Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಪುರುಷರ ಸೌಂದರ್ಯ ಹಾಳು ಮಾಡುವ 8 ಅಭ್ಯಾಸಗಳು
ಎಲ್ಲರಿಗೂ ಒಂದೊಂದು ಅಭ್ಯಾಸವಿರುತ್ತದೆ. ಅವುಗಳಲ್ಲಿ ಕೆಲವೊಂದು ಅಭ್ಯಾಸಗಳು ಒಳ್ಳೆಯದಾ ಅಥವಾ ಕೆಟ್ಟದಾ ಎಂದು ಸ್ಪಷ್ಟವಾಗಿ ಗೊತ್ತಿರುತ್ತದೆ. ಕೆಟ್ಟ ಅಭ್ಯಾಸಗಳೆಂದು ಗೊತ್ತಿದ್ದರೂ ಅಂತಹ ಅಭ್ಯಾಸಗಳನ್ನು ಬಿಡುವುದು ಕಷ್ಟವಾಗಿರುತ್ತದೆ. ಕೆಲವೊಂದು ಅಭ್ಯಾಸಗಳು ನಿಮ್ಮ ಪರ್ಸನಾಲಿಟಿಯನ್ನೇ ಹಾಳು ಮಾಡುತ್ತವೆ.
ಸ್ತ್ರೀಯರಿಗೆ ಸೌಂದರ್ಯ ಪ್ರಜ್ಞೆ ಇರುವಷ್ಟು ಪುರುಷರಿಗೆ ಇರುವುದಿಲ್ಲ. ಪ್ರತಿಯೊಬ್ಬ ಹುಡುಗನಿಗೂ ತಾನು ಆಕರ್ಷಕವಾಗಿ ಕಾಣಬೇಕೆಂಬ ಆಸೆ ಇರುತ್ತದೆ. ಆದರೆ ಅದಕ್ಕಾಗಿ ಸ್ತ್ರೀಯರಷ್ಟು ಗಮನ ಹರಿಸುವುದಿಲ್ಲ. ಇಲ್ಲಿ ನಾವು ನಿಮಗೆ ಚೆಂದ ಕಾಣಲು ಮೇಕಪ್ ಮಾಡಿ ಎಂದು ಹೇಳುತ್ತಿಲ್ಲ. ನಿಮ್ಮ ಕೆಲವೊಂದು ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಿ ಎಂದಷ್ಟೆ ಹೇಳುತ್ತಿದ್ದೇವೆ. ಅದರಲ್ಲೂ ಈ ಕೆಳಗಿನ ಅಭ್ಯಾಸಗಳು ನಿಮಗಿದ್ದರೆ ನಿಮ್ಮ ಅಂದವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಒಳ್ಳೆಯ ಪರ್ಸನಾಲಿಟಿಯಿಂದ ಆಕರ್ಷಕವಾಗಿ ಕಾಣಲು ಈ ಕೆಳಗಿನ ಅಭ್ಯಾಸಗಳನ್ನು ಬಿಟ್ಟರೆ ಮಾತ್ರ ಸಾಧ್ಯ.

1. ಮಲಗುವ ಭಂಗಿ
ಮಗುಚಿ ಮಲಗುವುದು ಅಂದರೆ ಹೊಟ್ಟೆ ಕೆಳಭಾಗದಲ್ಲಿ ಇರುವಂತೆ ಮಲಗುವ ಅಭ್ಯಾಸ ನಿಮಗಿದ್ದರೆ ಮುಖಕ್ಕೆ ದಿಂಬು ಒತ್ತುವುದರಿಂದ ಮುಖದ ಮೇಲೆ ಅಧಿಕ ಒತ್ತಡ ಬೀಳುತ್ತದೆ. ಈ ರೀತಿ ಮಲಗವ ಅಭ್ಯಾಸದಿಂದ ಮಲಗಿದರೆ ಮುಖದ ಮೇಲೆ ನೆರಿಗೆಗಳು ಬೀಳುತ್ತದೆ. ಮಾಯಿಶ್ಚರೈಸರ್ ಸ್ತ್ರೀಯರಿಗೆ ಮಾತ್ರವಲ್ಲ ನಿಮ್ಮ ತ್ವಚೆಗೂ ಅಗತ್ಯ. ಪ್ರತಿದಿನ ಮಲಗುವ ಮುನ್ನ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿದರೆ ಮುಖದ ಕಾಂತಿ ಹೆಚ್ಚಾಗುವುದು.

2. ಸೋಪು
ಮುಖಕ್ಕೆ ಸೋಪು ಬಳಸಿದರೆ ಮುಖದ ತ್ವಚೆ ಒಣಗುತ್ತದೆ. ಆದ್ದರಿಂದ ಸೋಪು ಬದಲು ಫೇಸ್ ವಾಶ್ ಬಳಸಿದರೆ ಒಳ್ಳೆಯದು. ನಿಮ್ಮ ತ್ವಚೆಗೆ ಸೂಕ್ತವಾದ ಅನೇಕ ಮೆನ್ ಫೇಸ್ ವಾಶ್ ಗಳಿವೆ. ಅವುಗಳನ್ನು ಬಳಸಿದರೆ ತ್ವಚೆ ಆಕರ್ಷಕವಾಗಿ ಕಾಣುವುದು.

3. ಧೂಮಪಾನ
ಧೂಮಪಾನದಿಂದಾಗಿ ತುಟಿ ಕಪ್ಪಾಗುತ್ತದೆ ಹಾಗೂ ಮುಖ ಬೇಗನೆ ಸುಕ್ಕುಗಟ್ಟುತ್ತದೆ. ಅಲ್ಲದೆ ಧೂಮಪಾನ ಆರೋಗ್ಯಕ್ಕೆ ಕೂಡ ಒಳ್ಳೆಯದಲ್ಲ. ಆದ್ದರಿಂದ ಈ ಅಭ್ಯಾಸವನ್ನು ಬಿಡುವುದು ಒಳ್ಳೆಯದು.

4. ಮೊಬೈಲ್
ನಾವು ಬಳಸುವ ಫೋನ್ ನಲ್ಲಿ ಸಾಕಷ್ಟು ಕೊಳೆಯಿರುತ್ತದೆ. ಆದರೆ ಅದು ನಮಗೆ ಗೊತ್ತಾಗುವುದಿಲ್ಲ. ಫೋನಿನಲ್ಲಿ ಗಂಟೆಗಟ್ಟಲೆ ಹರಡುತ್ತಿದ್ದರೆ ತ್ವಚೆಯ ಮೇಲೆ ಕೆಟ್ಟ ಪರಿಣಾಮ ಬೀರುವುದು. ಆದ್ದರಿಂದ ಫೋನ್ ಅನ್ನು ಪ್ರತಿದಿನ ಬಟ್ಟೆಯಿಂದ ಒರೆಸುವುದು ಒಳ್ಳೆಯದು. ಮೊಬೈಲ್ ಅನ್ನು ಹಾಗೇ ಇಡುವುದಕ್ಕಿಂತ ಕವರ್ ನಲ್ಲಿ ಹಾಕಿಟ್ಟರೆ ಒಳ್ಳೆಯದು.

5. ತಲೆ ಹೊಟ್ಟು
ತಲೆಹೊಟ್ಟಿದ್ದರೆ ಅದರಿಂದ ತಲೆ ತುರಿಸುವುದು ಮಾತ್ರವಲ್ಲದೆ ಅದು ತ್ವಚೆಯ ಮೇಲೆ ಬಿದ್ದರೆ ಗುಳ್ಳೆಗಳು ಏಳುತ್ತವೆ. ತಲೆ ತುರಿಸಿದಾಗ ಕೈಯಿಂದ ತುರಿಸಿ ನಂತರ ಕೈಯನ್ನು ತೊಳೆಯದೆ ಮುಖವನ್ನು ಮುಟ್ಟುವ ಅಭ್ಯಾಸ ಸಾಮಾನ್ಯವಾಗಿ ಎಲ್ಲರಲ್ಲಿ ಇರುತ್ತದೆ. ಈ ರೀತಿ ಮಾಡಿದರೆ ಮೊಡವೆ ಏಳುತ್ತದೆ. ಆದ್ದರಿಂದ ತಲೆ ಹೊಟ್ಟು ಇಲ್ಲದಂತೆ ನೋಡಿಕೊಳ್ಳಬೇಕು.

6. ಸನ್ ಸ್ಕ್ರೀನ್ ಬಳಸದಿರುವುದು
ಹೆಚ್ಚು ಹೊತ್ತು ಬಿಸಿಲಿನಲ್ಲಿ ನಿಂತು ಕೆಲಸ ಮಾಡುವುದು, ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಬಳಸದಿರುವುದು ಮಾಡಿದರೆ ತ್ವಚೆ ಕಪ್ಪಾಗುವುದು. ಮನೆಯಿಂದ ಹೊರಗಡೆ ಹೋಗುವ 30 ನಿಮಿಷ ಮುಂಚೆ ಸನ್ ಸ್ಕ್ರೀನ್ ಲೋಷನ್ ಹಚ್ಚಿದರೆ ತುಂಬಾ ಒಳ್ಳೆಯದು.

7. ಕ್ಲೆನ್ಸಿಂಗ್ ಮಾಡದಿರುವ ಅಭ್ಯಾಸ
ಮುಖದಲ್ಲಿರುವ ನಿರ್ಜೀವ ತ್ವಚೆಯನ್ನು ಹೋಗಲಾಡಿಸಲು ಕ್ಲೆನ್ಸಿಂಗ್ ಕೂಡ ಮಾಡಬಹುದು. ಸ್ವಲ್ಪ ಆಲೀವ್ ಎಣ್ಣೆಗೆ ಸ್ವಲ್ಪ ಸಕ್ಕರೆ ಹಾಗೂ ಸ್ವಲ್ಪ ಉಪ್ಪು ಹಾಕಿ ಉಜ್ಜಿ ನಿರ್ಜೀವ ತ್ವಚೆಯನ್ನು ಹೋಗಲಾಡಿಸಬಹುದು.

8. ಶೇವಿಂಗ್
ಶೇವಿಂಗ್ ನಂತರ ಜೆಲ್ ಬಳಸುವುದರಿಂದ ಶೇವಿಂಗ್ ಉರಿ ಕಡಿಮೆ ಮಾಡಬಹುದು ಹಾಗೂ ತ್ವಚೆಯೂ ಅಕರ್ಷಕವಾಗಿ ಕಾಣುತ್ತದೆ. ಕೈ ಕಾಲಿನ ಉಗುರಗಳನ್ನು ನೀಟಾಗಿ ಕತ್ತರಿಸಿರಬೇಕು.



Click it and Unblock the Notifications
