Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
Beauty Tips: ಮುಖದ ಮೇಲಿನ ಚಿಕ್ಕ ರಂಧ್ರಗಳು ಮುಖ ಹಾಳು ಮಾಡಿದ್ಯಾ? ಇಲ್ಲಿವೆ ಸುಲಭದ ಪರಿಹಾರ
ನಿಮ್ಮ ಮುಖದಲ್ಲಿ ಮೊಡವೆಗಳಾಗಿ ಕಲೆಗಳಾಗುವುದು ನೋಡಬಹುದು. ಹಾಗೆ ಕಲೆಗಳ ಜೊತೆಗೆ ಸಣ್ಣ ಸಣ್ಣ ತೂತುಗಳು ಉಂಟಾಗಿ ಮುಖ ಕೆಟ್ಟದಾಗಿ ಕಾಣಿಸುವುದರಿಂದ ನಿಮಗೆ ಚಿಂತೆ ಕಾಡುತ್ತಿರಬಹುದು. ಮುಖದ ಕಾಂತಿ ಹಾಳಾಗುವ ಜೊತೆಗೆ ಈ ರಂಧ್ರದಂತಹ ರಚನೆಗಳು ನಿಮಗೆ ತಲೆ ನೋವು ತರಬಹುದು. ಹಾಗೆ ಮುಖದ ಈ ಕಲೆಗಳ ಹೋಗಲಾಡಿಸಲು ನೀವು ಹಲವು ರೀತಿಯ ಕ್ರೀಮ್‌ಗಳನ್ನು ಬಳಸಿರಬಹುದು.
ಒಂದಲ್ಲಾ ಒಂದು ರೀತಿಯಲ್ಲಿ ಮುಖದ ಮೇಲಿನ ಕಲೆಗಳು ನಿಮಗೆ ಕಿರಿಕಿರಿ ಉಂಟು ಮಾಡುತ್ತಿರಬಹುದು. ಮುಖದ ಮೇಲಿನ ರಂಧ್ರಗಳು ತೆರೆದಿದ್ದರೆ ಅದು ವ್ಯಕ್ತಿಯ ಸೌಂದರ್ಯವನ್ನು ಹಾಳು ಮಾಡುವುದಲ್ಲದೆ, ಅವರ ಆತ್ಮವಿಶ್ವಾಸದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ ಕೆಲವು ಫೇಸ್ ಪ್ಯಾಕ್‌ಗಳನ್ನು ಅನ್ವಯಿಸುವ ಮೂಲಕ ಈ ತೆರೆದ ರಂಧ್ರಗಳನ್ನು ಕಡಿಮೆ ಮಾಡಬಹುದು.

ಅದನ್ನೂ ನಮ್ಮ ಅಡುಗೆಮನೆಯಲ್ಲಿರುವ ಕೆಲವು ಸರಳ ನೈಸರ್ಗಿಕ ಪದಾರ್ಥಗಳೊಂದಿಗೆ ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು. ನೈಸರ್ಗಿಕವಾಗಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳುವುದು ಅಥವಾ ಮುಖದಲ್ಲಿನ ರಂಧ್ರಗಳ ನಿವಾರಣೆಗೆ ಮನೆಯಲ್ಲೂ ಪರಿಹಾರ ಮಾಡಿಕೊಳ್ಳಬಹುದು. ತೆರೆದ ಈ ರಂಧ್ರಗಳನ್ನು ಸರಿಪಡಿಸಲು ಮನೆಯಲ್ಲಿ ಫೇಸ್‌ಪ್ಯಾಕ್ ಮಾಡಿಕೊಳ್ಳುವ ಕುರಿತು ತಿಳಿದುಕೊಳ್ಳೋಣ.
ಮುಲ್ತಾನಿ ಮಿಟ್ಟಿ ಮತ್ತು ರೋಸ್ ವಾಟರ್ ಫೇಸ್ ಪ್ಯಾಕ್
ಈ ಫೇಸ್ ಪ್ಯಾಕ್‌ಗಾಗಿ ಒಂದು ಬಟ್ಟಲಿನಲ್ಲಿ 2 ಚಮಚ ಮುಲ್ತಾನಿ ಮಿಟ್ಟಿ ಮತ್ತು 1 ಚಮಚ ರೋಸ್ ವಾಟರ್ ಅನ್ನು ಬೆರೆಸಿ ಪೇಸ್ಟ್ ಮಾಡಿ. ನಂತರ ಅದನ್ನು ಮುಖದ ಮೇಲೆ ಸಮವಾಗಿ ಹಚ್ಚಿ 15-20 ನಿಮಿಷಗಳ ಕಾಲ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ.
ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ 2 ಬಾರಿ ಬಳಸುವುದರಿಂದ, ಚರ್ಮದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಇದು ಚರ್ಮದ ಮೇಲಿರುವ ಸಣ್ಣ ರಂಧ್ರಗಳ ನಿವಾರಣೆಗೆ ಸಹಕಾರಿಯಾಗಲಿದೆ.
ಮೊಟ್ಟೆಯ ಬಿಳಿಭಾಗ ಮತ್ತು ನಿಂಬೆ ರಸದ ಫೇಸ್ ಪ್ಯಾಕ್
ಈ ಫೇಸ್ ಪ್ಯಾಕ್ ಮಾಡಲು ಒಂದು ಒಂದು ಬೌಲ್‌ನಲ್ಲಿ ಮೊಟ್ಟೆಯ ಬಿಳಿಭಾಗವನ್ನು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ 1 ಚಮಚ ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿ, ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
ಈ ಫೇಸ್ ಪ್ಯಾಕ್ ಮಾಡಿದರೆ ರಂಧ್ರಗಳು ಬಿಗಿಯಾಗುತ್ತವೆ. ಹಾಗೆ ನಿಂಬೆರಸವು ಮುಖವನ್ನು ಮತ್ತಷ್ಟು ಕಾಂತಿಯುತವಾಗಿ ಮಾಡಲಿವೆ.
ಟೊಮೆಟೊ ಫೇಸ್ ಪ್ಯಾಕ್
ಟೊಮೆಟೊ ಫೇಸ್ ಪ್ಯಾಕ್ ಮಾಡಲು ನೀವು ಮೊದಲು ಹಣ್ಣು ಟೊಮೆಟೋವನ್ನು ಪುಡಿಮಾಡಿಕೊಳ್ಳಬೇಕು. ನಂತರ ಅದನ್ನು ನಿಮ್ಮ ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ನಿಮ್ಮ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ಫೇಸ್ ಪ್ಯಾಕ್ ಅನ್ನು ಆಗಾಗ್ಗೆ ಬಳಸುವುದರಿಂದ, ನಿಮ್ಮ ಮುಖದ ಮೇಲಿನ ರಂಧ್ರಗಳು ಮುಚ್ಚಿಕೊಳ್ಳಲು ಆರಂಭಿಸುತ್ತವೆ. ಇದು ನಿಮ್ಮ ಚರ್ಮವು ಎಣ್ಣೆಯನ್ನು ಉತ್ಪಾದಿಸದಂತೆ ತಡೆಯಲಿದೆ.
ಜೇನುತುಪ್ಪ ಮತ್ತು ನಿಂಬೆ ಫೇಸ್ ಪ್ಯಾಕ್
ಈ ಫೇಸ್ ಪ್ಯಾಕ್ ಮಾಡಲು ಒಂದು ಬೌಲ್‌ನಲ್ಲಿ 2 ಚಮಚ ಜೇನುತುಪ್ಪವನ್ನು ತೆಗೆದುಕೊಂಡು 1 ಚಮಚ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ. ನಂತರ ಅದನ್ನು ನಿಮ್ಮ ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ಈ ಫೇಸ್ ಪ್ಯಾಕ್ ನಲ್ಲಿರುವ ಜೇನುತುಪ್ಪವು ಚರ್ಮವನ್ನು ತೇವಗೊಳಿಸುತ್ತದೆ ಮತ್ತು ನಿಂಬೆ ರಂಧ್ರಗಳನ್ನು ಬಿಗಿಗೊಳಿಸುತ್ತದೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.



Click it and Unblock the Notifications
