Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪುಶ್ ಅಪ್ ಬ್ರಾ : ಇದು ಪುಷ್ಪಾಗೆ ಮಾತ್ರ!

ಏನಿದು ಪುಶ್ ಅಪ್ ಬ್ರಾ ? ಯಾವುದೇ ಸರ್ಜರಿಗಳ ಮೊರೆ ಹೋಗದೆ ಹಣ ಖರ್ಚುಮಾಡದೆ ನ್ಯಾಚುರಲ್ ನ್ಯಾಚುರಲ್ಲೋ ಎಂಬಂತೆ ಕಾಣಿಸಬಹುದಾದ ಈ ಪುಶ್ ಅಪ್ ಬ್ರಾ ಧರಿಸಿದರೆ ಸಾಕು ನಿಮ್ಮ. ಮುಂಭಾರ ಹೆಚ್ಚಾಗುತ್ತದೆ ಮತ್ತು ನೋಡಲಿಕ್ಕೆ ಚೆನ್ನಾಗಿಯೂ ಕಾಣಿಸುತ್ತೀರಿ.
ಪ್ರಸ್ತುತ ಪುಶ್ ಅಪ್ ಬ್ರಾ ತುಂಬಾ ಚಾಲ್ತಿಯಲ್ಲಿರುವ ಮಹಿಳೆಯರ ಒಳ ಉಡುಪು. ಈ ಒಳ ಉಡುಪನ್ನು ಧರಿಸುತ್ತಿರುವ ಮಹಿಳೆಯರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ. ಹಾಗೆಯೇ ಇದಕ್ಕೆ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ. ಸ್ತನಗಳ ಗಾತ್ರ ಹಿಗ್ಗಿದಂತೆ ಆಕರ್ಷಕವಾಗಿ ಕಾಣಬೇಕು ಎಂದಿದ್ದರೆ ಈ ಪುಶ್ ಅಪ್ ಬ್ರಾ ಆಯ್ಕೆ ನಿಮ್ಮದಿರಲಿ.
ಮೆತ್ತನೆಯ ಪ್ಯಾಡ್ ಗಳನ್ನು ಒಳಗೆ ಸೇರಿಸಿ ತಯಾರಿಸಲಾಗಿರುವ ಈ ಪುಶ್ ಅಪ್ ಬ್ರಾ ಸ್ತನಗಳ ಗಾತ್ರ ಹಿಗ್ಗಿದಂತೆ ಗೋಚರಿಸುತ್ತದೆ. ತುಂಬಾ ಮೆತ್ತಗೆ ಇರುವ ಈ ಒಳ ಉಡುಪು ಧರಿಸಲು ತುಂಬಾ ಕಂಫರ್ಟಬಲ್ ಎಂದು ಬೆಂಗಳೂರಿನ ಸಿಂಘ್ವಿ ಬ್ಯೂಟಿ ಪಾರ್ಲರ್ ನ ಫಿಲಿಪ್ ಮೆಡೋನ್ಸ್ ಅಭಿಪ್ರಾಯಪಡುತ್ತಾರೆ.
ಕೇವಲ ಹೊರಗೆ ತಿರುಗುವಾಗ ಮಾತ್ರ ಇದನ್ನು ಬಳಸಬೇಕು ಅಂತ ರೂಲ್ಸ್ ಏನಿಲ್ಲ. ದಿನ ಬಳಕೆಗೂ ಇದು ಉಪಯುಕ್ತ. ಬೈದ ವೇ, ಎಲ್ಲ ರೀತಿಯ ಉಡುಪಿಗೂ ಇದು ಹೊಂದುಕೊಳ್ಳುತ್ತದೆ. ಅದರಲ್ಲೂ ಲೋ ಕಟ್ ಶರ್ಟ್ ಗಳಿಗೆ ಮತ್ತು ಬ್ರಾಡ್ ನೆಕ್ ಇರುವ ಡ್ರೆಸ್ ಗಳಿಗೆ ಇದನ್ನು ತೊಟ್ಟುಕೊಳ್ಳಬಹುದು. ಈ ಒಳ ಉಡುಪು ಎಲ್ಲಾ ಸೈಜ್ ಗಳಲ್ಲಿಯೂ ಲಭ್ಯವಿದ್ದು, ಎಲ್ಲ ವಯೋಮಾನದ ಮಹಿಳೆಯರಿಗೂ ಸೂಕ್ತ. ದೊಡ್ಡ ಸ್ತನಗಳನ್ನು ಹೊಂದಿರುವವರೂ ಕೂಡ ಇದನ್ನು ತೊಟ್ಟುಕೊಂಡರೆ ತಪ್ಪೇನಿಲ್ಲ.



Click it and Unblock the Notifications
