Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಜವಾದ ಸಂತೂರ್ ಮಮ್ಮಿ ಅಂದ್ರೆ ಇವರೇ ನೋಡಿ, 26 ವರ್ಷದ ಮಗನ ಮದುವೆಯಲ್ಲಿ ತಾಯಿಯ ಫೋಟೋ ವೈರಲ್
ಕಳೆದ ಒಂದು ವಾರದಿಂದ ಒಬ್ಬ ಮಹಿಳೆಯ ವೀಡಿಯೋ ತುಂಬಾನೇ ವೈರಲ್ ಆಗ್ತಾ ಇತ್ತು, ವೈರಲ್ ಆಗುತ್ತಿರುವ ವೀಡಿಯೋ ಒಂದು ಮದುವೆ ವೀಡಿಯೋ ಆಗಿದ್ದು ಅದರಲ್ಲಿ ಈ ಮಹಿಳೆ ಮದುಮಗ ಅಥವಾ ಮದುಮಗಳ ಸಹೋದರಿ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು, ಆದರೆ ಇವರ ವಯಸ್ಸು ನಾವಂದುಕೊಂಡಂತೆ 25-30 ಅಲ್ವೇ ಅಲ್ಲ, 60 ವರ್ಷ ವಯಸ್ಸಿನವರು, ಆದರೆ ಇದನ್ನು ಹೇಳಿದರು ಯಾರೂ ನಂಬಲು ಸಾಧ್ಯವಿಲ್ಲ ನಿಜವಾದ ಸಂತೋರ್ ಮಮ್ಮಿ ಅಂದ್ರೆ ಇವರೇ ಕಣ್ರಿ.

ಅಬ್ಬಾಬ್ಬ ಎಂಥ ರೂಪ, ನೋಡಿದರೆ ಇನ್ನೂ ಮದುವೆಯಾಗದೆ ಇರುವ ತರುಣಿಯಂತೆ ಇದ್ದಾರೆ, ಆದರೆ ಇವರು ಇಷ್ಟೊಂದು ಆಕರ್ಷಕವಾಗಿ ಅಲಂಕರಿಸಿಕೊಂಡಿರುವುದು ತಮ್ಮ ಮಗನ ಮದುವೆಯಲ್ಲಿ. ಇವರಿಗೆ 26 ವರ್ಷ ಮಗನಿದ್ದು ಅವನ ಮದುವೆ ಇತ್ತೀಚೆಗೆ ಮಾಡಲಾಯ್ತು, ಆದರೆ ಆ ಮದುವೆ ವೀಡಿಯೋದಲ್ಲಿ ಹೈಲೈಟ್ಸ್ ಆಗಿರುವುದು ಮಾತ್ರ ಈ ತಾಯಿ, ಇವರಿಗೆ 55 ವರ್ಷಕ್ಕಿಂತಲೂ ಹೆಚ್ಚಿನ ಪ್ರಾಯವಾಗಿದೆ ಎಂದರೆ ಅದು ನಂಬುವುದು ತುಂಬಾನೇ ಕಷ್ಟವಾಗುತ್ತೆ, ಮುಖದಲ್ಲಿ ಒಂದು ಸುಕ್ಕು ಕೂಡ ಇಲ್ಲ, ಸೌಂದರ್ಯ ದೇವತೆ ಎಂಬಂತೆ ಕಂಗೊಳಿಸಿದ್ದಾರೆ. ಇವರ ಈ ಸೌಂದರ್ಯದ ಮುಂದೆ ಯಾವ ನಟಿಯರೂ ಸಮವಲ್ಲ, ಇಷ್ಟು ಪ್ರಾಯದಲ್ಲಿ ಇಷ್ಟ ರೂಪಸಿಯಾಗಿರುವ ಮಹಿಳೆಯರು ತುಂಬಾನೇ ವಿರಳ, ವಿಶ್ವ ಸುಂದರಿಯಾಗಿದ್ದವರು ಕೂಡ 50ರ ಪ್ರಾಯದ ನಂತರ ಪ್ರಾಯದ ಲಕ್ಷಣಗಳು ಕಂಡು ಬರುತ್ತದೆ, ಆದರೆ ಇವರಲ್ಲಿ ಪ್ರಾಯ ರಿವರ್ಸ್ ಓಡುತ್ತಿದೆ ಎಂದನಿಸುವುದು.
ಯಾರು ಈ ಸಂತೂರ್ ಮಮ್ಮೀ
ಇವರ ಹೆಸರು ಅರುಣಿಮಾ ದತ್ತಾ, ಸೋಷಿಯಲ್ ಮೀಡಿಯಾದಲ್ಲಿ ಸಕ್ರೀಯವಾಗಿದ್ದಾರೆ, 170K ಫಾಲೋವರ್ಸ್ ಇದೆ, ಇವರದ್ದೇ ಆದ ಯೋಗ ಸ್ಟುಡಿಯೋ ಇದೆ. ಮೋಟಿವೇಷನ್ ಬರಹಗಳನ್ನು ಹಾಕುತ್ತಿರುತ್ತಾರೆ, ಕೆಲವೊಂದು ಯೋಗ ವೀಡಿಯೋ ಪೋಸ್ಟ್ ಮಾಡುತ್ತಿರುತ್ತಾರೆ, ಆದರೆ ಇವರು ತುಂಬಾ ವೈರಲ್ ಆಗಿದ್ದು ಮಗನ ಮದುವೆಯಲ್ಲಿ.
ಇವರ ಫಾಲೋವರ್ಸ್‌ಗೆ ಕೂಡ ಇವರಿಗೆ ಇಷ್ಟು ದೊಡ್ಡ ಮಗನಿದ್ದಾನೆ ಎಂದು ನಂಬುವುದು ಕಷ್ಟವಾಯ್ತು, ಈಗ ಎಲ್ಲರೂ ಇವರ ಈ ಸೌಂದದರ್ಯದ ಸೀಕ್ರೆಟ್ ಏನು ಎಂದು ತಿಳಿಯಬಯಸುತ್ತಿದ್ದಾರೆ.
ಇವರ ಬ್ಯೂಟಿ ಸೀಕ್ರೆಟ್ ಬಗ್ಗೆ ಇವರೇ ಹೇಳಿರುವಂತೆ
ಇವರನ್ನು ನೋಡಿದಾಗ ಯಾವ ಕ್ರೀಮ್ ಬಳಸಿರಬಹುದು, ಯಾವ ಸೋಪ್ ಬಳಸುತ್ತಿರಬಹುದು, ಬ್ಯೂಟಿ ಪಾರ್ಲರ್fಗೆ ಹೆಚ್ಚು ಖರ್ಚು ಮಾಡಿರಬಹುದಾ ಹೀಗೆಲ್ಲಾ ಪ್ರಶ್ನೆಗಳು ಮೂಡುವುದು, ಆದರೆ ಇವರು ತಮ್ಮ ಬ್ಯೂಟಿಗೆ ಸೆಲ್ಫ್ ಲವ್ ಮತ್ತು ಸೆಲ್ಫ್ ಕೇರ್ ಕಾರಣ ಎಂಬುವುದಾಗಿ ಹೇಳಿದ್ದಾರೆ. ನಮ್ಮನ್ನು ನಾವು ಆರೈಕೆ ಮಾಡಬೇಕು, ನಮ್ಮನ್ನು ನಾವು ಪ್ರೀತಿಸಬೇಕು
ಯೋಗ ಇವರ ಸೌಂದರ್ಯ ಕಾಪಾಡುವಲ್ಲಿ ಪ್ರಮುಖಪಾತ್ರವಹಿಸಿದೆ
ಇವರದ್ದೇ ಆದ ಯೋಗ ಸ್ಟುಡಿಯೋ ಇದೆ. ಇವರು ಪ್ರತಿದಿನ ಯೋಗಾ ಅಭ್ಯಾಸ ಮಾಡುತ್ತಾರೆ. ಆರೋಗ್ಯಕರ ಜೀವನಶೈಲಿ ಇವರ ಸೌಂದರ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂಬುವುದರಲ್ಲಿ ನೋ ಡೌಟು.
ಯೋಗಾಭ್ಯಾಸ ಮಾಡುವವರಲ್ಲಿ ಬೇಗನೆ ವಯಸ್ಸು ಗೋಚರಿಸುವುದಿಲ್ಲ
ನೀವು ಪ್ರತಿನಿತ್ಯ ಯೋಗ ಅಭ್ಯಾಸ ಮಾಡಿರುವವರನ್ನು ಗಮನಿಸಿರಬಹುದು, ಅವರಿಗೆ 50 ವರ್ಷವಾಗಿದ್ದೂ 35-40 ವರ್ಷದವರಂತೆ ಕಾಣುತ್ತಾರೆ, ಅವರ ವಯಸ್ಸಿಗಿಂತ ಚಿಕ್ಕವರಾಗಿಯೇ ಕಾಣಿಸುತ್ತಾರೆ.
ಪ್ರತಿದಿನ ಯೋಗ ಮಾಡಿದಾಗ ಮುಖದಲ್ಲಿ ಹೊಳಪು ಹೆಚ್ಚಾಗುವುದು, ಕೂದಲಿನ ಹೊಳಪು ಕೂಡ ತುಂಬಾ ಚೆನ್ನಾಗಿರುತ್ತದೆ, ಸೂರ್ಯ ನಮಸ್ಕಾರ, ಚಂದ್ರಾಸನ, ಸರ್ವಾಂಗಾಸನ,ಶಿರಸಾಸನ ಈ ಬಗೆಯ ಆಸನಗಳು ತ್ವಚೆ ಕಾಂತಿ ಹೆಚ್ಚಿಸಿ ಯೌವನ ಕಳೆ ಹೆಚ್ಚಿಸಲು ಸಹಕಾರಿ.



Click it and Unblock the Notifications











