Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಾಂತಿಯುತ ತ್ವಚೆಗಾಗಿ ಫೇಶಿಯಲ್ ಮಸಾಜ್ ಟಿಪ್ಟ್
ಮುಖಕ್ಕೆ ಫೇಶಿಯಲ್ ಮಾಡಿದರೆ ಮುಖದ ಹೊಳಪು ಹೆಚ್ಚಾಗುವುದನ್ನು ನೀವು ಗಮನಿಸಬುದು. ಏಕಂದರೆ ಫೇಶಿಯಲ್ ಮಾಡಿಸಿದಾಗ ಮುಖಕ್ಕೆ ಮಸಾಜ್ ಮಾಡಿದಂತಾಗುತ್ತದೆ,. ಇದರಿಂದ ಮುಖದಲ್ಲಿ ರಕ್ತ ಸಂಚಾರ ಸರಿಯಾದ ನಡೆಯುವುದರಿಂದ ಮುಖದ ಹೊಳಪು ಹೆಚ್ಚುತ್ತದೆ.
ಮುಖದ ಹೊಳಪು ಹೆಚ್ಚಲು ಫೇಶಿಯಲ್ ಮಾತ್ರವಲ್ಲ ಎಣ್ಣೆಯಿಂದ ಮಸಾಜ್ ಕೂಡ ಮಾಡಬಹುದು. ಮುಖಕ್ಕೆ ಮಸಾಜ್ ಮಾಡುವಾಗ ಕೆನ್ನೆಯ್ನನು ಮೇಲ್ಮುಖವಾಗಿ ಉಜ್ಜಬೇಕು. ಇಲ್ಲಿ ನಾವು ಮಸಾಜ್ ಮಾಡುವಾಗ ಗಮನಿಸಬೇಕಾದ ಅಂಶಗಳ ಬಗ್ಗೆ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

1. ನಿಯಮಿತವಾಗಿ ಮುಖಕ್ಕೆ ಮಸಾಜ್ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದರಿಂದಾಗಿ ತ್ವಚೆಯು ಸದೃಡಗೊಳ್ಳುವುದಲ್ಲದೆ ನಯವಾಗಿಯೂ, ಕಾಂತಿಯುತವಾಗಿಯೂ ಕಾಣಿಸುತ್ತದೆ. ಮುಖದ ಮಸಾಜ್ ನ ಪ್ರಥಮ ವಿಧಾನ ಮುಖವನ್ನು ಸ್ವಚ್ಚವಾಗಿ, ಸರಿಯಾಗಿ ತೊಳೆಯುವುದರಿಂದಲೇ ಪ್ರಾರಂಭವಾಗುತ್ತದೆ ಎನ್ನಬಹುದು. ಏಕೆಂದರೆ ಮುಖವನ್ನು ಸರಿಯಾಗಿ ಸೂಕ್ಷ್ಮವಾಗಿ ತೊಳೆಯುವುದರಿಂದ ಮುಖವು ಪದರುಪದರಾಗಿ ಒಡೆಯುವುದು, ಚರ್ಮ ಸುಲಿಯುವುದು ಕಡಿಮೆಯಾಗುತ್ತದೆ. ನಿಮ್ಮ ತ್ವಚೆ ಸದಾ ಹೊಳಪನ್ನು ಕಂಡುಕೊಳ್ಳಲು ಸಹಾಯಕವಾಗುತ್ತದೆ.
2. ಮಾಯಿಶ್ಚರೈಸರ್ ಅಥವಾ ಲೋಶನ್ ಗಳನ್ನು ಹಚ್ಚುವುದರಿಂದ ತ್ವಚೆ ಬಿರುಕುಬಿಡುವುದು ಕಡಿಮೆಯಾಗುತ್ತದೆ. ಹೆಚ್ಚು ಶುಷ್ಕ ತ್ವಚೆ ನಿಮ್ಮದಾಗಿದ್ದರೆ ಆಲೀವ್ ಎಣ್ಣೆಯಂತಹ ಶುದ್ಧ ತರಕಾರಿ ಎಣ್ಣೆಯನ್ನು ಹಚ್ಚುವುದು ಉತ್ತಮ. ಇದು ಬೇರೆಲ್ಲ ಕ್ರೀಮ್ ಗಳಿಗಿಂತ ತ್ವಚೆಗೆ ಹೆಚ್ಚಿನ ರಕ್ಷಣೆಯನ್ನು ನೀಡುತ್ತದೆ. ತ್ವಚೆ ಎಣ್ಣೆಯುಕ್ತವಾಗಿದ್ದರೂ ಚರ್ಮ ಬಿರುಕು ಬಿಡುವ ಸಾಧ್ಯತೆಗಳಿವೆ. ಆದ್ದರಿಂದ ಹೆಚ್ಚು ಅಪರ್ಯಾಪ್ತ ಕೊಬ್ಬಿನಂಶ (polyunsaturated fats)ಇರುವ ಎಣ್ಣೆಯನ್ನು ಬಳಸಿ.
3. ನಿಮ್ಮ ಮುಖದ ಮಸಾಜ್ ನೀವೇ ಮಾಡಿಕೊಳ್ಳುತ್ತೀರಾದರೆ ಅಥವಾ ಪರಿಣಿತರಿಂದ ಮಾಡಿಸುತ್ತೀರಾದರೆ ಮುಖ್ಯವಾಗಿ ನೆನಪಿನಲ್ಲಿಡಬೇಕಾದ ಅಂಶವೆಂದರೆ ಈ ಮಸಾಜ್ 20 ನಿಮಿಷಗಳನ್ನು ಮೀರಬಾರದು. ಹಾಗೂ ಆದಷ್ಟು ಸರಳವಾಗಿ ನಡೆಯಬೇಕು. ಹಣೆಯ ಮೇಲೆ ಹಾಗೆ ಮೂಗಿನ ಮೇಲೆ ಮಸಾಜ್ ಮಾಡುವುದರಿಂದ ಅಡ್ಡ ಗೆರೆಗಳು (ಸುಕ್ಕುಗಟ್ಟುವುದು) ಬೀಳುವುದನ್ನು ತಡೆಯುತ್ತದೆ.
4. ಹಾಗೆಯೇ, ಕೆನ್ನೆ ಹಾಗೂ ಬಾಯಿಯ ಭಾಗಗಳನ್ನು ಮಸಾಜ್ ಮಾಡುವುದರಿಂದ ಹೊಸದಾಗಿ ಬೀಳುವ/ ಬರುವ ನೆರಿಗೆಗಳನ್ನು ಆರಂಭದಲ್ಲಿಯೇ ತಡೆಗಟ್ಟುತ್ತದೆ. ಸ್ನಾಯುಗಳ ಹಿಡಿತವನ್ನು ಹೆಚ್ಚಿಸಲು, ಮುಖವು ಜೋಲು ಬೀಳುವುದನ್ನು ತಪ್ಪಿಸಲು ಕುತ್ತಿಗೆ ಹಾಗೂ ಗಲ್ಲದ ಮಸಾಜ್ ಮಾಡುವುದು ಅವಶ್ಯಕ.
5. ಮಸಾಜ್ ಮಾಡಲು ಹೆಚ್ಚಾಗಿ ಕೆಮಿಕಲ್ / ರಾಸಾಯನಿಕಗಳನ್ನು ಬಳಸದೇ ಪ್ರಾಕೃತಿಕ ವಸ್ತುಗಳಾದ ಬಾಳೆಹಣ್ಣು, ಪಪ್ಪಾಯಿ, ಟೋಮ್ಯಾಟೊ ಗಳಂತಹ ಹಣ್ಣು ತರಕಾರಿಗಳಮ್ಮು ಬಳಸಿ ಮಸಾಜ್ ಮಾಡಿದರೆ ನಿಮ್ಮ ತ್ವಚೆ ಮಯಸ್ಸಾದರೂ ಹೊಳಪನ್ನು ಕಳೆದುಕೊಳ್ಳದೆ ಹೊಸ ಕಾಂತಿಯನ್ನು ನಿಮ್ಮ ತ್ವಚೆಗೆ ಮರುಕಳಿಸುತ್ತದೆ.
ಒಟ್ಟಿನಲ್ಲಿ ನಿಮ್ಮ ತ್ವಚೆ ಹಾಳಾಗದಂತೆ ರಕ್ಷಿಸಲು ನಿಮ್ಮಲ್ಲಿಯೇ ಇದೆ ಪರಿಹಾರ.



Click it and Unblock the Notifications
