Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Beauty Tips: ಸುಂದರವಾದ ಕಾಂತಿಯುತ ತ್ವಚೆಗೆ ದೀಪಿಕಾ ಪಡುಕೋಣೆ ಟಿಪ್ಸ್‌ಗಳಿವು..!
ಬಾಲಿವುಡ್ ನಟಿ ಇತ್ತೀಚಿಗೆ ಮಗುವಿಗೆ ಜನ್ಮ ನೀಡಿರುವ ದೀಪಿಕಾ ಪಡುಕೋಣೆ ಯಾರಿಗೆ ಗೊತ್ತಿಲ್ಲಾ ಹೇಳಿ. ರಣ್‌ವೀರ್ ಸಿಂಗ್ ಕೈ ಹಿಡಿದ ಆಕೆ ಸಿನಿಮಾ ರಂಗದಲ್ಲಿ ಯಶಸ್ಸು ಕಂಡ ನಟಿ. ಕನ್ನಡದಿಂದ ತಮ್ಮ ಸಿನಿ ಕೆರಿಯರ್ ಆರಂಭಿಸಿದ ಆಕೆ ಈಗ ಬಾಲಿವುಡ್‌ನಲ್ಲಿ ಟಾಪ್ ಹಿರೋಯಿನ್‌ಗಳ ಸಾಲಿನಲ್ಲಿ ನಿಲ್ಲುವ ಬ್ಯೂಟಿ.
ಸದ್ಯ ಆಕೆ ಈಗ ತಾಯಿಯಾಗಿರುವ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಆದರೆ ಈ ಮೊದಲು ವರ್ಷದಲ್ಲಿ ಒಂದೆರಡು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿ ಅವರು ಸಿನಿಮಾದಿಂದ ಫೇಮಸ್ ಆಗಿದ್ದೇ ಹೆಚ್ಚು. ರಾಜ್ಯಕ್ಕೂ ಆಗಾಗ ಭೇಟಿ ನೀಡುವ ಅವರಿಗೆ ಬೆಂಗಳೂರು ಅಂದರೆ ಎಲ್ಲಿಲ್ಲದ ಪ್ರೀತಿ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಒಂದು ಕಲೆ ಇಲ್ಲದ ಅವರ ಮುಖ ಕಾಂತಿ ಹೇಗೆ ಇಟ್ಟುಕೊಂಡಿದ್ದಾರೆ ಎಂಬುದು ಹಲವರ ಪ್ರಶ್ನೆಯಾಗಿದೆ. ಅದರಲ್ಲು ಮದುವೆಯಾಗಿ ಮಗುವಾದರೂ ಅವರ ಸೌಂದರ್ಯ ಮಾತ್ರ ಕಿಂಚಿತ್ತು ಕಡಿಮೆಯಾದಂತೆ ಕಾಣುತ್ತಿಲ್ಲ. ಹೀಗಾಗಿ ಅವರ ಸೌಂದರ್ಯದ ಗುಟ್ಟೇನು ಎಂಬುದು ಎಲ್ಲರ ಕುತೂಹಲ. ಬಾಲಿವುಡ್‌ನ ಪ್ರಮುಖ ನಟಿ ಮತ್ತು ಫ್ಯಾಷನ್ ಐಕಾನ್‌ನ ತ್ವಚೆಯ ದಿನಚರಿಯು ಅನೇಕರಿಗೆ ಆಕರ್ಷಣೆಯ ವಿಷಯವಾಗಿ ಉಳಿದಿದೆ. ಆಕೆಯ ರೆಡ್ ಕಾರ್ಪೆಟ್‌ನಿಂದ ಹಿಡಿದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳವರೆಗೆ, ಅಭಿಮಾನಿಗಳು ಯಾವಾಗಲೂ ಅವಳ ಹೊಳೆಯುವ ಮೈಬಣ್ಣದ ಹಿಂದಿನ ರಹಸ್ಯಗಳನ್ನು ಕಂಡುಹಿಡಿಯಲು ಉತ್ಸುಕರಾಗಿದ್ದಾರೆ.
ಆದ್ರೆ ಇದಕ್ಕೆಲ್ಲ ಅವರು ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಉತ್ತರ ನೀಡಿದ್ದರು. ಕೆಲ ತಿಂಗಳ ಹಿಂದೆ ಹಲವು ಪೋಸ್ಟ್‌ಗಳ ಮೂಲಕ ಅವರು ಬ್ಯೂಟಿ ಟಿಪ್ಸ್‌ಗಳನ್ನು ಹಂಚಿಕೊಂಡಿದ್ದರು. ಅಂತಹ ಪ್ರಮುಖ ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ.
ಮಲಗುವ ಮುನ್ನ ಮೇಕ್‌ಅಪ್ ಸಂಪೂರ್ಣ ತೆಗೆಯಿರಿ
ದೀಪಿಕಾ ಪಡುಕೋಣೆ ಶೂಟಿಂಗ್ ಇರಲಿ ಅಥವಾ ಯಾವುದೇ ಕಾರ್ಯಕ್ರಮಕ್ಕೆ ಹೋಗಿ ಮನೆಗೆ ಬಂದು ಮೇಕ್ ಇಟ್ಟುಕೊಂಡು ಮಲಗುತ್ತಿರಲಿಲ್ಲವಂತೆ. ಆ ದಿನ ಎಷ್ಟೇ ತಡವಾಗಿದ್ದರು ಕೂಡ ಮೇಕ್ ಅಪ್ ತೆಗೆದು ಮಲಗುತ್ತಿದ್ದರಂತೆ. ಇದು ಮುಖದಲ್ಲಿ ಕಾಂತಿ ಉಳಿಯಲು ಸಹಾಯ ಮಾಡುತ್ತದೆ ಎಂದಿದ್ದಾರೆ ಅವರು, ಮುಖದಲ್ಲಿನ ಚರ್ಮದ ರಂಧ್ರಗಳು ತೆರೆದುಕೊಳ್ಳಲು ರಾತ್ರಿ ಹೊತ್ತು ಸೂಕ್ತ ಸಮಯವಾಗಿರುತ್ತದೆ ಎಂದು ವಿವರಿಸುತ್ತಾರೆ.
ಸನ್‌ಸ್ಕ್ರೀನ್ ಮರೆಯಬೇಡಿ
ಕೆಲವರು ಬಿಸಿಲು ಇದ್ದಾಗ ಮಾತ್ರ ಸನ್‌ಸ್ಟ್ರೀನ್ ಹಚ್ಚುವುದನ್ನು ಮಾಡುತ್ತಾರೆ, ಆದ್ರೆ ಹೀಗೆ ಮಾಡಬಾರದಂತೆ. ಬಿಸಿಲು ಇರಿದಿದ್ದರೂ ಕೂಡ ಸನ್‌ಸ್ಕ್ರೀನ್ ಹಚ್ಚಬೇಕು. ಮನೆಯಿಂದ ಹೊರಬರುವ ಮುನ್ನ ಮರೆಯದೆ ಸನ್‌ಸ್ಟ್ರೀನ್ ಬಳಸಿ ಎಂದು ದೀಪಿಕಾ ಸಲಹೆ ನೀಡುತ್ತಾರೆ. ದೀಪಿಕಾ ಅವರು ಬೇಸಿಗೆ ಅಥವಾ ಚಳಿಗಾಲದ ಸಮಯದಲ್ಲಿ ಒಳಾಂಗಣ ಅಥವಾ ಹೊರಾಂಗಣವನ್ನು ಲೆಕ್ಕಿಸದೆ ಪ್ರತಿದಿನ ಎರಡು ಬಾರಿ ಶ್ರದ್ಧೆಯಿಂದ ಸನ್‌ಸ್ಕ್ರೀನ್ ಅನ್ನು ಹಚ್ಚಿಕೊಳ್ಳುತ್ತಿದ್ದರಂತೆ.
ಐಸ್ ನೀರಿನಲ್ಲಿ ಮುಖವನ್ನು ಅದ್ದಿ ಇಡುವುದು
ದೀಪಿಕಾ ಪಡುಕೋಣೆ ತನ್ನ ಮುಖವನ್ನು ತಣ್ಣೀರಿನಲ್ಲಿ ಮುಳುಗಿಸಿದ ವಿಡಿಯೋ ಹಂಚಿಕೊಂಡಿದ್ದರು. ಈ ಅಭ್ಯಾಸವು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ, ಪಫಿನೆಸ್ ಅನ್ನು ಕಡಿಮೆ ಮಾಡುತ್ತದೆ ಮತ್ತು ರಂಧ್ರಗಳನ್ನು ಬಿಗಿಗೊಳಿಸುತ್ತದೆ, ಚರ್ಮವು ನವ ಯೌವನ ಪಡೆಯುತ್ತದೆ ಮತ್ತು ಪುನಶ್ಚೇತನಗೊಳ್ಳುತ್ತದೆ. ಐಸ್ ವಾಟರ್ ಥೆರಪಿ ಉರಿಯೂತವನ್ನು ಶಮನಗೊಳಿಸಲು, ಕೆಂಪು ಬಣ್ಣವನ್ನು ನಿವಾರಿಸಲು, ರಕ್ತಪರಿಚಲನೆಯನ್ನು ಹೆಚ್ಚಿಸಲು ಮತ್ತು ನಿಮಗೆ ಕಾಂತಿಯುತ ಮೈಬಣ್ಣವನ್ನು ಒದಗಿಸಲು ಸಹಾಯ ಮಾಡುತ್ತದೆ.
ಕೂದಲಿಗೆ ತೆಂಗಿನ ಎಣ್ಣೆ ಬಳಸುವುದು
ದೀಪಿಕಾಳ ಮತ್ತೊಂದು ವಿಡಿಯೋದಲ್ಲಿ ಅವರು ತಮ್ಮ ಕೂದಲಿಗೆ ತೆಂಗಿನ ಎಣ್ಣೆ ಹಚ್ಚುವುದು ನೋಡಬಹುದು. ಅವರು ತಮ್ಮ ಕೂದಲು ಸುಂದರವಾಗಿಸಲು ದುಬಾರಿ ಬೆಲೆಯ ಎಣ್ಣೆ ಹಚ್ಚುತ್ತಿರಲಿಲ್ಲ. ಸಾಮಾನ್ಯ ಕೊಬ್ಬರಿ ಎಣ್ಣೆ ಹಚ್ಚಿ ಮಸಾಜ್ ಮಾಡುತ್ತಿದ್ದರಂತೆ, ಮಹಿಳೆಯರ ಸೌಂದರ್ಯ ಎಂದರೆ ಅದರು ಬರಿ ಮುಖವಲ್ಲ ಕೂದಲಿನ ಸೌಂದರ್ಯ ಕೂಡ ಅಷ್ಟೇ ಮುಖ್ಯವಾಗಿತ್ತು.



Click it and Unblock the Notifications
