Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಮುಖ ಲಕ್ಷಣ ಕೆಡಿಸುವ ಬಂಗು ತಡೆಯೋದು ಹೇಗೆ? ಪರಿಹಾರ ಇಲ್ಲಿದೆ..!
ಮುಖದಲ್ಲಿ ಒಂದೇ ಒಂದು ಕಲೆ ಇಲ್ಲದಂತೆ, ಮುಖ ಬಿಳಿಯಾಗಿ ಕಾಣುವಂತೆ ಮಾಡಲು ನಾವು ಎಲ್ಲಾ ಪ್ರಯತ್ನ ಮಾಡುತ್ತೇವೆ. ಇದಕ್ಕಾಗಿ ಎಲ್ಲಾ ಕ್ರೀಮ್‌ಗಳು, ಪೌಡರ್, ಫೇಷಿಯಲ್, ಪಾರ್ಲರ್ ಅಂತೆಲ್ಲಾ ಹೋಗುತ್ತಾರೆ. ಅದ್ರಲ್ಲೂ ಯುವತಿಯರಿಗೆ ತಮ್ಮ ಮುಖ ಚೆನ್ನಾಗಿ ಕಾಣಿಸಬೇಕು ಎಂಬ ಆಸೆ ಇದ್ದೇ ಇರುತ್ತೆ. ಒಂದು ವೇಳೆ ಏನಾದರು ಕಲೆಗಳು ಆದರೆ ಆಕಾಶವೇ ತಲೆ ಮೇಲೆ ಬಿದ್ದಂತೆ ಮಾಡುತ್ತಾರೆ.
ಏಕೆಂದರೆ ಮುಖದಲ್ಲಿ ಕಲೆಯಾದರೆ ಎಲ್ಲರಂತೆ ಇರಲು ಸಾಧ್ಯವಾಗುವುದಿಲ್ಲ. ಅವರ ಆತ್ಮವಿಶ್ವಾಸ ಕೂಡ ಕಡಿಮೆ ಆಗುತ್ತದೆ. ಇದರಿಂದ ಅವರಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. ಮುಖ್ಯವಾಗಿ ಮುಖದಲ್ಲಿ ಬಂಗು ಉಂಟಾದರೆ ಎಲ್ಲಿಲ್ಲದ ಸಮಸ್ಯೆಯಾಗುತ್ತದೆ. ಈ ಬಂಗು ಸಮಸ್ಯೆ ಮುಖದಲ್ಲಿ ಹರಡಲು ಆರಂಭಿಸಿ ಇಡೀ ಮುಖಕ್ಕೆ ಹರಡಿ ಮುಖ ಹಾಳಾಗುತ್ತದೆ.

ಬಂಗು ಹಿಡಿಯುವುದಕ್ಕೆ ಹಲವು ಕರಣಗಳಿವೆ. ಹೈಪರ್ ಪಿಗ್ಮೆಂಟೇಶನ್ ಎಂದು ಕರೆಯಲ್ಪಡುವ ಈ ಸ್ಥಿತಿಯಲ್ಲಿ ಬಂಗು ಉಂಟಾಗಿರುತ್ತದೆ. ನಮ್ಮ ಚರ್ಮದಲ್ಲಿ ಮೆಲನಿನ್ ಉತ್ಪಾದನೆ ಪ್ರಮಾಣ ನಿಗದಿಗೊಂತಲೂ ಹೆಚ್ಚಾದಾಗ ಈ ಕಪ್ಪು ಚುಕ್ಕಿ ಚುಕ್ಕಿಯ ಕಲೆಗಳು ಮುಖದಲ್ಲಿ ಹರಡಲು ಆರಂಭಿಸುತ್ತದೆ. ಅದು ಕಣ್ಣಿನ ಸುತ್ತಲೂ ಆರಂಭವಾಗಿ ಮೂಗು, ಕೆನ್ನೆಯಲ್ಲಿ ಹರಡುತ್ತದೆ.
ಹೀಗೆ ಬಂಗು ಹಿಡಿಯಲು ನಾವು ಜೀವನ ಶೈಲಿ, ಆಹಾರ, ಸೂರ್ಯನ ಕಿರಣಗಳು, ಹಾರ್ಮೋನಲ್ ಬದಲಾವಣೆ ಹಾಗೂ ಅನುವಂಶೀಯ ಕಾರಣಗಳು ಕೂಡ ಇರಬಹುದು. ಈ ರೀತಿ ಪಿಂಗ್‌ಮೆಂಟೇಶನ್ ಉಂಟಾದಾಗ ಭಯದಲ್ಲೇ ಬದುಕುವರರನ್ನು ನಾವು ನೋಡಿದ್ದೇವೆ. ಹಾಗೆ ಪಾರ್ಲರ್‌ಗಳಿಗೆ ತೆರಳಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಆದ್ರೆ ಈ ಸಮಸ್ಯೆಯನ್ನು ನಾವು ಮನೆಯಲ್ಲೇ ನಿವಾರಣೆ ಮಾಡಬಹುದು. ಹಾಗಾದ್ರೆ ಮನೆಯಲ್ಲಿ ಇದಕ್ಕೆ ಮದ್ದು ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೆಸರು ಕಾಳು
ಜೇಷ್ಠಮಧು ಪುಡಿ
ಅರಶಿನ
ರೋಸ್ ವಾಟರ್ ಅಥವಾ ಹಾಲು ಇಲ್ಲವೆ ಮೊಸರು
ಮೊದಲು ಒಂದು ಬೌಲ್‌ನಲ್ಲಿ ಅಳತೆ ತೆಗೆದುಕೊಂಡ ಹೆಸರು ಕಾಳಿನ ಪುಡಿ ಹಾಕಿಕೊಳ್ಳಿ. ಹೆಸರು ಕಾಳನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಅನಂತರ ಇದನ್ನು ಒಂದು ಬೌಲ್‌ಗೆ ಹಾಕಿ ಅದಕ್ಕೆ ಅಷ್ಟೇ ಪ್ರಮಾಣದ ಜೇಷ್ಠಮಧು ಪುಡಿಯನ್ನು ಕೂಡ ಸೇರಿಸಿಕೊಳ್ಳಿ. ಹಾಗೆ ಎರಡನ್ನು ಮಿಕ್ಸ್ ಮಾಡಿಕೊಂಡು 2 ಚಮಚ ಅರಶಿಣ ಕೂಡ ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಬೇಕು. ಮಿಕ್ಸ್ ಮಾಡುವಾಗ ರೋಸ್ ವಾಟರ್, ಮೊಸರು ಅಥವಾ ಹಾಲಿನ ಕೆನೆ, ಹಾಲು ಯಾವುದಾದರೊಂದು ಬಳಸಿಕೊಳ್ಳಬಹುದು.
ಈ ಎಲ್ಲಾ ಅಂಶಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಸ್ವಲ್ಪ ಪೇಸ್ಟ್ ರೀತಿ ರೆಡಿ ಮಾಡಿಕೊಳ್ಳಿ. ನಂತರ ಈ ಕ್ರೀಮ್ ಅನ್ನು ನೀವು ಯಾವಾಗ ಬೇಕಾದರು ಮನೆಯಲ್ಲಿ ಹಚ್ಚಿಕೊಳ್ಳಬಹುದು. ಹಚ್ಚಿ 30 ನಿಮಿಷ ಹಾಗೆಯೇ ಬಿಟ್ಟು ತೊಳೆಯಬೇಕು. ನಿರಂತರವಾಗಿ ಈ ಕ್ರಮ ಉಪಯೋಗಿಸಿ ಪ್ಯಾಕ್ ಮಾಡಿದಾಗ ಬಂಗನ್ನು ಕಡಿಮೆ ಮಾಡಬಹುದು.
ಇದೊಂದು ಅಲ್ಲ ವಿಟಮಿನ್ ಸಿ ಹೆಚ್ಚಾಗಿರುವ ಆ್ಯಂಟಿ ಆಕ್ಸಿಡೆಂಟ್ಗಳಲ್ಲಿ ಒಂದಾದ ಈರುಳ್ಳಿಯನ್ನು ಕತ್ತರಿಸಿ ಈ ಕಲೆಗಳಿರುವ ಜಾಗದಲ್ಲಿ ಇಡುವುದರಿಂದಲೂ ಕೂಡ ಕಲೆಗಳು ನಿವಾರಣೆಯಾಗುತ್ತದೆ. ಬಂಗು ಸಹ ದುರಾಗಿ ಮುಖ ಮತ್ತೆ ಹೊಸದರಂತೆ ಹೊಳೆಯುತ್ತದೆ.



Click it and Unblock the Notifications