Latest Updates
-
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು!
ಅನಂತ್ ಅಂಬಾನಿ ಧರಿಸಿರುವ ಈ ಕೆಂಪು ವಾಚ್ ಬೆಲೆ ಒಂದೆರಡು ಕೋಟಿ ಅಲ್ಲ!
ಇದೇ ಜುಲೈ 12ಕ್ಕೆ ಅನಂತ್ ಅಂಬಾನಿ ಮದುವೆ. ಕೋಟ್ಯಾಂತರ ರುಪಾಯಿ ಖರ್ಚಿನಲ್ಲಿ ಪ್ರೀವೆಡ್ಡಿಂಗ್ ಕಾರ್ಯಕ್ರಮ ಮಾಡಲಾಗಿತ್ತು, ಇದೀಗ ಮದುವೆ ಇನ್ನಷ್ಟು ಅದ್ಧೂರಿಯಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದ್ದು ಅದಕ್ಕೆ ತಕ್ಕ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿದೆ. ಅನಂತ್ ಅಂಬಾನಿಯ ಮದುವೆಯ ಆಮಂತ್ರಣ ಪತ್ರಿಕೆಯೇ ಸಾಕಷ್ಟು ಗಮನ ಸೆಳೆದಿದೆ. ಆ ದುಬಾರಿ ಬೆಲೆಯ ಮೊದಲ ಆಮಂತ್ರಣ ಪತ್ರಿಕೆ ತಲುಪಿದ್ದು ಕಾಶಿನಾಥನಿಗೆ.

ಅನಂತ್ ಅಂಬಾನಿ ತಮ್ಮ ಮದುವೆಯ ಖುಷಿಯಲ್ಲಿದ್ದಾರೆ, ಪ್ರೀವೆಡ್ಡಿಂಗ್ ಬಳಿಕ ಅವರ ತೂಕದಲ್ಲಿಯೂ ವ್ಯತ್ಯಾಸ ಕಂಡು ಬಂದಿದೆ. ಅವರ ಮೈ ತೂಕ ಕಡಿಮೆಯಾಗಿದೆ. ಮದುವೆ ಸಮೀಪಿಸುತ್ತಿದ್ದಂತೆ ಮದುವೆಗೆ ಅತಿಥಿಗಳಿಗೆ ಆಮಂತ್ರಣ ಪತ್ರಿಕೆ ನೀಡಲಾಗುತ್ತಿದೆ, ಅಲ್ಲದೆ ಕೆಲವೊಂದು ದೇವಾಲಯದಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ, ಅದರಂತೆ ಅನಂತ್ ಅಂಬಾನಿ ಜೂನ್ 30ಕ್ಕೆ ಕೃಷ್ಣ ಕಾಳಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ಇದೀಗ ಆ ಫೋಟೋ ವೈರಲ್ ಆಗಿದ್ದು, ಅನಂತ್ ಅಂಬಾನಿ ಧರಿಸಿರುವ ವಾಚ್ ಟಾಕ್ ಆಫ್ ದಿ ಟೌನ್ ಆಗಿದೆ.
ಒಂದೆರಡು ಕೋಟಿಯ ವಾಚ್ ಅಲ್ಲ
ಅನಂತ್ ಅಂಬಾನಿ ದೇವಾಸ್ಥಾನಕ್ಕೆ ಭೇಟಿ ನೀಡುವಾಗ ಮೆರೂನ್ ಜುಬ್ಬಾಕ್ಕೆ ಮ್ಯಾಚ್ ಎಂಬಂತ ಅದೇ ಬಣ್ಣದ ವಾಚ್ ಕಟ್ಟಿಕೊಂಡಿದ್ದರು. ಕೆಂಪು ಬಣ್ಣದ ಆ ವಾಚ್ ಬೆಲೆ ಒಂದಲ್ಲ ಎರಡಲ್ಲ ಬರೋಬ್ಬರಿ 6.91 ಕೋಟಿ ರೂಪಾಯಿ (ರೆಡ್ ಕಾರ್ಬನ್ ವಾಚ್ ಬೆಲೆ 828,000 ಅಮೆರಿಕನ್ ಡಾಲರ್)
ದುಡ್ಡಿದ್ದರೂ ಈ ವಾಚ್ ಸಿಗಲ್ಲ
ಈ ವಾಚ್‌ನ ವಿಶೇಷತೆ ಯೆಂದರೆ ನಮ್ಮ ಹತ್ರ ಕೂಡ ಅಷ್ಟೇ ದುಡ್ಡಿದೆ ಎಂದು ಖರೀದಿಸಲು ಸಾಧ್ಯವಿಲ್ಲ ಏಕೆಂದರೆ ಇದು ಲಿಮಿಟೆಡ್ ಎಡಿಶನ್ ವಾಚ್. ಈ ವಾಚ್ ಖರೀದಿಸಲು ಮೊದಲೇ ಬುಕ್ ಮಾಡಬೇಕು. ಈ ಕಂಫನಿ ಇಂಥ 18 ವಾಚ್‌ಗಳು ಮಾತ್ರ ಉತ್ಪಾದನೆ ಮಾಡಲಾಗಿದೆ, ಅದರಲ್ಲೊಂದು ಅನಂತ್ ಅಂಬಾನಿ ಕೈಯಲ್ಲಿದೆ.
ಅನಂತ್ ಅಂಬಾನಿಯ ವಾಚ್ ಗಮನ ಸೆಳೆದಿರುವುದು ಇದೇ ಮೊದಲಲ್ಲ
ಹೌದು ಅನಂತ್ ಅಂಬಾನಿ ದುಬಾರಿ ಬೆಲೆಯ ವಾಚ್ ಗಮನ ಸೆಳೆದಿರುವುದು ಇದೇ ಮೊದಲಲ್ಲ. ಅವರು ತಮ್ಮ ಪ್ರೀವೆಡ್ಡಿಂಗ್ ಪಾರ್ಟಿಗೆ ಧರಿಸಿದ್ದ ವಾಚ್ ನೋಡಿ ಫೇಸ್‌ಬುಕ್ ಮಾಲೀಕ ಝುಕರ್‌ಬರ್ಗ್ ಅವರ ಪತ್ನಿ ಅಚ್ಚರಿಯಿಂದ ಅದರ ಬಗ್ಗೆ ಕೇಳುತ್ತಿರುವ ವೀಡಿಯೋ ವೈರಲ್ ಆಗಿತ್ತು, ಅಂಥ ವಾಚ್ ಇರುವುದು ಅನಂತ್ ಅಂಬಾನಿ ಬಳಿ ಮಾತ್ರ. ಇವರಿಗೆ ದುಬಾರಿ ವಾಚ್ ಕ್ರೇಝ್ ಇದೆ. ಇದೀಗ ಈ ಕೆಂಪು ಬಣ್ಣದ ವಾಚ್ ಗಮನ ಸೆಳೆದಿದೆ, ದುಬಾರಿಯ ಬೆಲೆಯ ವಿಶೇಷ ವಾಚ್ ಕಲೆಕ್ಷನ್ ಅನಂತ್ ಅಂಬಾನಿ ಬಳಿ ಇದೆ.



Click it and Unblock the Notifications
