Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕೋಲ್ಡ್ ಕ್ರೀಮ್ ನಿಂದ 8 ಪ್ರಯೋಜನಗಳು
ಚಳಿಯ ಪ್ರಭಾವ ದಿನದಿಂದ-ದಿನಕ್ಕೆ ಹಚ್ಚಾಗುತ್ತಿದೆ. ಈ ಸಮಯದಲ್ಲಿ ಮೈಯನ್ನು ಬೆಚ್ಚಗಿಡಲು ಉಣ್ಣೆಯ ಬಟ್ಟೆ ಹಾಗೂ ತ್ವಚೆ ರಕ್ಷಣೆಗೆ ಕೋಲ್ಡ್ ಕ್ರೀಮ್ ಬೇಕಾಗುತ್ತದೆ. ಚಳಿಗಾಲ ಪ್ರಾರಂಭವಾದರೆ ತ್ವಚೆ ಕಪ್ಪಗಾಗುತ್ತದೆ, ತ್ವಚೆಯಲ್ಲಿ ಬಿರುಕು ಕಂಡು ಬರುತ್ತದೆ. ಆದ್ದರಿಂದ ಚಳಿಯಿಂದ ತ್ವಚೆ ಒಡೆಯುವುದನ್ನು ತಡೆಗಟ್ಟುವಲ್ಲಿ ಹಾಲಿನ ಕೆನೆ, ಕೋಲ್ಡ್ ಕ್ರೀಮ್ ಇವುಗಳು ತುಂಬಾ ಪರಿಣಾಮಕಾರಿಯಾಗಿವೆ. ಅದರಲ್ಲೂ ಕೋಲ್ಡ್ ಕ್ರೀಮ್ ಹಚ್ಚಿದರೆ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು.
1. ಒಳ್ಳೆಯ ಫೇಸ್ ಮಾಸ್ಕ್: ಕೋಲ್ಡ್ ಕ್ರೀಮ್ ಅನ್ನು ರಾತ್ರಿ ಹಚ್ಚಿದರೆ ತುಂಬಾ ಒಳ್ಳೆಯದು. ಹಗಲಿನಲ್ಲಿ ಹಚ್ಚಿದರೆ ಕೋಲ್ಡ್ ಕ್ರೀಮ್ ಬೇಗನೆ ಒಣಗುತ್ತದೆ. ಆದರೆ ರಾತ್ರಿಯಲ್ಲಿ ಹಚ್ಚಿದರೆ ಕ್ರೀಮ್ ಬೇಗನೆ ಒಣಗುವುದಿಲ್ಲ ಇದರಿಂದ ಕೋಲ್ಡ್ ಕ್ರೀಮ್ ನಿಂದ ತ್ವಚೆ ಅಧಿಕ ಪ್ರಯೋಜನ ದೊರೆಯುವುದು.

2. ಲಿಪ್ ಬಾಮ್: ಕೋಲ್ಡ್ ಕ್ರೀಮ್ ಅನ್ನು ಲಿಪ್ ಬಾಮ್ ಆಗಿ ಕೂಡ ಹಚ್ಚಬಹುದು, ಕೋಲ್ಡ್ ಕ್ರೀಮ್ ತುಟಿ ಒಡೆಯುವುದನ್ನು ತಡೆಯುತ್ತದೆ.
3. ತ್ವಚೆ ಒಡೆಯುವುದನ್ನು ತಡೆಯುತ್ತದೆ: ತ್ವಚೆ ಒಡೆಯುವುದಾದರೆ ಕೋಲ್ಡ್ ಕ್ರೀಮ್ ಅನ್ನು ಹಚ್ಚಿದರೆ ಸಾಕು ತ್ವಚೆಯಲ್ಲಿ ಬಿರುಕು ಕಂಡು ಬರುವುದಿಲ್ಲ.
4. ಮೇಕಪ್ ರಿಮೋವರ್: ಮೇಕಪ್ ಅನ್ನು ರಿಮೋವ್ ಮಾಡಲು ಕೋಲ್ಡ್ ಕ್ರೀಮ್ ಬಳಸಬಹುದು. ಮೇಕಪ್ ತೆಗೆಯಲು ಇದನ್ನು ಬಳಸಿದರೆ ತ್ವಚೆಯನ್ನು ಮತ್ತಷ್ಟು ಆರೈಕೆ ಮಾಡಿದಂತೆ ಆಗುವುದು.
5. ಪಾದ ಒಡೆಯುವುದನ್ನು ತಡೆಯುತ್ತದೆ: ಚಳಿಗಾಲದಲ್ಲಿ ಹೆಚ್ಚಿನವರಲ್ಲಿ ಪಾದ ಒಡೆಯುವ ಸಮಸ್ಯೆ ಕಂಡು ಬರುತ್ತದೆ. ಅಂತಹವರು ಪ್ರತಿದಿನವೂ ಮಲಗುವ ಮುನ್ನ ಪಾದಗಳಿಗೆ ಕೋಲ್ಡ್ ಕ್ರೀಮ್ ಹಚ್ಚಿ ಮಲಗಿದರೆ ಪಾದಗಳು ಒಡೆಯದಂತೆ ಕೋಲ್ಡ್ ಕ್ರೀಮ್ ರಕ್ಷಣೆಯನ್ನು ಮಾಡುತ್ತದೆ.
6. ಬಾಡಿ ಲೋಷನ್: ಕೋಲ್ಡ್ ಕ್ರೀಮ್ ಅನ್ನು ಬಾಡಿ ಲೋಷನ್ ಆಗಿ ಕೂಡ ಬಳಸಬಹುದು. ಕೋಲ್ಡ್ ಕ್ರೀಮ್ ಚಳಿಗಾಲದಲ್ಲಿ ತ್ವಚೆ ತನ್ನ ಮೃದುತ್ವ ಕಳೆದುಕೊಳ್ಳದಂತೆ ತ್ವಚೆ ರಕ್ಷಣೆಯನ್ನು ಮಾಡುತ್ತದೆ.
7. ನೋವು ನಿವಾರಣೆ: ವ್ಯಾಕ್ಸಿಂಗ್ ನಿಂದ ಉಂಟಾಗುವ ಉರಿಯನ್ನು ಕಡಿಮೆ ಮಾಡಲು ಕೋಲ್ಡ್ ಕ್ರೀಮ್ ಅನ್ನು ಬಳಸಬಹುದು.



Click it and Unblock the Notifications
