Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ತೆಳು ಹುಬ್ಬನ್ನು ನೈಸರ್ಗಿಕವಾಗಿ ಮಂದವಾಗಿಸುವ ವಿಧಾನ
ಮುಖದ ಆಕರ್ಷಣೆ ಹೆಚ್ಚಿಸುವಲ್ಲಿ ಹುಬ್ಬು ಕೂಡ ಪ್ರಮುಖ ಪಾತ್ರವಹಿಸುತ್ತದೆ. ಹುಬ್ಬಿನ ಶೇಪ್ ಚೆನ್ನಾಗಿಲ್ಲವೆಂದರೆ ಬ್ಯೂಟಿ ಪಾರ್ಲರ್ ಹೋಗಿ ಶೇಪ್ ಮಾಡಿಸಬಹುದು. ಆದರೆ ಹುಬ್ಬು ಮಂದವಾಗಿಲ್ಲವೆಂದರೆ ಬರೀ ಶೇಪ್ ಮಾಡಿಸಿದ ಮಾತ್ರಕ್ಕೆ ಆಕರ್ಷಕವಾಗಿ ಕಾಣುವುದಿಲ್ಲ. ಅದು ಕಪ್ಪಾಗಿ ಸ್ವಲ್ಪ ಮಂದವಾಗಿ ಕಂಡರೆ ಮಾತ್ರ ಹುಬ್ಬು ತುಂಬಾ ಆಕರ್ಷಕವಾಗಿ ಕಾಣುವುದು.
ಹುಬ್ಬು ಆಕರ್ಷಕವಾಗಿ ಕಾಣಲು ಐಬ್ರೋ ಪೆನ್ಸಿಲ್ ಬಳಸಿ ಮೇಕಪ್ ಮಾಡಬಹುದು. ಆದರೆ ಮೇಕಪ್ ನಿಂದ ನೈಸರ್ಗಿಕ ಚೆಲುವನ್ನು ಪಡೆಯಲು ಸಾಧ್ಯವಿಲ್ಲ. ಹುಬ್ಬು ದಪ್ಪವಿಲ್ಲದಿದ್ದರೆ ಅದಕ್ಕಾಗಿ ತುಂಬಾ ತಲೆ ಕೆಡಿಸಬೇಕಾಗಿಲ್ಲ, ಏಕೆಂದರೆ ಕೆಲವೊಂದು ನೈಸರ್ಗಿಕವಾದ ವಿಧಾನಗಳನ್ನು ಪಾಲಿಸಿದರೆ ಸಾಕು ಹುಬ್ಬು ಮಂದವಾಗುವುದು ಹಾಗೂ ನೈಸರ್ಗಿಕ ಚೆಲುವನ್ನು ಪಡೆಯುವುದು.
ಹುಬ್ಬನ್ನು ಮಂದವಾಗಿಸಲು ಈ ಕೆಳಗ್ಗೆ ಕೆಲವೊಂದು ನೈಸರ್ಗಿಕವಾದ ವಿಧಾನಗಳನ್ನು ಹೇಳಲಾಗಿದೆ. ಈ ನೈಸರ್ಗಿಕ ವಿಧಾನವನ್ನು ಪಾಲಿಸುವುದಾದರೆ ಸ್ವಲ್ಪ ತಾಳ್ಮೆ ಬೇಕು. ಏಕೆಂದರೆ ಈ ವಿಧಾನವನ್ನು ಪಾಲಿಸಿ ಅದರ ಫಲಿತಾಂಶ ಗೊತ್ತಾಗಲು 3-6 ತಿಂಗಳು ಬೇಕಾಗುವುದು. ಒಮ್ಮೆ ಹುಬ್ಬು ಮಂದವಾಯಿತೆಂದರೆ ಮತ್ತೆ ಅದು ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುವುದಿಲ್ಲ.

ಹರಳೆಣ್ಣೆ:
ಹರಳೆಣ್ಣೆಯಿಂದ ಹುಬ್ಬಿಗೆ 2-3 ನಿಮಿಷ ಮಸಾಜ್ ಮಾಡಿ ಅರ್ಧ ಗಂಟೆಯ ಬಳಿಕ ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು. ಈ ರೀತಿ ಪ್ರತಿದಿನ ಮಾಡಬೇಕು.

ತೆಂಗಿನೆಣ್ಣೆ ಮತ್ತು ನಿಂಬೆಹಣ್ಣಿನ ಸಿಪ್ಪೆ:
ನಿಂಬೆ ಸಿಪ್ಪೆಯನ್ನು ಪೇಸ್ಟ್ ಮಾಡಿ ಅದನ್ನು ತೆಂಗಿನೆಣ್ಣೆಯಲ್ಲಿ ಮಿಶ್ರಣ ಮಾಡಿ ಕತ್ತಲಿರುವ ಪ್ರದೇಶದಲ್ಲಿ ಇಡಬೇಕು. ನಂತರ ಆ ಮಿಶ್ರಣವನ್ನು ಪ್ರತಿದಿನ ಹುಬ್ಬಿಗೆ ಹಚ್ಚಬೇಕು. ಈ ರೀತಿ ಮಾಡಿದರೆ ಹುಬ್ಬು ಮಂದವಾಗಿ ಬೆಳೆಯುವುದು.

ಲೋಳೆಸರ:
ಲೋಳೆಸರವನ್ನು ಹುಬ್ಬಿಗೆ ಹಚ್ಚಿ ಅದು ಒಣಗಿದ ನಂತರ ಮುಖ ತೊಳೆಯಬೇಕು. ಈ ರೀತಿ ಪ್ರತಿದಿನ ಮಾಡುತ್ತಾ ಬಂದರೆ ಹುಬ್ಬು ಆಕರ್ಷಕವಾಗಿ ಬೆಳೆಯುವುದು.

ಈರುಳ್ಳಿ:
ಈರುಳ್ಳಿಯನ್ನು ಗ್ರೈಂಡ್ ಮಾಡಿ ಅದರ ರಸವನ್ನು ಹುಬ್ಬಿಗೆ ಹಚ್ಚಿದರೆ ಹುಬ್ಬಿಗೆ ತುಂಬಾ ಒಳ್ಳೆಯದು. ಇದನ್ನು ಕೂದಲಿಗೂ ಹಚ್ಚಿದರೆ ಕೂದಲು ಕೂಡ ಆಕರ್ಷಕವಾಗಿ ಬೆಳೆಯುತ್ತದೆ.

ಮೆಂತೆ ಬೀಜ:
ಮೆಂತೆ ಬೀಜವನ್ನು ಪೇಸ್ಟ್ ಮಾಡಿ ಅದನ್ನು ಹುಬ್ಬಿಗೆ ಹಚ್ಚಿದರೂ ಹುಬ್ಬು ದಪ್ಪವಾಗಿ ಬೆಳೆಯುತ್ತದೆ. ಇದು ಕೂದಲಿನ ಬೆಳವಣಿಗೆಗೂ ಒಳ್ಳೆಯದು.

ಹಾಲು:
ಸ್ವಲ್ಪ ಹಾಲಿನಲ್ಲಿ ಹತ್ತಿಯನ್ನು ಮುಳುಗಿಸಿ ಅದರಿಂದ ಹುಬ್ಬನ್ನು ಉಜ್ಜಬೇಕು. ಈ ರೀತಿ ಉಜ್ಜಿದರೆ ಹುಬ್ಬು ಆಕರ್ಷಕವಾಗಿ ಬೆಳೆಯುತ್ತದೆ.



Click it and Unblock the Notifications
