Latest Updates
-
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ!
ಮರಗೆಣಸು ಫೇಸ್ ಫ್ಯಾಕ್‌ನಲ್ಲಿ ಅಡಗಿದೆ ಸೌಂದರ್ಯದ ಗುಟ್ಟು!
ಮರಗೆಣಸು ಬಗ್ಗೆ ಹೆಚ್ಚಿನವರಿಗೆ ಗೊತ್ತಿರ್ಲಿಕ್ಕಿಲ್ಲ. ಕೇರಳದಲ್ಲಿ ಹೆಚ್ಚಾಗಿ ಬೆಳೆಸ್ತಾರೆ ಹಾಗೂ ಹೆಚ್ಚಾಗಿ ಸೇವಿಸ್ತಾರೆ. ನಮ್ಮಲ್ಲೂ ಕೆಲಭಾಗಗಳಲ್ಲಿ ಇದನ್ನು ಬೆಳಯಲಾಗುತ್ತದೆ. ಮರಗೆಣಸಿನ ಸಾಂಬಾರು, ಪಲ್ಯ ತಯಾರಿಸಿ ತಿನ್ನಬಹುದು. ಇಲ್ಲದಿದ್ದರೆ ಹಾಗೆಯೇ ಇದನ್ನು ಉಪ್ಪು ಹಾಕಿ ಬೇಯಿಸಿ ತಿಂದರೂ ರುಚಿಸುತ್ತದೆ.

ಅಂದ ಹಾಗೆ ಇದನ್ನು ಬೆಳೆಯೋದು ಕೂಡ ಸುಲಭ. ಸ್ವಲ್ಪ ನೀರು ಹಾಗೂ ಬಿಸಿಲಿದ್ದರೆ ಸಾಕು ಚೆನ್ನಾಗಿ ಬೆಳಯುತ್ತದೆ. ಆರೋಗ್ಯದ ದೃಷ್ಟಿಯಿಂದ ಮರಗೆಣಸು ಉತ್ತಮವಾದ ಆಹಾರ. ಅಷ್ಟೇ ಯಾಕೆ ಚರ್ಮದ ಆರೈಕೆಗೂ ಕೂಡ ಮರಗೆಣಸು ಉತ್ತಮ ಔಷಧಿ ಅಂತಾನೇ ಹೇಳಬಹುದು. ಹಾಗಾದ್ರೆ ಮರಗೆಣಸು ಚರ್ಮದ ಆರೈಕೆಯನ್ನು ಯಾವ ರೀತಿ ಮಾಡುತ್ತೆ ಅನ್ನೋದನ್ನ ತಿಳಿಯೋಣ.
1. ಮುಖದ ಕಾಂತಿ ಹೆಚ್ಚಾಗುತ್ತದೆ
ಮರಗೆಣಸಿನಲ್ಲಿರುವ ಫೈಬರ್ ಅಂಶ ದೇಹದ ಕೊಬ್ಬನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ನೀವು ಹದಾ ಕಪ್ಪು ಅಥವಾ ಕಂದು ಬಣ್ಣದವರಾದರೆ ಮರಗೆಣಸು ಉಪಯೋಗಿಸೋದ್ರಿಂದ ನಿಮ್ಮ ಮುಖ ಕಾಂತಿಯುತವಾಗಿ ಹೊಳೆಯುತ್ತದೆ. ಇದಕ್ಕಾಗಿ ನೀವು ಮರಗೆಣಸಿನ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿರಿ. ಕೆಲವು ದಿನಗಳ ತನಕ ನೀವು ಹೀಗೆ ಮಾಡಿದ್ರೆ ಮುಖದಲ್ಲಿ ಅದ್ಭುತ ಕಾಂತಿ ಗೋಚರಿಸುತ್ತದೆ.
2. ಚರ್ಮದ ಪೋಷಣೆ ಮಾಡುತ್ತದೆ
ಚಳಿಗಾಲದಲ್ಲಿ ಹೆಚ್ಚಿನ ಜನರು ಎದುರಿಸುವ ಸಾಮಾನ್ಯ ಸಮಸ್ಯೆ ಎಂದರೆ ಶುಷ್ಕತೆ. ಮಾಯಿಶ್ಚರೈಸರ್ ಅಥವಾ ಇತರ ಪ್ರಾಡಕ್ಟ್ ಬಳಸೋದ್ರಿಂದ ಚರ್ಮವು ನಿರ್ಜಲೀಕರಣದ ಸಮಸ್ಯೆಯನ್ನು ಎದುರಿಸುತ್ತದೆ. ಆದರೆ ಈ ಸಮಸ್ಯೆಯನ್ನು ತೊಲಗಿಸಲು ನೀವು ಮರಗೆಣಸು ಫೇಸ್ ಫ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿದರೆ ತುಂಬಾನೇ ಒಳ್ಳೆಯದು. ಆಗ ನಿಮ್ಮ ಚರ್ಮವು ಒಳಗಿನಿಂದ ಹೈಡ್ರೇಟ್ ಆಗುತ್ತದೆ. ಚಳಿಗಾಲದಲ್ಲೂ ನಿಮ್ಮ ಚರ್ಮ ಬಿರುಕು ಬಿಡೋದಿಲ್ಲ. ನೀವೇನಾದರೂ ಒಣ ಚರ್ಮ ಹೊಂದಿದ್ದವರಾಗಿದ್ದರೆ ಫೇಸ್ ಮಾಸ್ಕ್‌ಗೆ ಜೇನುತುಪ್ಪ ಮತ್ತು ಅಲೋವೆರಾವನ್ನು ಸೇರಿಸಿ ಹಚ್ಚಬಹುದು.
3. ಕಪ್ಪು ಕಲೆಗಳನ್ನು ತೊಡೆದು ಹಾಕುತ್ತದೆ
ಪ್ರತಿಯೊಬ್ಬ ಮಹಿಳೆಗೂ ಕ್ಲಿಯರ್ ಸ್ಕಿನ್ ಇರಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಕೆಲವರಲ್ಲಿ ಹೆಚ್ಚಿನ ಪ್ರಮಾಣದ ಹಪ್ಪು ಕಲೆಗಳಿದ್ದು ಅದು ಯಾವುದೇ ರೀತಿಯ ಕ್ರೀಮ್‌ಗಳನ್ನು ಬಳಸಿದರೂ ಹೋಗೋದಿಲ್ಲ. ಈ ರೀತಿ ಚರ್ಮದ ಕಲೆಗಳನ್ನು ತೊಡೆದು ಹಾಕಲು ಮರಗೆಣಸಿನ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿರಿ. ಹಾಗೂ ನಿಧಾನವಾಗಿ ಮುಖವನ್ನು ಸ್ಕ್ರಬ್ ಮಾಡಿ. ಹೀಗೆ ಕೆಲವಾರಗಳ ಕಾಲ ಹಚ್ಚುತ್ತಾ ಬಂದರೆ ನಿಧಾನವಾಗಿ ಮುಖದ ಕಲೆ ಮಾಯವಾಗುತ್ತದೆ.
4. ದೇಹದಲ್ಲಿನ ಹಾನಿಯನ್ನು ಸರಿಪಡಿಸುತ್ತದೆ
ನಾವು ಬಳಸುವ ಅಥವಾ ನಾವು ಸೇವಿಸುವ ಬಹಳಷ್ಟು ವಸ್ತುಗಳು ದೇಹವನ್ನು ಹೊರಗಿನಿಂದ ಮತ್ತು ಒಳಗಿನಿಂದ ಹಾನಿಗೊಳಿಸುತ್ತವೆ. ಜೀವಕೋಶಗಳು ಪ್ರತಿದಿನ ಒಡೆಯುತ್ತವೆ. ಇದನ್ನು ಸರಿಪಡಿಸಲು ಪ್ರೊಟೀನ್ ಬೇಕು. ಪ್ರೋಟೀನ್ ಮಾನವ ದೇಹಕ್ಕೆ ಬೇಕಾಗಿರುವ ಪ್ರಮುಖ ಅಂಶವಾಗಿದೆ. ಕೋಳಿ, ಮಾಂಸ, ಹಾಲು ಮತ್ತು ಮೀನುಗಳಂತಹ ಹೆಚ್ಚಿನ ಪ್ರೋಟೀನ್ ಆಹಾರವನ್ನು ಸೇವಿಸಿದರೆ ಪ್ರೋಟೀನ್ ಹಾನಿಯನ್ನು ಸರಿಪಡಿಸಬಹುದು.
ಆದರೆ ಸಸ್ಯಾಹಾರಿ ಜನರು ಖಂಡಿತವಾಗಿಯೂ ಪ್ರಾಣಿ ಆಧಾರಿತ ಆಹಾರಕ್ಕಿಂತ ಸಸ್ಯ ಆಧಾರಿತ ಆಹಾರವನ್ನೇ ಬಯಸುತ್ತಾರೆ. ಮರ ಗೆಣಸಿನಲ್ಲಿ ಉತ್ತಮ ಪ್ರಮಾಣದ ಪ್ರೋಟಿನ್ ಅಡಗಿದೆ. ಹೀಗಾಗಿ ಇದು ದೇಹದ ಜೀವಕೋಶಗಳ ಹಾನಿಯನ್ನು ಸರಿಪಡಿಸಲು, ಗಾಯವನ್ನು ಗುಣಪಡಿಸಲು, ಸ್ನಾಯು ಮತ್ತು ಇತರ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಲು ಮರಗೆಣಸಿನಲ್ಲಿರುವ ಪ್ರೋಟೀನ್ ಸಹಾಯ ಮಾಡುತ್ತದೆ.
ಒಟ್ಟಿನಲ್ಲಿ ಮರಗೆಣಸು ಎಲ್ಲಾ ವಿಚಾರದಲ್ಲೂ ಮಾನವನ ದೇಹಕ್ಕೆ ಆರೋಗ್ಯಕಾರಿ ಆಹಾರ ಎಂದರೆ ತಪ್ಪಾಗೋದಿಲ್ಲ. ಮರಗೆಣಸು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಒಂದು ವೇಳೆ ಮಾರುಕಟ್ಟೆಯಲ್ಲಿ ಸಿಗದಿದ್ದರೆ ಹಳ್ಳಿ ಕಡೆ ಹೋದಾಗ ಖಂಡಿತ ಇದನ್ನು ಖರೀದಿಸಿ ಇದರ ಪ್ರಯೋಜನ ಪಡ್ಕೊಳ್ಳಿ.



Click it and Unblock the Notifications














