Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮನೆಯ ಮುದ್ದು ಮಗಳಿಗೆ ಈ ರೀತಿ ಹೇರ್ ಸ್ಟೈಲ್ ಮಾಡಿದರೆ ಎಷ್ಟು ಮುದ್ದಾಗಿ ಕಾಣಬಹುದು ಅಲ್ವಾ?
ಮನೆಯಲ್ಲಿ ಪುಟ್ಟ ಹೆಣ್ಮಕ್ಕಳಿದ್ದರೆ ಅವರನ್ನು ಅಲಂಕಾರ ಮಾಡಿ ನೋಡುವುದೇ ಮನೆಯವರಿಗೆ ಖುಷಿ ಅಲ್ವಾ? ಅವರ ಹೇರ್ ಸ್ಟೈಲ್, ಅವರಿಗೆ ಮಾಡುವ ಡ್ರೆಸ್ಸಿಂಗ್ ಎಲ್ಲವೂ ಸಕತ್ ಕ್ಯೂಟ್ ಕ್ಯೂಟ್ ಅನಿಸುತ್ತೆ ಅಲ್ವಾ? ಅದರಲ್ಲಿಯೂ ಚಿಕ್ಕ ಹೆಣ್ಮಕ್ಕಳನ್ನು ತುಂಬಾ ಕ್ಯೂಟ್ ಆಗಿಸುವುದು ಅವರ ಮಾಡುವ ಹೇರ್ ಸ್ಟೈಲ್. ಆ ಪ್ರಾಯದಲ್ಲಿ ಹೇಗೆ ಅಲಂಕಾರ ಮಾಡಿದರೂ ಚೆಂದನೇ, ಫಂಕ್ಷನ್‌ಗಳಲ್ಲಿ ಈ ನಮ್ಮ ಮನೆಯ ಪುಟಾಣಿ ಸುಂದರಿಯರಿಗೆ ಹೀಗೆ ಹೇರ್ ಸ್ಟೈಲ್ ಮಾಡಿದರೆ ಇನ್ನೂ ಸೂಪರ್ ಆಗಿರುತ್ತೆ ಅಲ್ವಾ?

ಕ್ಯೂಟಿ ಚಿಕ್ಕಿ ಎಂಬ ಇನ್‌ಸ್ಟಾಫೇಜ್‌ನಲ್ಲಿ ತುಂಬಾ ಸರಳವಾಗಿ ಆಕರ್ಷಕ ಹೇರ್ ಸ್ಟೈಲ್ ಮಾಡುವುದು ಹೇಗೆ ಎಂಬ ಟಿಪ್ಸ್ ನೀಡಲಾಗಿದೆ ನೋಡಿ:
ಈ ರೀತಿಯ ಪೋನಿ ಟೇಲ್ ಸೂಪರ್ ಅಲ್ವಾ?
ಈ ಪೋನಿಟೇಲ್ ನೋಡಿ ಎಷ್ಟೊಂದು ಚೆನ್ನಾಗಿದೆ ಇಲ್ವಾ? ಸುಮ್ಮನೆ ಒಂದು ಜುಟ್ಟು ಕಟ್ಟುವ ಬದಲಿಗೆ ಈ ರೀತಿ ಹಾಕಿದರೆ ಆಕರ್ಷಕವಾಗಿರುತ್ತದೆ.
ಎರಡು ಜುಟ್ಟಿನ ಆಕರ್ಷಕ ಹೇರ್‌ಸ್ಟೈಲ್
ಈ ಹೇರ್ ಸ್ಟೈಲ್ ನೋಡಿ ತುಂಬಾನೇ ಸಿಂಪಲ್ ಆಗಿದೆ ಅಲ್ಲದೆ ಅಷ್ಟೇ ಆಕರ್ಷಕವಾಗಿ ಕೂಡ ಇದೆ , ಈ ಫ್ರಾಕ್ ಅಥವಾ ಚಟ್ಟಿ ಶರ್ಟ್, ಶಾರ್ಟ್ ಸ್ಕರ್ಟ್ ಎಲ್ಲಾ ಹಾಕಿದಾಗ ಈ ಬಗೆಯ ಹೇರ್‌ಸ್ಟೈಲ್ ಮಾಡಿ ನೋಡಿ ತುಂಬಾನೇ ಚೆನ್ನಾಗಿರುತ್ತದೆಎ.
ಎರಡು ಜಡೆಯ ಸುಂದರಿ
ಇದು ನೋಡಿ ಎಷ್ಟೊಂದು ಆಕರ್ಷಕವಾಗಿದೆ, ಎರಡು ಜಡೆ ಸಿಂಪಲ್ ಆಗಿ ಹಾಕಿಕೊಡುವ ಬದಲಿಗೆ ಈ ರೀತಿ ಹಾಕಿಕೊಟ್ಟರೆ ಮಗಳು ಇನ್ನಷ್ಟು ಮುದ್ದು ಮುದ್ದಾಗಿ ಕಾಣ್ತಾಳೆ. ಆದರೆ ಹೀಗೆ ಹೇರ್‌ಸ್ಟೈಲ್ ಮಾಡಬೇಕೆಂದರೆ ನಿಮ್ಮ ಮಗಳ ಕೂದಲು ಸ್ವಲ್ಪ ಉದ್ದವಿರಬೇಕು.
ಅರೆ ಸಿಂಪಲ್ ಜಡೆ ಇಷ್ಟೊಂದು ಸ್ಟೈಲಿಷ್ ಆಗಿಯೂ ಹಾಕಬಹುದಾ?
ಯಾವ ಹೇರ್ ಸ್ಟೈಲ್ ಬರಲ್ಲ ಅಂದರೂ ಜಡೆ ಹಾಕಲು ಎಲ್ಲಾ ಅಮ್ಮಂದಿರಿಗೆ ಬರುತ್ತೆ, ಇನ್ನು ನೀವು ಜಡೆ ಹಾಕುವಾಗ ಈ ರೀತಿ ಸ್ಟೈಲಿಷ್ ಆಗಿ ಹಾಕಿ ನೋಡಿ, ಆ ಫಂಕ್ಷನ್‌ನಲ್ಲಿ ಎಲ್ಲರ ಗಮನ ನಿಮ್ಮ ಮಗಳ ಜಡೆ ಸೆಳೆಯುವುದು ಗ್ಯಾರಂಟಿ ನೋಡಿ.
ಅಯ್ಯೋ ಈ ತುರುಬು ನೋಡಿ ಎಷ್ಟೊಂದು ಚೆನ್ನಾಗಿದೆ ಅಲ್ವಾ?
ತುಂಬ ಸಿಂಪಲ್ ಆಗಿ ಮಾಡಬಹುದಾದ ಹೇರ್ ಸ್ಟೈಲ್ ಇದು, ಹೇರ್ ಸ್ಟೈಲ್‌ಗೆ ತಕ್ಕ ಆಕ್ಸಸರೀಸ್ ಹಾಕಿದರೆ ತುಂಬಾನೇ ಆಕರ್ಷಕವಾಗಿರುತ್ತದೆ.
ಈ ಹೇರ್ ಸ್ಟೈಲ್ ನೋಡಿ
ನೀವು ಮೊದಲು ಎರಡು ಡಿಸೈನ್‌ನ ಹೇರ್ ಬ್ಯಾಂಡ್ ಹಾಕಿ ಈ ರೀತಿ ಮಾಡಿದರೆ ತುಂಬಾ ಸೂಪರ್ ಆಗಿರುತ್ತೆ ಅಲ್ವಾ?
ಒಂದು ಪೆನ್ ಅಥವಾ ಪೆನ್ಸಿಲ್ ಬಳಸಿ ನೀವು ಮಾಡಬಹುದು ಆಕರ್ಷಕ ಹೇರ್‌ಸ್ಟೈಲ್
ಈ ಹೇರ್ ಸ್ಟೈಲ್ ತುಂಬಾ ಆಕರ್ಷಕವಾಗಿದೆ ಅಲ್ವಾ:ಒಂದು ಜುಟ್ಟು ಹಾಕಿ, ಹೀಗೆ ಚಿಕ್ಕ ಜುಟ್ಟು ಜುಟ್ಟು ಹಾಕಿ ನಂತರ ಪೆನ್ಸಿಲ್ ಅಥವಾ ಪೆನ್ ತೆಗೆದರೆ ಸೂಪರ್ ಆದ ಹೇರ್ ಸ್ಟೈಲ್ ರೆಡಿ.



Click it and Unblock the Notifications
