Latest Updates
-
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್!
ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಏಷ್ಯಾ ಖಂಡದ ಸುಂದರಿಯರಿವರು..!
ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಫೆಬ್ರವರಿ 18 ರಿಂದ ಮಾರ್ಚ್ 9 ರವರೆಗೆ 71ನೇ ವಿಶ್ವ ಸುಂದರಿ ಸ್ಪರ್ಧೆಯನ್ನು ಭಾರತವು ಆಯೋಜಿಸಲಿದೆ. ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯು ಸುಮಾರು ಮೂವತ್ತು ವರ್ಷಗಳ ನಂತರ ದೇಶಕ್ಕೆ ಮರಳಿದೆ. ಹೀಗಾಗಿ ಈ ಬಾರಿಯ ಸ್ಪರ್ಧೆ ಭಾರೀ ಕುತೂಹಲ ಮೂಡಿಸಿದೆ.
ಈ ಸ್ಪರ್ಧೆಯು ಜಾಗತಿಕವಾಗಿ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾಗಿದೆ, ಸೌಂದರ್ಯ, ಪ್ರತಿಭೆ ಮತ್ತು ಬುದ್ಧಿವಂತಿಕೆಯ ಬೆರಗುಗೊಳಿಸುವ ಪ್ರದರ್ಶನದೊಂದಿಗೆ ಲಕ್ಷಾಂತರ ಜನರ ಗಮನವನ್ನು ಸೆಳೆಯುತ್ತದೆ. ಹಾಗಾದರೆ ಏಷ್ಯಾದಿಂದ ಒಟ್ಟು ಎಷ್ಟು ಮಂದಿ ಸುಂದರಿಯರು ಈ ಸ್ಪರ್ಧೆ ಮಾಡುತ್ತಿದ್ದಾರೆ. ಅವರೆಲ್ಲ ಯಾರು ಎಂಬುದನ್ನು ನಾವಿಂದು ನೋಡೋಣ.
ಶಮ್ಮಿ ಇಸ್ಲಾಂ ನಿಲಾ - ಬಾಂಗ್ಲಾದೇಶ
ವಿಶ್ವ ಸುಂದರಿ ಬಾಂಗ್ಲಾದೇಶ ವಿಜೇತ ಶಮ್ಮಿ ಇಸ್ಲಾಂ ನಿಲಾ 21 ವರ್ಷ ವಯಸ್ಸಿನ ಬ್ರಾಂಡ್ ಅಂಬಾಸಿಡರ್ ಮತ್ತು ಡಿಜಿಟಲ್ ಇನ್ಲ್ಪುಯೆನ್ಸರ್ ಆಗಿದ್ದಾರೆ.

ವೆನಾನಿಟಾ ಅಂಗಂಗ್- ಮಲೇಷ್ಯಾ
ವೆನಾನಿತಾ ಅಂಗಾಂಗ್ ಕೌಲಾಲಂಪುರ್ ಮೂಲದ ಡೇಟಾ ಅನಾಲಿಸ್ಟ್ ಆಗಿದ್ದಾರೆ. ಆದರೆ ಮಾಡಲಿಂಗ್ ಮೂಲಕ ಗಮನ ಸೆಳೆದಿದ್ದು ಈ ಬಾರಿ ವಿಶ್ವ ಸುಂದರಿ ಸ್ಪರ್ಧೆಗೆ ಮಲೇಷ್ಯಾವನ್ನು ಪ್ರತಿನಿಧಿಸುತ್ತಿದ್ದಾರೆ.
ಪ್ರಿಯಾಂಕಾ ರಾಣಿ ಜೋಶಿ - ನೇಪಾಳ
ಪ್ರಿಯಾಂಕಾ ರಾಣಿ ಜೋಶಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನವನ್ನು ಅಧ್ಯಯನ ಮಾಡಿದ್ದಾರೆ ಮತ್ತು ಟಿವಿ ನಿರೂಪಕಿ, ರೂಪದರ್ಶಿ ಮತ್ತು ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಅವರು ಪ್ರಸ್ತುತ ತಮ್ಮ ಕುಟುಂಬದ ವ್ಯವಹಾರವನ್ನು ಬೆಂಬಲಿಸುತ್ತಿದ್ದಾರೆ ಮತ್ತು ವಿಶ್ವಸಂಸ್ಥೆಯ ಮಾನವೀಯ ರಾಯಭಾರಿಯಾಗಲು ಬಯಸುತ್ತಾರೆ. ಪ್ರಿಯಾಂಕಾ ಕ್ರೀಡೆ, ಸ್ಕೇಟಿಂಗ್, ಬರವಣಿಗೆ ಮತ್ತು ಚಲನಚಿತ್ರ ನಿರ್ಮಾಣ ಸೇರಿದಂತೆ ಹಲವು ಹವ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಓ ವೀ ಕಿ - ಸಿಂಗಾಪುರ
ಓ ವೀ ಕಿ ವಿನ್ಯಾಸ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ತಮ್ಮದೇ ಆದ ಸ್ವಿಮ್ ಸೂಟ್ ಬ್ರ್ಯಾಂಡ್ ಅನ್ನು ಹೊಂದಿದ್ದಾರೆ ಮತ್ತು 2018 ರಿಂದ ಕಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಫ್ಯಾಷನ್ ವಿನ್ಯಾಸ ಮತ್ತು ಮಾಧ್ಯಮದ ಹಿನ್ನೆಲೆಯೊಂದಿಗೆ, ಅವರು ಡಾಕ್ಟರೇಟ್ ಪೂರ್ಣಗೊಳಿಸಲು, ಕಲಾ ಶಿಕ್ಷಣ ಕೇಂದ್ರವನ್ನು ನಿರ್ಮಿಸಲು ಮತ್ತು ತನ್ನ ಫ್ಯಾಶನ್ ಬ್ರ್ಯಾಂಡ್ ಅನ್ನು ವಿಸ್ತರಿಸಲು ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ.
ಕವಿಂದಿ ನೆತ್ಮಿನಿ - ಶ್ರೀಲಂಕಾ
ಕವಿಂದಿ ನೆತ್ಮಿನಿ ಅವರು ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ವಿಜ್ಞಾನ ಪದವಿಯನ್ನು ಪೂರ್ಣಗೊಳಿಸಿದ ನಂತರ ಸಂಶೋಧನಾ ಬರಹಗಾರರಾಗಿ ಮತ್ತು ಬ್ಯುಸಿನೆಸ್ ಅನಾಲಿಸ್ಟ್ ಆಗಿ ಕೆಲಸ ಮಾಡಿದ್ದಾರೆ.
ಲಿಜಿನ್ ಕಿಮ್ - ದಕ್ಷಿಣ ಕೊರಿಯಾ
ಏರ್‌ಲೈನ್ ಕ್ಯಾಬಿನ್ ಸರ್ವಿಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಿದ ನಂತರ ಲಿಜಿನ್ ಮಾಡೆಲ್ ಮತ್ತು ಪೈಲೇಟ್ಸ್ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ.
ಥರೀನಾ ಬೋಟ್ಸ್ - ಥೈಲ್ಯಾಂಡ್
ಥರೀನಾ ಪ್ರಸ್ತುತ ವಾಣಿಜ್ಯ ಮತ್ತು ಮಾರ್ಕೆಟಿಂಗ್‌ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಗಾಗಿ ಅಧ್ಯಯನ ಮಾಡುತ್ತಿದ್ದಾಳೆ ಮತ್ತು ಮಹಿಳೆಯರ ಸಬಲೀಕರಣಕ್ಕೆ ಸಹಾಯ ಮಾಡುವ ತನ್ನ ಬಟ್ಟೆ ಬ್ರಾಂಡ್ ಅನ್ನು ಸಹ ಮುನ್ನಡೆಸುತ್ತಿದ್ದಾಳೆ. ಅವಳು ಸಾಂಪ್ರದಾಯಿಕ ಥಾಯ್ ನೃತ್ಯ, ಟೆನಿಸ್ ಆಡುವುದು, ಚಿತ್ರಕಲೆ ಮತ್ತು ಫ್ರೀಡೈವಿಂಗ್ ಅನ್ನು ಆನಂದಿಸುತ್ತಾಳೆ.
ಕೆ ಕ್ಸು ಕ್ಸಿನ್ - ಚೀನಾ
ಕೆ ಕ್ಸು ಕ್ಸಿನ್ ಅವರು ವಿಶ್ವ ಸುಂದರಿ ಸ್ಪರ್ಧೆಯನ್ನು ಪ್ರತಿನಿಧಿಸಲಿದ್ದಾರೆ. ಆಕೆ ಹಲವು ಬ್ರಾಂಡ್‌ಗಳಿಗೆ ರಾಯಭಾರಿಯಾಗಿ, ರೂಪದರ್ಶಿಯಾಗಿ ಹೆಸರು ಮಾಡಿದ್ದಾಳೆ.
ಸಿನಿ ಶೆಟ್ಟಿ - ಭಾರತ
ಸಿನಿ ಶೆಟ್ಟಿ ಅಕೌಂಟಿಂಗ್ ಮತ್ತು ಫೈನಾನ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ಮಿಸ್ ಇಂಡಿಯಾ 2022 ವಿಜೇತರು CFA (ಚಾರ್ಟರ್ಡ್ ಫೈನಾನ್ಶಿಯಲ್ ಅನಾಲಿಸ್ಟ್) ಅನ್ನು ಅನುಸರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಸಿನಿ ಶೆಟ್ಟಿ ಕೂಡ ಮಾರ್ಕೆಟಿಂಗ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದ್ದಾರೆ. ಆದಕೆ ಮಂಗಳೂರಿನವರಾಗಿದ್ದು, ಮುಂಬೈನಲ್ಲಿ ನೆಲೆಸಿದ್ದಾರೆ. ಇದರ ಜೊತೆ ಭರತನಾಟ್ಯದಲ್ಲಿ ರಂಗೇತ್ರಂ ಮುಗಿಸಿದ್ದಾರೆ.
ಆಡ್ರೆ ವನೆಸ್ಸಾ - ಇಂಡೋನೇಷ್ಯಾ
ಆಡ್ರೆ ವಾಣಿಜ್ಯದಲ್ಲಿ ಪ್ರಥಮ ಪದವಿ ಮತ್ತು ಬ್ಯಾಂಕಿಂಗ್ ಮತ್ತು ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಅವರು ಪ್ರಸ್ತುತ ಟಿವಿ ಹೋಸ್ಟ್, ಉದ್ಯಮಿ, ಮಾಡೆಲ್ ಮತ್ತು ಸಾಂಗ್ ರೈಟರ್ ಆಗಿ ಕೆಲಸ ಮಾಡುತ್ತಿದ್ದಾರೆ.



Click it and Unblock the Notifications


