Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಯೌವನದ ಸಂರಕ್ಷಣೆಗೆ ಎಣ್ಣೆಯ ರಕ್ಷಣೆ

ಜನರು ಯಾವಾಗಲು ಮಾರುಕಟ್ಟೆಯಲ್ಲಿ ವಯಸ್ಸನ್ನು ಮರೆಮಾಚುವ ಕ್ರೀಮ್ ಗಳು ಬಂದರೆ ಸಾಕು ಅದನ್ನು ಕೊಳ್ಳುತ್ತಾರೆ, ಸೌಂದರ್ಯಕ್ಕಾಗಿ ಬ್ಯೂಟಿ ಪಾರ್ಲರ್ ಗಳಿಗೆ ಹೋಗುತ್ತಾರೆ. ಆದರೆ ಮನೆಯಲ್ಲಿ ಕೆಲವು ಎಣ್ಣೆಗಳನ್ನು ಬಳಸಿ ಮಸಾಜ್ ಮಾಡಿದರೆ ಯೌವನದಲ್ಲಿ ಮುಪ್ಪು ಬರದಂತೆ ತಡೆಯುವುದು.
ಈ ಕೆಳಗೆ ಕೊಟ್ಟಿರುವ ಎಣ್ಣೆಗಳು ಅಕಾಲಿಕ ಮುಪ್ಪನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿವೆ.
1. ಬೆಣ್ಣೆ ಹಣ್ಣಿನ ಎಣ್ಣೆ ( ಅವಕಾಡೊ ಆಯಿಲ್) : ಮುಖದಲ್ಲಿ ಕಪ್ಪು ಕಲೆಗಳು ಉಂಟಾಗಿದ್ದರೆ ಈ ಎಣ್ಣೆ ಬಳಸಿ ಮಸಾಜ್ ಮಾಡಿದರೆ ಆ ಕಲೆಗಳು ಮಾಯವಾಗುತ್ತದೆ. ಇದನ್ನು ಪ್ರತಿನಿತ್ಯ ಬಳಸಿ ಮಸಾಜ್ ಮಾಡುವುದರಿಂದ ಮುಖದಲ್ಲಿ ಯೌವನ ಎದ್ದು ಕಾಣುವಂತೆ ಮಾಡುವುದು.
2. ಆಪ್ರಿಕಾಟ್ ಎಣ್ಣೆ: ಈ ಎಣ್ಣೆಯಲ್ಲಿ ವಿಟಮಿನ್ ಎ ಅಧೀಕವಿದ್ದು ಇದರಿಂದ ಮಸಾಜ್ ಮಾಡುತ್ತಿದ್ದರೆ ಮುಖದಲ್ಲಿ ಮತ್ತು ಮೈಯಲ್ಲಿ ಬಿದ್ದ ಗೆರೆಗಳನ್ನು ಹೋಗಲಾಡಿಸುತ್ತದೆ.
3. ಜೊಜೊಬಾ ಎಣ್ಣೆ: ಇದನ್ನು ಹಿಂದಿನ ಕಾಲದಲ್ಲಿ ಸಹ ಸೌಂದರ್ಯವರ್ಧನೆಗಾಗಿ ಬಳಸುತ್ತಿದ್ದರು, ಇದನ್ನು ಬಳಸಿ ಮಸಾಜ್ ಮಾಡುವುದರಿಂದ ತ್ವಚೆಯ ಸಮಸ್ಯೆಗಳು ಉಂಟಾಗುವುದಿಲ್ಲ.
4. ಆಲೀವ್ ಎಣ್ಣೆ: ಈ ಎಣ್ಣೆ ಹಾಕಿ ಮಸಾಜ್ ಮಾಡಿದರೆ ದೇಹದಲ್ಲಿ ರಕ್ತ ಸಂಚಲ ಚೆನ್ನಾಗಿ ಆಗಿ ಮುಖ ಮತ್ತು ಮೈ ಕಾಂತಿ ಹೆಚ್ಚುವುದು.
5. ತೆಂಗಿನ ಎಣ್ಣೆ: ತ್ವಚೆಯ ಅನೇಕ ಸಮಸ್ಯೆಗಳನ್ನು ತೆಂಗಿನ ಎಣ್ಣೆ ಬಳಸಿ ಹೋಗಲಾಡಿಸಬಹುದಾಗದೆ. ಇದು ಬ್ಯಾಕ್ಟರೀಯಾ ಮತ್ತು ಸೋಂಕುಗಳಿಂದ ರಕ್ಷಿಸುತ್ತದೆ.
ನಿಯಮತವಾದ ವ್ಯಾಯಾಮದ ಜೊತೆ ಈ ರೀತಿಯ ಎಣ್ಣೆಯಿಂದ ಮಸಾಜ್ ಮಾಡುತ್ತಿದ್ದರೆ ಅಕಾಲಿಕ ಮುಪ್ಪು ಉಂಟಾಗುವುದಿಲ್ಲ.



Click it and Unblock the Notifications
