Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ದಿನ ನಿತ್ಯ ಸ್ವೀಟ್ ಕಾರ್ನ್ ತಿಂದ್ರೆ ಹೆಚ್ಚಾಗುತ್ತೆ ಸೌಂದರ್ಯ!
ಸ್ವೀಟ್ ಕಾರ್ನ್ ಅಥವಾ ಜೋಳ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಸ್ವೀಟ್ ಕಾರ್ನ್ ಅಂದ್ರೆ ತುಂಬಾನೇ ಆಸೆ ಪಟ್ಟು ತಿನ್ನುತ್ತಾರೆ. ಮಳೆಗಾಲದಲ್ಲಂತೂ ಆ ಹವಾಮಾನಕ್ಕೆ ಜೋಳ ಸೂಪರ್ ಕಾಂಬಿನೇಷನ್ ಅಂತಾನೇ ಹೇಳಬಹುದು.
ಜೋಳ ರುಚಿಗೆ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ತುಂಬಾನೇ ಪ್ರಯೋಜನಕಾರಿ. ಅದ್ರಲ್ಲೂ ನಮ್ಮ ಚರ್ಮ ಹಾಗೂ ಕೂದಲಿನ ಆರೋಗ್ಯ ಕಾಪಾಡೋದ್ರಲ್ಲಿ ಸ್ವೀಟ್ ಕಾರ್ನ್ ಮಹತ್ವದ ಪಾತ್ರ ವಹಿಸುತ್ತೆ. ಹಾಗಾದ್ರೆ ಸೌಂದರ್ಯದ ದೃಷ್ಟಿಯಿಂದ ಜೋಳ ಯಾವ ರೀತಿ ಉಪಯೋಗವಾಗಲಿದೆ ಅನ್ನೋದನ್ನ ತಿಳಿಯೋಣ.

ಜೋಳವನ್ನು ಸೇವನೆ ಮಾಡೋದು ನಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಉತ್ತಮ. ಯಾಕಂದ್ರೆ ಇದರಲ್ಲಿ ಫೈಬರ್ ಅಂಶ ಅಧಿಕವಾಗಿದ್ದು, ಕೊಬ್ಬು ಕಡಿಮೆಯಾಗಿದ್ದು ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿದೆ. ಇದಿಷ್ಟೇ ಅಲ್ಲ, ಇದರ ಜೊತೆಗೆ ಮ್ಯಾಂಗನೀಸ್, ವಿಟಮಿನ್ ಬಿ, ಮತ್ತು ಕಾರ್ಬೋಹೈಡ್ರೇಟ್ಸ್ ಕೂಡ ಇದೆ. ಇದು ನಿಮಗೆ ಅಧಿಕ ಪ್ರಮಾಣದ ಶಕ್ತಿಯನ್ನು ಒದಗಿಸುತ್ತದೆ. ಇದು ನಿಮ್ಮ ದೇಹದಲ್ಲಿರುವ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಿ ನೀವು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.
ಇನ್ನೂ ಜೋಳದಲ್ಲಿ ವಿಟಮಿನ್ ಸಿ ಅಂಶವಿದ್ದು, ಥಯಾಮಿನ್, ನಿಯಾಸಿನ್, ಮಿನೆರಲ್ ಹಾಗೂ ಉತ್ಕರ್ಷಣ ಗುಣಗಳು ನಿಮ್ಮ ಕೂದಲು ಹಾಗೂ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾದ್ರೆ ಜೋಳ ಯಾವ ರೀತಿ ಸೌಂದರ್ಯ ವೃದ್ಧಿಸಲು ಸಹಾಯ ಮಾಡುತ್ತೆ ಅನ್ನೋದನ್ನ ತಿಳಿಯೋಣ.
1. ಚರ್ಮದ ದದ್ದುಗಳನ್ನು ತೊಲಗಿಸಲು ಸಹಾಯ ಮಾಡುತ್ತದೆ
ಜೋಳ ಸೇವನೆ ಮಾಡುವುದರಿಂದ ಇದು ನಿಮಗೆ ಚರ್ಮದ ದ್ದುಗಳನ್ನು ಕೊಲ್ಲೋದಕ್ಕೆ ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕವಾಗಿದೆ ಮತ್ತು ನಿಮ್ಮ ಚರ್ಮದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇನ್ನೂ ಜೋಳದಲ್ಲಿರುವ ಪಿಷ್ಠದ ಅಂಶವನ್ನು ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಒಂದು ಘಟಕಾಂಶವಾಗಿ ಬಳಸಲಾಗುತ್ತದೆ.
2. ಆರೋಗ್ಯಕರ ಚರ್ಮ ನಿಮ್ಮದಾಗಿಸುತ್ತದೆ
ಜೋಳವು ವಿಟಮಿನ್ ಸಿ ಯಿಂದ ಸಮೃದ್ಧಿಯಾಗಿದ್ದು ಅದು ನಿಮ್ಮ ಚರ್ಮವನ್ನು ರಾಡಿಕಲ್‌ಗಳಿಂದ ಹಾನಿಯಾಗದಂತೆ ತಡೆಯುತ್ತದೆ ಮತ್ತು ನಿಮ್ಮ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ನಯವಾದ ಚರ್ಮಕ್ಕೆ ಅಗತ್ಯವಿರುವ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಕರಿಸುತ್ತದೆ.
3. ಕೂದಲು ಉದುರುವುದು, ಒಣ ಕೂದಲಿನ ಸಮಸ್ಯೆಯಿಂದ ಮುಕ್ತಿ
ಜೋಳದ ಎಣ್ಣೆಯು ನಿಮ್ಮ ಕೂದಲು ಉದುರುವಿಕೆ ಮತ್ತು ಒಣ ಕೂದಲಿನ ಸಮಸ್ಯೆಗೆ ಮುಕ್ತಿ ನೀಡುತ್ತದೆ. ಜೋಳದ ಎಣ್ಣೆಯು ಕೊಬ್ಬಿನಾಮ್ಲ ಮತ್ತು ವಿಟಮಿನ್ ಇ ಯಿಂದ ಸಮೃದ್ಧವಾಗಿದೆ. ಮತ್ತು ಇದನ್ನು ನಿಯಮಿತವಾಗಿ ಬಳಸುವುದರಂದ ನಿಮ್ಮ ಕೂದಲು ಕಿರುಚೀಲಗಳನ್ನು ಬಲಪಡಿಸಲು ಮತ್ತು ಅಕಾಲಿಕ ವಯಸ್ಸಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಇದು ಉತ್ಕರ್ಷಣ ನಿರೋಧಕಗಳು ಜೀವಕೋಶದ ಹಾನಿಯನ್ನು ತಡೆಯುತ್ತದೆ. ಆದ್ದರಿಂದ ಶುಷ್ಕತೆ ಮತ್ತು ಕೂದಲು ಉದುರುವಿಕೆಯನ್ನು ತಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ. ಇದು ವಿಟಮಿನ್ ಇ ಅಂಶ ಹೊಂದಿದ್ದು, ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಮತ್ತು ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.
4. ಕೂದಲಿನ ಬುಡವನ್ನು ಬಲಪಡಿಸುತ್ತದೆ
ಜೋಳದಲ್ಲಿ ವಿಟಮಿನ್ ಸಿ ಮತ್ತು ಲೈಕೋಪೀನ್ ಸಮೃದ್ಧವಾಗಿರುವ ಕಾರಣ ನೀವು ದಿನನಿತ್ಯ ಜೋಳ ಸೇವಿಸುವುದರಿಂದ ಹೊಳೆಯುವ ಮತ್ತು ನಯವಾದ ಕೂದಲನ್ನು ನಿಮ್ಮದಾಗಿಸಬಹುದು. ಜೋಳವು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಆದ್ದರಿಂದ ಮೃದುವಾದ ಹಾಗೂ ಹೊಳೆಯುವ ಕೂದಲು ಪಡೆಯಬಹುದು.
ರಾಸಾಯನಿಕಗಳನ್ನು ಬಳಸಿ ಕೂದಲು ಹಾಗೂ ಚರ್ಮದ ಆರೋಗ್ಯವನ್ನು ಹಾಳು ಮಾಡುವುದಕ್ಕಿಂತ ದಿನ ನಿತ್ಯ ಜೋಳ ಸೇವಿಸುವುದರಿಂದ ಮತ್ತು ಇದರ ಎಣ್ಣೆಯನ್ನು ಕೂದಲಿಗೆ ಹಚ್ಚೋದ್ರಿಂದ ಆರೋಗ್ಯವಾದ ತ್ವಚೆ ಹಾಗೂ ಕೂದಲನ್ನು ಪಡೆಯಬಹುದು.



Click it and Unblock the Notifications



