Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೇನ್ಸ್ ಲುಕ್: ಐಶ್ವರ್ಯ ರೈ ಕಂಡ್ರೆ ಅವರ ಕಾಸ್ಟ್ಯೂಮ್ ಡಿಸೈನರ್‌ಗಳಿಗೆ ಕೋಪನಾ? ಸೇಡು ತೀರಿಸಲು ಈ ಉಡುಪು ತೊಡಿಸಿದರೇ?
ನೀಲಿ ಕಂಗಳ ಸುಂದರಿ ಐಶ್ವರ್ಯ ರೈ ವಿಶ್ವ ಸುಂದರಿಯಾದಾಗ ಆಕೆ ತನ್ನ ಸೌಂದರ್ಯ ಮೂಲ ದೇಶ- ವಿದೇಶದ ಗಮನ ಸೆಳೆದರು. ಪ್ರಪಂಚದ ಸುಂದರಿಗಳಲ್ಲಿ ಅತಿ ಸುಂದರಿ, ಸೌಂದರ್ಯದ ಖನಿ ಎಂದೆಲ್ಲಾ ಹೊಗಳುತ್ತಿದ್ದರು. ಆಕೆಯ ಫೋಟೋಗಳನ್ನು ಅಬ್ಬಾ ಎಂಥ ಸೌಂದರ್ಯವತಿ ಎಂದು ಕಣ್ಣರಳಸಿ ನೋಡುತ್ತಿದ್ದರು.
ಅಂಥ ಸುಂದರಿ ಮದುವೆಯಾಗಿ ಮಗುವಾದ ಮೇಲೆ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದರು, ನಂತರ ಟೀಕೆ ಮಾಡುವವರ ಬಾಯಿ ಮುಚ್ಚಿಸುವಂತೆ ಮೈ ಮಾಟವನ್ನು ಮರಳಿ ಪಡೆದರು, ಜನರು ಮತ್ತೊಮ್ಮೆ ಆಕೆಯನ್ನು ಹೊಗಳಲು ಪ್ರಾರಂಭಿಸಿದರು, ಆದರೆ ಮಗಳೊಂದಿಗೆ ಕೇನ್ಸ್‌ನ ಸಮಾರಂಭಕ್ಕೆ ಹೋಗಿದ್ದ ಐಶ್ವರ್ಯ ಈಗ ರೆಡ್‌ಕಾರ್ಪೆಟ್ ಲುಕ್‌ನಿಂದಾಗಿ ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ.

ಆಕೆಯ ಕಾಸ್ಟ್ಯೂಮ್ ಡಿಸೈನರ್‌ಗಳಿಗೆ ಆಕೆಯ ಮೇಲೆ ಕೋಪವಿರಬಹುದು ಎಂದೆಲ್ಲಾ ಕಮೆಂಟ್
ಕೇನ್ಸ್ ರೆಡ್‌ಕಾರ್ಪೆಟ್ ಲುಕ್‌ನಲ್ಲಿ ಐಶ್ವರ್ಯ ಲುಕ್ ನೋಡಿದವರು ಅವರು ತೊಟ್ಟಿದ್ದ ಉಡುಪು ಬಗ್ಗೆ ತುಂಬಾನೇ ಟೀಕೆ ಮಾಡುತ್ತಿದ್ದಾರೆ.
ಗಾರ್ಬೇಜ್ ಪ್ಲಾಸ್ಟಿಕ್‌ನಿಂದ ಉಡುಪು ತಯಾರಿಸಿರುವಂತಿದೆ ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ಆಕೆಯ ಕಾಸ್ಟ್ಯೂಮ್ ಡಿಸೈನರ್‌ಗಳ ಕಾಟನೆ ಅತ್ತೆ ಕಾಟಕ್ಕಿಂತ ಭಯಂಕರವಾಗಿದೆ, ಕಾಸ್ಟ್ಯೂಮ್ ಡಿಸೈನರ್‌ಗಳನ್ನ ಫೈರ್ ಮಾಡಿ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ. ಪ್ರತಿಬಾರಿ ಕೇನ್ಸ್‌ನಲ್ಲಿ ತಮ್ಮ ವಿಶಿಷ್ಠ ಕಾಸ್ಟ್ಯೂಮ್ ಬಟ್ಟೆಯಿಂದ ಗಮನ ಸೆಳೆಯುತ್ತಿದ್ದ ಐಶ್ವರ್ಯ ಈ ವರ್ಷ ಅವರ ಔಟ್‌ಫಿಟ್‌ನಿಂದಲೇ ತುಂಬಾನೇ ಟೀಕೆಗೆ ಒಳಗಾಗಿದ್ದಾರೆ.
ಲುಕ್‌ಗೂ ಟೀಕೆ ಮಾಡಿದ್ದಾರೆ
ಔಟ್ ಫಿಟ್ ಚೆನ್ನಾಗಿಲ್ಲ, ವಯಸ್ಸಾಯ್ತು, ಮುಖದಲ್ಲಿ ವಯಸ್ಸು ಎದ್ದು ಕಾಣುತ್ತಿದೆ, ಈಗ ಇಷ್ಟು ಕೆಟ್ಟದಾಗಿ ಕಾಣಲು ಪ್ಲಾಸ್ಟಿಕ್ ಸರ್ಜರಿಯ ಅಡ್ಡಪರಿಣಾಮ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ...
ತೋಚಿದಂತೆ ಕಮೆಂಟ್ ಮಾಡುವವರು ಅವರ ಪ್ರಾಯದಲ್ಲಿ ನಿಮ್ಮ ಲುಕ್ ಹೇಗಿರುತ್ತದೆ ಎಂದು ಯೋಚಿಸಿ
ಹೌದು ಜನರು ಐಶ್ವರ್ಯ ರೈ ವಿಶ್ವ ಸುಂದರಿಯಾಗಿದ್ದಾಗ ಹೇಗೆ ಕಾಣಿಸುತ್ತಿದ್ದರೋ ಅವರ 50ರ ವಯಸ್ಸಿನಲ್ಲಿಯೂ ಹಾಗೆಯೇ ಕಾಣಿಸಬೇಕು ಎಂದು ಬಯಸುವುದು ಎಷ್ಟು ಸರಿ, ಸಾಮಾನ್ಯವಾಗಿ 50ರ ಪ್ರಾಯದಲ್ಲಿರುವ ಮಹಿಳೆಯರನ್ನು ಅವರ ಮೊಮ್ಮಕ್ಕಳು ಅಜ್ಜಿ ಎಂದು ಕರೆಯುತ್ತಿರುತ್ತಾರೆ, 50ರ ಪ್ರಾಯದ ಐಶ್ವರ್ಯಗೆ ಮಾತ್ರ ಪ್ರಾಯವಾಗಬಾರದು ಜನರಿಗೆ ಅಲ್ಲ ಜನರೇ.. ಹೀಗಾ ಮಾಡುವುದು...
ನಟಿಯರಿಗೆ ಅಂದ ಮುಖ್ಯ, ಆದರೆ ಅವರ ಪ್ರತಿಭೆಗೂ ಬೆಲೆ ಕೊಡಬೇಕು
ಐಶ್ವರ್ಯ ರೈ ಎಂಥ ಅದ್ಭುತ ನಟಿ, ಇಂಟರ್‌ವ್ಯೂನಲ್ಲಿ ಆಕೆ ನೀಡುವ ಚಾಣಾಕ್ಷ ಉತ್ತರ ಎಲ್ಲವನ್ನು ನೋಡಿದ್ದೇವೆ, ಅದ್ಭುತ ಪ್ರತಿಭೆ, ವಿಶ್ವ ಸುಂದರಿಯಾಗುವ ಮೂಲಕ ಭಾರತಕ್ಕೂ ಹೆಸರು ತಂದೆ ಹೆಣ್ಮಗಳು.
ಹೆರಿಗೆಯಾಗಿ ಬಂದಾಗ ದಪ್ಪವಾಗಿದ್ದಕ್ಕೆ ಟೀಕೆ, ಈಗ ಲುಕ್‌ಗೆ ಟೀಕೆ
ಹೆರಿಗೆಯ ಬಳಿಕ ಬಾಣಂತನ ಆರೈಕೆಯಿಂದಾಗಿ ತುಂಬಾ ದಪ್ಪಗಾಗಿದ್ದರು ಆವಾಗಲೂ ಜನ ಬಾಡಿ ಶೇಮಿಂಗ್ ಮಾಡಿದ್ದರು, ಆದರೆ ನಂತರ ಐಶ್ವರ್ಯ ಮರಳಿ ಫಿಟ್ನೆಸ್‌ಗೆ ಬಂದಿದ್ದರು. ಇದೀಗ ವಯಸ್ಸಾಗಿದೆ, ವಯೋ ಸಹಜ ಲಕ್ಷಣಗಳು ಎಲ್ಲರ ಮುಖದಲ್ಲಿಯೂ ಕಂಡು ಬರುವುದು, ಈ ಒಂದು ಕಾರಣಕ್ಕೆ ಟೀಕೆ ಮಾಡುವುದು ಎಷ್ಟು ಸರಿ ಅಲ್ವಾ?



Click it and Unblock the Notifications
