Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಅತ್ಯುತ್ತಮವಾದ ನೈಸರ್ಗಿಕ ಸೌಂದರ್ಯವರ್ಧಕಗಳಿವು!
ಸ್ತ್ರೀಯರಿಗೆ ಸೌಂದರ್ಯ ಪ್ರಜ್ಞೆ ಪುರಾತನ ಕಾಲದಿಂದಲೂ ಇದೆ. ಆದರೆ ಆ ಕಾಲದಲ್ಲಿ ಸೌಂದರ್ಯಕ್ಕಾಗಿ ಬೆಲೆ ಬಾಳುವ ಕ್ರೀಮ್, ಪೌಡರ್ ಇರಲಿಲ್ಲ, ಆದರೆ ಅವರೆಲ್ಲಾ ಕ್ರೀಮ್, ಪೌಡರ್ ಕ್ಕಿಂತ ಅತ್ಯುತ್ತಮವಾದ ಸೌಂದರ್ಯ ವರ್ಧಕಗಳಾದ ನೈಸರ್ಗಿಕ ವಸ್ತುಗಳನ್ನು ಹಚ್ಚಿ ತಮ್ಮ ಚೆಲುವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಅದೇ ವಿಧಾನವನ್ನು ಬಳಸಿದರೆ ಸಾಕು ತಾಜಾ ಸೌಂದರ್ಯ ನಿಮ್ಮದಾಗುವುದು.
ಹಳದಿ: ಅರಿಶಿಣ ಅಥವಾ ಹಳದಿಯನ್ನು ಮುಖಕ್ಕೆ ಹಚ್ಚಿದರೆ ಮುಖದಲ್ಲಿರುವ ರೋಮವನ್ನು ಹೋಗಲಾಡಿಸಬಹುದು ಹಾಗೂ ಮುಖ ಬಿಳುಪನ್ನು ಪಡೆಯುತ್ತದೆ.

ಕೇಸರಿ: ತ್ವಚೆ ಸೌಂದರ್ಯಕ್ಕೆ ಕೇಸರಿ ತುಂಬಾ ಒಳ್ಳೆಯದು. ಅನೇಕ ಸೌಂದರ್ಯವರ್ಧಕ ಕ್ರೀಮ್ ಗಳಲ್ಲಿ ಕೂಡ ಇದನ್ನು ಬಳಸುತ್ತಾರೆ. ಇದನ್ನು ಹಾಲಿನ ಜೊತೆ ಹಾಕಿ ಕುಡಿದರೆ ರಕ್ತವನ್ನು ಶುದ್ಧ ಮಾಡಿ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಕಡಲೆಹಿಟ್ಟು: ಸೋಪಿನ ಬದಲು ಕಡಲೆ ಹಿಟ್ಟನ್ನು ಬಳಸಿದರೆ ಮುಖದಲ್ಲಿ ಮೊಡವೆ, ಕಲೆಗಳಿದ್ದರೆ ಕಡಿಮೆಯಾಗುವುದು ಹಾಗೂ ಮುಖದ ಅಂದ ಹೆಚ್ಚುವುದು. ಇದನ್ನು ಬಳಸಿ ಮೈ ತಿಕ್ಕಿದರೆ ನಿರ್ಜೀವ ತ್ವಚೆಯನ್ನು ಹೋಗಲಾಡಿಸುತ್ತದೆ, ಮೈಕಾಂತಿಯನ್ನು ಹೆಚ್ಚಿಸುತ್ತದೆ.
ರೋಸ್ ವಾಟರ್: ರೋಸ್ ವಾಟರ್ ನಿಂದ ಮುಖವನ್ನು ಪ್ರತಿದಿನ ಕ್ಲೆನ್ಸ್ ಮಾಡುವುದು ತುಂಬಾ ಒಳ್ಳೆಯದು. ಇದನ್ನು ಬಳಸಿದರೆ ಕಣ್ಣಿನ ಸುತ್ತ ಕಪ್ಪು ಕಲೆ ಬೀಳುವುದಿಲ್ಲ, ಅಲ್ಲದೆ ಮುಖ ತಾಜಾತನದಿಂದ ಕೂಡಿರುತ್ತದೆ.
ಚಂದನ: ಚಂದನ ಅಥವಾ ಶ್ರೀಗಂಧ ತ್ವಚೆಗೆ ತುಂಬಾ ಒಳ್ಳೆಯದು. ಮುಖದಲ್ಲಿ ಮೊಡವೆ ಇದ್ದರೆ ಚಂದನ ಬಳಸಿ ಕಡಿಮೆಯಾಗುವುದು. ಒಂದು ತಿಂಗಳ ಕೆಲ ಪ್ರತಿದಿನ ಚಂದನ ಹಚ್ಚಿ ನೋಡಿ ನಿಮ್ಮ ಮುಖದ ಹೊಳಪು ಹೆಚ್ಚಿರುವುದು ಗಮನಕ್ಕೆ ಬರುವುದು.



Click it and Unblock the Notifications
