Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕಣ್ಣಿನ ಸುತ್ತಲಿರುವ ಕಪ್ಪು ಕಲೆ ನಿವಾರಣೆಗೆ 5 ವಿಧಾನ
ಕಣ್ಣಿನ ಸುತ್ತ ಕಪ್ಪು ಕಲೆ ಅನೇಕರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಸರಿಯಾಗಿ ನಿದ್ದೆ ಮಾಡದಿರುವುದು, ತುಂಬಾ ಮಾನಸಿಕ ಒತ್ತಡ, ಕಾಯಿಲೆ ಇವುಗಳಿಂದ ಕಣ್ಣಿನ ಸುತ್ತ ಕಪ್ಪು ಕಲೆಗಳು ಬೀಳುತ್ತದೆ, ಮತ್ತೆ ಕೆಲವರಿಗೆ ವಂಶ ಪಾರಂಪರ್ಯವಾಗಿ ಕೂಡ ಕಣ್ಣಿನ ಸುತ್ತ ಕಪ್ಪು ಕಲೆ ಬೀಳುತ್ತದೆ. ಇದರ ಸಮಸ್ಯೆ ವಯಸ್ಸಾದರೆ ಮಾತ್ರ ಬರುವುದು ಅಂತಲ್ಲ, ಯೌವನ ಪ್ರಾಯದವರಲ್ಲೂ ಕಣ್ಣಿನ ಸುತ್ತ ಕಪ್ಪು ವರ್ತುಲ ಕಂಡು ಬರುವುದು.
ಕಣ್ಣಿನ ಸುತ್ತ ಕಪ್ಪು ಕಲೆ ಹೋಗಲಾಡಿಸಲು ಅನೇಕ ಕ್ರೀಮ್ ಗಳಿವೆ. ಆದರೆ ಇದನ್ನು ಮನೆಮದ್ದನ್ನು ಬಳಸಿ ಸುಲಭದಲ್ಲಿ ಹೋಗಲಾಡಿಸಬಹುದು. ಆದ್ದರಿಂದ ಕಣ್ಣಿನ ಸುತ್ತ ಕಪ್ಪು ಕಲೆಗಳು ಬಿದ್ದರೆ ಇದರ ಬಗ್ಗೆ ಮತ್ತಷ್ಟು ಚಿಂತೆ ಮಾಡದೆ ಈ ಕೆಳಗಿನ ವಿಧಾನಗಳನ್ನು ಅನುಸರಿಸಿದರೆ ಸಾಕು, ಕಣ್ಣಿನ ಸುತ್ತ ಇರುವ ಕಪ್ಪು ಕಲೆ ಮಾಯವಾಗುವುದು, ನಿಮ್ಮ ಮುಖದ ಅಂದ ಹೆಚ್ಚುವುದು.

1. ನಿದ್ದೆ
ಕಪ್ಪು ಕಲೆ ಹೋಗಲಾಡಿಸಬೇಕೆಂದು ಬಯಸುವುದಾದರೆ ಮೊದಲು ಮಾಡಬೇಕಾದ ಕೆಲಸವೆಂದರೆ 6-8 ಗಂಟೆ ಕಾಲ ನಿದ್ದೆ ಮಾಡಿ. ನಿದ್ದೆ ಸರಿಯಾಗಿ ಮಾಡದೆ ಯಾವುದೇ ಕ್ರೀಮ್ ಹಚ್ಚಿದರೂ ಕಣ್ಣಿನ ಸುತ್ತ ಬಿದ್ದಿರುವ ಕಪ್ಪು ಕಲೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ.

2. ಸೌತೆಕಾಯಿ
ಕಣ್ಣಿನ ಸುತ್ತ ಬಿದ್ದಿರುವ ಕಪ್ಪು ಕಲೆಯನ್ನು ಹೋಗಲಾಡಿಸಲು ಸೌತೆಕಾಯಿ ಬೆಸ್ಟ್. ಸೌತೆಕಾಯಿಯನ್ನು ವೃತ್ತಾಕಾರವಾಗಿ ಕತ್ತರಿಸಿ ಕಣ್ಣಿನ ಮೇಲೆ ಇಟ್ಟು ಅರ್ಧ ಗಂಟೆ ವಿಶ್ರಾಂತಿ ತೆಗೆದುಕೊಳ್ಳಬೇಕು. ಆ ರೀತಿ ಮಾಡಲು ಪುರುಸೊತ್ತು ಇಲ್ಲದಿದ್ದರೆ ಸೌತೆಕಾಯಿಯನ್ನು ಪೇಸ್ಟ್ ಮಾಡಿ ಕಣ್ಣಿನ ಸುತ್ತ ಹಚ್ಚಿ ನಿಮ್ಮ ಕೆಲಸಗಳನ್ನು ಮಾಡಿ. ನಂತರ ಅರ್ಧಗಂಟೆಯ ಬಳಿಕ ಮುಖ ತೊಳೆಯಿರಿ. ಈ ರೀತಿ ಪ್ರತಿದಿನ ಮಾಡಿದರೆ ಕಪ್ಪು ಕಲೆ ಕಡಿಮೆಯಾಗುವುದು.

3. ನಿಂಬೆ ರಸ
ಹತ್ತಿಯನ್ನು ನಿಂಬೆ ರಸದಲ್ಲಿ ಅದ್ದಿ ಅದರಿಂದ ಕಣ್ಣಿಗೆ ಮಸಾಜ್ ಮಾಡಬೇಕು. ಈ ರೀತಿ ಪ್ರತಿದಿನ ಮಾಡಿದರೆ ಒಂದು ತಿಂಗಳಿನ ಒಳಗೆ ಕಣ್ಣಿನ ಸುತ್ತ ಬಿದ್ದಂತಹ ಕಪ್ಪು ಕಲೆ ಸಂಪೂರ್ಣವಾಗಿ ಮಾಯವಾಗುವುದು.

4. ಟೀ ಬ್ಯಾಗ್
ಟೀ ಬ್ಯಾಗ್ ಅನ್ನು ರಾತ್ರಿಯಲ್ಲಿ ತಣ್ಣೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಅದರಿಂದ ನೀರನ್ನು ಹಿಂಡಿ ಟೀ ಬ್ಯಾಗ್ ಅನ್ನು ಕಣ್ಣಿನ ಮೇಲೆ 10 ನಿಮಿಷ ಇಡಬೇಕು. ನಂತರ ತಣ್ಣೀರಿನಿಂದ ಮುಖ ತೊಳೆಯಬೇಕು. ಈ ರೀತಿ ಮಾಡಿದರೆ ಕಪ್ಪು ಕಲೆಯನ್ನು ಸುಲಭವಾಗಿ ಹೋಗಲಾಡಿಸಬಹುದು.

5. ಆಹಾರ
ಪಾಲಕ್ ಸೊಪ್ಪು, ಎಲೆಕೋಸು, ಕ್ಯಾರೆಟ್, ಟೊಮೆಟೊ ಈ ಆಹಾರಗಳು ಕಪ್ಪು ಕಲೆಯನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿವೆ.



Click it and Unblock the Notifications
