Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಲೆಗ್ಗಿಂಗ್ಸ್ ಧರಿಸುವಾಗ ಈ 7 ಮಿಸ್ಟೇಕ್ಸ್ ಮಾಡಿದರೆ ಸ್ಟೈಲಿಷ್ ಲುಕ್ ಸಿಗಲ್ಲ
ಎಲ್ಲಾ ಹೆಣ್ಮಕ್ಕಳ ಬಳಿ ಲೆಗ್ಗಿಂಗ್ಸ್ ಇದ್ದೇ ಇರುತ್ತದೆ, ಕುರ್ತಾಗೆ ಲೆಗ್ಗಿಂಗ್ಸ್ ಮ್ಯಾಚ್ ಮಾಡಿ ಧರಿಸುತ್ತಾರೆ. ಲೆಗ್ಗಿಂಗ್ಸ್ ತುಂಬಾನೆ ಕಂಫರ್ಟ್ ಅಲ್ಲದೆ ಈ ಲೆಗ್ಗಿಂಗ್ಸ್ ನಾವು ಬೇರೆ-ಬೇರೆ ಡ್ರೆಸ್‌ಗೆ ಮ್ಯಾಚ್ ಮಾಡಬಹುದು, ಹಾಗಾಗಿ ಇದನ್ನು ಎಲ್ಲರೂ ಇಷ್ಟಪಡುತ್ತಾರೆ. ಫುಲ್ ಲೆಂಥ್ ಲೆಗ್ಗಿಂಗ್ಸ್, 3/4 ಲೆಗ್ಗಿಂಗ್ಸ್ ಎರಡೂ ಸದಾ ಟ್ರೆಂಡ್‌ನಲ್ಲಿರುವ ಡ್ರೆಸ್ಸಿಂಗ್ ಆಗಿದೆ.
ಆದರೆ ಲೆಗ್ಗಿಂಗ್ಸ್ ವಿಚಾರದಲ್ಲಿ ಕೆಲ ಮಿಸ್ಟೇಕ್ಸ್ ಮಾಡಿದರೆ ನಮ್ಮ ಲುಕ್ ಸಮಪೂರ್ಣ ಹಾಳಾಗುವುದು, ಹಾಗಾಗಿ ಲೆಗ್ಗಿಂಗ್ಸ್ ಧರಿಸುವಾಗ ಈ ಮಿಸ್ಟೇಕ್ಸ್ ಮಾಡಬೇಡಿ:

ಸ್ಕಿನ್ ಕಲರ್ ಲೆಗ್ಗಿಂಗ್ಸ್ ಧರಿಸುವುದು
ಲೆಗ್ಗಿಂಗ್ಸ್ ಮೈಗೆ ಅಂಟಿಕೊಂಡಿರುತ್ತದೆ, ಸ್ಕಿನ್ ಕಲರ್ ಲೆಗ್ಗಿಂಗ್ಸ್ ಧರಿಸಿದರೆ ದೂರದಿಂದ ಪ್ಯಾಂಟ್ ಧರಿಸದಂತೆ ಕಾಣುವುದು, ಅನಗ್ಯತ ಕಾರಣಕ್ಕೆ ಬೇರೆಯವ ಗಮನ ಸೆಳೆಯುತ್ತೇವೆ, ಹಾಗಾಗಿ ಯಾವುದೇ ಡ್ರೆಸ್‌ಗೆ ಆಗಲಿ ಸ್ಕಿನ್ ಕಲರ್ ಲೆಗ್ಗಿಂಗ್ಸ್ ಅವಾಯ್ಡ್ ಮಾಡಿ.
ಗೋಲ್ಡನ್ ಕಲರ್ ಸರಿಯಾಗಿ ಮ್ಯಾಚ್ ಮಾಡದೆ ಇರುವುದು
ಈಗ ಗೋಲ್ಡನ್ ಕಲರ್, ಶೈನಿಂಗ್ ಲೆಗ್ಗಿಂಗ್ಸ್ ಮ್ಯಾಚ್ ಮಾಡುವುದು ಕರೆಕ್ಟ್ ಇಲ್ಲದಿದ್ದರೆ ಪರ್ಫೆಕ್ಟ್ ಲುಕ್ ಸಿಗಲ್ಲ. ಬ್ಲ್ಯಾಕ್ ಅಥವಾ ನಿಮ್ಮ ಡ್ರೆಸ್ಸಿಂಗ್‌ನಲ್ಲಿ ಗೋಲ್ಡನ್ ಡಿಸೈನ್ ಇದ್ದರೆ ಮಾತ್ರ ಗೋಲ್ಡನ್ ಕಲರ್ ಮ್ಯಾಚ್ ಮಾಡಿ, ಇಲ್ಲದಿದ್ದರೆ ಮಾಡಬೇಡಿ, ಆಕರ್ಷಕವಾಗಿ ಕಾಣಲ್ಲ.
ಶಾರ್ಟ್ ಟಾಪ್‌ಗೆ ಲೆಗ್ಗಿಂಗ್ಸ್ ಧರಿಸುವುದು
ಈ ತಪ್ಪು ಮಾಡಬೇಡಿ, ಶಾರ್ಟ್ ಟಾಪ್‌ಗೆ ನೀವು ಬೇಕಾದರೆ ಜೀನ್ಸ್ ಧರಿಸಿ, ಆದರೆ ಲೆಗ್ಗಿಂಗ್ಸ್ ಧರಿಸಬೇಡಿ. ಇದು ಮೈ ಮಾಟ ಎದ್ದು ಕಾಣುವಂತೆ ಮಾಡುತ್ತದೆ ಎಂದು ಕೆಲವರು ಧರಿಸುತ್ತಾರೆ, ಆದರೆ ಸೆಕ್ಸಿ ಲುಕ್ ಬದಲಿಗೆ ವಿಚಿತ್ರ ಲುಕ್ ನೀಡುತ್ತದೆ, ಹಾಗಾಗಿ ಲೆಗ್ಗಿಂಗ್ಸ್‌ಗೆ ನೀವು ಟೀ ಶರ್ಟ್ ಹಾಕುವುದು, ಶಾರ್ಟ್ ಟಾಪ್ ಧರಿಸುವುದು ಮಾಡಬೇಡಿ.
ಕಾಟನ್ ಲೆಗ್ಗಿಂಗ್ಸ್ ಆಯ್ಕೆ ಮಾಡಿ
ಲೆಗ್ಗಿಂಗ್ಸ್ ನೀವು ಇತರ ಮೆಟೀರಿಯಲ್ ಬದಲಿಗೆ ಕಾಟನ್ ಲೆಗ್ಗಿಂಗ್ಸ್ ಬಳಸಿದರೆ ಒಳ್ಳೆಯದು, ಕೆಲ ಮೆಟೀರಿಯಲ್ ಧರಿಸಿದಾಗ ತೊಡೆಗೆ ರಬ್ ಆಗಿ ಗಾಯವಾಗುವುದು, ಆದ್ದರಿಂದ ಲೆಗ್ಗಿಂಗ್ಸ್ ಆಯ್ಕೆ ಮಾಡುವಾಗ ಅದರ ಬಟ್ಟೆ ಕೂಡ ಗಮನಿಸುವುದು ಒಳ್ಳೆಯದು.
ಪಾರದರ್ಶಕ ಲೆಗ್ಗಿಂಗ್ಸ್ ಬಳಸಬೇಡಿ
ಕೆಲ ಲೆಗ್ಗಿಂಗ್ಸ್ ತುಂಬಾನೇ ತೆಳುವಿರುತ್ತದೆ ಅಂಥ ಲೆಗ್ಗಿಂಗ್ಸ್ ಬಳಸಬೇಡಿ, ಲೆಗ್ಗಿಂಗ್ಸ್ ಮೊದಲೇ ಮೈಗೆ ಅಂಟಿಕೊಂಡಿರುತ್ತದೆ, ಜೊತೆಗೆ ಪಾರದರ್ಶಕವಾಗಿದ್ದರೆ ಮುಜುಗರ ಉಂಟು ಮಾಡುವುದು, ಇಂಥ ಲೆಗ್ಗಿಂಗ್ಸ್ ಬಳಸಬೇಡಿ.
ಲೆಗ್ಗಿಂಗ್ಸ್ ಕಟ್ ಗಮನಿಸಿ
ಈಗ ಟ್ರೆಂಡ್‌ನಲ್ಲಿ ಯಾವ ಸ್ಟೈಲ್ ಇದೆ ಎಂದು ಗಮನಿಸಿ, ಇನ್ನು ಫುಲ್ ಲೆಂಥ್ ಲೆಗ್ಗಿಂಗ್ಸ್ ಬಳಸುವುದಾದರೆ ಕಾಲಿನ ಬಳಿ ಸ್ಟೈಲ್ ಆಗಿ ನೆರಿಗೆ ಮಾಡಿ, ಆವಾಗ ಮಾತ್ರ ಸ್ಟೈಲ್ ಆಗಿ ಕಾಣುತ್ತದೆ.
ಕಲರ್ ಮ್ಯಾಚಿಂಗ್
ತುಂಬಾ ಜನ ಮ್ಯಾಚಿಂಗ್ ಕಲರ್ ಲೆಗ್ಗಿಂಗ್ಸ್ ಬೆಸ್ಟ್ ಎಂದು ಯೋಚಿಸುತ್ತಾರೆ. ಆದರೆ ಮ್ಯಾಚಿಂಗ್ ಲೆಗ್ಗಿಂಗ್ಸ್‌ಗಿಂತ ಕಾಂಟ್ರಾಸ್ಟ್ ಬಣ್ಣ ಹೆಚ್ಚು ಲುಕ್ ನೀಡುವುದು, ಬೇಕಿದ್ದರೆ ನೀವು ಗಮನಿಸಿ ನೋಡಿ.



Click it and Unblock the Notifications
