Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಯೋಟಿನ್ vs ವಿಟಮಿನ್ ಡಿ: ಕೂದಲು ಉದುರುವುದು ತಡೆಗಟ್ಟಲು ಯಾವ ಸಪ್ಲಿಮೆಂಟ್ಸ್ ಬೆಸ್ಟ್?
ಕೂದಲು ಉದುರುವುದನ್ನು ತಡೆಗಟ್ಟಲು ವಿಟಮಿನ್ ಡಿ ಹಾಗೂ ಬಯೋಟಿನ್ ಸಹಕಾರಿ, ಈ ಎರಡರಲ್ಲಿ ಯಾವುದು ಒಳ್ಳೆಯದು? ಈ ಎರಡು ಸಪ್ಲಿಮೆಂಟ್ಸ್ ಜೊತೆಗೆ ತೆಗೆದುಕೊಳ್ಳಬಹುದಾ? ಎಂಬ ಪ್ರಶ್ನೆ ಹಲವರಲ್ಲಿದೆ, ನಿಮ್ಮ ಈ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರಿಸುವ ಪ್ರಯತ್ನ ಮಾಡಲಾಗಿದೆ ನೋಡಿ:
ಕೂದಲು ಉದುರುವುದು
ಕೂದಲು ಉದುರುವುದು ಬಹುತೇಕ ಜನರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಶ್ಯಾಂಪೂ, ಕಂಡೀಷನರ್ ಅಂತೆಲ್ಲಾ ಬದಲಾಯಿಸಿದರೂ ಕೂದಲು ಉದುರುವ ಸಮಸ್ಯೆಗೆ ಮಾತ್ರ ಪರಿಹಾರ ಸಿಕ್ಕಿರಲ್ಲ, ಕೂದಲು ಉದುರಲಾರಂಭಿಸಿದಾಗ ಕೆಲವರಂತೂ ತುಂಬಾನೇ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ, ಇದರಿಂದ ಕೂದಲು ಉದುರುವ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ಕೆಲವರು ಕೂದಲು ಉದುರುವುದನ್ನು ತಡೆಗಟ್ಟಲು ಸಪ್ಲಿಮೆಂಟ್ಸ್ ಒಳ್ಳೆಯದು ಎಂದು ಸಪ್ಲಿಮೆಂಟ್ಸ್ ತೆಗೆದುಕೊಂಡರೆ ಹೇಗೆ ಎಂದು ಯೋಚಿಸುತ್ತಾರೆ.

ಆದರೆ ಅವರ ಬಳಿ ಅದರ ಕುರಿತ ನಿಖರ ಮಾಹಿತಿ ಇರಲ್ಲ. ನೀವು ಯಾವುದೇ ಸಪ್ಲಿಮೆಂಟ್ಸ್ ತೆಗೆದುಕೊಳ್ಳುವ ಮುನ್ನ ವೈದ್ಯರನ್ನು ಭೇಟಿಯಾಗಿ ಅವರ ಸಲಹೆ ಪಡೆಯಲೇಬೇಕು. ಏಕೆಂದರೆ ನಿಮ್ಮ ದೇಹದ ಆರೋಗ್ಯ ಸ್ಥಿತಿ ಗಮನಿಸಿ ಅವರು ನಿಮಗೆ ಸೂಕ್ತ ಸಲಹೆ ಸೂಚನೆ ನೀಡುತ್ತಾರೆ. ಕೂದಲು ಉದುರುವುದು ತಡೆಗಟ್ಟಲು ಬಯೋಟಿನ್ ಹಾಗೂ ವಿಟಮಿನ್ ಡಿ ಪರಿಣಾಮಕಾರಿ, ಈ ಸಪ್ಲಿಮೆಂಟ್ಸ್ ಕುರಿತ ಮತ್ತಷ್ಟು ಮಾಹಿತಿ ನೋಡುವುದಾದರೆ...
ಕೂದಲಿನ ಆರೋಗ್ಯಕ್ಕೆ ಬಯೋಟಿನ್
ಬಯೋಟಿನ್ ಅಥವಾ ವಿಟಮಿನ್ ಬಿ7 ಇದು ಬಿ ಕಾಂಪ್ಲೆಕ್ಸ್ ವಿಟಮಿನ್ ಆಗಿದ್ದು ಕೂದಲನ್ನು ಬಲಪಡಿಸಲು ತುಂಬಾನೇ ಸಹಕಾರಿಯಾಗಿದೆ. ಇದರಲ್ಲಿ ಅಮೈನೋ ಆಮ್ಲ, ಪ್ರೊಟೀನ್ಸ್ ಇದ್ದು ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಿದೆ. National Library of Medicineನಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ ಇದು ಕೂದಲು ತೆಳುವಾಗುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ. ಇದನ್ನು 6 ತಿಂಗಳು ತೆಗೆದುಕೊಂಡರೆ ಉತ್ತಮ ಫಲಿತಾಂಶ ದೊರೆಯುವುದು. ಕೂದಲಿನ ಬುಡ ಬಲಪಡಿಸಲು ಹಾಗೂ ಕೂದಲು ಉದುರುವುದನ್ನು ತಡೆಗಟ್ಟಿ, ಕೂದಲು ತೆಳ್ಳಗಾಗುವುದನ್ನು ತಪ್ಪಿಸಲು ಸಹಕಾರಿಯಾಗಿದೆ.
ವಿಟಮಿನ್ ಡಿ
ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾದಾಗ ಕೂಡ ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ಮಹಿಳೆಯರಲ್ಲಿ ಕೂದಲು ಉದುರುವ ಸಮಸ್ಯೆ, ಬಕ್ಕತಲೆ, ತಲೆಯ ಕೆಲವೊಂದು ಭಾಗದಲ್ಲಿ ಅತಿಯಾಗಿ ಕೂದಲು ಉದುರುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ. ನೀವು ವಿಟಮಿನ್ ಡಿ ಅಧಿಕವಿರುವ ಆಹಾರಗಳನ್ನು ಸೇವಿಸಬೇಕು. ತುನಾ ಮೀನು, ಅಣಬೆ, ಮೊಟ್ಟೆ, ಹಾಲು, ಅಗಸೆ ಬೀಜ ಇವುಗಳಲ್ಲಿ ವಿಟಮಿನ್ ಡಿ ಸಿಗುತ್ತದೆ. ವೈದ್ಯರ ಸಲಹೆ ಪಡೆದ ಬಳಿಕ ವಿಟಮಿನ್ ಡಿ ಕೂಡ ಸೇವಿಸಬಹುದು. ಇದರಿಂದ ಕೂದಲು ಉದುರುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ.
ಬಯೋಟಿನ್ vs ವಿಟಮಿನ್ ಡಿ
ಬಯೋಟಿನ್ ಹಾಗೂ ವಿಟಮಿನ್ ಡಿಗೆ ಯಾವುದು ಒಳ್ಳೆಯದು ನೋಡುವುದಾದರೆ ಮೊದಲಿಗೆ ನಿಮಗೆ ಯಾವ ಕಾರಣಕ್ಕೆ ಕೂದಲು ಉದುರುತ್ತಿದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು, ಪೋಷಕಾಂಶದ ಕೊರತೆಯಿಂದ ಕೂದಲು ಉದುರುತ್ತಿದ್ದರೆ ವಿಟಮಿನ್ ಡಿ ಹಾಗೂ ಬಯೋಟಿನ್ ಎರಡೂ ಸಹಕಾರಿ. ಬಯೋಟಿನ್ ಹಾಗೂ ವಿಟಮಿನ್ ಡಿ ಕೂದಲಿನ ಬುಡವನ್ನು ಬಲಪಡಿಸಿ ಕೂದಲು ತೆಳುವಾಗುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ.
ವಿಟಮಿನ್ ಡಿ ಹಾಗೂ ಬಯೋಟಿನ್ ಜೊತೆಯಾಗಿ ತೆಗೆದುಕೊಳ್ಳಬಹುದೇ?
ನಿಮಗೆ ಇದು ಎರಡೂ ಗುಣವಿರುವ ಒಂದೇ ಮಾತ್ರೆ ಸಿಗುತ್ತದೆ ಅದನ್ನು ದಿನಕ್ಕೆ ಒಂದರಂತೆ ಅಥವಾ ಎರಡು ದಿನಕ್ಕೊಮ್ಮೆ ತೆಗೆದುಕೊಳ್ಳಬಹುದು. ನೀವು ಈ ಸಪ್ಲಿಮೆಂಟ್ಸ್ ತೆಗೆದುಕೊಳ್ಳುವ ಮುನ್ನ ಪರಿಣಿತರ ಸಲಹೆ ಪಡೆಯುವುದು ಅವಶ್ಯಕವಾಗಿದೆ.
ಬಯೋಟಿನ್ ಇರುವ ಆಹಾರಗಳು
- ಮೊಟ್ಟೆಯ ಹಳದಿ
- ಧಾನ್ಯಗಳು
- ನಟ್ಸ್
- ಲಿವರ್
- ಸಿಹಿಗೆಣಸು
- ಅಣಬೆ
- ಬಾಳೆಹಣ್ಣು
- ಬ್ರೊಕೋಲಿ
- ಬೆಣ್ಣೆಹಣ್ಣು



Click it and Unblock the Notifications