Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಅನಂತ್ ಅಂಬಾನಿ ಪತ್ನಿ ರಾಧಿಕಾ ಮರ್ಚೆಂಟ್ ಕೈಯಲ್ಲಿ ಮೂಡಿದೆ ಯಾರ ಕೈಯಲ್ಲಿಯೂ ಕಂಡಿರದ ಚಿತ್ತಾರ
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಹಿಂದೂ ಸಂಪ್ರದಾಯ, ಹಿಂದೂ ದೇವಾಲಯಗಳ ಪರಿಕಲ್ಪನೆ ಲ್ಲಿ ಒಳಗೊಂಡಿದೆ. ಪುರಾತನ ಕತೆಗಳಲ್ಲಿ ನಾವು ಓದಿದಂಥ ಗತ ವೈಭವ ಈ ಮದುವೆಯಲ್ಲಿ ಮತ್ತೆ ಮರುಗಳಿಸಿ, ನಮ್ಮ ಕಣ್ಮನ ತಳಿಸುತ್ತಿದೆ.
ಈ ಮದುವೆಯಲ್ಲಿ ಹಿಂದೂ ಧರ್ಮದ ತತ್ತ್ವ ಅಳವಡಿಸಿಕೊಂಡು ವಿದೇಶಿಗರಿಗೂ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಸಿದ್ದಾರೆ ಅಂಬಾನಿ.

ಮದುವೆಯ ಆಮಂತ್ರಣ ಪತ್ರಿಕೆಯಲ್ಲಿಯೂ ಶ್ರೀ ವಿಷ್ಣು, ಶ್ರೀ ಗಣೇಶ ಸೇರಿದಂತೆ ಹಲವು ದೇವರುಗಳ ಫೋಟೋವಿದೆ. ಮದುವೆಗೆ ಕೆಲವು ದಿನಗಳಿರುವಾಗಲೇ ಹಲವಾರು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು, ಮದುವೆಯ ಮೊದಲ ಆಮಂತ್ರಣ ಪತ್ರಿಕೆ ನೀಡಿದ್ದು ಕಾಶಿಯ ವಿಶ್ವನಾಥನಿಗೆ. ಇದೀಗ ಮದಮಗಳ ಕೈಯಲ್ಲಿನ ಮದರಂಗಿಯ ವಿನ್ಯಾಸ ಕೂಡ ಗಮನ ಸೆಳೆದಿದೆ.
ಮದುಮಗಳ ಕೈಯಲ್ಲಿ ಶ್ರೀಕೃಷ್ಣ-ರಾಧೆ ವಿನ್ಯಾಸ
ರಾಧಿಕಾ ಮರ್ಚೆಂಟ್ ಕೈಯಲ್ಲಿ ಮೆಹಂದಿ ವಿನ್ಯಾಸ ಇದೀಗ ತುಂಬಾನೇ ಗಮನ ಸೆಳೆಯುತ್ತಿದೆ, ಎಲ್ಲರೂ ವಿಭಿನ್ನ ವಿನ್ಯಾಸದ ಮೆಹಂದಿ ಡಿಸೈನ್ ಹಾಕಿಸಿದರೆ ಇವರು ಶ್ರೀಕೃಷ್ಣ , ರಾಧೆಯ ಡಿಸೈನ್ ಹಾಕಿಸಿಕೊಂಡಿದ್ದಾರೆ. ಕೈ ಮೇಲ್ಭಾಗಕ್ಕೆ ಅನಂತ್, ರಾಧಿಕಾ ಅಂತ ಬರೆಸಿದ್ದಾರೆ. ಇದೀಗ ಈ ಮೆಹಂದಿ ವಿನ್ಯಾಸ ನೆಟ್ಟಿಗರ ಗಮನ ಸೆಳೆದಿದೆ.
ವಿದೇಶದಿಂದ ಬಂದ ಸೆಲೆಬ್ರಿಟಿಗಳು ಕೂಡ ಭಾರತೀಯ ಉಡುಗೆಯಲ್ಲಿ ಮಿಂಚಿದ್ದು ಇನ್ನೂ ವಿಶೇಷ
ಈ ಮದುವೆಯಲ್ಲಿ ಬರುವವರೆಗೆ ಅಂಬಾನಿ ಕುಟುಂಬದವರು ಡ್ರೆಸ್‌ಕೋಡ್ ನೀಡಿದ್ದರು, ಪ್ರಸಿದ್ಧ ಪಾಪ್ ಗಾಯಕ ಜಸ್ಟಿನ್ ಬೀಬರ್ ಕೂಡ ಶೆರ್ವಾನಿ ಧರಿಸಿ ಮದುವೆಯಲ್ಲಿ ಮಿಂಚಿದ್ದರು, ಈ ಮದುವೆಗೆ ಆಗಮಿಸಿದ ಎಲ್ಲರೂ ಸಾಂಪ್ರದಾಯಕ ಉಡುಗೆಯಲ್ಲಿ ಮಿಂಚಿದ್ದರು.
ಜುಲೈ 12ರಿಂದ ಮದುವೆ ಕಾರ್ಯಕ್ರಮ ಶುರುವಾಗಿದೆ, ಮೂರು ದಿನ ಕಾರ್ಯ ನಡೆಯಲಿದೆ, ನಾಳೆ ವಧು ವರನನ್ನು ಆಶೀರ್ವದಿಸುವ ಕಾರ್ಯಕ್ರಮವಿದೆ.
ಸುಮಾರು 6000 ಕೋಟಿಯಲ್ಲಿ ನಡೆಯುತ್ತಿರುವ ಮದುವೆ
ಈ ಮದುವೆಗೆ ಸುಮಾರು 5000ದಿಂದ 6000 ಕೋಟಿ ಖರ್ಚಾಗುತ್ತಿದೆ.... ಮದುವೆ ಪ್ರತಿಯೊಂದು ಥೀಮ್ ಕೂಡ ಹಿಂದೂ ಪೌರಾಣಿಕ ಕತೆಯನ್ನು ಬಿಂಬಿಸುತ್ತಿದೆ. ಹಿಂದೂ ಸಂಸ್ಕೃತಿಯನ್ನು ಬಿಂಬಿಸುತ್ತಿದೆ, ಇದು ಒಂದು ರೀತಿಯಲ್ಲಿ ಹೆಮ್ಮೆಯ ಸಂಗತಿ, ಏಕೆಂದರೆ ಅಂಬಾನಿ ಕುಟುಂಬವನ್ನು ಇಡೀ ವಿಶ್ವ ಗಮನಿಸುತ್ತಿದೆ, ಹಾಗಾಗಿ ನಮ್ಮ ಭಾರತೀಯ ಸಂಸ್ಕೃತಿ ಕೂಡ ಗಮನ ಸೆಳೆಯಬಹುದು ಅಲ್ವಾ?
ಮದುವೆ ಔಟ್ ಫುಟ್ ಹೇಗಿದೆ?
ಈ ಮದುವೆ ಔಟ್‌ಫಿಟ್ ಬಗ್ಗೆ ಒಬ್ಬೊಬ್ಬರು ಒಂದೊಂದು ಕಮೆಂಟ್ ಮಾಡುತ್ತಿದ್ದಾರೆ, ಈ ಡ್ರೆಸ್ಸಿಂಗ್ ಅಷ್ಟೊಂದು ಚೆನ್ನಾಗಿಲ್ಲ, ಇದಕ್ಕಿಂತ ಪ್ರೀವೆಡ್ಡಿಂಗ್ ಡ್ರೆಸ್ ಚೆನ್ನಾಗಿತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ.
ರಾಧಿಕಾ ಮರ್ಚೆಂಟ್ ಅಬು ದಾನಿ ಸಂದೀಪ್ ಕೋಸ್ಲಾ ಡ್ರೆಸ್ ಧರಿಸಿದ್ದಾರೆ. ಕ್ರೀಮ್ ಬಣ್ಣದ ಲೆಹಂಗಾಕ್ಕೆ ಕ ಗೋಲ್ಡನ್ ವರ್ಕ್ ಮಾಡಲಾಗಿದೆ, ಕೋಟಿಗಟ್ಟಲೆ ಬೆಲೆ ಬಾಳುವ ಉಡುಪು ಆದರೂ ಇದು ಗಮನ ಸೆಳೆಯುವಲ್ಲಿ ಸ್ವಲ್ಪ ಹಿಂದೆ ಬಿದ್ದಿದೆ ಎಂದು ಹೇಳಬಹುದು.



Click it and Unblock the Notifications
