Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಐಬ್ರೋ ಮಾಡಿಸುವಾಗ ಗಮನಿಸಬೇಕಾದ ಅಂಶಗಳು

ಐಬ್ರೋ ಮಾಡಿಸುವಾಗ ಈ ಕೆಳಗಿನ ಅಂಶಗಳನ್ನು ಮುಖ್ಯವಾಗಿ ಗಮನಿಸಿಬೇಕು.
1. ನಿಮಗೆ ಯಾವ ರೀತಿಯ ಶೇಪ್‌ನ ಐಬ್ರೋ ಚೆನ್ನಾಗಿ ಕಾಣುತ್ತದೆ ಎಂದು ತಿಳಿದುಕೊಳ್ಳಬೇಕು. ಕೆಲವರಿಗೆ ದಪ್ಪವಾಗಿ ಮಾಡಿಸಿದರೆ ಚೆನ್ನಾಗಿ ಕಾಣಿಸಿದರೆ ಮತ್ತೆ ಕೆಲವರಿಗೆ ತೆಳ್ಳಗೆ ಮಾಡಿಸಿದರೆ ಚೆನ್ನಾಗಿ ಕಾಣಿಸುತ್ತದೆ. ಕೆಲವು ಬ್ಯೂಟಿಷಿಯನ್ ಐಬ್ರೋ ತುಂಬಾ ತೆಳ್ಳಗೆ ಮಾಡಿ ಬಿಡುತ್ತಾರೆ. ಆದ್ದರಿಂದ ಐಬ್ರೋ ಮಾಡಿಸುವ ಮುನ್ನ ಬ್ಯೂಟಿಷಿಯನ್ ಹತ್ತಿರ ನಿಮಗೆ ಐಬ್ರೋ ಯಾವ ಶೇಪ್ ನಲ್ಲಿ ಬೇಕು ಎಂದು ಹೇಳಿ, ಇಲ್ಲದಿದ್ದರೆ ಕೆಲವರು ತುಂಬಾ ತೆಳ್ಳಗೆ ಮಾಡಿಬಿಡುತ್ತಾರೆ.
2. ಐಬ್ರೋ ಬಿಲ್ಲಿನ ರೀತಿಯಲ್ಲಿ ಇದ್ದರೆ ತುಂಬಾ ಆಕರ್ಷಕವಾಗಿ ಕಾಣುತ್ತದೆ. ಆದರೆ ತುಂಬಾ ಬಾಗಿಸಬಾರದು, ತುಂಬಾ ಸ್ಟ್ರೈಟ್ ಆಗಿ ಮಾಡಿಸಬಾರದು, ಬಿಲ್ಲಿನ ರೀತಿಯ ಐಬ್ರೋ ಶೇಪ್ ಎಲ್ಲಾ ಮುಖಕ್ಕೂ ಆಕರ್ಷಕವಾಗಿ ಕಾಣುತ್ತದೆ. ದುಂಡು ಮುಖವಿರುವವರು ಸ್ವಲ್ಪ ದಪ್ಪವಾಗಿ ಮಾಡಿಸಿದರೆ ತುಂಬಾ ಚೆನ್ನಾಗಿ ಕಾಣುತ್ತದೆ.
3. ಐಬ್ರೋವನ್ನು ಚಿಕ್ಕ ಬ್ರೆಷ್ ನಿಂದ ಪ್ರತಿದಿನ ಬಾಚಬೇಕು.
4. ಐಬ್ರೋವನ್ನು 3 ವಾರಕ್ಕೊಮ್ಮೆಯಾದರೂ ಮಾಡಿಸಬೇಕು.
5. ಐಬ್ರೋ ಮಾಡಿಸಿದ ನಂತರ ಐಬ್ರೋ ಪೆನ್ಸಿಲ್ ಬಳಸಿದರೆ ಮುಖದ ಆಕರ್ಷಣೆ ಹೆಚ್ಚುವುದು.
6. ಒಂದು ವೇಳೆ ಐಬ್ರೋ ಬಿಳಿಯಾಗಿದ್ದರೆ ಬ್ರೋ ಸೀಲರ್ ಬಳಸಬಹುದು.
7. ಮುಖ ಟ್ಯಾನ್ ಆಗಿದ್ದರೆ ಐಬ್ರೋ ಮಾಡಿಸಬೇಡಿ.
8. ಐಬ್ರೋ ಮಾಡಿಸುವ ಮುನ್ನ ಮುಖವನ್ನು ಸ್ವಚ್ಛವಾಗಿ ತೊಳೆದು, ತ್ವಚೆ ಒಣಗಿದ ನಂತರ ಮಾಡಿಸಿದರೆ ಅಷ್ಟು ನೋವಾಗುವುದಿಲ್ಲ. ತುಂಬಾ ಬೆವರು ಇದ್ದಾಗ ಹಾಗೇ ಐಬ್ರೋ ಮಾಡಿಸದೆ ಮುಖವನ್ನು ತೊಳೆದು ಮಾಡಿಸುವುದು ಒಳ್ಳೆಯದು.
9. ಐಬ್ರೋ ಮಾಡಿಸುವಾಗ ಕಣ್ಣು ಮತ್ತು ಹಣೆಯನ್ನು ಎಳೆದು ಹಿಡಿಯುತ್ತೇವೆ, ಹೀಗೆ ಎಳೆದು ಹಿಡಿದುರುವಾಗ ನೋವಾಯಿತು ಎಂದು ಬಿಡಬೇಡಿ, ಏಕೆಂದರೆ ಹೀಗೆ ಕೈ ಬಿಟ್ಟರೆ ಥ್ರೆಡ್ ನಿಂದ ಕೇಳುವಾಗ ಗಾಯವಾಗಬಹುದು.
10. ಐಬ್ರೋ ಮಾಡಿಸಿದ ನಂತರ ಕೂಡಲೇ ಹೋಗಿ ಕೆಮಿಕಲ್ ಹಾಕಿ ಮುಖ ತೊಳೆಯಬೇಡಿ, ಸ್ವಲ್ಪ ಹೊತ್ತಿನ ನಂತರ ಮುಖ ತೊಳೆದು ಕ್ರೀಮ್ ಹಚ್ಚಬೇಕು.
ದಿನಾ ಹರಳೆಣ್ಣೆಯನ್ನು ಹಚ್ಚಿದರೆ ಐಬ್ರೋ ಕಪ್ಪಾಗಿ ಆಕರ್ಷಕವಾಗಿ ಕಾಣುವುದು, ಐಬ್ರೋ ಸೌಂದರ್ಯ ಹೆಚ್ಚಿಸಲು ನಿಮ್ಮದೇನಾದರೂ ಸಲಹೆಗಳಿದ್ದರೆ ನಮಗೆ ಬರೆದು ಕಳುಹಿಸಿ.



Click it and Unblock the Notifications
