Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸುಂದರವಾದ ಪಾದಗಳಿಗಾಗಿ ಪೆಡಿಕ್ಯೂರೇ ಬೇಕೆಂದಿಲ್ಲ!
ಹೆಚ್ಚಿನವರು ಮುಖದ ಆರೈಕೆ ಬಗ್ಗೆ ವಹಿಸುವಷ್ಟು ಎಚ್ಚರವನ್ನು ಕಾಲಿನ ಆರೈಕೆಯಲ್ಲಿ ವಹಿಸುವುದಿಲ್ಲ. ಸೌಂದರ್ಯವೆಂದು ಬಂದಾಗ ಮುಖ ಮಾತ್ರವಲ್ಲ ಕಾಲುಗಳು ಕೂಡ ಸುಂದರವಾಗಿರಬೇಕು. ಅದರಲ್ಲೂ ಚಪ್ಪಲಿ ಧರಿಸುವಾಗ ಪಾದಗಳು ಆಕರ್ಷಕವಾಗಿ ಕಾಣಬೇಕೆಂದರೆ ಅದರ ಆರೈಕೆ ಬಗ್ಗೆ ಗಮನಹರಿಸಬೇಕು. ಇದಕ್ಕಾಗಿ ಪಡಿಕ್ಯೂರ್ ಮಾಡಿಸಬಹುದು. ಆದರೆ ಅದನ್ನು ಮಾಡಿಸಿಕೊಂಡು ಕೂರಲು ಹೆಚ್ಚಿನವರಿಗೆ ಸಮಯವಿರುವುದಿಲ್ಲ, ಅಲ್ಲದೆ ಅಧಿಕ ಹಣವನ್ನು ಬ್ಯೂಟಿ ಪಾರ್ಲರ್‌ಗಳಿಗೆ ಕೊಡಬೇಕಾಗುತ್ತದೆ. ಅದರ ಬದಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಸುಂದರವಾದ ಪಾದಗಳು ನಿಮ್ಮದಾಗುವುದು.

ಕಾಲು ತೊಳೆಯುವುದು: ಹೊರಗಡೆ ಸುತ್ತಾಡಿ ಬಂದ ತಕ್ಷಣ ಕಾಲುಗಳನ್ನು ತೊಳೆಯಬೇಕು. ಕಾಲು ತೊಳೆಯಲು ಹದ ಬಿಸಿ ಬೀರನ್ನು ಉಪಯೋಗಿಸುವುದು ಒಳ್ಳೆಯದು. ಇದರಿಂದ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ.
ಬ್ರಷ್ ಬಳಸಬೇಕು: ಕಾಲುಗಳನ್ನು ತೊಳೆದು ಸೋಪು ಹಾಕಿ ಮೃದುವಾದ ಬ್ರಷ್ ಹಾಕಿ ಉಜ್ಜಬೇಕು.
ಉಗುರು: ಮಹಿಳೆಯರಿಗೆ ಉದ್ದದ ಕಾಲುಗಳಲ್ಲಿ ಉದ್ದದ ಉಗುರು ಬಿಡುವುದು ಅಂದ್ರೆ ಇಷ್ಟ. ಆದರೆ ತುಂಬ ಉದ್ದದ ಉಗುರುಗಳಿದ್ದರೆ ಕೊಳೆ ಬೇಗನೆ ತುಂಬಿಕೊಳ್ಳುವುದು. ಆದ್ದರಿಂದ ಕಾಲು ಉಗುರುಗಳನ್ನು ಕತ್ತರಿಸಿ ಶುಚಿಯಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ಒಂದು ವೇಳೆ ಉಗುರು ಬಿಟ್ಟರೂ ಕೂಡ ಕೊಳೆ ಕೂರಲು ಬಿಡಬಾರದು.
ಮಾಯಿಶ್ಚರೈಸರ್: ಕಾಲಿನ ಸೌಂದರ್ಯವನ್ನು ಹೆಚ್ಚಿಸಲು ಮಾಯಿಶ್ಚರೈಸರ್ ಮಾಡಬೇಕು. ಈ ರೀತಿ ಮಾಡಿದರೆ ಪಾದಗಳಲ್ಲಿ ಬಿರುಕು ಕಾಣಿಸಿಕೊಳ್ಳುವುದಿಲ್ಲ. ಮೃದುವಾದ ಪಾದ ನಿಮ್ಮದಾಗುವುದು.



Click it and Unblock the Notifications
