Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ವಾವ್! ದೇಹಕ್ಕೆ ಸ್ಕ್ರಬ್ ಮನೆಯಲ್ಲಿಯೆ ಮಾಡಬಹುದು

ಇನ್ನೇಕೆ ತಡ ಈ ಕೆಳಗೆ ಕೆಲವು ಸ್ಕ್ರಬ್ ಮಾಡಲು ಬಳಸುವ ವಸ್ತುಗಳ ಹೆಸರಿಸಲಾಗಿದೆ , ಇವುಗಳನ್ನು ಬಳಸಿ ಮಸಾಜ್ ಮಾಡಿ ನಿಮ್ಮ ದೇಹ ಸೌಂದರ್ಯ ಹೆಚ್ಚಿಸಿಕೊಳ್ಳಬಹುದಾಗಿದೆ.
1.ಉಪ್ಪು ಬಾಡಿ ಸ್ಕ್ರಬ್ : ಉಪ್ಪಿನಿಂದ ಸ್ಕ್ರಬ್ ಮಾಡದೆ ಹೊರತು ದೇಹಕ್ಕೆ ಸ್ಕ್ರಬ್ ಮಾಡುವ ಕೆಲಸ ಪೂರ್ಣವಾಗುವುದಿಲ್ಲ.
ಈ ಉಪ್ಪು ಸ್ಕ್ರಬ್ ಮಾಡಲು ಬೇಕಾಗುವ ಸಾಮಾಗ್ರಿಗಳು:
1. ಉಪ್ಪು 1 ಚಮಚ
2.ಶುಂಠಿ ರಸ ಪೇಸ್ಟ್ 1/2 ಚಮಚ
3. ವಿಟಮಿನ್ 'ಇ' ಎಣ್ಣೆ 1 ಕಪ್
4. ಪುಡಿ ಮಾಡಿದ ಚಕ್ಕೆ ಅರ್ಧ ಚಮಚ
ಸ್ಕ್ರಬ್ ಮಾಡುವ ವಿಧಾನ: ಒಂದು ಪ್ಲಾಸ್ಟಿಕ್ ಬಟ್ಟಲಿನಲ್ಲಿ ಈ ಸಾಮಾಗ್ರಿಗಳನ್ನು ಬೆರೆಸಬೇಕು, ಅದನ್ನು ಬಿಸಿ ನೀರಿನಲ್ಲಿ ಸ್ನಾನದ ನಂತರ ವೃತ್ತಾಕಾರದಲ್ಲಿ ಹಚ್ಚಿ 20 ನಿಮಿಷದ ಬಳಿಕ ತೊಳೆಯಬೇಕು.
2. ಧಾನ್ಯಗಳ ಬಾಡಿ ಸ್ಕ್ರಬ್ : ಓಟ್ಸ್ ಅತ್ಯುತ್ತಮವಾದ ಆಹಾರ ಮಾತ್ರವಲ್ಲ, ಅದು ದೇಹಕ್ಕೆ ಸ್ಕ್ರಬ್ ಮಾಡಲು ಬಳಸುವುದರಿಂದ ತ್ವಚೆಯ ಕಾಂತಿಯನ್ನು ಸಹ ಹೆಚ್ಚಿಸುತ್ತದೆ.
ಈ ರೀತಿ ಸ್ಕ್ರಬ್ ಮಾಡವಾಗ ಬಳಸಬೇಕಾದ ವಿಧಾನ:
1. ಸಕ್ಕರೆ 1 ಚಮಚ
2. ಓಟ್ಸ್ 1/2 ಕಪ್
3. ಜೇನು 1 ಚಮಚ
4. ಹಾಲು 1 ಕಪ್
5. ಬಾದಾಮಿ ಎಣ್ಣೆ 2 ಹನಿ
6. ಸ್ವಲ್ಪ ಕೇಸರಿ
ಈ ಸಾಮಗ್ರಿಗಳನ್ನು ಮಿಶ್ರ ಮಾಡಿ ಉಪ್ಪು ಸ್ಕ್ರಬ್ ನಲ್ಲಿ ಮಾಡುವಂತೆಯೆ ಇಲ್ಲಿಯು ಮಾಡಬೇಕು.
3. ಸಿಟ್ರಸ್ ಬಾಡಿ ಸ್ಕ್ರಬ್ : ತ್ವಚೆಯ ಸಂರಕ್ಷಣೆಗೆ ನಿಂಬೆಯನ್ನು ಬಳಸುವುದು ತುಂಬಾ ಒಳ್ಳೆಯದು. ಈ ನಿಂಬೆಯನ್ನು ಸ್ಕ್ರಬ್ ಮಾಡಲು ಸಹ ಬಳಸಬಹುದಾಗಿದೆ. ಇದರ ಸ್ಕ್ರಬ್ ಅನ್ನು ಈ ರೀತಿ ತಯಾರಿಸಬಹುದು.
1. ಬೆಲ್ಲ 1 ಚಮಚ ಬೆಲ್ಲ
2. ನಿಂಬೆರಸ 3 ಚಮಚ
3. ಕಲ್ಲುಪ್ಪು 1 ಚಮಚ
4. ಜೊಜೊಬಾ ಎಣ್ಣೆ 1/2 ಕಪ್
ವಿಧಾನ: ಬೆಲ್ಲದ ಪುಡಿ, ನಿಂಬೆ ರಸ, ಕಲ್ಲುಪ್ಪು, ಮತ್ತು ಎಣ್ಣೆಯನ್ನು ಮಿಶ್ರ ಮಾಡಿದ ತಕ್ಷಣವೆ ಮೈಗೆ ಹಚ್ಚಿ ಸ್ಕ್ರಬ್ ಮಾಡಬೇಕು. ಉಪ್ಪು ಮತ್ತು ಸಕ್ಕರೆ ಸಂಪೂರ್ಣವಾಗಿ ಕರುಗುವರೆಗೆ ಸ್ಮ್ರಬ್ ಮಾಡಬೇಕು.
4. ಸುವಾಸನೆಯ ಬಾಡಿ ಸ್ಕ್ರಬ್: ಈ ಬಾಡಿ ಸ್ಕ್ರಬ್ ಮಾಡುವುದರಿಂದ ದೇಹಕ್ಕೆ ಆರಾಮವೆನಿಸುವುದು.
ಬೇಕಾಗುವ ಸಾಮಗ್ರಿಗಳು:
1. ಲಾವಂಡರ್ ಎಣ್ಣೆ 1 ಚಮಚ
2. ಸಕ್ಕರೆ 1 ಚಮಚ
3. ಕಲ್ಲುಪ್ಪು 1 ಚಮಚ
4. ಆಲೀವ್ ಎಣ್ಣೆ 1/2 ಕಪ್
ಈ ಸಾಮಗ್ರಿಗಳನ್ನು ಬಳಸಿ ಸ್ಕ್ರಬ್ ಮಾಡಿದ 20 ನಿಮಿಷದ ಬಳಿಕ ತೊಳೆಯಬಹುದಾಗಿದೆ.



Click it and Unblock the Notifications
