ನು ಕತ್ತರಿಸ ಬೇಕಾ ಅಥವಾ ಬೇಡವೆ ಎಂದು ನಿರ್ಧರಿಸಿ, ಅದಕ್ಕೆ ಸೂಕ್ತವೊಂದುವಂತೆ ಕತ್ತರಿಸಿಕೊಳ್ಳಿ.
ಈ ವಯಸ್ಸಿನಲ್ಲಿ ನಿಮ್ಮ ಕೂದಲು ಸ್ವಲ್ಪ ಮಟ್ಟಿಗೆ ಕಂದು ಬಣ್ಣಕ್ಕೆ ತಿರುಗುತ್ತದೆ ಹಾಗು ತೆಳುವಾಗಿರುತ್ತದೆ. ಜೊತೆಗೆ ಕೂದಲಿನ ಹೊರಮೈ ಒರಟು ಒರಟಾಗಿರುತ್ತದೆ. ಈ ಅಂಶಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ನಿಮ್ಮ ಕೂದಲಿಗೆ ಬಣ್ಣವನ್ನು ಹಚ್ಚಿ ಮತ್ತು ಕತ್ತರಿಸಿಕೊಳ್ಳಿ. ಬಹುಶಃ ನೀವು 20 ಅಥವಾ 30 ವಯಸ್ಸಿನಲ್ಲಿರುವಾಗ ಕೂದಲನ್ನು ಕತ್ತರಿಸಲು ಆಗಿಲ್ಲದೆ ಇರಬಹುದು. ಅಂದ ಕಾಣುತ್ತೀರಾ ಎಂದಾದಲ್ಲಿ ಕತ್ತರಿಸಿಕೊಳ್ಳಿ ಇಲ್ಲಾ ಹಾಗೆಯೇ ಬಿಡಿ.

9. ಸೂಕ್ತವಲ್ಲದ ಮೇಕಪ್ ಬಳಸುವುದು
ನೀವು ಇದುವರೆಗೂ ಬಳಸುತ್ತಿದ್ದ ಮೇಕಪ್‍ನ ಬ್ರಾಂಡ್ ಮತ್ತು ಬಣ್ಣವು ಯಾವುದೇ ರೀತಿಯಲ್ಲಿ ನಿಮ್ಮ ತ್ವಚೆಗೆ ಸರಿ ಹೊಂದುತ್ತದೆಯೋ ಅಥವಾ ಸರಿಹೊಂದುವುದಿಲ್ಲವೋ ಎಂಬುದನ್ನು ಮೊದಲು ಮನಗಾಣಿರಿ.
ನಿಮ್ಮ ಮುಖದ ಮೇಲೆ ಉಂಟಾಗಿರುವ ಸುಕ್ಕುಗಳನ್ನು ಮತ್ತು ಕಣ್ಣಿನ ಸುತ್ತ ಉಂಟಾಗಿರುವ ಕಲೆಗಳನ್ನು ಹೋಗಲಾಡಿಸುವ ಸಲುವಾಗಿ ಹೆವಿ ಡ್ಯೂಟಿ ಪೌಡರ್ ಮತ್ತು ಕನ್ಸೀಲರ್ ಗಾಢವಾಗಿ ಹಚ್ಚುವ ಪದ್ಧತಿಗೆ ಅಂಟಿಕೊಳ್ಳ ಬೇಡಿ. ಗಾಢವಾದ ಮೇಕಪ್ ನಿಮ್ಮನ್ನು ಮತ್ತಷ್ಟು ವಯಸ್ಸಾದಂತೆ ತೋರಿಸುತ್ತದೆ. ಮತ್ತಷ್ಟು ಸ್ವಾಭಾವಿಕವಾಗಿ ಕಾಣಲು ಭೂತ ಕನ್ನಡಿಯನ್ನು ಬಳಸಿ. ನಿಮ್ಮ ಮುಖಕ್ಕೆ " ಲೈಟ್ ಟಚ್ ಅಪ್ ನೀಡಿ".

10. ಸೂಕ್ತವಲ್ಲದ ಬ್ರಾ ಧರಿಸುವುದು
ಗುರುತ್ವಾಕರ್ಷಣೆಯು ನಿಮ್ಮ ದೇಹದ ಮೇಲೆ ಪ್ರಭಾವವನ್ನು ಬೀರುತ್ತದೆ. ಹಾಗಾಗಿ ಬ್ರಾ ಧರಿಸುವುದು ಅನಿವಾರ್ಯ. ಒಂದು ವೇಳೆ ನಿಮ್ಮ ಎದೆ ಜೋತು ಬಿದ್ದಿದ್ದರೆ, ಅದನ್ನು ಸಾಮಾನ್ಯವೆಂದು ಪರಿಗಣಿಸಬೇಡಿ. ಹೆಣ್ಣಿಗೆ ಆಕರ್ಷಕತೆಯನ್ನು ತಂದು ಕೊಡುವ ಎದೆಯ ಭಾಗದ ಅಂದಕ್ಕೆ ಮಹತ್ವ ಕೊಡಿ.
" ಹಲವಾರು ಮಹಿಳೆಯರು ವಯಸ್ಸಾದಂತೆ ತಮ್ಮ ದೇಹವು ಬದಲಾಗುತ್ತದೆ ಎಂಬ ಅಂಶವನ್ನು ಪರಿಗಣಿಸದೆ, ಅದೇ ಹಳೆಯ ತಮ್ಮಿಚ್ಛೆಯ ಬ್ರಾಂಡಿನ ಮತ್ತು ಅಳತೆಯ ಬ್ರಾಗಳನ್ನು ತೋಡುತ್ತಿರುತ್ತಾರೆ". ಸರಿಯಾದ ಅಳತೆಯ ಬ್ರಾ ನಿಮ್ಮ ಎದೆಗೆ ಬಿಗಿತವನ್ನು ನೀಡುವುದಲ್ಲದೆ, ಸುಂದರ ಆಕಾರವನ್ನು ಸಹ ಒದಗಿಸುತ್ತದೆ. ಜೊತೆಗೆ ನಿಮ್ಮ ದೇಹವು ಸಪೂರವಾಗಿ ಕಾಣುವಂತೆ ಮಾಡುತ್ತದೆ. ಹಾಗಾಗಿ ಮೊದಲು ನಿಮ್ಮ ಒಳ ಉಡುಪುಗಳ ಅಳತೆಯನ್ನು ಮರು ಮೌಲ್ಯಮಾಪನ ಮಾಡಿ, ಹೊಸ ಬಗೆಯ ಒಳ ಉಡುಪುಗಳಿಗೆ ಬಂಡವಾಳ ಹೂಡಿ. ಬಹುತೇಕ ದೊಡ್ಡ ಅಂಗಡಿಗಳಲ್ಲಿ ಮತ್ತು ಒಳ ಉಡುಪುಗಳ ಅಂಗಡಿಗಳಲ್ಲಿ ಉಚಿತವಾಗಿ ಬ್ರಾ- ಫಿಟ್ಟಿಂಗ್ ಸೇವೆಯನ್ನು ಒದಗಿಸುತ್ತಿರುತ್ತಾರೆ. ಅವುಗಳ ಉಪಯೋಗವನ್ನು ಪಡೆಯಿರಿ.

11. ನೀರಸ ಲೈಂಗಿಕ ಜೀವನ
ನಮ್ಮ ಸಂಸ್ಕೃತಿಯಲ್ಲಿ ಲೈಂಗಿಕ ಜೀವನಕ್ಕೆ ಒಂದು ಚೌಕಟ್ಟು ಇದೆ. ಅದರಲ್ಲಿಯೂ ದಂಪತಿಗಳು ಇದರಲ್ಲಿ ಪಾಲ್ಗೊಳ್ಳಲು ಯಾವುದೇ ರೀತಿಯಾದ ಅಡೆತಡೆಗಳನ್ನು ಒಡ್ಡಿಲ್ಲ. ನೀವು ಯಾವುದೇ ವಯಸ್ಸಿನಲ್ಲಿ ನಿಮಗೆ ಇಷ್ಟವಾದ ರೀತಿಯಲ್ಲಿ ಸುಂದರವಾಗಿ ಕಾಣುವಂತಹ ಉಡುಗೆ ತೊಡಲು ಮತ್ತು ನಿಮ್ಮ ಸಂಗಾತಿಯಿಂದ ನೈತಿಕ ನೆಲೆಯಲ್ಲಿ ಲೈಂಗಿಕ ಕೋರಿಕೆಗಳನ್ನು ತೀರಿಸಿಕೊಳ್ಳಲು ನಿಮಗೆ ಸ್ವಾತಂತ್ರ್ಯ ಯಾವತ್ತಿಗು ಇರುತ್ತದೆ. ಅದರಲ್ಲಿಯೂ ತಮ್ಮ ಜೀವನದ ಅತ್ಯುತ್ತಮ ಲೈಂಗಿಕ ಆನಂದವನ್ನು 50 ದಾಟಿದ ಮಹಿಳೆಯರು ಗಳಿಸಬಹುದು. ಈ ವಯಸ್ಸಿನಲ್ಲಿ ಅವರು ನಡೆಸುವ ಮಿಲನವು, ಮಕ್ಕಳನ್ನು ಹಡೆಯಲು ಅಲ್ಲ. ಬದಲಿಗೆ ತಮ್ಮ ಮನಃ ಸಂತೋಷಕ್ಕಾಗಿ ಎಂಬುದನ್ನು ಬಹುತೇಕ ಮಹಿಳೆಯರು ಮರೆಯುವ ವಿಚಾರವಾಗಿದೆ. ಮಡಿವಂತಿಕೆ ಬಿಡಿ, ನಿಮ್ಮ ಸಂಗಾತಿಯೊಂದಿಗೆ ಬಾಳಿನ ಮುಸ್ಸಂಜೆಯನ್ನು ಮನದುಂಬಿ ಆನಂದಿಸಿ.



Click it and Unblock the Notifications











