Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಹಿಳೆಯರಿಗೆ ಜಿ ಸ್ಟ್ರಿಂಗ್ ಪ್ಯಾಂಟೀಸ್ ಏಕೆ ಒಳ್ಳೆಯದು?
ತುಂಬಾ ಬಿಗಿಯಾದ ಡ್ರೆಸ್ ಧರಿಸಿದಾಗ ಅದರಲ್ಲಿ ಒಳ ಉಡುಪುಗಳು ಎದ್ದು ಕಾಣುವಂತೆ ಇರಬಾರದು. ಅದರಲ್ಲೂ ಮಹಿಳೆಯರು ನಾರ್ಮಲ್ ಪ್ಯಾಂಟೀಸ್ ಧರಿಸಿ ಅದರ ಮೇಲೆ ಫಾರ್ಮಲ್ ಪ್ಯಾಂಟ್ ಧರಿಸಿದರೆ ಕೆಲ ಪ್ಯಾಂಟ್ ಬಟ್ಟೆಯಲ್ಲಿ ಒಳ ಉಡುಪಿನ ಮಾರ್ಕ್ ಎದ್ದು ಕಾಣುತ್ತಿರುತ್ತದೆ. ಈ ರೀತಿಯ ಸಮಸ್ಯೆ ಹೋಗಲಾಡಿಸಲು ಮಹಿಳೆಯರು ಜಿ ಸ್ಟ್ರಿಂಗ್ ಪ್ಯಾಂಟೀಸ್ ಬಳಸುವುದು ಒಳ್ಳೆಯದು.

ಆದರೆ ಈ ಪ್ಯಾಂಟೀಸ್ ಧರಿಸಲು ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಆದರೆ ಪ್ಯಾಂಟೀಸ್ ಮಾರ್ಕ್ಸ್ ಹೊರಗೆ ಕಾಣದೆ ನಾವು ಧರಿಸಿರುವ ಡ್ರೆಸ್ ನಮಗೆ ಕಂಫರ್ಟ್ ದೊರೆಯುವಂತೆ ಇರಬೇಕೆಂದರೆ ಈ ರೀತಿಯ ಪ್ಯಾಂಟೀಸ್ ಬಳಸುವುದು ಒಳ್ಳೆಯದು. ಈ ಕೆಳಗಿನ ಸಂದರ್ಭದಲ್ಲಿ ಜಿ ಸ್ಟ್ರಿಂಗ್ ಪ್ಯಾಂಟೀಸ್ ಧರಿಸಿದರೆ ತುಂಬಾ ಕಂಫರ್ಟ್ ಅನ್ನಿಸುವುದು.
1. ತೆಳುವಾದ ಫ್ಯಾಬ್ರಿಕ್ ಉಡುಪು ಧರಿಸಿದಾಗ: ಫ್ಯಾಬ್ರಿಕ್ ಬಟ್ಟೆಯಲ್ಲಿ ಆಕರ್ಷಕವಾದ ಡ್ರೆಸ್ ಗಳು ದೊರೆಯುತ್ತದೆ. ಅದರಲ್ಲಿ ಶಿಫೋನ್, ಈಜಿಪ್ಟಿಯನ್ ಲೈನಿನ್ ನಂತಹ ಡ್ರೆಸ್ ಹಾಕಿದಾಗ ನಾರ್ಮಲ್ ಪ್ಯಾಂಟೀಸ್ ಧರಿಸಿದರೆ, ಅದರ ಗೆರೆಗಳು ಎದ್ದು ಕಾಣುವುದರಿಂದ ಅಂತಹ ಡ್ರೆಸ್ ಗಳನ್ನು ಧರಿಸಲು ಮುಜುಗರ ಉಂಟಾಗುವುದು. ಆದರೆ ಜಿ ಸ್ಟ್ರಿಂಗ್ ಪ್ಯಾಂಟೀಸ್ ಧರಿಸಿದರೆ ಆ ರೀತಿಯ ಗೆರೆಗಳು ಎದ್ದು ಕಾಣುವುದಿಲ್ಲ.
2. ಲೋ ವೇಸ್ಟ್ ಜೀನ್ಸ್: ಲೋ ವೇಸ್ಟ್ ಧರಿಸಿದಾಗ ಒಳಗೆ ಧರಿಸಿದ ಪ್ಯಾಂಟೀಸ್ ಹೊರಗೆ ಕಾಣುತ್ತಿದ್ದರೆ ಅಸಹ್ಯವಾಗಿ ಕಾಣಿಸುವುದು, ಅಲ್ಲದೆ ಇತರರು ಅದನ್ನು ನೋಡಿ ಕಮೆಂಟಿಸುವಂತಾಗುವುದು. ಆದ್ದರಿಂದ ಬಿಗಿಯಾದ ಲೋ ವೇಸ್ಟ್ ಜೀನ್ಸ್ ಧರಿಸಿದಾಗ ಈ ರೀತಿ ಪ್ಯಾಂಟೀಸ್ ಬಳಸುವುದು ಒಳ್ಳೆಯದು.
3. ಬೀಚ್ ಡ್ರೆಸ್: ಸ್ವಿಮಿಂಗ್ ಡ್ರೆಸ್ ಅಥವಾ ಬೀಚ್ ಡ್ರೆಸ್ ಹಾಕಿದಾಗ ಈ ರೀತಿಯ ಪ್ಯಾಂಟೀಸ್ ಧರಿಸುವುದು ಒಳ್ಳೆಯದು.
4. ಗಿಡ್ಡ ಸ್ಕರ್ಟ್ ಹಾಕಿದಾಗ: ಗಿಡ್ಡ ಸ್ಕರ್ಟ್ ಹಾಕಿದಾಗ ಈ ರೀತಿಯ ಪ್ಯಾಂಟೀಸ್ ಧರಿಸುವುದು ಒಳ್ಳೆಯದು. ಬಿಗಿಯಾದ ಮಿಡಿಯಲ್ಲಿ ಒಳ ಉಡುಪಿನ ಗೆರೆ ಎದ್ದು ಕಂಡು ಅದರಿಂದ ಉಂಟಾಗುವ ಮುಜುಗರವನ್ನು ತಡೆಯಲು ಈ ಪ್ಯಾಂಟೀಸ್ ಬಳಸುವುದು ಒಳ್ಳೆಯದು.



Click it and Unblock the Notifications
