Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಯೌವನದ ಚೆಲುವು ಉಳಿಸುವ 6 ಅಭ್ಯಾಸಗಳು
ವಯಸ್ಸು 30 ದಾಟಿದ ನಂತರ ಮುಖದ ಕಳೆ ಕಡಿಮೆಯಗುತ್ತಾ ಬರುತ್ತದೆ. ಕೆಲವರಿಗೆ 30ರಲ್ಲಿಯೇ ಮುಖದಲ್ಲಿ ನೆರಿಗೆಗಳು ಬೀಲಾರಂಭಿಸುತ್ತದೆ. ಈ ರೀತಿ ಮುಖದಲ್ಲಿ ನೆರಿಗೆ ಕಂಡು ಬಂದರೆ ಸೌಂದರ್ಯ ಕಡಿಮೆಯಾಗುತ್ತದೆ ಎಂದು ಮಹಿಳೆಯರು ತುಂಬಾ ಚಿಂತೆ ಮಾಡಲಾರಭಿಸುತ್ತಾರೆ. ಏಕೆಂದರೆ ನನಗೆ ವಯಸ್ಸಾಗುತ್ತಿದೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಅವರ,ಮನಸ್ಸು ಸಿದ್ಧವಿರುವುದಿಲ್ಲ.
ಏಕೆಂದರೆ ವಯಸ್ಸು 30 ದಾಟಿದರೂ 20ರ ಹರೆಯದ ಹುಡುಗಿಯಂತೆ ಕಾಣಬೇಕೆಂದು ಮಹಿಳೆಯರು ಬಯಸುತ್ತಾರೆ. ಅದ್ಕಕಾಗಿ ಯಾವ ಕ್ರೀಮ್ ಹಚ್ಚಬೇಕು, ಹೇಗೆ ಡ್ರೆಸ್ಸಿಂಗ್ ಮಾಡಬೇಕು ಎಂದೆಲ್ಲಾ ಯೋಚಿಸುತ್ತಾರೆ. ಆದರೆ ಅದಕ್ಕಾಗಿ ನಮ್ಮಲ್ಲಿ ಕೆಲವೊಂದು ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕೆನ್ನುವುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. 30ರ ನಂತರವೂ ಯೌವನದ ಕಳೆಯನ್ನು ಉಳಿಸಿಕೊಳ್ಳಬೇಕೆಂದು ಬಯಸುವವರು ಈ ಕೆಳಗಿನ ಅಭ್ಯಾಸಗಳನ್ನು ಬೆಳೆಸಿಕೊಳ್ಳಲೇಬೇಕು:

1. ಆಹಾರ ಅಭ್ಯಾಸ
ಪಿಜ್ಜಾ, ಬರ್ಗರ್ ಬದಲು ಹಣ್ಣುಗಳನ್ನು ಹೆಚ್ವಾಗಿ ತಿನ್ನಬೇಕು. ಪ್ರತಿದಿನ ಸಿಟ್ರಸ್ ಇರುವ ಆಹಾರಗಳನ್ನು ಸೇವಿಸಬೇಕು. ವಿಟಮಿನ್ ಎ, ಸಿ, ಇ, ಬಿ12 ಇವುಗಳಿರುವ ಆಹಾರವನ್ನು ಹೆಚ್ಚಾಗಿ ತಿನ್ನಬೇಕು. ಮೊಟ್ಟೆ, ಸೊಪ್ಪು. ಸಮುದ್ರಾಹಾರಗಳು, ಎಲೆಕೋಸು, ಕುಂಬಳಕಾಯಿ ಇವೆಲ್ಲಾ ತ್ವಚೆ ಸೌಂದರ್ಯವನ್ನು ಕಾಪಾಡುವಲ್ಲಿ ತುಂಬಾ ಸಹಕಾರಿಯಾಗಿದೆ.

2. ಬಿಡಬೇಕಾದ ಅಭ್ಯಾಸಗಳು
ಅಧಿಕ ಕೊಬ್ಬಿನಂಶವಿರುವ ಆಹಾರಗಳನ್ನು ತಿನ್ನಬಾರದು. ಕುರುಕಲು ತಿಂಡಿಗಳಿಂದ ದೂರವಿರಬೇಕು. ಧೂಮಪಾನ, ಮದ್ಯಪಾನದ ಚಟವಿದ್ದರೆ ಅದರಿಂದ ದೂರವಿರಬೇಕು.

3. ನಿದ್ದೆ
ಅತೀ ನಿದ್ದೆ ಕೆಡಬಾರದು, ಅತಿಯಾಗಿಯೂ ನಿದ್ದೆ ಮಾಡಬಾರದು. 7-8 ಗಂಟೆ ನಿದ್ದೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಪ್ರತಿದಿನ ಅರ್ಧಗಂಟೆ ವ್ಯಾಯಾಮ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.

4. ಸನ್ ಸ್ಕ್ರೀನ್
ಬೇಸಿಗೆ ಕಾಲದಲ್ಲಿ ಮಾತ್ರವಲ್ಲ, ಚಳಿಗಾಲದಲ್ಲೂ ಸನ್ ಸ್ಕ್ರೀನ್ ಹಚ್ಚಬೇಕು. ತುಂಬಾ ಬಿಸಿಲಿಗೆ ಓಡಾಡುವಾಗ ಬಿಸಿಲಿನಿಂದ ರಕ್ಷಣೆ ಪಡೆಯಲು ಕೊಡೆ ಹಿಡಿದು ಓಡಾಡುವುದು ಒಳ್ಳೆಯದು.

5. ನೀರಿನಂಶ
ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಪ್ರತಿದಿನ ಒಂದು ಲೋಟ ಹಣ್ಣಿನ ಅಥವಾ ತರಕಾರಿಯ ಜ್ಯೂಸ್ ಕುಡಿಯಬೇಕು. ವಾರದಲ್ಲಿ 3-4 ಎಳೆ ನೀರನ್ನು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ.

6. ಕ್ಲೆನ್ಸಿಂಗ್
ಪ್ರತಿದಿನ ರಾತ್ರಿ ಮಲಗುವ ಮುನ್ನ ಹಾಲಿನಿಂದ ಕ್ಲೆನ್ಸಿಂಗ್ ಮಾಡಿ ನಂತರ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ ಮಲಗಿ.
ಈ ರೀತಿ ಮಾಡಿದರೆ 30ರ ಹರೆಯದಲ್ಲೂ 20ರ ತರುಣಿಯಂತೆ ಕಾಣುವಿರಿ. ಈ ಅಭ್ಯಾಸವನ್ನು ಯೌವನ ಪ್ರಾಯದಲ್ಲಿಯೇ ಅಭ್ಯಾಸ ಮಾಡಬೇಕು.



Click it and Unblock the Notifications
