Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ಸೆಖೆಗೆ ತಂಪಾಗಲು ಸಖತ್ ಸಲಹೆಗಳು

1. ದಿನಾ ತಲೆ ಸ್ನಾನ: ದಿನವೂ ತಲೆ ತೊಳೆದರೆ ಕೂದಲು ಹಾಳಾಗುತ್ತದೆ ಅನ್ನುವುದು ತಪ್ಪು ಕಲ್ಪನೆ. ಕೂದಲು ಆರೋಗ್ಯವಾಗಿ ಬೆಳೆಯಲು ಕೂದಲಿನ ಬುಡ ಶುಚಿಯಾಗಿರಬೇಕು. ಆದ್ದರಿಂದ ಪ್ರತಿದಿನ ತಲೆಸ್ನಾನ ಮಾಡಿದರೆ ಹೊಟ್ಟಿನ ಸಮಸ್ಯೆ ಉಂಟಾಗುವುದಿಲ್ಲ.
2. ಪಾದಗಳನ್ನು ತೊಳೆಯಬೇಕು: ಸಮಯ ಸಿಕ್ಕಿದಾಗ ಪಾದಗಳನ್ನು ತೊಳೆದರೆ ದೇಹ ತಂಪಾಗುತ್ತದೆ. ಹೊರಗಡೆ ಹೋಗಿ ಮನೆಗೆ ಬಂದಾಗ ಕಾಲಿಗೆ ನೀರು ಹಾಕಿಕೊಂಡು ಒಳಗೆ ಬರಲು ಹಿರಿಯರು ಹೇಳುತ್ತಾರೆ. ಅದನನ್ನು ಅವರು ಸಂಪ್ರದಾಯ ಅಂದರೆ ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗ ಈ ರೀತಿ ನೀರು ಹಾಕಿದಾಗ ದೇಹಕ್ಕೆ ತಂಪು ಸಿಗುತ್ತದೆ.
3. ಕುತ್ತಿಗೆಗೆ ನೀರು ಹಾಕುವುದು: ತುಂಬಾ ಸೆಕೆಯಾದಾಗ ಮುಖ ಮತ್ತು ಕುತ್ತಿಗೆ ನೀರು ಹಾಕಿ, ಕುತ್ತಿಗೆ ಹಿಂಭಾಗಕ್ಕೆ ಸ್ವಲ್ಪ ನೀರು ಹಾಕಿದರೆ ಸೆಕೆ ಕೂಡಲೆ ಕಡಿಮೆಯಾಗುತ್ತದೆ.
4. ಮಣ್ಣಿನ ಪ್ಯಾಕ್: ದೇಹಕ್ಕೆ ತಂಪು ನೀಡಲು ಮತ್ತು ಮುಖದಲ್ಲಿರುವ ಮೊಡವೆಗಳನ್ನು ಹೋಗಲಾಡಿಸುವಲ್ಲಿ ಮಣ್ಣಿನ ಪ್ಯಾಕ್ ಹಚ್ಚುವುದು ಒಳ್ಳೆಯದು. ಮುಲ್ತಾನಿ ಮಿಟಿಯನ್ನು ಮುಖಕ್ಕೆ ಹಚ್ಚುವುದು ಒಳ್ಳೆಯದು.
5. ಸನ್ ಸ್ಕ್ರೀನ್: ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಲೋಷನ್ ಬಳಸಿದರೆ ತ್ವಚೆ ಕಪ್ಪಾಗುವುದಿಲ್ಲ.
6. ರೋಸ್ ವಾಟರ್: ರೋಸ್ ವಾಟರ್‌ನಿಂದ ಕ್ಲೆನ್ಸಿಂಗ್ ಮಾಡುವುದು ಒಳ್ಳೆಯದು. ರೋಸ್ ವಾಟರ್ ಮತ್ತು ಗಂಧದ ಪುಡಿ ಮಿಶ್ರ ಮಾಡಿ ಫೇಸ್ ಪ್ಯಾಕ್ ಮಾಡಿದರೆ ತ್ವಚೆ ಬಿಸಿಲಿಗೆ ಮಂಕಾಗುವುದಿಲ್ಲ.
7. ತಂಪು ನೀಡುವ ಆಹಾರ: ಹಣ್ಣುಗಳು ಮತ್ತು ದೇಹಕ್ಕೆ ತಂಪು ನೀಡುವ ತರಕಾರಿಗಳನ್ನು ಹೆಚ್ಚಾಗಿ ತಿನ್ನಬೇಕು. ಚಿಕನ್ ಈ ಸಮಯದಲ್ಲಿ ಹೆಚ್ಚಾಗಿ ತಿನ್ನದಿರುವುದು ಒಳ್ಳೆಯದು.



Click it and Unblock the Notifications
