Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗ್ರೀಕ್ ರಿಂದ ಕಲಿಯಬಹುದು ಸೌಂದರ್ಯದ ರಹಸ್ಯ

1. ಆರೋಗ್ಯಕರ ಆಹಾರ: ಸಮುದ್ರ ಆಹಾರ, ಹಣ್ಣುಗಳು, ತರಕಾರಿಗಳನ್ನು ತಿನ್ನುವುದು. ದೇಹಕ್ಕೆ ಒಮೆಗಾ3 ಮತ್ತು ಒಮೆಗಾ 6 ಕೊಬ್ಬು ಸೇರಿದರೆ ಅದು ಸೂರ್ಯನ ಕಿರಣಗಳಿಂದ ತ್ವಚೆ ರಕ್ಷಣೆ ಮಾಡುವಲ್ಲಿ ಸಹಕಾರಿಯಾಗುತ್ತೆ. ದೇಹದ ಆರೋಗ್ಯವನ್ನು ಕೂಡ ಹೆಚ್ಚುತ್ತದೆ. ಆರೋಗ್ಯವಂತರಾಗಿದ್ದರೆ ತ್ವಚೆ ಕೂಡ ಹೊಳಪನ್ನು ಪಡೆಯುತ್ತದೆ.
2. ಆಲೀವ್ ಎಣ್ಣೆ: ಕೂದಲಿಗೆ ಮತ್ತು ತ್ವಚೆಗೆ ಆಲೀವ್ ಎಣ್ಣೆ ಬಳಸುವುದು ಒಳ್ಳೆಯದು. ಗ್ರೀಕ್‌ರು ಕೂಡ ಇದೇ ವಿಧಾನವನ್ನು ಅನುಸರಿಸುತ್ತಿದ್ದರು. ಆಲೀವ್ ಎಣ್ಣೆಗೆ ಸ್ವಲ್ಪ ಸಕ್ಕರೆ ಅಥವಾ ಉಪ್ಪು ಹಾಕಿ ಸ್ಕ್ರಬ್ ಮಾಡಿದರೆ ತ್ವಚೆ ಕಾಂತಿ ಹೆಚ್ಚುವುದು.
3. ಜೇನು: ಜೇನನ್ನು ಹಚ್ಚಿದರೆ ಮುಖದ ಕಾಂತಿ ಹೆಚ್ಚಾಗುವುದು ಎಂದು ತಿಳಿದಿರುವ ವಿಷಯ. ಈ ರೀತಿ ಬಳಸಬಹುದೆಂದು ಇತ್ತೀಚಿಗೆ ತಿಳಿದ ವಿಷಯವಲ್ಲ. ಪುರಾತನ ಗ್ರೀಕ್ ಕಾಲದಲ್ಲಿಯೇ ಸೌಂದರ್ಯ ರಕ್ಷಣೆಯಲ್ಲಿ ಇದನ್ನು ಉಪಯೋಗಿಸುತ್ತಿದ್ದರು.
4. ಮೊಸರು: ಮೊಸರಿಗೆ ಸ್ವಲ್ಪ ತಾಜಾ ಹಣ್ಣು, ನಟ್ಸ್ ಹಾಕಿ ಮಿಶ್ರ ಮಾಡಿ ರುಚಿಯನ್ನು ಸವಿಯಲು ಹೇಳುತ್ತಿಲ್ಲ. ಈ ರೀತಿ ತಯಾರಿಸಿ ಅದಕ್ಕೆ ಸ್ವಲ್ಪ ಜೇನು ಮತ್ತು ಆಲೀವ್ ಎಣ್ಣೆ ಸೇರಿಸಿ ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆಯಬೇಕು. ಈ ರೀತಿ ಮಾಡಿದರೆ ತ್ಚಚೆ ಕಾಂತಿ ಹೆಚ್ಚುವುದು.
5. ಉಪ್ಪು: ನಿರ್ಜೀವ ತ್ವಚೆಯನ್ನು ಹೋಗಲಾಡಿಸಲು ಹಿಂದೆ ಉಪ್ಪನ್ನು ಬಳಸಿ ಸ್ಕ್ರಬ್ ಮಾಡುತ್ತಿದ್ದರು. ಈ ರೀತಿ ಸ್ಕ್ರಬ್ ಮಾಡುವುದರಿಂದ ತ್ವಚೆ ಮೃದುವಾಗುವುದರ ಜೊತೆಗೆ ಹೊಳಪನ್ನು ಪಡೆಯುತ್ತದೆ.
ಹೀಗೆ ಅತಿ ಸರಳವಾದ ವಿಧಾನಗಳನ್ನು ಬಳಸಿ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡಿದ್ದರು.



Click it and Unblock the Notifications
