Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ತುಟಿ ಒಡೆಯುವ ಸಮಸ್ಯೆಗೆ ಗುಡ್ ಬೈ ಹೇಳಬೇಕೆ?
ಚಳಿಗಾಲದಲ್ಲಿ ತುಟಿ ಒಣಗುವುದು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಈ ರೀತಿ ತುಟಿ ಒಡೆದರೆ ತುಂಬಾ ನೋವಾಗುತ್ತದೆ, ನಗುವುದು ಕೂಡ ಕಷ್ಟವಾಗುತ್ತದೆ. ತುಟಿಯನ್ನು ಆರೈಕೆ ಮಾಡಿದರೆ ತುಟಿ ಒಡೆಯುವ ಸಮಸ್ಯೆಯನ್ನು ತಡೆಗಟ್ಟಬಹುದು. ಅದರಲ್ಲೂ ಈ ಕೆಳಗಿನ ಸಲಹೆಗಳ್ನು ಪಾಲಿಸಿದರೆ ಚಳಿಗಾಲದಲ್ಲೂ ತುಟಿಯನ್ನು ಮೃದುವಾಗಿ ಹಾಗೂ ಆಕರ್ಷಕವಾಗಿ ಇಡಬಹುದು.
1. ಮಾಯಿಶ್ಚರೈಸರ್: ಪ್ರತಿದಿನ ಮಾಯಿಶ್ಚರೈಸರ್ ಅಮ್ಮು ತುಟಿಗೆ ಹಚ್ಚಿದರೆ ತುಟಿ ಚಳಿಗಲದಲ್ಲಿ ತನ್ನ ಮೃದುತ್ವ ಕಳೆದುಕೊಳ್ಳುವುದಿಲ್ಲ. ತುಟಿಗೆ ಬಳಸುವ ಮಾಯಿಶ್ಚರೈಸರ್ ಅಥವಾ ಲಿಪ್ ಆಯಿಲ್ ಗುಣಮಟ್ಟದಾಗಿರಲಿ.

2. ತುಟಿ ಕಚ್ಚ ಬೇಡಿ: ತುಟಿ ತುಂಬಾ ಒಣಗಿದಾಗ ಅದರ ಮೇಲಿನ ಚರ್ಮವನ್ನು ಕಚ್ಚಿ ತೆಗೆಯುವ ಪ್ರಯತ್ನ ಮಾಡಬೇಡಿ. ಈ ರೀತಿ ಮಾಡಿದರೆ ತುಟಿ ಒಡೆಯುವ ಸಮಸ್ಯೆ ಮತ್ತಷ್ಟು ಜಾಸ್ತಿಯಾಗುವುದು.
3. ವಿಟಮಿನ್ ಗಳು: ವಿಟಮಿನ್ ಬಿ ಇರುವ ಆಹಾರ ತುಂಬಾ ಒಳ್ಳೆಯದು. ಮೊಟ್ಟೆ, ಚಸ್, ಕೆಂಪಕ್ಕಿ ಅನ್ನ ಮುಂತಾದವುಗಳ ಸೇವನೆ ತುಂಬಾ ಒಳ್ಳೆಯದು.
4. ನೀರು: ಚಳಿಗಾಲದಲ್ಲಿ ತುಂಬಾ ದಾಹವಾಗುವುದಿಲ್ಲ. ಹಾಗಂತ ನೀರು ಕುಡಿಯುವುದು ಕಡಿಮೆ ಮಾಡಬಾರದು. ದಿನದಲ್ಲಿ 7-8 ಲೋಟ ನೀರು ಕುಡಿಯಲೇಬೇಕು. ದೇಹದಲ್ಲಿ ನೀರಿನಂಶ ಇದ್ದರೆ ತುಟಿ ಒಣಗುವ ಸಮಸ್ಯೆ ಕಡಿಮೆಯಾಗುವುದು.
5. ಲಿಪ್ ಸ್ಟಿಕ್: ತುಟಿಗೆ ಒಡೆದಿದ್ದರೆ ಲಿಪ್ ಸ್ಟಿಕ್ ಹಚ್ಚಬೇಡಿ, ಲಿಪ್ ಸ್ಟಿಕ್ ಹಚ್ಚಿದರೆ ತುಟಿ ಒಡೆಯುವ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು.
6. ನೈಸರ್ಗಿಕ ವಿಧಾನ: ಹಾಲಿನ ಕೆನೆ, ಜೇನು ಇವುಗಳನ್ನು ಹಚ್ಚಿದರೆ ತುಟಿ ಒಡೆಯುವ ಸಮಸ್ಯೆ ಕಡಿಮೆಯಾಗುವುದು, ಅಲ್ಲದೆ ತುಟಿಯ ಹೊಳಪು ಹೆಚ್ಚಾಗುವುದು.
ಈ ಮೇಲಿನ ಸಲಹೆಗಳನ್ನು ಪಾಲಿಸಿದರೆ ಚಳಿಗಾಲದಲ್ಲಿ ತುಟಿ ಒಡೆಯುವ ಸಮಸ್ಯೆ ಕಂಡು ಬರುವುದಿಲ್ಲ.



Click it and Unblock the Notifications
