Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮುಜುಗರ ತರದಂತೆ ಇರಲಿ ಡ್ರೆಸ್ಸಿಂಗ್!
ಹೆಣ್ಣು ಮಕ್ಕಳು ಡ್ರೆಸ್ ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಡ್ರೆಸ್ ಮಾಡಬೇಕು. ಕೆಲವೊಂದು ಡ್ರೆಸ್ ಮಾಡುವಾಗ ಡ್ರೆಸ್ ತುಂಬಾ ತೆಳುವಾಗಿದ್ದು ದೇಹದ ಅಂಗಾಂಗಗಳು ಎದ್ದು ಕಾಣುವಂತೆ ಇದ್ದರೆ ನೋಡುಗರಿಗೆ ಮುಜುಗರ ಉಂಟು ಮಾಡುವುದು ಅಲ್ಲದೆ ಹುಡುಗರು ಹುಡುಗಿಯರ ಆ ರೀತಿಯ ಡ್ರೆಸ್ಸಿಂಗ್ ನೋಡಿ ಹಿಂದಿನಿಂದ ಗೇಲಿ ಮಾಡುತ್ತಾರೆ. ಅದರಲ್ಲೂ ಟಿ ಶರ್ಟ್ ಅಥವಾ ಶರ್ಟ್ ಧರಿಸಿದಾಗ ಸ್ತನದ ತೊಟ್ಟುಗಳು ಎದ್ದು ಕಾಣುವಂತೆ ಡ್ರೆಸ್ ಮಾಡಬಾರದು. ಈ ರೀತಿ ಕಂಡರೆ ಧರಿಸಿದವರಿಗಿಂತ ಇತರ ಹೆಣ್ಣು ಮಕ್ಕಳು ಹೆಚ್ಚು ಮುಜುಗರವನ್ನು ಪಡುವಂತವಾಗುವುದು. ಅಲ್ಲದೆ ಡ್ರೆಸ್ಸಿಂಗ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳುವುದರಿಂದ ಆದಷ್ಟು ಸಭ್ಯ ರೀತಿಯಲ್ಲಿ ಡ್ರೆಸ್ ಮಾಡಿದರೆ ನೋಡುವವರು ಕೂಡ ಗೌರವದ ದೃಷ್ಟಿಯಿಂದ ನೋಡುತ್ತಾರೆ. ಎದೆ ಭಾಗ ಎದ್ದು ಕಂಡು ಮುಜುಗರ ಉಂಟು ಮಾಡದಿರಲು ಡ್ರೆಸ್ ಹಾಕುವಾಗ ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.

ವಿವಿಧ ಬಣ್ಣದ ಬಟ್ಟೆ: ಹೆಚ್ಚಾಗಿ ಒಂದೇ ಬಣ್ಣದ ಡ್ರೆಸ್ ಹಾಕಿದಾಗ ನೋಡುಗರ ದೃಷ್ಟಿ ಎದೆಯತ್ತ ಹೋಗುವುದು. ಅದರ ಬದಲು ಬಣ್ಣ ಬಣ್ಣದ ಡ್ರೆಸ್ ಹಾಕಿದಾಗ ಆ ಭಾಗ ಹೆಚ್ಚಾಗಿ ಗಮನ ಸೆಳೆಯುವುದಿಲ್ಲ. ಆದ್ದರಿಂದ ಹೂವಿನ ಅಲಂಕಾರ ಇರುವ ಅಥವಾ ವಿನ್ಯಾಸವಿರುವ ಟಾಪ್ ಧರಿಸುವುದು ಒಳ್ಳೆಯದು.
ಸ್ಲಿಪ್: ಸ್ಲಿಪ್ ಗಳನ್ನು ಕೊಳ್ಳುವಾಗ ಕಾಟನ್ ಸ್ಲಿಪ್ ಕೊಳ್ಳಬೇಕು. ಪಾಲಿಸ್ಟರ್ ಅಥವಾ ಐಕ್ರಾ ಬಟ್ಟೆಗಳನ್ನು ಧರಿಸಿದಾಗ ಅದು ಮೈಗೆ ಅಂಟಿ ನಿಲ್ಲುವುದರಿಂದ ಸ್ತನ ತೊಟ್ಟುಗಳು ಎದ್ದುಕಾಣುವುದು. ಆದ್ದರಿಂದ ಕಾಟನ್ ಬಟ್ಟೆಗಳನ್ನು ಆಯ್ಕೆ ಮಾಡುವುದು ಒಳ್ಳೆಯದು.
ಗಾಢ ಬಣ್ಣದ ಬಟ್ಟೆ: ತೆಳು ಬಣ್ಣಕ್ಕಿಂತ ಗಾಢ ಬಣ್ಣದ ಡ್ರೆಸ್ ಧರಿಸಿದರೆ ಮೈ ಭಂಗಿ ಅಷ್ಟಾಗಿ ಎದ್ದು ಕಾಣುವುದಿಲ್ಲ. ಆದ್ದರಿಂದ ಬಿಳಿ, ಬೇಬಿ ಪಿಂಕ್, ಹಳದಿ ಬಣ್ಣದ ಡ್ರೆಸ್ ಹಾಕುವಾಗ ಎದೆ ಮುಜುಗರ ತರದಂತೆ ಡ್ರೆಸ್ ಮಾಡಬೇಕು.
ಪ್ಯಾಡೆಡ್ ಡ್ರೆಸ್: ಎದೆಯಿಂದ ಉಂಟಾಗುವ ಮುಜುಗರವನ್ನು ತಪ್ಪಿಸಲು ಪ್ಯಾಡೆಡ್ ಬ್ರಾ ಧರಿಸಬಹುದು.
ಡ್ರೆಸ್ಸಿಂಗ್: ಡ್ರೆಸ್ ಮಾಡಿದ ನಂತರ ಸ್ಟೋಲ್ (ಶಾಲೂ) ಹಾಕಿದರೆ ನೋಡುಗರ ಕಣ್ಣಿಗೆ ನೀಟಾಗಿ ಮತ್ತು ಫ್ಯಾಷನೇಬಲ್ ಆಗಿ ಕಾಣಿವಿರಿ.
ಟ್ಯೂಬ್ ಟಾಪ್ : ಈಗೆಲ್ಲಾ ಟ್ಯೂಬ್ ಟಾಪ್ ಬಂದಿರುವುದರಿಂದ ಅದನ್ನು ಧರಿಸಿ ನಂತರ ಡ್ರೆಸ್ ಹಾಕಿದರೆ ಯಾವುದೇ ಮುಜುಗರ ಉಂಟಾಗುವುದಿಲ್ಲ ಅಲ್ಲದೆ ಸ್ತನ ಕೂಡ ಆಕರ್ಷಕ ಆಕಾರವನ್ನು ಪಡೆಯುವುದು.
ಜಾಕೆಟ್ ಅಥವಾ ಸ್ಕಾರ್ಫ್ : ಟಿ ಶರ್ಟ್ ಹಾಕಿದಾಗ ಅದರ ಮೇಲೆ ಜಾಕೆಟ್ ಅಥವಾ ಸ್ಕಾರ್ಫ್ ಹಾಕಿದರೆ ಫ್ಯಾಷನೇಬಲ್ ಆಗಿ ಮತ್ತು ನೀಟಾಗಿ ಕಾಣಬಹುದು.
ಪೂರಕ ವಸ್ತುಗಳು:
ಪ್ಯಾಡೆಡ್ ಬ್ರಾ: ಪ್ಯಾಡೆಡ್ ಬ್ರಾ ಧರಿಸಿ, ನಂತರ ಟಿ ಶರ್ಟ್ ಧರಿಸಿದರೆ ಯಾವುದೇ ರೀತಿಯ ಮುಜುಗರ ಉಂಟಾಗುವುದಿಲ್ಲ.
ನಿಪ್ಪಲ್ ಕವರ್ಸ್: ನಿಪ್ಪಲ್ ಕವರ್ ಮಾರ್ಕೆಟ್ ನಲ್ಲಿ ಲಭ್ಯವಿದ್ದು ಅದನ್ನು ಬಳಸಿದರೆ ಎದೆ ಭಾಗ ಎದ್ದು ಕಾಣುವುದಿಲ್ಲ.



Click it and Unblock the Notifications
