Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಾಬಿಯ ಅಂದ ನೀಡಬಹುದು ನರಕದ ಅನುಭವ!

ನಾಬಿಗೆ ಚುಚ್ಚಿದರೆ ಗಾಯ ಒಣಗಲು 4-5 ತಿಂಗಳು ಬೇಕಾಗುತ್ತದೆ. ಅಲ್ಲದೆ ಈ ರೀತಿ ಚುಚ್ಚಿಕೊಂಡ ಮೇಲೆ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆ ತರಬೇಕಾಗುತ್ತದೆ.
ಇಷ್ಟಲ್ಲದೆ ನಾಬಿಗೆ ಚುಚ್ಚುವವರು ಈ ಕೆಳಗಿನ ಅಂಶಗಳನ್ನು ಗಮನಿಸುವುದು ಒಳ್ಳೆಯದು.
1. ಸಡಿಲವಾದ ಉಡುಪು: ನಾಬಿಗೆ ಚುಚ್ಚುವ ಮೊದಲು ಆ ಭಾಗವನ್ನು ಶುಚಿಗೊಳಿಸಬೇಕು. ನಂತರ ಸಡಿಲವಾದ ಡ್ರೆಸ್ ಗಳನ್ನು ಕೊಳ್ಳಬೇಕು. ಏಕೆಂದರೆ ಚುಚ್ಚಿದ ನಂತರ ಗಾಯ ಒಣಗುವವರೆಗೆ ಜೀನ್ಸ್ ಮತ್ತು ಟೀ ಶರ್ಟ್ ಅಥವಾ ಬಿಗಿಯಾದ ಉಡುಪು ಧರಿಸಿದರೆ ಬಟ್ಟೆ ತಾಗಿ ನೋವಾಗುವುದು. ಆದ್ದರಿಂದ ಗಾಯ ಒಣಗುವವರೆಗೆ ಸಡಿಲವಾದ ಕುರ್ತಾ ಟಾಪ್ ಧರಿಸಬೇಕು.
2. ಆಭರಣ: ಹೀಗೆ ಚುಚ್ಚುವಾಗ ಕೃತಕ ಆಭರಣಗಳನ್ನು ಧರಿಸಬೇಡಿ. ಉತ್ತಮ ಗುಣಮಟ್ಟದ ಆಭರಣವನ್ನು ಕೊಂಡು ಧರಿಸಬೇಕು. ಇಲ್ಲದಿದ್ದರೆ ಸೆಪ್ಟಿಕ್ ಆಗಿ ಗಾಯ ಜಾಸ್ತಿಯಾಗುವುದು.
3. ಎಳೆಯಬೇಡಿ: ಒಮ್ಮೆ ಚುಚ್ಚಿದ ನಂತರ ಅದನ್ನು ಮುಟ್ಟುವುದು ಅಥವಾ ಬಿಚ್ಚಿ ಹಾಕುವುದು, ಎಳೆಯುವುದಾಗಲಿ ಮಾಡಬಾರದು. ಈ ರೀತಿ ಮಾಡಿದರೆ ಗಾಯ ಬೇಗನೆ ಒಣಗುವುದಿಲ್ಲ.
4. ಮಲಗುವ ಭಂಗಿ: ಒಮ್ಮೆ ಚುಚ್ಚಿದ ಬಳಿಕ ಮಲುಗುವ ಭಂಗಿ ಸರಿಯಾಗಿರಬೇಕು. ಇಲ್ಲದಿದ್ದರೆ ತಿರುಗಿ ಮಲಗಿದ್ದಾಗ ಹೊಕ್ಕಳಿಗೆ ಚುಚ್ಚಿದ ಆಭರಣಕ್ಕೆ ತಾಗಿದರೆ ಜೀವ ಹೋದ ಅನುಭವ ಉಂಟಾಗುತ್ತದೆ. ಅಲ್ಲದೆ ಆ ಭಾಗ ಹೊದಿಕೆಗೆ ತಾಗದಂತೆ ಎಚ್ಚರಿಕೆವಹಿಸಬೇಕು. ಇಲ್ಲದಿದ್ದರೆ ತುಂಬಾ ನೋವು ಅನುಭವಿಸಬೇಕಾಗುವುದು.
5. ಆಭರಣ ಬದಲಾವಣೆ: ಒಮ್ಮೆ ಚುಚ್ಚಿದ ಬಳಿಕ ಆಭರಣಗಳನ್ನು ಆಗಾಗ ಬದಲಾಯಿಸಬಾರದು. ಆಭರಣಗಳನ್ನು ಕೊಳ್ಳುವಾಗ ನೋಡಿ ಕೊಳ್ಳಬೇಕು. ಬಟ್ಟೆಗೆ ಸಿಕ್ಕಿ ಹಾಕಿಕೊಳ್ಳುವ ವಿನ್ಯಾಸವಿರುವ ಆಭರಣಕೊಳ್ಳಬಾರದು.
ನಾಬಿ ಚುಚ್ಚಿ ಫ್ಯಾಷನೇಬಲ್ ಮತ್ತು ಸೆಕ್ಸಿಯಾಗಿ ಕಾಣಲು ಇಷ್ಟಪಡುವವರು ದೈಹಿಕ ನೋವು ಅನುಭವಿಸಲು ಸಿದ್ಧವಿದ್ದರೆ ಮಾತ್ರ ಚುಚ್ಚಿಕೊಳ್ಳಬೇಕು. ಫ್ರೆಂಡ್ ಚುಚ್ಚಿದ್ದಾಳೆ ಎಂದು ಚುಚ್ಚಲು ಹೋದರೆ ವ್ಯತಿರಿಕ್ತವಾದ ಪರಿಣಾಮ ಎದುರಿಸಬೇಕಾಗುವುದು.



Click it and Unblock the Notifications
