Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಪಿಂಪಲ್ ವಿರುದ್ಧ ಎಂಜಲು ಪರಿಣಾಮಕಾರಿ, ನಾನು ಅದನ್ನೇ ಬಳಸೋದು: ನಟಿ ತಮನ್ನಾ
ಬಹುಭಾಷಾ ನಟಿ ತಮನ್ನಾ ಬಾಟಿಯಾ ನಿಮಗೆಲ್ಲಾ ತಿಳಿದಿರಬಹುದು. ಸೌತ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ದಿಗ್ಗಜ ನಟರೊಂದಿಗೂ ನಟಿಸಿ ಸೈ ಎನಿಸಿಕೊಂಡಿರುವ ಬಾಹುಬಲಿಯ ಚೆಲುವೆ. ಬಾಹುಬಲಿ ಸಿನಿಮಾದಲ್ಲಿ ಆವಂತಿಕ ಪಾತ್ರದ ಮೂಲಕ ಬಾಲಿವುಡ್ ಮಂದಿಗೂ ಅವರು ಪರಿಚಯವಾದರು. ಬಳಿಕ ಅವರು ನಟಿಸಿರುವ ಹತ್ತಾರು ಸಿನಿಮಾಗಳು ಸೂಪರ್ ಹಿಟ್ ಆಗಿರುವುದು ನೋಡಬಹುದು.
ಆಕೆಯ ಸೌಂದರ್ಯದ ವಿಚಾರವಾಗಿಯೂ ಸುದ್ದಿಯಾಗುತ್ತಿರುತ್ತಾರೆ. ಹಾಲಿನಂತ ತ್ವಚೆ ಹೊಂದಿರುವ ಆಕೆಯನ್ನು ನೀವು ಹತ್ತಾರು ಜಾಹಿರಾತುಗಳಲ್ಲಿ ನೋಡಿರಬಹುದು. ಹೆಚ್ಚಾಗಿ ಸೌಂದರ್ಯ ವರ್ಧಕ ಜಾಹಿರಾತುಗಳಲ್ಲಿ ಅವರು ಕಾಣಿಸಿಕೊಂಡಿರುತ್ತಾರೆ. ಹಾಗೆ ರಾಜ್ಯದ ಮೈಸೂರು ಸ್ಯಾಂಡಲ್ ಸೋಪ್‌ಗೂ ಕೂಡ ಇತ್ತೀಚಿಗೆ ಅವರು ರಾಯಭಾರಿಯಾಗಿದ್ದು ಕೂಡ ನೋಡಬಹುದು.

ಆದ್ರೆ ಅವರ ಈಗೊಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದ್ರಲ್ಲೂ ಆಕೆಯ ಬ್ಯೂಟಿ ಸೀಕ್ರೆಟ್ ಕುರಿತು ಹೇಳಿಕೊಂಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆಕೆಯ ಬ್ಯೂಟಿ ಸೀಕ್ರೆಟ್ ಏನು ಎಂಬುದನ್ನು ಕೇಳಿ ವೀಕ್ಷಕರು ಶಾಕ್ ಆಗಿದ್ದಾರೆ, ಜೊತೆಗೆ ಅಚ್ಚರಿಗೂ ಒಳಗಾಗಿದ್ದಾರೆ. ಹೌದು ಆಕೆಯ ಹಾಲಿನಂತ ಬಿಳುಪು ಒಂದುಕಡೆಯಾದರೆ, ಇನ್ನೊಂದು ಕಡೆ ಸಾಸಿವೆಯಷ್ಟು ಕಲೆಯಿಲ್ಲದ ಹೊಳಪಿನ ಮುಖ ನೋಡಬಹುದು.
ಆದ್ರೆ ಆಕೆಯ ಈ ಬ್ಯೂಟಿ ಸೀಕ್ರೆಟ್ ಯಾವುದು ಎಂಬ ಪ್ರಶ್ನೆ ಉತ್ತರಿಸಿದ ಆಕೆ 'ಬೆಳಗ್ಗಿನ ಎಂಜಲು' ಎಂಬ ಅಚ್ಚರಿಯ ಉತ್ತರ ನೀಡಿದ್ದಾರೆ. ಹೌದು ಆಕೆ ಪಿಂಪಲ್ ಆಗದಂತೆ ತ್ವಚೆಯನ್ನು ಕಾಪಾಡಿಕೊಳ್ಳಲು ಎಂಜಲು ಬಳಸುವುದಾಗಿ ಹೇಳಿದ್ದಾರೆ. ಅದ್ರಲ್ಲೂ ಬೆಳಗ್ಗೆ ಎದ್ದ ಕೂಡಲೇ ಬ್ರಷ್ ಮಾಡುವ ಮುನ್ನವೇ ಪಿಂಪಲ್‌ಗೆ ಬಳಸುವುದು ಆಕೆಯ ಸೀಕ್ರೆಟ್ ಅಂತೆ.
ಈ ರೀತಿಯಾಗಿ ಆಕೆ ನೈಸರ್ಗಿಕ ರೀತಿಯಲ್ಲಿ ಪಿಂಪಲ್ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದಿದ್ದಾರೆ. 35 ವರ್ಷದ ನಟಿಯ ಮುಖದಲ್ಲಿ ನೀವು ಎಲ್ಲಿಯೂ ಒಂದು ಸಣ್ಣ ಕಲೆ ನೋಡಲು ಸಾಧ್ಯವಿಲ್ಲ. ಆಕೆಯ ಪ್ರಕಾರ ಬೆಳಗಿನ ಉಗುಳು ಮೊಡವೆಗಳಿಗೆ ಪರಿಹಾರ ನೀಡಲಿದೆಯಂತೆ. ಏಕೆಂದರೆ ಇದು ವೈಜ್ಞಾನಿಕವಾಗಿದೆ, ಸರಿಯಾಗಿದೆ ನೀವು ಬೆಳಿಗ್ಗೆ ಎದ್ದಾಗ, ಮೂಲತಃ ನಿಮ್ಮ ಬಾಯಿಯಲ್ಲಿ ಸಾಕಷ್ಟು ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಇರುತ್ತವೆ. ನಾನು ವೈದ್ಯಳಲ್ಲ ಆದರೆ ಇದು ನನಗೆ ಅರ್ಥವಾಗಿದೆ. ಇದು ನನ್ನ ವೈಯಕ್ತಿಕ ಹ್ಯಾಕ್. ಅದರಲ್ಲಿ ವಿಜ್ಞಾನವಿದೆ ಎಂದು ನಾನು ನಂಬುತ್ತೇನೆ ಎಂದು ಆಕೆ ಹೇಳಿಕೊಂಡಿದ್ದಾಳೆ.
ನಿಮ್ಮ ಬಾಯಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶ ಯಾವಾಗಲು ಇರಲಿದೆ. ಆದ್ರೆ ರಾತ್ರಿ ಮಲಗಿದ್ದ ಸಮಯದಲ್ಲಿ ಈ ಬ್ಯಾಕ್ಟೀರಿಯಾಗಳು ನಿಮ್ಮ ದೇಹ ಸೇರದೆ ಬಾಯಿಯಲ್ಲಿ ಉಳಿದಿರುತ್ತವೆ. ಇದು ಅತೀ ಹೆಚ್ಚು ಹೆಚ್ಚು ಬ್ಯಾಕ್ಟೀರಿಯಾ ವಿರೋಧಿ ಲಾಲಾರಸವಾಗಿರಲಿದೆ. ಹೀಗಾಗಿ ಇದನ್ನು ನೀವು ಮೊಡವೆಗಳ ಮೇಲೆ ಬಳಸುವುದು ಉತ್ತಮ ಫಲಿತಾಂಶ ನೀಡಲಿದೆ ಎಂದು ಅವರು ವಿವರಿಸಿದ್ದಾರೆ. ನಾನು ಯಾವಾಗಲು ಕ್ಯಾಮರಾ ಮುಂದೆ ಬರಬೇಕಾಗುವುದರಿಂದ
24-25 ನೇ ವಯಸ್ಸಿನಿಂದ ಉತ್ತಮ ಚರ್ಮದ ಆರೈಕೆ ಮಾಡಲು ಮುಂದಾಗಿದ್ದೆ. ಅಂದಿನಿಂದ ಹಲವು ರೀತಿ ನೈಸರ್ಗಿಕ ಸೌಂದರ್ಯ ವರ್ಧಕಗಳ ಬಳಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ವೈದ್ಯರು ಹೇಳೋದೇನು?
ತಮನ್ನಾ ಅವರ ಈ ಬ್ಯೂಟಿ ಸೀಕ್ರೆಟ್ ಕುರಿತು ವೈದ್ಯರು ಹೇಳುವುದೇ ಬೇರೆ. ಮೊಡವೆಗಳಿಗೆ ಬೆಳಗ್ಗೆ ಲಾಲಾರಸ ಹಚ್ಚುವುದು ಚರ್ಮಕ್ಕೆ ಹಾನಿ ಮಾಡುವ ಮತ್ತು ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಇದರಲ್ಲಿವೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಮೊಡವೆಗಳಿಗೆ ಚಿಕಿತ್ಸೆ ನೀಡುವಲ್ಲಿ ಎಂಜಲು ಪರಿಣಾಮಕಾರಿ ಅಸ್ತ್ರ ಎಂಬುದನ್ನು ಖಚಿತವಾಗಿ ಹೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.



Click it and Unblock the Notifications
