Latest Updates
-
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್!
ಕೂದಲು ಹಾಗೂ ತ್ವಚೆಗೆ ಬಯೋಟಿನ್ ಗಮ್ಮೀಸ್ ಒಳ್ಳೆಯದಾ?
ಒಂದು ಕ್ಷಣ ಯೋಚಿಸಿ ನಾವು ನಡೆಯುತ್ತಿಲ್ಲ ಓಡುತ್ತಿದ್ದೇವೆ ಎಂದನಿಸುತ್ತದೆ ಅಲ್ವಾ? ಹೌದು ಈ ಕೆಲಸದ ಒತ್ತಡದ ಬದುಕಿನಲ್ಲಿ ನಾವು ನಮಗಾಗಿ ದುಡಿಯುತ್ತಿದ್ದೇವೆ ಎಂಬುವುದನ್ನು ಮರೆಯುತ್ತಿದ್ದೇವೆ.
ಸರಿಯಾದ ಸಮಯದಲ್ಲಿ ಆಹಾರ ಸೇವಿಸುತ್ತಿಲ್ಲ, ಸರಿಯಾಗಿ ನಿದ್ದೆ ಮಾಡುತ್ತಿಲ್ಲ, ತುಂಬಾ ಮಾನಸಿಕ ಒತ್ತಡ ಹೀಗೆ ನಮ್ಮ ಬದುಕಿನ ಚಕ್ರವೇ ಬದಲಾಗಿದೆ ಅಲ್ವಾ? ಇದರ ನೇರ ಪ್ರಭಾವ ನಮ್ಮ ಕೂದಲು ಹಾಗೂ ತ್ವಚೆ ಸೌಂದರ್ಯದ ಮೇಲೆ ಬೀಳುತ್ತದೆ.

ನಂತರ ಕೂದಲು ಹಾಗೂ ಸೌಂದರ್ಯ ಉಳಿಸಿಕೊಳ್ಳಲು ಪರ್ಯಾಯ ಮಾರ್ಗ ಹುಡುಕುತ್ತೇವೆ ಅಲ್ವಾ? ಹೀಗೆ ಕೂದಲು ಹಾಗೂ ತ್ವಚೆ ಸೌಂದರ್ಯ ಕಾಪಾಡಲು ಕಂಡುಕೊಂಡಿರುವ ಪರ್ಯಾಯ ಮಾರ್ಗವೆಂದರೆ ಬಯೋಟಿನ್ ಗಮ್ಮೀಸ್.
ಈ ಬಯೋಟಿನ್ ಗಮ್ಮೀಸ್ ಅನ್ನು ತುಂಬಾ ಜನ ಬಳಸುತ್ತಾರೆ. ಆದರೆ ಈ ಬಯೋಟಿನ್ ಗಮ್ಮೀಸ್ ಕೂದಲ ಹಾಗೂ ತ್ವಚೆ ಆರೋಗ್ಯ ರಕ್ಷಣೆಗೆ ಪರಿಣಾಮಕಾರಿಯೇ ಎಂದು ನೋಡೋಣ ಬನ್ನಿ:
ಬಯೋಟಿನ್ ಎಂದರೇನು?
ಬಯೋಟಿನ್ ಎಂಬುವುದು ವಿಟಮಿನ್ H, ಇದು ಒಂದು ಬಗೆಯ ವಿಟಮಿನ್ ಬಿ ಕಾಂಪ್ಲೆಕ್ಸ್ ಆಗಿದೆ. ಬಿ ವಿಟಮಿನ್ ಅದರಲ್ಲೂ ಬಯೋಟಿನ್ ತ್ವಚೆ, ಕೂದಲು, ಕಣ್ಣು, ಲಿವರ್ ಹಾಗೂ ನರಗಳ ಆರೋಗ್ಯಕ್ಕೆ ಅವಶ್ಯಕ. ಗರ್ಭಿಣಿಯರಿಗೆ ಮಗುವಿನ ಭ್ರೂಣದ ಬೆಳವಣಿಗೆಗೆ ಈ ವಿಟಮಿನ್ ತುಂಬಾನೇ ಅವಶ್ಯಕ.
ಅಲ್ಲದೆ ದೇಹದ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿ.
ಯಾವೆಲ್ಲಾ ನೈಸರ್ಗಿಕವಾದ ಆಹಾರಗಳಲ್ಲಿ ಬಯೋಟಿನ್ ಇದೆ?
ನಟ್ಸ್
ಧಾನ್ಯಗಳು
ಬೆಣ್ಣೆಹಣ್ಣು
ಬ್ರೊಕೋಲಿ
ಮಾಂಸಾಹಾರ
ಲಿವರ್
ಯೀಸ್ಟ್
ಈ ಬಗೆಯ ಆಹಾರವನ್ನು ದಿನಾ ಸೇವಿಸುವುದರಿಂದ ಬಯೋಟಿನ್ ಕೊರತೆಯಾಗದಂತೆ ಕಾಪಾಡಬಹುದು.
ದೇಹದಲ್ಲಿ ಬಯೋಟಿನ್ ಕೊರತೆಯಾದರೆ ಕಂಡು ಬರುವ ಲಕ್ಷಣಗಳು
* ಕೂದಲು ತೆಳುವಾಗುವುದು
* ಕೂದಲು ತುಂಬಾ ಉದುರುವುದು
* ಉಗುರುಗಳಲ್ಲಿ ಬಿರುಕು
* ಕಣ್ಣು, ಮೂಗು, ಬಾಯಿಯ ಸುತ್ತ ಗುಳ್ಳೆಗಳು
* ಕಣ್ಣು ಕೆಂಪಾಗುವುದು
* ತಲೆಸುತ್ತು
* ಗೊಂದಲ
ಬಯೋಟಿನ್ ಗಮ್ಮೀಸ್
ಬಯೋಟಿನ್ ಗಮ್ಮೀಸ್ ಎಂದು ಮಾರುಕಟ್ಟೆಯಲ್ಲಿ ಸಿಗುತ್ತದೆ. ಇವುಗಳನ್ನು ಬಳಸುವ ಮುನ್ನ ಇವುಗಳ ಬಗ್ಗೆ ತಿಳಿದುಕೊಂಡು ಬಳಸುವುದು ಒಳ್ಳೆಯದು.
ಬಯೋಟಿನ್ ಗಮ್ಮೀಸ್ ಕೂದಲು ಹಾಗೂ ತ್ವಚೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಇದನ್ನು ಬಯೊಟಿನ್ ಕೊರತೆ ಇರುವವರು ಬಳಸುವುದು ಒಳ್ಳೆಯದು. ಬಯೋಟಿನ್ ಬಳಸಿ ಒಂದು ತಿಂಗಳಿಗೆ ಇದು ಪರಿಣಾಮ ಕಂಡು ಬರುವುದು ಅಂದರೆ ಕೂದಲು ಉದುರುವುದು ಕಡಿಮೆಯಾಗುವುದು. ನೀವು 3 ತಿಂಗಳು ಬಳಸಿದರೆ ಇದರ ಹೆಚ್ಚಿನ ಪ್ರಯೋಜನ ಪಡೆಯಬಹುದು.
ಬರೀ ಬಯೋಟಿನ್ ಗಮ್ಮೀಸ್ ಸೇರಿಸಿದರೆ ಸಾಲದು ಅದರ ಜೊತೆಗೆ ಸತು ಹಾಗೂ ಫಾಲಿಕ್ ಆಮ್ಲವಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು.
ಒಂದು ದಿನದಲ್ಲಿ ಎಷ್ಟು ಬಯೋಟಿನ್ ಗಮ್ಮೀಸ್ ತೆಗೆದುಕೊಳ್ಳಬಹುದು?
ದಿನದಲ್ಲಿ 30 ಮೈಕ್ರೋಗ್ರಾಂ ತೆಗೆದುಕೊಳ್ಳಬಹುದು. ಆದರೆ ಗಮ್ಮೀಸ್ ತೆಗೆದುಕೊಳ್ಳುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಸೇವಿಸಿ.
ಬಯೋಟಿನ್ ಗಮ್ಮೀಸ್ ಅಡ್ಡಪರಿಣಾಮವಿದೆಯೇ?
ಇದನ್ನು ಅತಿಯಾಗಿ ಬಳಸಿದರೆ ಈ ಅಡ್ಡಪರಿಣಾಮಗಳಿವೆ
* ನಿದ್ರಾಹೀನತೆ
* ತ್ವಚೆಯಲ್ಲಿ ಗುಳ್ಳೆಗಳು ಬರುವುದು
* ಮೊಡವೆ
* ಜೀರ್ಣಕ್ರಿಯೆಗೆ ತೊಂದರೆ
* ಕಿಡ್ನಿ ಸಮಸ್ಯೆ



Click it and Unblock the Notifications

