Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
80ನೇ ವಯಸ್ಸಲ್ಲಿ ಮಿಸ್ ಯೂನಿವರ್ಸ್ ಕೊರಿಯಾ ಸ್ಫರ್ಧೆಗಿಳಿದ ಮಾಡೆಲ್..! ಯಾರು ಈ ಸುಂದರಿ ಗೊತ್ತಾ?
ಸೌಂದರ್ಯ ಸ್ಪರ್ಧೆ ಎಂದರೆ ಅಲ್ಲಿ ಯುವ ತರುಣಿಯರು ನೆನಪಾಗುತ್ತಾರೆ. 25 ವರ್ಷದ ಒಳಗಿನವರೇ ಈ ಸ್ಪರ್ಧೆಗಳಲ್ಲಿ ಹೆಜ್ಜೆ ಹಾಕೋದು ಸಾಮಾನ್ಯ. ಆದರೆ ಈ ಸ್ಪರ್ಧೆಗೆ ಯಾವುದೇ ವಯಸ್ಸಿನ ಮಿತಿ ಎಂಬುದಿಲ್ಲ. ಆದರೆ ಸುಂದರವಾಗಿ ಕಾಣುವುದೇ ಈ ಸ್ಪರ್ಧೆಯ ಮುಖ್ಯ ಮಾನದಂಡ ಎನ್ನಬಹುದು.
ಆದ್ರೆ ಇಲ್ಲೊಬ್ಬಾಕೆ ಸುಮಾರು 80 ವರ್ಷದ ಅಜ್ಜಿ ದಕ್ಷಿಣ ಕೊರಿಯಾ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಇತಿಹಾಸ ನಿರ್ಮಿಸಿದ್ದಾರೆ. ಮಿಸ್ ಯೂನಿವರ್ಸ್ ಕೊರಿಯಾ ಸ್ಪರ್ಧೆಯಲ್ಲಿ ಅತ್ಯಂತ ಹಿರಿಯ ಸ್ಪರ್ಧಿಯಾಗಿ ಇವರು ಕಾಣಿಸಿಕೊಂಡು ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.

ಚೋಯ್ ಸೂನ್-ಹ್ವಾ ಎಂಬ 80 ವರ್ಷದ ಮಹಿಳೆ ಕಿರಿಯ ಸ್ಪರ್ಧಿಗಳ ಜೊತೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿಯಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು ಹಾಗೆ ಈ ಸ್ಪರ್ಧೆಯಲ್ಲಿ ಭಾಗಿಯಾದ ಅತ್ಯಂತ ಹಿರಿಯ ಮಹಿಳೆ ಎಂಬ ಇತಿಹಾಸ ಬರೆದಿದ್ದಾರೆ.
ಯಾರು ಈ ಚೋಯ್ ಸೂನ್-ಹ್ವಾ?
1943 ರಲ್ಲಿ ಜೋಯ್ ಜನಿಸಿದರು. ಇದು ವಿಶ್ವದ ಮೊಟ್ಟ ಮೊದಲ ಸೌಂದರ್ಯ ಸ್ಪರ್ಧೆ ನಡೆದ ವರ್ಷ 1952ರ 10 ವರ್ಷ ಮೊದಲು ಅವರು ಜನಿಸಿದ್ದರು. ಆದರೆ ಈಗ ಮೆಕ್ಸಿಕೋದಲ್ಲಿ ನಡೆಯಲಿರುವ ವಿಶ್ವದ ಸುಂದರಿಯರ ಸ್ಪರ್ಧೆಯಲ್ಲೂ ಸ್ಪರ್ಧಿಸುತ್ತಿದ್ದಾರೆ. ಈ ಮೂಲಕ ಮತ್ತೊಂದು ಇತಿಹಾಸ ಬರೆಯಲು ಅವರು ಸಿದ್ದತೆ ನಡೆಸಿದ್ದಾರೆ. ಈ ಸ್ಪರ್ಧೆಯಲ್ಲಿ ಅವರು ಇತರೆ 31 ಸುಂದರಿಯರ ಜೊತೆ ವಿಶ್ವ ಸುಂದರಿ ಕಿರೀಟಕ್ಕಾಗಿ ಕಣಕಿಳಿಯಲಿದ್ದಾರೆ.
ತನ್ನ ವಯಸ್ಸಿನ ಹೊರತಾಗಿಯೂ ಚೋಯ್ ತನ್ನ ಸಾಮರ್ಥ್ಯಗಳಲ್ಲಿ ವಿಶ್ವಾಸ ಹೊಂದಿದ್ದಾಳೆ ಮತ್ತು ಮುಂಬರುವ ಸ್ಪರ್ಧೆಗೆ ಉತ್ಸುಕನಾಗಿದ್ದಾಳೆ. "ನಾನು ಜಗತ್ತನ್ನು ದಿಗ್ಭ್ರಮೆಗೊಳಿಸಬೇಕೆಂದು ಬಯಸುತ್ತೇನೆ, '80 ವರ್ಷದ ಮಹಿಳೆ ಎಷ್ಟು ಆರೋಗ್ಯವಾಗಿದ್ದಾಳೆ? ಅವಳು ಆ ದೇಹವನ್ನು ಹೇಗೆ ಇಟ್ಟುಕೊಂಡಿದ್ದಾಳೆ. ಆಕೆಯ ಆಹಾರ ಕ್ರಮವೇನು? ಎಂದು ಕೇಳುವಂತಾಗಲಿ ಎಂದು ಆಕೆ ಹೇಳಿಕೊಂಡಿದ್ದಾಳೆ.
ಮೊದಲು ಮಾಡೆಲಿಂಗ್ ಕ್ಷೇತ್ರದಲ್ಲಿ ಜೋಯ್ ಹೆಸರು ಮಾಡಿದ್ದರು. ಹೀಗಾಗಿ ಅವರು ತಡವಾಗಿಯೇ ಸೌಂದರ್ಯ ಸ್ಪರ್ಧೆಯತ್ತ ಬಂದರು. ಆದರೆ ತಮ್ಮ 70ನೇ ವರ್ಷದಲ್ಲಿ ಮತ್ತೆ ತಮ್ಮ ವೃತ್ತಿ ಬದಲಿಸಿದರು ಮಾಡೆಲಿಂಗ್ ಬಿಟ್ಟು ಆಸ್ಪತ್ರೆಯೊಂದರಲ್ಲಿ ರೋಗಿಗಳ ಆರೈಕೆಗಾಗಿ ಸೇರಿಕೊಂಡರು. ಬಳಿಕ 74ನೇ ವಯಸ್ಸಿನಲ್ಲಿ ಅವರು ಸಿಯೋಲ್ ಫ್ಯಾಶನ್ ವೀಕ್‌ನಲ್ಲಿ ಕಾಣಿಸಿಕೊಂಡರು. ಅಂದಿನಿಂದ ಚೋಯ್ ಅವರು ಹಾರ್ಪರ್ಸ್ ಬಜಾರ್ ಮತ್ತು ಎಲ್ಲೆ ಮುಂತಾದ ನಿಯತಕಾಲಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಜನಪ್ರಿಯ ದಕ್ಷಿಣ ಕೊರಿಯಾದ ಬ್ರ್ಯಾಂಡ್‌ಗಳ ಜಾಹೀರಾತುಗಳಲ್ಲಿ ಸಹ ನಟಿಸಿಸೈ ಎನಿಸಿಕೊಂಡಿದ್ದಾರೆ.
ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿಯಾಗುವುದು ಪ್ರಶಸ್ತಿ ಗೆಲ್ಲುವ ಏಕೈಕ ಉದ್ದೇಶದಿಂದ ಅಲ್ಲವಂತೆ. ಬದಲಿಗೆ ಇತರರಿಗೂ ಸ್ಪೂರ್ತಿಯಾಗುವುದು ಅವರ ಉದ್ದೇವಂತೆ. ಹೀಗಾಗಿ 80 ವರ್ಷದ ಆಕೆ ಸೌಂದರ್ಯ ಸ್ಪರ್ಧೆಗೆ ಇಳಯಲಿದ್ದಾರೆ.
ವಿಶ್ವ ಸೌಂದರ್ಯ ಸ್ಪರ್ಧೆಗೆ ಭಾರತದಿಂದ ಸ್ಪರ್ಧಿಸುವುದು ಯಾರು?
ಇತ್ತೀಚಿಗೆ ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟ ತನ್ನದಾಗಿಸಿಕೊಂಡಿರುವ ಗುಜರಾತ್‌ನ ರಿಯಾ ಸಿಂಘಾ ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಗೆ ತೆರಳಲಿದ್ದಾರೆ. ಅವರು ಜಾಗತಿಕ ವಿಶ್ವ ಸುಂದರಿ 2024 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ರಿಯಾ ಸಿಂಘಾ ಈಗ ಮಿಸ್ ಯೂನಿವರ್ಸ್ 2024 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಈಗಾಗಲೇ ತಯಾರಿ ನಡೆಸುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ವಿಶ್ವಸುಂದರಿ ಸ್ಪರ್ಧೆ ಸಹ ಜರುಗುತ್ತಿದೆ. ಹೀಗಾಗಿ ಆಕೆ ಭಾರತಕ್ಕೆ ಮತ್ತೊಮ್ಮೆ ವಿಶ್ವ ಸುಂದರಿ ಪಟ್ಟ ತಂದುಕೊಡಲಿದ್ದಾಳೆ ಎಂದು ಎಲ್ಲರು ಭಾವಿಸಿದ್ದಾರೆ. ಈ ಬಾರಿ ಮೆಕ್ಸಿಕೋದಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆಯುತ್ತಿದೆ.



Click it and Unblock the Notifications
