Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಉಪ್ಪು ನೀರಿನಿಂದ ಮುಖ ತೊಳೆದರೆ ಆಗುವ ಲಾಭವೇನು.? ಇದರ ಅನಾನುಕೂಲವೇನು ಗೊತ್ತಾ?
ಮುಖದ ಸೌಂದರ್ಯ ಎಷ್ಟು ಮುಖ್ಯ ಅಂದ್ರೆ ಯುವತಿಯರಂತಿ ಮುಖದ ಸೌಂದರ್ಯಕ್ಕೆ ಇನ್ನಿಲ್ಲದ ಪ್ರಾಮುಖ್ಯತೆ ನೀಡುತ್ತಾರೆ. ಆಕೆಯ ವ್ಯಕ್ತಿತ್ವದ ಕೈಗನ್ನಡಿಯಾಗಿ ಮುಖ ಯಾವಾಗಲು ಮುನ್ನುಡಿಯಾಗುತ್ತದೆ. ಹೀಗಾಗಿ ಮುಖದ ಕಾಂತಿ ಹೊಳೆಯುತ್ತಿರಬೇಕು ಅನ್ನೋದು ಪ್ರತಿಯೊಬ್ಬ ಮಹಿಳೆಯ ಆಸೆಯಾಗಿರುತ್ತೆ.
ಇದಕ್ಕಾಗಿ ಅವರು ವಿಧ ವಿಧದ ಕ್ರಿಮ್‌ಗಳು, ಬ್ಯೂಟಿ ಪ್ರಾಡಕ್ಟ್‌ಗಳ ಬಳಕೆ ಮಾಡುತ್ತಾರೆ. ಎಲ್ಲಾ ಯುವತಿಯರು ಹೀಗೆ ಬ್ಯೂಟಿ ಪ್ರಾಡಕ್ಟ್‌ಗಳ ಬಳಸುತ್ತಾರೆ ಎನ್ನಲಾಗುವುದಿಲ್ಲ. ಕೆಲವರು ತಮ್ಮ ಸೌಂದರ್ಯ ವೃದ್ಧಿಗೆ ಮನೆಯಲ್ಲೇ ಏನು ಮಾಡಬೇಕು ಅನ್ನೋದನ್ನು ತಿಳಿದಿರುತ್ತಾರೆ. ಮನೆಯಲ್ಲಿಯೇ ಸಿಗುವ ಕೆಲವು ಪದಾರ್ಥಗಳಿಂದ ನಮ್ಮ ತ್ವಚೆಯ ಆರೋಗ್ಯ ಮತ್ತು ಸೌಂದರ್ಯವನ್ನು ನಾವು ಕಾಪಾಡಿಕೊಳ್ಳಬಹುದು.

ಈ ಪದಾರ್ಥಗಳಲ್ಲಿ ಒಂದು ಉಪ್ಪು, ಹೌದು ನಿಮ್ಮ ಮುಖವನ್ನು ಉಪ್ಪಿನ ನೀರಿನಲ್ಲಿ ತೊಳೆಯುವುದರಿಂದ ಹಲವು ಲಾಭಗಳಿವೆ. ಹಾಗಾದ್ರೆ ಉಪ್ಪು ನೀರಿನಿಂದ ಮುಖ ತೊಳೆದರೆ ಏನೆಲ್ಲಾ ಲಾಭವಿದೆ. ಇದರ ಉಪಯೋಗವೇನು? ಇದರಿಂದಾಗುವ ಅನಾನುಕೂಲವೇನು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೊಡವೆಗಳ ನಿವಾರಣೆಗೆ ಸಹಕಾರಿ
ನಿಮ್ಮ ಮುಖದಲ್ಲಿ ಯಾವಾಗಲು ಮೊಡವೆಗಳು ಆಗುತ್ತಿದ್ದರೆ, ನೀವು ನಿಯಮಿತವಾಗಿ ಉಪ್ಪು ನೀರಿನಿಂದ ಮುಖ ತೊಳೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಉಪ್ಪಿನಲ್ಲಿರುವ ಸೋಡಿಯಂನ ಅಂಶವು ಮೊಡವೆಗಳ ನಿವಾರಣೆ ಮಾಡುವುದಲ್ಲದೆ ಕಲೆಗಳ ನಿವಾರಿಸಲಿದೆ. ಇದಕ್ಕಾಗಿ ಒಂದು ಬೌಲ್‌ನಲ್ಲಿ ನೀರು ತೆಗೆದುಕೊಂಡು ಅದಕ್ಕೆ ಒಂದು ಚಿಟಿಕೆಯಷ್ಟು ಉಪ್ಪು ಹಾಕಿ ಚೆನ್ನಾಗಿ ಕರಗುವಂತೆ ಮಾಡಬೇಕು. ಬಳಿಕ ಮುಖವನ್ನು ಆ ನೀರಿನಿಂದ ತೊಳೆಯಬೇಕು. ಹೀಗೆ ಒಂದು ವಾರದಿಂದ 15 ದಿನಗಳ ಕಾಲ ಮಾಡಿದರೆ ಇದರ ಪ್ರಯೋಜನ ಪಡೆಯಬಹುದು.
ಆಯಿಲ್ ಫೇಸ್‌ನ ನಿವಾರಣೆ
ನಿಮ್ಮ ತ್ವಚೆಯು ಆಯಿಲ್‌ಯುಕ್ತ ಆಗಿದ್ದರೆ ಉಪ್ಪು ನೀರು ನಿಮ್ಮ ಸಹಾಯಕ್ಕೆ ಬರಲಿದೆ. ಕೆಲವರ ತ್ವಚೆ ಎಣ್ಣೆಯುಕ್ತ ಅಂಶದಿಂದ ಕೂಡಿರುತ್ತದೆ. ಇಂತವರು ಉಪ್ಪು ನೀರಿನಿಂದ ಮುಖ ತೊಳೆಯುವುದು ಉತ್ತಮ. ಮುಖದಲ್ಲಿರುವ ಸಣ್ಣ ರಂಧ್ರಗಳ ಮೂಲಕ ಎಣ್ಣೆಯುಕ್ತ ಅಂಶ ತ್ವಚೆ ಮೇಲೆ ಬರುತ್ತಿರುತ್ತದೆ. ಆದರೆ ಉಪ್ಪು ನೀರು ಈ ರಂಧ್ರಗಳ ಮುಚ್ಚಲು ಸಹಕಾರಿಯಾಗಿದೆ. ಇದರಿಂದ ಹೊಳೆಯುವ ಕಾಂತಿ ನಿಮ್ಮದಾಗುತ್ತದೆ.
ಡೆಡ್ ಸ್ಪಾಟ್ ನಿವಾರಣೆ
ಮುಖದಲ್ಲಿ ಡೆಡ್ ಸ್ಪಾಟ್‌ಗಳಿರುತ್ತವೆ. ಅಂದರೆ ಮೊಡವೆಗಳ ಕಾರಣದಿಂದಾಗಿ ಇಲ್ಲವೆ ಬೇರೆ ಯಾವುದೋ ಕಾರಣಕ್ಕೆ ಮುಖದ ಮೇಲೆ ಕಪ್ಪು ಕಲೆಗಳಿರುತ್ತವೆ. ಆ ಚರ್ಮದ ಜೀವಕೋಶಗಳು ಸತ್ತ ಪರಿಣಾಮವಾಗಿ ಕಪ್ಪು ಕಲೆಯಾಗಿ ಆ ಸ್ಥಳದಲ್ಲಿ ಹೊಸ ಕೋಶ ಬೆಳೆಯಲು ಸಾಧ್ಯವಾಗಿರುವುದಿಲ್ಲ. ಆದರೆ ಉಪ್ಪು ನೀರಿನಿಂದ ನಿತ್ಯ ಮುಖ ತೊಳೆಯುತ್ತಿದ್ದರೆ ಈ ಡೆಡ್ ಸ್ಪಾಟ್‌ಗಳು ಪರಿಣಾಮಕಾರಿಯಾಗಿ ಮರೆಯಾಗುತ್ತದೆ.
ಉಪ್ಪು ನೀರಿನಿಂದ ಮುಖ ತೊಳೆದರೆ ಆಗುವ ಅನಾನುಕೂಲಗಳು
ತ್ವಚೆ ಒಣಗಬಹುದು
ಉಪ್ಪು ನೀರಿನಲ್ಲಿರುವ ಅಂಶವು ಮುಖದಲ್ಲಿರುವ ರಂಧ್ರಗಳ ಮುಚ್ಚುವುದರಿಂದ ಮುಖದ ತೇವ ಒಣಗಬಹುದು. ಇದರಿಂದ ನಿಮ್ಮ ತ್ವಚೆ ಒಣಗಿದಂತಾಗಿ ಗಢಸಾಗಿದೆ ಎನಿಸಬಹುದು. ಮೊದಲೇ ಡ್ರೈ ಸ್ಕಿನ್ ಹೊಂದಿರುವವರು ಉಪ್ಪು ನೀರಿನಿಂದ ಮುಖ ತೊಳೆದರೆ ಮತ್ತಷ್ಟು ಡ್ರೈ ಆಗಲಿದೆ.
ಸ್ಕಿನ್ ಇರಿಟೇಷನ್ ಮತ್ತು ಅಲರ್ಜಿ
ಕೆಲವರ ತ್ವಚೆ ತುಂಬಾನೆ ಸೂಕ್ಷ್ಮವಾಗಿರುತ್ತದೆ. ಅಂತವರು ಉಪ್ಪು ನೀರಿನಿಂದ ಮುಖ ತೊಳೆದಾಗ ಅವರಲ್ಲಿ ಅಲರ್ಜಿ ಅಥವಾ ಇರಿಟೇಷನ್ ಉಂಟಾಗಬಹುದು. ಇದು ತ್ವಚೆಯಲ್ಲಿ ಉರಿ ಅಥವಾ ಅಲರ್ಜಿಯಂತೆ ಉಂಟಾಗಬಹುದು. ಹೀಗಾದಾಗ ಅವರು ಉಪ್ಪು ನೀರಿನಿಂದ ಮುಖ ತೊಳೆಯುವುದನ್ನು ಬಿಡಬೇಕು.
ತ್ವಚೆ ತೆಳುವಾಗಬಹುದು
ಉಪ್ಪು ನೀರಿನಿಂದ ನಿರಂತರವಾಗಿ ಮುಖ ತೊಳೆಯುವುದರಿಂದ ತ್ವಚೆಯ ಮೇಲ್ಪರವು ತೆಳುವಾಗಬಹುದು. ಇದರಿಂದ ತ್ವಚೆಯ ಆರೋಗ್ಯ ಕಾಪಾಡುವ ರಾಡಿಕಲ್‌ಗಳಿಗೆ ಉಪ್ಪು ನೀರಿನಿಂದ ಹಾನಿಯಾಗಬಹುದು. ಇದರಿಂದ ನಿಮ್ಮ ತ್ವಚೆ ಕೆಂಪು ಬಣ್ಣಕ್ಕೆ ತಿರುಗಬಹುದು.



Click it and Unblock the Notifications
