Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಅನಂತ್ ಅಂಬಾನಿಗೆ ಕೂದಲು ಇಲ್ಲ ಅಂತ ಟ್ರೋಲ್ ಮಾಡುವವವರೇ ಹೇರ್‌ಟ್ರ್ಯಾನ್ಸ್ ಪ್ಲ್ಯಾಂಟ್ ಬಗ್ಗೆ ನಿಮಗೆಷ್ಟು ಗೊತ್ತು?
ಮದುವೆ ನಿಶ್ಚಿಯವಾದಾಗಿನಿಂದ ಅನಂತ್ ಅಂಬಾನಿ ಮೇಲೆ ಆಗುತ್ತಿರುವ ಸೈಬರ್ ದಾಳಿ ಇನ್ನೂ ನಿಂತಿಲ್ಲ, ಪಾಪ ಅವರು ಮದುವೆ ಖುಷಿನ್ನು ಅನುಭವಿಸಲಿ ಬಿಡದಂತೆ ಜನ ಟ್ರೋಲ್ ಮಾಡುತ್ತಿದ್ದಾರೆ, ಅನಂತ್ ಅಂಬಾನಿಯನ್ನು ಟ್ರೋಲ್ ಮಾಡುವವರು ತಾವೇನೋ 100% ಪರ್ಫೆಕ್ಟ್ ಇದ್ದೀವಿ ಎಂಬಂತೆ ಟ್ರೋಲ್ ಮಾಡುತ್ತಿದ್ದಾರೆ.

ಅನಂತ್ ಅಂಬಾನಿಯನ್ನು ಮದುವೆಯಾಗುವವರೆಗೆ ದಪ್ಪದ ಕಾರಣ ಹೇಳಿ ಟ್ರೋಲ್ ಮಾಡಿದವರು ಈಗ ಅವರಿಗೆ ಕೂದಲಿಲ್ಲ ಎಂಬ ಕಾರಣಕ್ಕೆ ಟ್ರೋಲ್ ಮಾಡುತ್ತಿದ್ದಾರೆ. ಟ್ರೋಲ್ ಮಾಡುವುದಕ್ಕೆ ಕಾರಣ ಹುಡುಕಿ ಹುಡುಕಿ ಟ್ರೋಲ್ ಮಾಡುವುದನ್ನು ನೋಡುವಾಗ ಛೇ... ಒಬ್ಬ ಮನುಷ್ಯನನ್ನು ಇಷ್ಟೊಂದು ಟ್ರೋಲ್ ಮಾಡ್ತಾರಲ್ಲ ಅವರ ಮನಸ್ಥಿತಿ ಎಂತ ಕೆಟ್ಟದು ಎಂದನಿಸದೆ ಇರುವುದು.
ಈಗಂತೂ ಅನಂತ್ ಅಂಬಾನಿ ಬಕ್ಕ ತಲೆಯವರು ಎಂದು ಟ್ರೋಲ್ ಮಾಡುತ್ತಿದ್ದಾರೆ. ಅಷ್ಟೊಂದು ಶ್ರೀಮಂತ ವ್ಯಕ್ತಿ ಮನಸ್ಸು ಮಾಡಿದರೆ ವಿಗ್ ಧರಿಸಬಹುದಿತ್ತು ಅದರೆ ಅವರು ಆ ರೀತಿ ಮಾಡಲಿಲ್ಲ, ಅವರ ಆತ್ಮವಿಶ್ವಾಸಕ್ಕೆ ಹ್ಯಾಟ್ಸಪ್ ಹೇಳಬೇಕು. ಇನ್ನು ಇಷ್ಟೊಂದು ಹೇರ್ ಟ್ರಾನ್ಸ್‌ಪ್ಲ್ಯಾಂಟ್ ಸೆಂಟರ್‌ಗಳಿರುವಾಗ ಅನಂತ್ ಅಂಬಾನಿಗೆ 3-4 ಲಕ್ಷ , ಇಲ್ಲಾ ಒಂದು ಕೋಟಿಯೇ ಆಗಿರಲಿ ದುಡ್ಡು ಖರ್ಚು ಮಾಡುವುದು ಕಷ್ಟವೇ? ಹೀಗೆ ಮಾಡಿಸಿದ್ದರೆ ಈ ರೀತಿ ಟ್ರೋಲ್‌ಗೆ ಒಳಗಾಗುತ್ತಿರಲಿಲ್ಲ ಅಲ್ವಾ ಎಂದು ನಿಮ್ಮಲ್ಲಿ ಕೆಲವರಿಗೆ ಅನಿಸಬಹುದು.
ಆದರೆ ಈ ಹೇರ್ ಟ್ರಾನ್ಸ್‌ಪ್ಲ್ಯಾಂಟ್‌ನಲ್ಲಿ ಕೆಲವೊಂದು ಅಡ್ಡಪರಿಣಾಮಗಳಿವೆ, ಅಲ್ಲದೆ ಕೆಲವೊಂದು ಆರೋಗ್ಯ ಸಮಸ್ಯೆ ಇರುವವರಿಗೆ ಹೇರ್ ಟ್ರ್ಯಾನ್ಸ್‌ಪ್ಲ್ಯಾಂಟ್ ಮಾಡಲು ಸಾಧ್ಯವಿಲ್ಲ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ:
ಮೊದಲಿಗೆ ಹೇರ್ ಟ್ರಾನ್ಸ್‌ಪ್ಲ್ಯಾಂಟ್ ಅಡ್ಡಪರಿಣಾಮದ ಬಗ್ಗೆ ನೋಡುವುದಾದರೆ
ಅನಸ್ತೇಷಿಯಾ ಪಡೆದಾಗ ಕೆಲವರಿಗೆ ಅಲರ್ಜಿ ಉಂಟಾಗಬಹುದು, ಇದರಿಂದ ಆರೋಗ್ಯ ಸ್ಥಿತಿ ಗಂಭೀರ ಕೂಡ ಆಗಬಹುದು
ಸರ್ಜಿಕಲ್ ರಿಸ್ಕ್ ಇದೆ ಅಂದರೆ ಬ್ಲೀಡಿಂಗ್ ಆಗುವ ಸಾಧ್ಯತೆ ಇದೆ
ಆ ಭಾಗ ಕೆಂಪಾಗುವುದು, ತುರಿಕೆ ಈ ಬಗೆಯ ಸಮಸ್ಯೆ ಕೂಡ ಕಂಡು ಬರಬಹುದು
ನರಗಳಿಗೆ ಹಾನಿಯುಂಟಾಗಬಹುದು
ಸ್ನಾಯುಗಳು ಸಾಯಬಹುದು
ಇನ್ನಿತರ ಅಡ್ಡಪರಿಣಾಮಗಳ ಸಾಧ್ಯತೆ ಇದೆ.
ಅಲ್ಲದೆ ಹೇರ್ ಟ್ರ್ಯಾನ್ಸ್‌ಪ್ಲ್ಯಾಂಟ್ ಮಾಡುವ ಮುನ್ನ ಈ ಅಂಶ ಕೂಡ ಪರಿಗಣಿಸುತ್ತಾರೆ
ದೈಹಿಕ ಆರೋಗ್ಯ: ಇದು ತುಂಬಾನೇ ಮುಖ್ಯ
ಬೇರೆ ಏನಾದರೂ ಆರೋಗ್ಯ ಸಮಸ್ಯೆಗೆ ಔಷಧಿ ಸೇವಿಸುತ್ತಿದ್ದರೆ: ಇಂಥ ಸಂದರ್ಭದಲ್ಲಿ ತಜ್ಞರು ಮಾಡಿಸುವುದು ಬೇಡ ಎಂದು ಸಲಹೆ ನಿಡುತ್ತಾರೆ.
ವಂಶಪಾರಂಪರರ್ಯವಾಗಿ ಕೂದಲು ಉದುರುವ ಸಮಸ್ಯೆ ಇದ್ದರೆ: ವಂಶ ಪಾರಂಪರ್ಯವಾಗಿ ಕೂದಲು ಉದುರುವ ಸಮಸ್ಯೆ ಇದ್ದರೆ ಟ್ರಾನ್ಸ್‌ಪ್ಲ್ಯಾಂಟ್ ಮಾಡಿಸಿದರೂ ಪ್ರಯೋಜನವಿಲ್ಲ, ಹಾಗಾಗಿ ಬೇಡ ಎನ್ನಬಹುದು.
ಈ ಹಿಂದೆ ಯಾವುದಾದರೂ ಔಷಧಿಗೆ ರಿಯಾಕ್ಷನ್ ಆಗಿದ್ದರೆ
ಅಲ್ಲದೆ ಟ್ರಾನ್ಸ್‌ಪ್ಲ್ಯಾಂಟ್ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ, ಅಂದರೆ ಅವರು ಕೊಡುವ ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳಬೇಕಾಗುತ್ತದೆ, ಈ ಎಲ್ಲಾ ಬಗ್ಗೆ ಗಮನಹರಿಸಿದ ಬಳಿಕ ತಜ್ಞರು ಹೇರ್ ಟ್ರಾನ್ಸ್‌ಪ್ಲ್ಯಾಂಟ್ ಮಾಡುತ್ತಾರೆ.
ಹೇರ್ ಟ್ರಾನ್ಸ್‌ಪ್ಲ್ಯಾಂಟ್ ಮಾಡಿದ ಮೇಲೂ ಕೂದಲು ಉದುರಲ್ಲ ಎಂದು ಹೇಳಲು ಸಾಧ್ಯವಿಲ್ಲ
ಹೌದು ಹೇರ್ ಟ್ರ್ಯಾನ್ಸ್‌ಪ್ಲ್ಯಾಂಟ್ ಮಾಡಿದ ಮೇಲೂ ಕೂದಲು ಉದುರಲ್ಲ ಎಂದು ಹೇಳಲು ಸಾಧ್ಯವಿಲ್ಲ, ಹಾಗಾಗಿ ಈ ಹೇರ್‌ಟ್ರ್ಯಾನ್ಸ್‌ಪ್ಲ್ಯಾಂಟ್ ಶಾಶ್ವತ ಪರಿಹಾರವಲ್ಲ.
ಅನಂತ್ ಅಂಬಾನಿ ಅವರ ಆರೋಗ್ಯ ನೋಡಿಕೊಳ್ಳಲು ನುರಿತ ತಜ್ಞರು ಇದ್ದಾರೆ
ಅವರ ಆರೋಗ್ಯ ನೋಡಿಕೊಳ್ಳಲು ನುರಿತ ತಜ್ಞರು ಇರುತ್ತಾರೆ. ಅವರು ಅವರಿಗೆ ಈ ಬಗ್ಗೆ ಸಲಹೆ ನೀಡಿರುತ್ತಾರೆ. ಇವೆಲ್ಲಾ ಪರಿಗಣಿಸಿ ಹೇರ್ ಟ್ರಾನ್ಸ್‌ಪ್ಲ್ಯಾಂಟ್ ಮಾಡಿರಲ್ಲ ಕಾಣಿಸುತ್ತೆ, ಅವರಿಗೆ ತಲೆ ಕೂದಲು ಇಲ್ಲ ಎಂದು ಟ್ರೋಲ್ ಮಾಡುವ ಬದಲು ನಾವು ಕೂಡ ಅವರಂತೆ ಶ್ರೀಮಂತರಾಗುವುದು ಹೇಗೆ ಎಂದು ಬ್ಯುಸ್‌ನೆಸ್ ಕಲೆ ಕಲಿಯುವುದು ಒಳ್ಳೆಯದು ಅಲ್ವಾ?



Click it and Unblock the Notifications
