Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹೊಳೆಯವ ಮೈಕಾಂತಿಯನ್ನು ಪಡೆಯುವುದು ಹೇಗೆ?

ತ್ವಚೆಗೆ ಅನೇಕ ರಾಸಾಯನಿಕಗಳನ್ನು ಹಚ್ಚುವುದರಿಂದ ತ್ವಚೆಗೆ ಹಾನಿ ಉಂಟಾಗುವುದಲ್ಲದೆ ತ್ವಚೆಗೆ ಹೊಳಪು ಬರಲು ಸಾಧ್ಯವಿಲ್ಲ. ನಿಮ್ಮ ತ್ವಚೆಯು ಆರೋಗ್ಯಕರವಾಗಿ ಹಾಗೂ ಆಕರ್ಷಕವಾಗಿ ಇರಬೇಕೆಂದರೆ ಆದಷ್ಟು ನೈಸರ್ಗಿಕವಾದ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು.
1. ತುಂಬಾ ಹೊತ್ತು ಬಿಸಿ ನೀರಿನಲ್ಲಿ ಸ್ನಾನ ಮಾಡಬಾರದು ಹಾಗೂ ಬಿಸಿ ನೀರನ್ನು ಬಳಸಬಾರದು, ಅದೇ ರೀತಿ ತುಂಬಾ ತಣ್ಣೀರಿನಲ್ಲಿ ಕೂಡ ಸ್ನಾನ ಮಾಡಬಾರದು. ನ್ಯೂಯಾರ್ಕ್ ನಲ್ಲಿ ಇದರ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ 10 ನಿಮಿಷಕ್ಕಿಂತ ಅಧಿಕ ಶವರ್ ನಲ್ಲಿ ಸ್ನಾನ ಮಾಡುವುದು ತ್ವಚೆಗೆ ಒಳ್ಳೆಯದಲ್ಲ ಎಂಬ ಅಂಶ ತಿಳಿದು ಬಂದಿದೆ.
2. ತ್ವಚೆಯನ್ನು ಕೈ ಬೆರಳಿನಿಂದ ಕೆರೆಯುವ ಮೊದಲು ಗಮನ ಹರಿಸಬೇಕು. ತ್ವಚೆ ತುಂಬಾ ಒಣಗಿದ್ದರೆ ಮೈಯನ್ನು ಬೆರಳಿನಿಂದ ಕೆರೆದರೆ ಗೆರೆ ಬೀಳುವುದು. ಆದಷ್ಟು ತ್ವಚೆಯನ್ನು ಮಾಯಿಶ್ಚರೈಸರ್ ಆಗಿ ಇಟ್ಟುಕೊಳ್ಳಿ.
3. ಮುಖ ಹಾಗೂ ಕುತ್ತಿಗೆಯ ತ್ವಚೆಯ ಬಗೆ ಹೆಚ್ಚಿನ ಗಮನವನ್ನು ಹರಿಸಬೇಕು. ಈ ಭಾಗಕ್ಕೆ ಪ್ರತಿದಿನ ಮಾಯಿಶ್ಚರೈಸರ್ ಹಚ್ಚಬೇಕು.
4. ಬೆಡ್ ರೂಂ ಗಾಳಿಯಾಡುವಂತೆ ಇರಬೇಕು. ಮಲಗುವ ಮೊದಲು ತ್ವಚೆಗೆ ಮಾಯಿಶ್ಚರಸರ್ ಮಾಡಬೇಕು.
5. ಹಣ್ಣುಗಳನ್ನು, ಸೊಪ್ಪು ತರಕಾರಿಗಳನ್ನು ಹೆಚ್ಚಾಗಿ ತಿನ್ನಬೇಕು. ಎಣ್ಣೆ ಸ್ನಾನ, ಮಾಯಿಶ್ಚರೈಸರ್ ಮಾಡಬೇಕು. ವ್ಯಾಯಾಮ ಮಾಡಬೇಕು ಈ ಅಂಶಗಳನ್ನು ಪಾಲಿಸಿದರೆ ಯಾವುದೇ ಕ್ರೀಮ್ , ಪೌಡರ್ ಇಲ್ಲದೆ ಹೊಳೆಯುವ ತ್ವಚೆಯನ್ನು ಪಡೆಯಬಹುದು.



Click it and Unblock the Notifications
