Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ನೀವು ಬಳಸೋ ಲಿಪ್‌ಸ್ಟಿಕ್ ಕೆಂಪು ಬಣ್ಣದ್ದ..? ಕೀಟಗಳಿಂದಲೇ ಬರುತ್ತೆ ಈ ಬಣ್ಣ!
ಹೆಣ್ಣು ಮಕ್ಕಳು ಮೇಕಪ್ ಮಾಡಿಕೊಳ್ಳದೆ ಮನೆಯಿಂದ ಹೊರಬರಲ್ಲ. ಸೌಂದರ್ಯ ಅನ್ನೋದನ್ನು ಮಹಿಳೆಯರ ನೋಡಿಯೇ ಹೇಳುತ್ತಾರೆ. ಮಹಿಳೆಯರು ಚೆನ್ನಾಗಿ ಕಾಣಿಸಬೇಕು ಎನ್ನುವ ಉದ್ದೇಶದಿಂದ ಮುಖಕ್ಕೆ ಎಲ್ಲಾ ರೀತಿಯ ಕ್ರೀಮ್‌ಗಳ ಬಳಸುವುದು ನೋಡಬಹುದು. ಹಾಗೆ ಮುಖ ಚೆನ್ನಾಗಿ ಕಲೆ ರಹಿತವಾಗಿ ಕಾಣಿಸಬೇಕು ಎಂಬ ಕಾರಣಕ್ಕೆ ಹಲವು ರೀತಿಯ ಕ್ರೀಮ್‌ಗಳ ಬಳಸುವುದು ನೋಡಬಹುದು.
ಅದರಲ್ಲೂ ಕಣ್ಣಿಗೆ ಒಂದು ರೀತಿ, ಹಾಗೆ ಕೆನ್ನೆಗೆ ಒಂದು ರೀತಿಯ ಕ್ರೀಮ್‌ಗಳ ಹಚ್ಚಿಕೊಳ್ಳುವುದು ನೋಡಬಹುದು. ಹಾಗೆ ಸೌಂದರ್ಯ ವರ್ಧಕಗಳಲ್ಲಿ ಇತ್ತೀಚಿಗೆ ಲಿಪ್‌ಸ್ಟಿಕ್ ಬಳಕೆ ಕೂಡ ಹೆಚ್ಚಾಗುತ್ತಿರುವುದು ನೋಡಬಹುದು. ಲಿಪ್‌ಸ್ಟಿಕ್ ಇಲ್ಲದೆ ಈಗ ಯುವತಿಯರು ಹೊರಬರುವುದಿಲ್ಲ. ಹಾಗೆ ಬಣ್ಣ ಬಣ್ಣದ ಲಿಪ್‌ಸ್ಟಿಕ್ ಬಳಕೆ ಮಾಡುವುದು ನೋಡಬಹುದು. ಹಾಗೆ ಕೆಂಪು ಬಣ್ಣದ ಲಿಪ್ ಸ್ಟಿಕ್ ಬಹಳ ಆಕರ್ಷಕವಾಗಿ ಕಾಣಿಸುತ್ತೆ.

ಮುಖದ ಅಂದ ಹೆಚ್ಚಿಸುವುದು ಕೆಂಪು ಲಿಪ್‌ಸ್ಟಿಕ್ ಆಗಿದೆ. ಈಗ ದುಬಾರಿ ಬೆಲೆಯ ಈ ಲಿಪ್‌ಸ್ಟಿಕ್ ಸಂಗ್ರಹಗಳನ್ನೇ ಯುವತಿಯರು ಇಟ್ಟಿರುತ್ತಾರೆ. ಆದ್ರೆ ಈ ಲಿಪ್‌ಸ್ಟಿಕ್ ಬಳಕೆ ನಿಮ್ಮ ತುಟಿಯ ಆರೋಗ್ಯ ಸೇರಿದಂತೆ ಒಟ್ಟಾರೆ ದೇಹದ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಅನ್ನೋದನ್ನು ತಿಳಿದಿರಬಹುದು. ಇದರಲ್ಲಿನ ರಾಸಾಯನಿಕಗಳು ಕ್ಯಾನ್ಸರ್ ಕಾರಕ ಅಂಶಗಳನ್ನು ಸಹ ಹೊಂದಿರುತ್ತವೆ ಅನ್ನೋದನ್ನು ಕೂಡ ನಾವು ತಿಳಿದಿದ್ದೇವೆ.
ಆದ್ರೆ ಅಚ್ಚರಿ ಅಂದರೆ ಈ ಕೆಂಪು ಬಣ್ಣದ ಲಿಪ್‌ಸ್ಟಿಕ್ ಮಾಡೋಕೆ ಕೀಟವೊಂದನ್ನು ಬಳಸಲಾಗುತ್ತದೆ ಎಂಬ ಅಚ್ಚರಿ ನಿಮಗೆ ಗೊತ್ತಾ? ಹೌದು ವಿಶೇಷವಾಗಿ ಕಾಣುವ ಕೊಚಿನಿಯಲ್ ಎಂಬ ಕೀಟಗಳನ್ನು ಈ ಕೆಂಪು ಬಣ್ಣ ತಯಾರಿಕೆಗೆ ಬಳಸಲಾಗುತ್ತದೆ. ಈ ಕೀಟಗಳನ್ನು ಪಾಪಸ್ ಕಳ್ಳಿಯ ಎಲೆಗಳಲ್ಲಿ ಒಂದು ರಂದ್ರ ಮಾಡಿ ಅಎದರೊಳಗೆ ಹಾಕಲಾಗುತ್ತದೆ. ಈ ಕೀಟಗಳು ಎಲೆಗಳ ಮೇಲೆ ಬಿಳಿ ಮೊಟ್ಟೆಗಳ ಇಡಲಿವೆ, ಅದನ್ನು ಒಟ್ಟುಗೂಡಿಸಿ ಬಳಿಕ ಕೆಂಪು ಬಣ್ಣ ಪಡೆಯಲಾಗುತ್ತದೆ.
ಈ ಕೀಟವು ಪಾಪಸ್ ಕಳ್ಳಿಯ ಎಲೆಯ ಮೇಲೆ ಕಾರ್ಮಿನಿಕ್ ಆಮ್ಲವನ್ನು ಉತ್ಪಾದಿಸುತ್ತವೆ. ಇದರಿಂದ ಕಡು ಕೆಂಪು ಬಣ್ಣ ಪಡೆಯಬಹುದು. ಹೀಗಾಗಿ ಈ ಕೀಟಗಳು ಉತ್ಪಾದಿಸುವ ಈ ಆಮ್ಲವನ್ನು ಒಟ್ಟು ಮಾಡಲಾಗುತ್ತದೆ. ನಂತರ ಬಿಸಿಲಿನಲ್ಲಿ ಒಣಗಿಸಿ ಕುಟ್ಟಿ ಪುಡಿ ಮಾಡುವ ಮೂಲಕ ಕೆಂಪು ಬಣ್ಣ ಪಡೆಯಲಾಗುತ್ತದೆ. ಅನಂತರ ಈ ಬಣ್ಣವನ್ನು ಹಲವು ರಾಸಾಯನಿಕಗಳೊಂದಿಗೆ ಬೆರೆಸುವ ಮೂಲಕ ಲಿಪ್‌ಸ್ಟಿಕ್ ತಯಾರಿಸಲಾಗುತ್ತದೆ.
ಹೆಚ್ಚಾಗಿ ಟೆಕ್ಸಾಸ್ ಭಾಗದಲ್ಲಿ ಈ ರೀತಿಯ ವಿಧಾನದಲ್ಲಿ ಲಿಪ್‌ಸ್ಟಿಕ್ ತಯಾರಿಸಲಾಗುತ್ತದೆ. ಹಾಗೆ ಲಿಪ್‌ಸ್ಟಿಕ್ ಮಾತ್ರವಲ್ಲದೆ ಹಲವು ಉತ್ಪನ್ನಗಳ ಬಳಕೆಗೂ ಇದು ಉಪಕಾರಿಯಾಗಿದೆ. ಸಾವಿರಾರು ವರ್ಷಗಳ ಹಿಂದೆ ಮೆಸೊಅಮೆರಿಕನ್ನರು ಮುಳ್ಳು ಕಳ್ಳಿ ಪ್ಯಾಡಲ್‌ಗಳ ಮೇಲೆ ಕೀಟವನ್ನು ಕಂಡುಹಿಡಿದರು ಮತ್ತು ಅವುಗಳನ್ನು ಬೆಳೆಸಲು ಮತ್ತು ಬಳಸಲು ಮುಂದಾದರು. ಇದೇ ಬಣ್ಣವನ್ನು ಜವಳಿ ಹಾಗೂ ಚಿತ್ರಕಲೆಗೂ ಬಳಸಲಾಗಿತ್ತು.
ಯುರೋಪಿಯನ್ನರು ತಮ್ಮದೇ ಆದ ಜವಳಿ ಬಣ್ಣಗಳಿಗಾಗಿ ಈ ಕೀಟಗಳನ್ನು ಬಳಸಲು ಪ್ರಾರಂಭಿಸಿದರು. ಹಾಗೆ ಬ್ರಿಟೀಷರ ಕಂಪು ಕೋಟ್, ಮಿಲಿಟರಿ ಸಮವಸ್ತ್ರಗಳಿಗಾಗಿ ಬಳಸುವುದು ಹಾಗೆ ಅಮೆರಿಕ ಬಾವುಟದಲ್ಲಿನ ಕೆಂಪು ಬಣ್ಣವನ್ನು ಕೂಡ ಇದೇ ಕೀಟಗಳ ಸಹಾಯದಿಂದಲೇ ಬಳಸಲಾಯಿತು. ಈಗ ಹಲವು ಬ್ರಾಂಡ್‌ಗಳು ಕೆಂಪು ಬಣ್ಣದ ಪಿಪ್‌ಸ್ಟಿಕ್ ಬಳಕೆಯಲ್ಲಿ ಇದೇ ಕೀಟಗಳ ಉಪಯೋಗಿಸುತ್ತಿದೆ. ಇನ್ನು ಹಲವು ಕಂಪನಿಗಳು ಲಿಪ್‌ಸ್ಟಿಕ್ ಬಳಕೆಗೆ ರಾಸಾಯನಿಕ ಬಳಕೆ ಮಾಡುತ್ತಿವೆ.
ಹೀಗಾಗಿ ನೀವು ಬಳಸುತ್ತಿರುವ ಲಿಪ್‌ಸ್ಟಿಕ್ ಕೂಡ ಈ ಕೀಟಗಳಿಂದಲೇ ಮಾಡಿರಬಹುದು. ಅದರ ಸಂಸ್ಕರಣೆ ಹಾಗೂ ಕೀಟಗಳ ಕೃಷಿ ಕೂಡ ಬಹಳ ಕಷ್ಟಕರವಾಗಿದೆ. ಹೀಗಾಗಿ ಈ ಲಿಪ್‌ಸ್ಟಿಕ್‌ಗಳು ಬಹಳ ದುಬಾರಿಯಾಗಿರಲಿವೆ.



Click it and Unblock the Notifications
