Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
Beauty Tips: ಬೇಸಿಗೆ ಬಿಸಿಲಿನಿಂದ ಬೆನ್ನು ಕಪ್ಪಾಗಿದೆಯೇ..? ಸುಲಭದ ಪರಿಹಾರ ಇಲ್ಲಿದೆ..!
ಸೌಂದರ್ಯ ಮತ್ತು ಮಹಿಳೆಯರಿಗೆ ಅವಿನಾಭಾವ ಸಂಬಂಧವಿದೆ. ಸುಂದರವಾಗಿ ಕಾಣಿಸಬೇಕು ಅನ್ನೋದು ಎಲ್ಲಾ ಮಹಿಳೆಯರ ಆಸೆಯಾಗಿರುತ್ತೆ. ಯಾರದರು ಸುಂದರವಾಗಿ ಕಾಣಿಸುತ್ತಿದ್ದೀರಿ, ಅಥವಾ ಈ ಬಟ್ಟೆ ನಿಮಗೆ ಸುಂದರವಾಗಿ ಕಾಣಿಸುತ್ತೆ ಅಂದೆರೆ ಮಹಿಳೆಯರು ಸಂತಸ ಪಡುತ್ತಾರೆ. ಹೀಗಾಗಿ ಅವರು ಪ್ರತಿಯೊಂದು ವಿಚಾರದಲ್ಲು ಹೆಚ್ಚು ಗಮನವಿಡುತ್ತಾರೆ.
ತಾವು ಬಳಸುವ ವಸ್ತುಗಳಾದ ಬಟ್ಟೆಯಿಂದ ಹಿಡಿದು ಮೇಕ್‌ಅಪ್, ಚಪ್ಪಲಿ, ಆಭರಣ ಹೀಗೆ ಎಲ್ಲಾ ವಸ್ತುಗಳ ವಿಚಾರದಲ್ಲೂ ಅವರು ಹೆಚ್ಚು ಗಮವಿಡುತ್ತಾರೆ. ಎಲ್ಲಾದರ ಹೊರ ಹೋಗಬೇಕು ಎಂದಾದ ರೆಡಿ ಆಗಲು ಕೂಡ ಸಮಯ ತೆಗೆದುಕೊಳ್ಳುತ್ತಾರೆ. ಹೀಗಾಗಿ ಸೌಂದರ್ಯಕ್ಕೆ ಮತ್ತೊಂದು ಹೆಸರು ಮಹಿಳೆ ಎಂಬ ಮಾತಿದೆ.

ಹೀಗೆ ಸೌಂದರ್ಯ ಕಾಪಾಡಿಕೊಳ್ಳುವ ಮಹಿಳೆಯರಲ್ಲಿ ಈ ಬೇಸಿಗೆ ಅನ್ನೋದು ಅವರನ್ನು ಸಂಕಷ್ಟಕ್ಕೆ ತಳ್ಳುತ್ತದೆ. ಅದರಲ್ಲೂ ಸೀರೆ ಉಡುವ ಮಹಿಳೆ ಒಂದಿಷ್ಟು ಹೆಚ್ಚಿನ ಸಮಸ್ಯೆ ಅನುಭವಿಸುತ್ತಾಳೆ. ಬೇಸಿಗೆಯಲ್ಲಿ ಸೀರೆ ಉಟ್ಟು ಬಿಸಿಲಿಗೆ ಬಂದಾಗ ಆಕೆಯ ಬೆನ್ನು ಸುಡುವುದು ಸಾಮಾನ್ಯ. ಬೆನ್ನಿನ ಮೇಲೆ ಯಾವ ಬಟ್ಟೆಯ ರಕ್ಷಣೆ ಇರದ ಕಾರಣ ಸೂರ್ಯ ಕಿರಣಗಳು ನೇರವಾಗಿ ಚರ್ಮದ ಹಾನಿಗೆ ಕಾರಣವಾಗುತ್ತೆ.
ಹೀಗಾಗಿ ಬೇಸಿಗೆಯಲ್ಲಿ ಬೆನ್ನು ಕಪ್ಪಾಗುವುದು ನಾವು ನೋಡಬಹುದು. ಉಳಿದ ಕಾಲಕ್ಕಿಂತ ಬೇಸಿಗೆಯಲ್ಲಿ ಬೆನ್ನು ಕಪ್ಪು ಕಲೆಗೆ ತಿರುಗುತ್ತೆ. ಅದರಲ್ಲೂ ಸಿರೆ ಧರಿಸುವ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ನೋಡಬಹುದು. ಬೆನ್ನನ್ನು ನಾವು ನೋಡದೇ ಇರುವ ಕಾರಣ ಬಿಸಿಲಿನ ಹಾನಿ ನಮ್ಮ ಕಣ್ಣಿಗೆ ಬೀಳುವುದಿಲ್ಲ. ಆದ್ರೆ ಹಿಂದಿನಿಂದ ನೋಡಿದವರಿಗೆ ಬೆನ್ನಿನ ಭಾಗ ಕಪ್ಪಾಗುವುದು, ಕಲೆಯಾಗಿರುವುದು ಕಾಣಿಸಲಿದೆ.
ಹಾಗಾದ್ರೆ ಬೇಸಿಗೆಯಲ್ಲಿ ಈ ರೀತಿ ಬೆನ್ನು ಕಪ್ಪಾಗುವುದನ್ನು ತಡೆಯಲು ಏನು ಮಾಡಬೇಕು? ಕಪ್ಪಾಗಿರುವ ಬೆನ್ನಿಗೆ ಯಾವ ರೀತಿಯ ಪರಿಹಾರ ಮಾಡಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸನ್‌ಸ್ಕ್ರೀನ್ ಕೈ ಮುಖಕ್ಕೆ ಮಾತ್ರವಲ್ಲ
ಬೇಸಿಗೆಯಲ್ಲಿ ಉತ್ತಮ ಬ್ರಾಂಡ್‌ನ ಸನ್‌ಸ್ಕ್ರೀನ್ ಬಳಸುವುದು ಅತ್ಯುತ್ತಮ ಆದ್ರೆ ಕೆಲವರು ಈ ಸನ್ಸ್‌ಸ್ಕ್ರಿನ್ ಅನ್ನು ಮುಖ ಹಾಗೂ ಕೈಗೆ ಮಾತ್ರ ಹಚ್ಚಿಕೊಳ್ಳುತ್ತಾರೆ. ಸೂರ್ಯನ ಬೆಳಕು ಬೀಳುವ ದೇಹದ ಭಾಗಕ್ಕೆ ಈ ಲೋಷನ್ ಹಚ್ಚಿಕೊಳ್ಳಬೇಕು. ಅದರಲ್ಲೂ ಸೀರೆ ಧರಿಸುವವರು ತಮ್ಮ ಬೆನ್ನಿಗೆ ಹಚ್ಚಿಕೊಳ್ಳಬಹುದು. ಇದರಿಂದ ಸೂರ್ಯನ ಕಿರಣದಿಂದ ಆಗುವ ಹಾನಿ ತಡೆಯಬಹುದು.
ಅರಶಿಣ ಜೇನು ತುಪ್ಪ
ಒಂದು ವೇಳೆ ನಿಮ್ಮ ಬೆನ್ನು ಸುಡುವ ಬಿಸಿಲಿನಿಂದ ಕಪ್ಪಾಗಿದ್ದರೆ ಅಲ್ಲಿ ಅರಶಿಣ ಹಾಗೂ ಜೇನುತುಪ್ಪದ ಮಿಶ್ರಣದಿಂದ ಡಾರ್ಕ್ ಸ್ಪಾಟ್ ಹೋಗಲಾಡಿಸಬಹುದು. ಬೆನ್ನಿನ ಭಾಗದಲ್ಲಿ ಡಿ ಟ್ಯಾನಿಂಗ್ ಮಾಡಲು ಅರಶಿಣ ಹಾಗೂ ಜೇನುತುಪ್ಪನ್ನು ಒಂದು ಬೌಲ್‌ನಲ್ಲಿ ಮಿಶ್ರಣ ಮಾಡಿ ಅದನ್ನು ಬೆನ್ನಿನ ಭಾಗಕ್ಕೆ ಹಚ್ಚಿ ನಂತರ ತೊಳೆಯಬಹುದು. ಇದರಿಂದ ಕಪ್ಪು ಕಲೆಗಳು ನಿವಾರಣೆಯಾಗುತ್ತೆ.
ಸೌತೆಕಾಯಿ ಹಾಗೂ ಆಲೂಗಡ್ಡೆ ಸ್ಕ್ರಬಿಂಗ್
ಸೌತೆಕಾಯಿಯನ್ನು ಕಣ್ಣು ಸುತ್ತಲಿನ ಕಪ್ಪು ಕಲೆಗಳ ನಿವಾರಣೆಗೆ ಬಳಸುವುದು ನೀಡುವ ನೋಡಿರಬಹುದು. ಅದೇ ರೀತಿ ಸೌತೆಕಾಯಿ ಕತ್ತರಿಸಿ ಬೆನ್ನಿನ ಮೇಲೆ ಸೌತೆಕಾಯಿ ಮತ್ತು ಆಲೂಗಡ್ಡೆಯ ಸ್ಕ್ರಬಿಂಗ್ ಮಾಡುವುದು ಕೂಡ ಕಪ್ಪು ಕಲೆಗಳ ನಿವಾರಣೆಗೆ ಸೂತ್ರವಾಗಿದೆ. ಹಾಗೆ ನಿಮ್ಮ ಚರ್ಮದ ಟೋನ್‌ಗೆ ಹೊಂದಿಕೆಯಾಗುವ ಕನ್ಸೀಲರ್ ಬಳಸಿ ನೀವು ಸ್ಕಾರ್ಸ್ ಮತ್ತು ಯಾವುದೇ ರೀತಿಯ ಪಿಗ್ಮೆಂಟೇಶನ್‌ಗೆ ಒಳಗಾಗಿದ್ದರೆ ಅದನ್ನು ಕೂಡ ನಿವಾರಿಸಬಹುದು.
ಸೀರೆ ಉಡುವ ಶೈಲಿ ಬದಲಿಸಿ
ಬಿಸಿಲಿಗೆ ಹೋಗುವಾಗ ಸೀರೆ ನಿಮ್ಮ ಬೆನ್ನಿನ ಭಾಗವನ್ನೂ ಕೂಡ ಆವರಿಸಿಕೊಳ್ಳುವಂತೆ ಸೆರಗನ್ನು ಮಾಡಿಕೊಳ್ಳಿ. ಇದರಿಂದ ಸೂರ್ಯನ ಕಿರಣಗಳು ನೇರವಾಗಿ ಬೆನ್ನಿನ ಭಾಗಕ್ಕೆ ಬೀಳುವುದು ತಪ್ಪಲಿದೆ.



Click it and Unblock the Notifications
