Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಅವಗಾಡೊ ಎಣ್ಣೆ ಇರುವಾಗ ಕೃತಕ ಲಿಪ್‌ಸ್ಟಿಕ್ ಏಕೆ?

ಆದ್ದರಿಂದ ಆಕರ್ಷಕ ತುಟಿ ಪಡೆಯಲು ನೈಸರ್ಗಿಕವಾದ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು. ಅದರಲ್ಲೂ ಬೆಣ್ಣೆ ಹಣ್ಣು ಅಥವಾ ಅವಗಾಡೊ ಹಣ್ಣು ತ್ವಚೆ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಫೇಶಿಯಲ್ ಮಾಡಿದರೆ ಮೃದುವಾದ ತ್ವಚೆಯನ್ನು ಪಡೆಯುತ್ತದೆ. ಇದೇ ಹಣ್ಣನ್ನು ತುಟಿ ಅಂದ ಹೆಚ್ಚಿಸಲು ಕೂಡ ಬಳಸಬಹುದಾಗಿದ್ದು ಬಳಸುವ ವಿಧಾನ ನೋಡಿ ಇಲ್ಲಿದೆ.
ಅವಗಾಡೊ ಎಣ್ಣೆ: ಈ ಎಣ್ಣೆ ಮಾರುಕಟ್ಟೆಯಲ್ಲಿ ಲಭ್ಯವಾಗುವುದು. ಬೆಣ್ಣೆ ಹಣ್ಣಿನ ಎಣ್ಣೆಯನ್ನು ಪ್ರತಿದಿನ ಮಲುಗುವ ಮುನ್ನ ತುಟಿಗೆ ಹಚ್ಚಿದರೆ ತುಟಿ ಮೃದುವಾಗುವುದು. ಈ ರೀತಿ ಹಚ್ಚುತ್ತಿದ್ದರೆ ಲಿಪ್ ಸ್ಟಿಕ್ ನಿಂದ ತುಟಿ ಕಪ್ಪಾಗುವುದನ್ನು ತಡೆಯಬಹುದು.
ಜೇನು ಮತ್ತು ಅವಗಾಡೊ ಎಣ್ಣೆ: ಜೇನು, ಸ್ವಲ್ಪ ಉಪ್ಪು, ಮತ್ತು ಅವಗಾಡೊ ಎಣ್ಣೆ ಹಾಕಿ ಮಿಶ್ರ ಮಾಡಿ 3-4 ನಿಮಿಷ ತುಟಿಗೆ ಸ್ಕ್ರಬ್ ಮಾಡಬೇಕು. ನಂತರ ತಣ್ಣೀರಿನಿಂದ ತೊಳೆಯಬೇಕು. ಈ ರೀತಿ ಮಾಡಿದರೆ ತುಟಿ ಸೌಂದರ್ಯ ಹೆಚ್ಚಾಗುವುದು. ಈ ರೀತಿ ವಾರಕ್ಕೊಮ್ಮೆ ಮಾಡಿದರೂ ಸಾಕು.
ಅವಗಾಡೊ ಎಣ್ಣೆ ಮತ್ತು ಸಕ್ಕರೆ: ಸಕ್ಕರೆ ಸ್ಕ್ರಬ್ ತುಟಿಗೆ ಮಾತ್ರವಲ್ಲ ಮುಖಕ್ಕೂ ಒಳ್ಳೆಯದು. ಸ್ವಲ್ಪ ಸಕ್ಕರೆ ಮತ್ತು ಒಂದು ಚಮಚ ಅವಗಾಡೊ ಎಣ್ಣೆಯನ್ನು ಮಿಶ್ರ ಮಾಡಿ ಅದರಿಂದ ಮುಖ ಮತ್ತು ತುಟಿಗೆ ಸ್ಕ್ರಬ್ ಮಾಡಿದರೆ ತುಟಿ ಮತ್ತು ಮುಖ ಹೊಳಪನ್ನು ಪಡೆಯುತ್ತದೆ. ರಾಸಾಯನಿಕ ಕ್ರೀಮ್ ಬಳಸಿ ಫೇಸ್ ಸ್ಕ್ರಬ್ ಮಾಡುವುದಕ್ಕಿಂತ ಈ ವಿಧಾನ ಬಳಸಿ ಮಾಡಿದರೆ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ, ನಿಮ್ಮ ಸೌಂದರ್ಯ ಕೂಡ ಹೆಚ್ಚುತ್ತದೆ.
ಅವಗಾಡೊ ಲಿಪ್ ಬಾಮ್ : ಅವಗಾಡೊ ಲಿಪ್ ಬಾಮ್ ಲಭ್ಯವಿದೆ. ತುಟಿ ಅಂದ ಹೆಚ್ಚಿಸಲು ಅದನ್ನು ಕೂಡ ಬಳಸಬಹುದು. ಇದರಿಂದ ತುಟಿ ಗುಲಾಬಿ ಬಣ್ಣದಿಂದ ಆಕರ್ಷಕವಾಗಿ ಕಾಣುತ್ತದೆ. ಗುಡ್ ಲಕ್..



Click it and Unblock the Notifications
