Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
60ರ ಪ್ರಾಯದ ಈ ಸುಂದರಿಯ ಮುಡಿಗೇರಿತು ಬ್ಯೂನಸ್ ಐರಿಸ್ ಮಿಸ್ ಯೂನಿವರ್ಸ್ ಪಟ್ಟ!
ವಯಸ್ಸು 30 ದಾಟಿದರೆ ಸಾಕು ಅಯ್ಯೋ ನನಗೆ ತುಂಬಾನೇ ವಯಸ್ಸಾಯ್ತು, ಇನ್ನು ಯೌವನದ ಸೌಂದರ್ಯ ಉಳಿಯಲು ಸಾಧ್ಯನಾ? ಎಂದು ಹೇಳುವುದನ್ನು ಕೇಳುತ್ತೇವೆ, ಆದರೆ ಇಲ್ಲೊಬ್ಬ ರೂಪವಂತೆ 60ನೇ ವಯಸ್ಸಿನಲ್ಲಿ ಮಿಸ್ ಯೂನಿವರ್ಸ್ ಬ್ಯೂನಸ್ ಐರಿಸ್ ಆಗಿದ್ದಾರೆ.
ಅಲೆಜಾಂಡ್ರಾ ಮಾರಿಸಾ ರೊಡ್ರಿಗಸ್ ಈ ಸುಂದರಿಯ ವಯಸ್ಸು 60 ಅಷ್ಟೇ, ಆದರೆ ವಯಸ್ಸು 30 ದಾಟಿದೆ ಎಂದು ಹೇಳುವುದೇ ಕಷ್ಟ. ಅಷ್ಟೊಂದು ರೂಪವಂತೆ, ಆಕರ್ಷಕ ಮೈ ಮಾಟ. ಬ್ಯೂನಸ್ ಐರಿಸ್‌ನ ಮಿಸ್‌ಯೂನಿವರ್ಸ್ ಪಟ್ಟ ಇವರ ಮುಡಿಗೇರಿದೆ. ಏಜ್ ಈಸ್ ಜಸ್ಟ್ ಎ ನಂಬರ್ ಎಂಬುವುದು ಇವರ ವಿಷಯಕ್ಕೆ ನೂರಕ್ಕೆ ನೂರರಷ್ಟು ಸತ್ಯವಾಗಿದೆ.

ಆಕೆಯ ಜಯವನ್ನು ಬುಧವಾರ ಅಂದರೆ ಏಪ್ರಿಲ್ 25ಕ್ಕೆ ಘೋಷಿಸಲಾಯ್ತು. ಇವರೊಬ್ಬರು ಬ್ಯೂಟಿ ಕ್ವೀನ್ ಮಾತ್ರವಲ್ಲ ಲಾಯರ್, ಜರ್ನಲಿಸ್ಟ್ ಆಗಿದ್ದಾರೆ. ವಯಸ್ಸಾದರೆ ಸೌಂದರ್ಯ ಮಂಕಾಗುತ್ತೆ ಎಂಬ ಸ್ಟೀರೋಟೈಪ್ ಒಡೆದಿದೆ. ಇವರ ಜಯ ನೋಡಿ ಇಡೀ ಜಗತ್ತು ಇವರನ್ನು ಆಶ್ಚರ್ಯ, ಹೆಮ್ಮೆಯಿಂದ ನೋಡುತ್ತಿದೆ. ಈ ವಯಸ್ಸಿನಲ್ಲಿ ಇಷ್ಟೊಂದು ಆಕರ್ಷಕ ಮೈ ಮಾಟಿ ಕಾಪಾಡಿದ್ದಾರೆ ಅದೇ ದೊಡ್ಡದು.
ಇವರ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಂತೆ ವೀಡಿಯೋ ವೈರಲ್ ಆಗಿದೆ. ಮಿಸ್ ವರ್ಲ್ಡ್ ಸ್ಪರ್ಧೆಯನ್ನು ಸೆಪ್ಟೆಂಬರ್ 28, 2024 ಮೆಕ್ಸಿಕೋದಲ್ಲಿ ನಡೆಸಲಾಗಿತ್ತು, ಈ ಸ್ಪರ್ಧೆಯಲ್ಲಿ 60ರ ಪ್ರಾಯದ ಇವರಿಗೆ ಆ ಪ್ರತಿಷ್ಠಿತ ಕಿರೀಟ ಮುಡಿಗೇರಿದೆ.
Alejandra Marisa, a modelo que surpreendeu o mundo ao vencer o concurso Miss Universo para representar Buenos Aires aos 60 anos. Ela irá concorrer na seletiva nacional em maio de 2024 para representar a Argentina no concurso Miss Universo Mundial, no México em 28.09.2024. pic.twitter.com/u83vDUesGZ
— Fe MacMillan (@EnjoyJourney22) April 24, 2024
ನಾನು ಇದರಿಂದ ತುಂಬನೇ ಖುಷಿಯಾಗಿದ್ದೇನೆ, ನಾವು ಹೊಸದೊಮದು ಇತಿಹಾಸ ಬರೆದಿದ್ದೇವೆ, ಮಹಿಳೆ ದೈಹಿಕವಾಗಿ ಸೌಂದರ್ಯವಂತಳು ಮಾತ್ರವಲ್ಲ, ಒಂದು ಹೊಸ ಮೌಲ್ಯವನ್ನು ಸೆಟ್ ಮಾಡಿದಂತಾಗಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಮಿಸ್ ಯೂನಿವರ್ಸ್ ಸ್ಪರ್ಧೆಗೆ ವಯಸ್ಸಿನ ನಿರ್ಬಂಧವಿಲ್ಲ ಎಂದು ಘೋಷಿಸಿತು, 18 ವರ್ಷ ಮೇಲ್ಪಟ್ಟ ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಹೇಳಿತ್ತು, ಅದರಂತೆ ಅಲೆಜಾಂಡ್ರಾ ಮಾರಿಸಾ ರೊಡ್ರಿಗಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸ್‌ಯೂನಿವರ್ಸ್ ಆಗಿ ಆಯ್ಕೆ ಆಗಿದ್ದಾರೆ.
ಮತ್ತೊಂದು ಸೌಂದರ್ಯ ಸ್ಪರ್ಧೆಯಲ್ಲಿ 47 ವರ್ಷದ ಗ್ರಝ್ ಡೊಮಿನಿಕನ್ ರಿಪಬ್ಲಿಕ್ ಪ್ರತಿನಿಧಿಸಿ ಮಿಸ್ ಯೂನಿವರ್ಸ್ ಆಗಿ ಆಯ್ಕೆ ಆಗಿದ್ದಾರೆ.



Click it and Unblock the Notifications


