Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಆಕರ್ಷಕ ಕಣ್ಣಿನ ರೆಪ್ಪೆ ಪಡೆಯಲು ನೈಸರ್ಗಿಕ ವಿಧಾನ
ಕಣ್ಣಿಗೆ ಉದ್ದದ ರೆಪ್ಪೆಗಳಿದ್ದರೆ ಕಣ್ಣಿನ ಅಂದ ಹೆಚ್ಚುವುದು. ಕಣ್ಣು ರೆಪ್ಪೆ ತುಂಬಾ ಕಡಿಮೆ ಇದ್ದು ತ್ವಚೆ ಎಷ್ಟೇ ಸುಂದರವಾಗಿ ಇದ್ದರೂ ಆಕರ್ಷಕವಾಗಿ ಕಾಣುವುದಿಲ್ಲ. ಕೃತಕ ಕಣ್ಣು ರೆಪ್ಪೆಗಳು ದೊರೆಯುವುದಾದರೂ ಅವುಗಳು ನೈಸರ್ಗಿಕ ಚೆಲುವನ್ನು ನೀಡುವುದು ಕಡಿಮೆ. ಸ್ವಲ್ಪ ತಾಳ್ಮೆಯಿದ್ದರೆ ಈ ಕೆಳಗಿನ ವಿಧಾನದಿಂದ ನಿಮ್ಮ ಕಣ್ಣುಗಳ ರೆಪ್ಪೆಗಳು ಸುಂದರವಾಗಿ ಬೆಳೆಯುವಂತೆ ಮಾಡಬಹುದಾಗಿದೆ.

ಹರಳೆಣ್ಣೆ: ದಿನಾ ರಾತ್ರಿ ಮಲುಗುವ ಮುನ್ನ ಕಣ್ಣಿನ ರೆಪ್ಪೆಗಳಿಗೆ ಹರಳೆಣ್ಣೆ ಹಚ್ಚಿದರೆ ಕಣ್ಣು ರೆಪ್ಪೆಗಳು ಸುಂದರವಾಗಿ ಬೆಳೆಯುತ್ತದೆ. ಹರಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಬೇಕಾದರೂ ಹಚ್ಚಬಹುದು. ಈ ರೀತಿ ಕೆಲವು ತಿಂಗಳಿನವರೆಗೆ ಹಚ್ಚಿದರೆ ಆಕರ್ಷಕವಾದ ಕಣ್ಣಿನ ರೆಪ್ಪೆ ಪಡೆಯಬಹುದು.
ವಿಟಮಿನ್ ಇ ಎಣ್ಣೆ: ವಿಟಮಿನ್ ಇ ಎಣ್ಣೆ ಬಳಸುವುದರಿಂದ ಕಣ್ಣಿನ ಕೂದಲು ಆರೋಗ್ಯಕರವಾಗಿ ಬೆಳೆಯುತ್ತದೆ. ಅಲ್ಲದೆ ಇದನ್ನು ಕೂದಲಿಗೆ ಹಚ್ಚಿದರೂ ಕೂಡ ಕೂದಲು ಆರೋಗ್ಯಕರವಾಗಿ ಬೆಳೆಯುವುದು. ಇಲ್ಲದಿದ್ದರೆ ವಿಟಮಿನ್ ಇ ಮಾತ್ರೆಯನ್ನು ತೆಗೆದುಕೊಂಡು ಪುಡಿ ಮಾಡಿ ಅದನ್ನು ಎಣ್ಣೆ ಜೊತೆ ಮಿಶ್ರ ಮಾಡಿ ಆ ಎಣ್ಣೆಯನ್ನು ಕೂಡ ಬಳಸಬಹುದು. ವಿಟಮಿನ್ ಇ ಎಣ್ಣೆ ಕಣ್ಣಿಗೆ ತಂಪನ್ನು ನೀಡುತ್ತದೆ. ಅಲ್ಲದೆ ಕಣ್ಣಿನಲ್ಲಿ ತುರಿಕೆ, ಅಲರ್ಜಿ ತೊಂದರೆಗಳಿದ್ದರೆ ಅದು ಕೂಡ ನಿವಾರಣೆಯಾಗುತ್ತದೆ. ವಿಟಮಿನ್ ಇ ಮಾತ್ರೆಗಳು ಔಷಧಿ ಅಂಗಡಿಗಳಲ್ಲಿ ದೊರೆಯುತ್ತದೆ.
ಬ್ರೆಷ್: ತಲೆಬಾಚಿ ಕೂದಲಿನ ಆರೈಕೆ ಮಾಡುವ ರೀತಿ ಕಣ್ಣಿನ ರೆಪ್ಪೆಯನ್ನು ಕುಡ ಮೃದುವಾದ ಬ್ರೆಷ್ ನಿಂದ ಬಾಚಬೇಕು. ಈ ರೀತಿ ಮಾಡಲು ಮಸ್ಕರಾ ಬ್ರೆಷ್ ಬಳಸಬಹುದು. ನೈಸರ್ಗಿಕ ಎಣ್ಣೆಗಳನ್ನು ಕಣ್ಣು ರೆಪ್ಪೆಗಳಿಗೆ ಹಚ್ಚುವಾಗ ಈ ತರಹದ ಬ್ರೆಷ್ ಬಳಸಿ ಹಚ್ಚಿದರೆ ಉತ್ತಮವಾದ ಪ್ರಯೋಜನವನ್ನು ಕಾಣಬಹುದು.
ಎಣ್ಣೆಯ ಬದಲು Vaseline ಹಚ್ಚಿ ಮಲಗಿ ಬೆಳಗ್ಗೆ ಎದ್ದು ತೊಳೆಯುವುದರಿಂದ ಕಣ್ಣು ರೆಪ್ಪೆಗಳ ಸೌಂದರ್ಯವನ್ನು ಹೆಚ್ಚಿಸಬಹುದು.
ಕಣ್ಣಿನ ಮೇಕಪ್: ಕಣ್ಣಿಗೆ ಮೇಕಪ್ ಮಾಡಿ ಅದನ್ನು ತೆಗೆಯುವಾಗ ಮೆದುವಾಗಿ ತೆಗೆಯಬೇಕು. ಕಣ್ಣುಗಳನ್ನು ಉಜ್ಜಬಾರದು. ಕಣ್ಣುಗಳಿಗೆ ಎಣ್ಣೆ ಹಚ್ಚಿದರೆ ಕಣ್ಣಿನ ಮೇಕಪ್ ಅನ್ನು ಸುಲಭವಾಗಿ ತೆಗೆಯಬಹುದು.
ಪ್ರೊಟೀನ್: ಪ್ರೊಟೀನ್ ಇರುವ ಆಹಾರಗಳನ್ನು ತಿನ್ನಬೇಕು. ಮೀನು, ಮಾಂಸ, ಮೊಟ್ಟೆ, ದವಸಧಾನ್ಯಗಳು, ವಿಟಮಿನ್ ಎ, ಇ ಮತ್ತು ಸಿ ಇರುವ ಆಹಾರ, ಕ್ಯಾರೇಟ್, ಕಿತ್ತಳೆ, ಸೇಬು, ನಿಂಬೆಹಣ್ಣು, ನೆಲ್ಲಿ ಕಾಯಿ ಸೇವಿಸುವುದು ಒಳ್ಳೆಯದು. ಸೌತೆ ಕಾಯಿ, ಬೂದಿ ಕುಂಬಳಕಾಯಿ, ಒಂದು ಚಮಚ ಹರಳೆಣ್ಣೆ, ತಣ್ಣನೆಯ ನೀರು ಕಣ್ಣಿಗೆ ತಂಪು ನೀಡುವುದು.ಬಾದಾಮಿ, ಸೋಯಾ, ದವಸ ಧಾನ್ಯಗಳಲ್ಲಿ ವಿಟಮಿನ್ 'ಎ' ಹೆಚ್ಚು ಇರುವುದರಿಂದ ಕಣ್ಣಿನ ಆರೋಗ್ಯ ಹೆಚ್ಚುತ್ತದೆ.



Click it and Unblock the Notifications