Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಿಂಬೆ ಹಣ್ಣು ಬಳಸಿ, ಉಗುರಿನ ಹೊಳಪು ಹೆಚ್ಚಿಸಿ

ಬ್ಯೂಟಿ ಪಾರ್ಲರ್ ಗೆ ಹಣ ಸುರಿಯಲು ಇಷ್ಟ ಪಡದವರು ಮನೆಯಲ್ಲಿ ಉಗುರುಗಳನ್ನು ಆರೈಕೆ ಮಾಡಿ ಅದರ ಹೊಳಪು ಹೆಚ್ಚಿಸಬಹುದು.ಹೆಚ್ಚು ಖರ್ಚು ಮಾಡದೆ ಉಗುರಿನ ಸೌಂದರ್ಯ ಹೆಚ್ಚಿಸಲು ಇಲ್ಲಿದೆ ಕೆಲ ಸಲಹೆಗಳು. ಅವುಗಳನ್ನು ಪಾಲಿಸಿ ಹೊಳೆಯುವ, ಆಕರ್ಷಕ ಉಗುರಿನ ಸೌಂದರ್ಯ ಪಡೆಯಿರಿ.
1.ನಿಂಬೆ ಹಣ್ಣು: ನಿಂಬೆ ಹಣ್ಣನ್ನು ಕತ್ತರಿಸಿಡಬೇಕು. ಒಂದು ಬೇಸಿನ್ ಅಥವಾ ಬಕೆಟ್ ನಲ್ಲಿ ಸ್ವಲ್ಪ ಬಿಸಿ ನೀರು ಹಾಕಿ ಅದರಲ್ಲಿ ಕೈಗಳನ್ನು ನೆನಸಿ ನಂತರ ನಿಂಬೆ ಹೋಳಿನಿಂದ ಕೈಗಳನ್ನು ತಿಕ್ಕಬೇಕು. ಕಾಲುಗಳಿಗೆ ಹೀಗೆ ಮಾಡಬೇಕು. ಈ ರೀತಿ ಮಾಡಿದರೆ ಕೈ ಮತ್ತು ಕಾಲಿನ ಉಗುರಿನಲ್ಲಿರುವ ಕೊಳೆ ಮತ್ತು ಬೆರಳಿನ ನಿರ್ಜೀವ ತ್ವಚೆ ಹೋಗಲಾಡಿಸಬಹುದು.
2.ನಿಂಬೆ ಹಣ್ಣು ಮತ್ತು ಉಪ್ಪು: ನಿಂಬೆ ಹಣ್ಣನ್ನು ಕತ್ತರಿಸಿ ಅದರಲ್ಲಿ ಸ್ವಲ್ಪ ಉಪ್ಪು ಪುಡಿ ಹಾಕಿ ಮೇಲೆ ಮಾಡಿದಂತೆ ಬಿಒಸಿ ನೀರಿನಲ್ಲಿ ಉಗುರುಗಳನ್ನು ನೆನೆಸಿ 5-6 ನಿಮಿಷ ಇಟ್ಟು ನಿಂಬೆಹಣ್ಣನ್ನು ಮೆಲ್ಲನೆ ಉಜ್ಜಬೇಕು ನಂತರ ಮೃದುವಾದ ಬ್ರಷ್ ಬಳಸಿ ತಿಕ್ಕಬೇಕು.
3. ನಿಂಬೆಹಣ್ಣು ಮತ್ತು ಗ್ಲಿಸರಿನ್: ಒಣ ತ್ವಚೆ ಇರುವವರು ನಿಂಬೆ ಹೋಳಿಗೆ ಸ್ವಲ್ಪ ಗ್ಲಿಸರಿನ್ ಹಾಕಿ ಬೆರಳುಗಳನ್ನು ತಿಕ್ಕಬೇಕು. ಈ ರೀತಿ ಮಾಡಿದರೆ ಬೆರಳುಗಳು ಮಾಯಿಶ್ಚರೈಸರ್ ಅಗಿ ಇರುತ್ತದೆ.
4. ನಿಂಬೆ ಹಣ್ಣು ಮತ್ತು ಸಕ್ಕರೆ : ನೈಸರ್ಗಿಕ ಸ್ಕ್ರಬ್ಬರ್ ಅಗಿ ಸಕ್ಕರೆ ಬಳಸಬಹುದು. ನಿಂಬೆರಸ ಮತ್ತು ಸಕ್ಕರೆ ಜಿತೆ ಸ್ವಲ್ಪ ನೀರು ಬೆರೆಸಿ ಅದರಲ್ಲಿ ಬೆರಳುಗಳನ್ನು ನೆನೆಸಿ ನಂತರ ಮೃದು ಬ್ರಷ್ ಬಳಸಿ ತಿಕ್ಕಿ ತಣ್ಣಿರಿನಿಂದ ಕೈ ತೊಳೆಯಬೇಕು. ಹೀಗೆ ಮಾಡಿದರೆ ಕೈಬೆರಳುಗಳಿಗೆ ಹೊಳಪು ಬರುತ್ತದೆ.



Click it and Unblock the Notifications
